24 ತಾಸಿನಲ್ಲಿ ಕೊರೊನಾ ವರದಿ ನೀಡಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶ

ಬೆಂಗಳೂರು, ಮೇ 14: ಕೊರೊನಾ ಪರೀಕ್ಷೆ ಮಾಟಿಸಿ ಒಂದು ದಿನದೊಳಗೆ ವರದಿ ನೀಡಿ ಎಂದು ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರ ಆದೇಶಿಸಿದೆ.

Recommended Video

      ಯಡಿಯೂರಪ್ಪ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ High Court | Oneindia Kannada

      ರಾಜ್ಯ ಸರ್ಕಾರ ಎಲ್ಲಾ ಲ್ಯಾಬ್‌ಗಳು 24 ಗಂಟೆಯಲ್ಲೇ ವರದಿ ನೀಡುವಂತೆ ಸೂಕ್ತ ಆದೇಶ ಹೊರಡಿಸಿ, ಕ್ರಮ ಕೈಗೊಳ್ಳಬೇಕು.ವರದಿಯನ್ನು ನೀಡಲು ವಿಳಂಬ ಮಾಡಿದ ಲ್ಯಾಬ್ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸಬೇಕು ಎಂದು ಸೂಚನೆ ನೀಡಲಾಗಿದೆ.

      ಕೊರೊನಾ ನಿರ್ವಹಣೆ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ಸಾರ್ವಜನಿಕ ಹಿತಾಸಕ್ತಿಅ ರ್ಜಿಗಳ ವಿಚಾರಣೆ ನಡೆಸಿದ ನ್ಯಾ. ಎ.ಎಸ್. ಓಕ ಮತ್ತು ನ್ಯಾ.ಅರವಿಂದ್ ಕುಮಾರ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.

       Inform All Labs To Give Covid Results Within 24 Hrs: HC Tells Karnataka Government

      ವಿಚಾರಣೆ ಸಂದರ್ಭದಲ್ಲಿ ಹೈಕೋರ್ಟ್ ಸಿಬ್ಬಂದಿ ಸಾವನ್ನಪ್ಪಿರುವ ಕುರಿತು ಪ್ರಸ್ತಾಪಿಸಿದ ಪೀಠ, ಸೋಂಕಿತ ಚಾಲಕ ಮೇ 10ರಂದು ಸಿವಿ ರಾಮನ್ ಜನರಲ್ ಆಸ್ಪತ್ರೆಯಲ್ಲಿ ಆರ್‌ಟಿಪಿಸಿಆರ್ ಪರೀಕ್ಷೆಗೆ ಸ್ವ್ಯಾಬ್ ಕೊಟ್ಟಿದ್ದರು.

      ಆದರೆ ಮೇ 12ರವರೆಗೆ ಸೋಂಕಿತ ಸಾವನ್ನಪ್ಪುವವರೆಗೂ ವರದಿ ನೀಡಿಲ್ಲ ಎಂದು ಹೇಳಿದ್ದು, ನ್ಯಾಯಾಲಯ ಈ ಹಿಂದಿನ ವಿಚಾರಣೆ ವೇಳೆ, 24 ಗಂಟೆಗಳಲ್ಲಿ ಪರೀಕ್ಷಾ ವರದಿ ಲಭ್ಯವಾಗುವಂತೆ ಲ್ಯಾಬ್‌ಗಳಿಗೆ ಸೂಕ್ತ ನಿರ್ದೇಶನ ನೀಡಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿತ್ತು. ಆದರೆ, ನ್ಯಾಯಾಲಯದ ಆದೇಶವೇ ಪಾಲನೆಯಾಗಿಲ್ಲ ಎಂದು ಪೀಠ ಹೇಳಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+