Bengaluru Airport: ಏರ್‌ಏಶಿಯಾ ಬೆನ್ನಲ್ಲೆ ಕೆಲವು ಪ್ರಯಾಣಿಕರನ್ನು ಬಿಟ್ಟು ಹಾರಿದ Indigo ವಿಮಾನ
ಬೆಂಗಳೂರು, ಆಗಸ್ಟ್ 06: ಇತ್ತೀಚೆಗೆ ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (KIA)ದಲ್ಲಿ ಬಿಟ್ಟು ಹೋದ ಘಟನೆ ನಡೆದಿತ್ತು. ಈ ಸಂಬಂಧ ಮೂವರು ಅಮಾನತು ಆಗಿದ್ದರು. ಇದರ ಬೆನ್ನಲ್ಲೆ ಅಂತದ್ದೆ ಮತ್ತೊಂದು ಕೆಲಸವನ್ನು 'ಇಂಡಿಯೋ ಏರ್‌ಲೈನ್ಸ್' (Indigo Airlines) ಮಾಡಿದೆ.
ಹೌದು, ಕಳೆದ ಶುಕ್ರವಾರ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಒಟ್ಟು ಆರು ಪ್ರಯಾಣಿಕರನ್ನು 'ಇಂಡಿಯೋ ಏರ್‌ಲೈನ್ಸ್' ಬಿಟ್ಟು ಹೋದ ಘಟನೆ ನಡೆದಿದೆ. ಎಲ್ಲ ಪ್ರಯಾಣಿಕರು ಏರ್‌ಪೊರ್ಟ್ ನಲ್ಲಿದ್ದರು ಸಹ, ನಿಗದಿತ ಅವಧಿಗೂ ಮುನ್ನವೇ ವಿಮಾನ ಪ್ರಯಾಣಿಕರನ್ನು ಬೆಂಗಳೂರು ಏರ್‌ಪೋರ್ಟ್ ನಲ್ಲೇ (Bengaluru Airport) ಬಿಟ್ಟು ಹಾರಿದೆ. ಏರ್‌ಲೈನ್ಸ್‌ನ ಈ ನಿರ್ಲಕ್ಷ್ಯದಿಂದಾಗಿ ಆರು ಪ್ರಯಾಣಿಕರು ಅಂದುಕೊಂಡಂತೆ ನಿರ್ದಿಷ್ಠ ಸ್ಥಳಕ್ಕೆ ತಲುಪದೇ ಪರದಾಡಿದರು.

ಈ ಇಂಡಿಗೋ ವಿಮಾನ (6E 6162)ವು ಶುಕ್ರವಾರ ಮಧ್ಯಾಹ್ನ 2.55ಗಂಟೆಗೆ ಬೆಂಗಳೂರಿನಿಂದ ಮಂಗಳೂರಿಗೆ ತೆರಳಬೇಕಿತ್ತು. ಆದರೆ ನಿಗದಿತ ಅವಧಿಗೂ ಮೊದಲೇ ಅಂದರೆ 2.43 ಹಾರಿದ್ದರ ಪರಿಣಾಮವಾಗಿ ಒಟ್ಟು ಆರು ಜನ ಪ್ರಯಾಣಿಕರು ಏರ್‌ಪೊರ್ಟ್ ನಲ್ಲಿಯೇ ಉಳಿಯುವಂತಾಯಿತು. ವಿಮಾನ ಹತ್ತಲು ತೆರಳಿದರು ಬಾಗಿಲುಗಳು ತೆರೆದಿಲ್ಲ ಎಂದು ಪ್ರಜಾವಾಣಿ ವರದಿ ಮಾಡಿದೆ.
ವಿಮಾನ ಬಗ್ಗೆ ಮಾಹಿತಿ ನೀಡದ ಸಿಬ್ಬಂದಿ
ನಾವು ಮಂಗಳೂರಿಗೆ ತೆರಳಬೇಕೆಂದು ಸರಿಯಾದ ಸಮಯಕ್ಕೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದೆವು. ಆದರೆ ನಮಗೆ ವಿಮಾನ ಹಾರಾಟ ಸಮಯ ಕುರಿತು ಏರ್‌ಲೈನ್ಸ್ ಆಗಲಿ, ನಿಲ್ದಾಣ ಸಿಬ್ಬಂದಿ ಆಗಲಿ ಮಾಹಿತಿ ನೀಡಿಲಿಲ್ಲ. ಈ ಕಾರದಿಂದಾಗಿ ನಾವು ವಿಮಾನ ಮಿಸ್ ಮಾಡಿಕೊಂಡೆವು ಎಂದು ಹೆಸರು ಹೇಳಲು ಇಚ್ಛಿಸದ ಸರ್ಕಾರಿ ಅಧಿಕಾರಿಯೊಬ್ಬರು ಮಾಹಿತಿ ನೀಡದ್ದಾರೆ.
ವಿಮಾನ ಮಿಸ್ ಮಾಡಿಕೊಂಡ ಈ ಆರು ಮಂದಿ ಪ್ರಯಾಣಿಕರು 6 ಮಂದಿ ಪ್ರಯಾಣಿಕರು ಬೇರೊಂದು ವಿಮಾನಕ್ಕಾಗಿ ಸುಮಾರು ಆರು ಗಂಟೆಗಳ ಕಾಲ ಕಾದು ಕುಳಿತಿದ್ದಾರೆ. ಹೀಗಾಗಿ ಇವರೆಲ್ಲ ಬೇರೊಂದು ವಿಮಾನದ ಮೂಲಕ ಮಂಗಳೂರು ತಲುಪಲು ರಾತ್ರಿ 10 ಗಂಟೆ ಬೇಕಾಯಿತು ಎಂದು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ರಾಜ್ಯಪಾಲರನ್ನು ಬಿಟ್ಟು ಹಾರಿದ್ದ ಏರ್‌ಏಶಿಯಾ
ಇತ್ತೀಚೆಗೆ ಕಳೆದ ಜುಲೈ 27 ರಂದು ಗುರುವಾರದಂದು ಮಧ್ಯಾಹ್ನ ಬೆಂಗಳೂರಿನಿಂದ ಹೈದರಾಬಾದ್‌ಗೆ ತೆರಳಲು ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ತೆರಳಬೇಕಿತ್ತು. ಅವರ ಬ್ಯಾಗ್ ಮೊದಲೇ ಕೆಐಎ ಏರ್‌ಪೋರ್ಟ್‌ಗೆ ಬಂದಿದ್ದರು ಸಹ ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದರಿಂದ ಅವರನ್ನು ಬಿಟ್ಟು ಏರ್ ಏಶಿಯಾ ವಿಮಾನ ಹಾರಿತ್ತು. ರಾಜ್ಯಪಾಲರು ಸರಿಯಾದ ಸಮಯಕ್ಕೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು ಎಂದು ರಾಜಭವನ ಸಮರ್ಥನೆ ನೀಡಿತ್ತು.
ಇದರ ಬೆನ್ನಲ್ಲೆ ಏರ್ ಏಶಿಯಾ ಸ್ಟೇಷನ್ ಮ್ಯಾನೇಜರ್ ಸೇರಿದಂತೆ ಮೂರು ಮಂದಿ ಸಿಬ್ಬಂದಿಯನ್ನು ಅಮಾನತು ಮಾಡಿ ಕ್ರಮ ಕೈಗೊಂಡಿತ್ತು. ಇದೀದ ಮತ್ತೊಂದು ಅಂತದ್ದೆ ಘಟನೆ ಇಂಡಿಗೋ ಏರ್‌ಲೈನ್ಸ್‌ನಿಂದ ನಡೆದಿದೆ. ಈಗ ಯಾವ ಕ್ರಮ ಜರುಗಲಿದೆ ಎಂದು ಕಾದು ನೋಡಬೇಕು.












Click it and Unblock the Notifications