ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರೀತಿಯ ಶಿಕ್ಷಕಿಗೆ ಒಂದು ಕನ್ನಡ ಪದ್ಯ.. 'ಸವಿನುಡಿ ಕನ್ನಡ'!

|
Google Oneindia Kannada News

ಬೆಂಗಳೂರು, ನ.1: ಭಾರತದ ಕಿರಿಯ ಕವಯಿತ್ರಿ ಅಮನಾ ಜೆ. ಕುಮಾರ್ ಕನ್ನಡ ರಾಜ್ಯೋತ್ಸವ ಅಂಗವಾಗಿ ಕನ್ನಡ ಪದ್ಯವೊಂದನ್ನು ಬರೆದಿದ್ದಾರೆ. ಅದನ್ನು ತಾನು ಕನ್ನಡ ಬರೆಯಲು ಪ್ರೇರೇಪಿಸಿದ ಪ್ರೀತಿಯ ಶಿಕ್ಷಕಿಗೆ ಅರ್ಪಿಸಿದ್ದಾರೆ.

"ನಾನು ಈವರೆಗೂ ಇಂಗ್ಲಿಷ್‌ನಲ್ಲಿ 350 ಕ್ಕೂ ಹೆಚ್ಚು ಹಾಗೂ ಹಿಂದಿಯಲ್ಲಿ 150ಕ್ಕೂ ಅಧಿಕ ಪದ್ಯಗಳನ್ನು ಬರೆದಿದ್ದೇನೆ. ಆದರೆ ಇದುವರೆಗೂ ಕನ್ನಡದಲ್ಲಿ ಪದ್ಯವನ್ನು ಬರೆಯುವ ಪ್ರಯತ್ನ ಮಾಡಿರಲಿಲ್ಲ. ಕನ್ನಡದಲ್ಲೂ ಬರೆಯೋಕೆ ಪ್ರಯತ್ನ ಮಾಡುವಂತೆ ನನ್ನಮ್ಮ ಆಗಾಗ ಹೇಳುತ್ತಿದ್ದರು. ಆದರೆ, ಆ ಧೈರ್ಯ ಬಂದಿರಲಿಲ್ಲ. ಕನ್ನಡ ಓದು, ಬರಹ ಏನಿದ್ದರೂ ಪರೀಕ್ಷೆಗೆ ಸೀಮಿತ ಎಂಬುವಂತಾಗಿತ್ತು. ನಾನೂ ಕನ್ನಡದಲ್ಲಿ ಕವನಗಳನ್ನು ಬರೆಯಬೇಕು ಎಂಬ ಕಲ್ಪನೆ ಕೂಡ ಮಾಡಿರಲಿಲ್ಲ. ಆದರೆ ನನ್ನ ಕನ್ನಡ ಶಿಕ್ಷಕರಾದ ಮೇಡಂ ರೋಸಿ ಮೆಟಿಲ್ಡರವರು ನನಗೆ ತೋರಿಸುತ್ತಿದ್ದ ಪ್ರೀತಿ ,ಕಲಿಸುತ್ತಿದ್ದ ರೀತಿ ಮತ್ತು ಪ್ರೋತ್ಸಾಹದಿಂದ ನನಗೆ ಕನ್ನಡ ಭಾಷೆಯ ಮೇಲೆ ಪ್ರೀತಿ ಹೆಚ್ಚಾಗಲು ಕಾರಣವಾಯಿತು. ಅದರಿಂದ ಇಂದು ನಾನು ನನ್ನ ಮೊದಲ ಕನ್ನಡ ಕವನ ಬರೆದಿದ್ದು ಇದು ಅವರಿಗೆ ಅರ್ಪಿಸುತ್ತಿದ್ದೇನೆ," ಎಂದಿದ್ದಾರೆ ಅಮನಾ.

ಭಾರತದ ಯುವ ಕವಯತ್ರಿ:

ಬೆಂಗಳೂರಿನ ಬಿಷಪ್ ಕಾಟನ್ ಗರ್ಲ್ಸ್ ಸ್ಕೂಲ್‌ನಲ್ಲಿ 9ನೇ ತರಗತಿ ಓದುತ್ತಿರುವ ಕುಮಾರಿ ಅಮನಾ ಕರ್ನಾಟಕದಿಂದ ಪ್ರತಿಷ್ಠಿತ ನೋಬಲ್ ಬುಕ್‌ನ ವಿಶ್ವದಾಖಲೆಯಲ್ಲಿ ''Most Prolific Poet'' ಎಂದು ದಾಖಲಾಗಿದ್ದಾರೆ.

Indias Youngest Poetess Amana J Kumar Poem for Kannda rajyotsava 2022

ಅಲ್ಲದೆ, ಅಮನಾ ಕಳೆದ ವರ್ಷ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಭಾರತದ ಅತ್ಯಂತ ಕಿರಿಯ ಕವಯತ್ರಿ ಎಂದು ಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಅನ್ನು ಗ್ರ್ಯಾಂಡ್ ಮಾಸ್ಟರ್- ಚಿಕ್ಕವಯಸ್ಸಿನಲ್ಲಿ ಕವನಗಳನ್ನು ಬರೆಯುತ್ತಾರೆ ಎಂದು ದಾಖಲೆ ಮಾಡಿರುತ್ತಾರೆ. ಅಮನಾ ಅವರ ಪ್ರತಿಭೆಗೆ ಶಾಲೆಯಿಂದ ತಕ್ಕ ಪ್ರೋತ್ಸಾಹ ಸಿಕ್ಕಿದೆ ಎಂದು ಅವರ ತಾಯಿ ಡಾ. ಲತಾ ಟಿ.ಎಸ್ ಹೇಳಿದ್ದಾರೆ.

ಸವಿನುಡಿ ಕನ್ನಡ

ಮಹಾನದಿಗಳ ಅಲೆಗಳಂತೆ,

ಜ್ಞಾನ ಶಾಲೆಯ ಸರೋವರದಂತೆ,

ತಾಯಿಯ ಅನುರಾಗದಂತೆ,

ಆ ಶಾರದೆಯ ಆಶೀರ್ವಾದದಂತೆ,

ಈ ನಾಡಿನ ಇತಿಹಾಸ, ಸಂಸ್ಕೃತಿಯ ಕುರುಹಂತೆ,

ಹಾಡುತಿರಲಿ ಕನ್ನಡ ಸವಿನುಡಿ.

Indias Youngest Poetess Amana J Kumar Poem for Kannda rajyotsava 2022

ಕರ್ನಾಟಕದ ಜನರಲ್ಲಿ,

ಕನ್ನಡಿಗರ ಮನದಲ್ಲಿ,

ಈ ಪುಣ್ಯ ಭೂಮಿಯ ಮಡಿಲಲ್ಲಿ,

ಗುರು ಕವಿಗಳ ನುಡಿಯಲ್ಲಿ,

ಭಾಷಾ ಪ್ರೇಮಿಗಳ ಲೋಕದಲ್ಲಿ,

ಹಾಡುತಿರಲಿ ಸವಿನುಡಿ ಕನ್ನಡ.

ಕನ್ನಡ ಭಾಷೆಯು ನಮ್ಮ ತುಟಿಯಿಂದ ಅರಳುವ ಮುತ್ತಿನಂತೆ,

ಹುಟ್ಟಿದ ಎಳೆಯ ಮಗುವಿನ

ಆನಂದದ ನಗುವಿನಂತೆ,

ಹಕ್ಕಿಗಳ ಮಧುರ ಹಾಡಿನಂತೆ,

ನಾವು ನಡೆಸುವ ಸಿಹಿ‌ ಕಹಿ ಜೀವನದಂತೆ,

ಕುವೆಂಪುರವರ ಕನಸಿನಂತೆ,

ಹಾಡುತಿರಲಿ ಸವಿನುಡಿ ಕನ್ನಡ.

ಕನ್ನಡ ಭಾಷೆ ಕಥೆಗಳ ಸಮುದ್ರ,

ಪದಗಳ ನೃತ್ಯದಲ್ಲಿ ಭಾವನೆಗಳ ಮುದ್ರ,

ಪ್ರತಿಯೊಬ್ಬ ಕನ್ನಡಿಗನ ಉಸಿರು ಇರುವವರೆಗೂ ಹೋಗಬಾರದು ಈ ಪೂಜ್ಯ ಭಾಷೆ ಮರೆತು,

ನಮ್ಮ ಭಾಷೆ ಇದೇ ನಮ್ಮ ಗುರುತು,

ಹಾಡುತಿರಲಿ ಸವಿನುಡಿ ಕನ್ನಡ.

ಅಮನ‌ ಜೆ.ಕುಮಾರ್,

9 ನೇ ತರಗತಿ,

ಬಿಷಪ್ ಕಾಟನ್ ಬಾಲಕಿಯರ ಶಾಲೆ,

ಬೆಂಗಳೂರು.

English summary
India's youngest poet Amana J. Kumar wrote a Kannada poem as part of Kannada Rajyotsava. He dedicated it to his beloved teacher who inspired him to write Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X