Madal Virupakshappa Missing Posters: ಮಾಡಾಳ್ ವಿರೂಪಾಕ್ಷಪ್ಪ ನಾಪತ್ತೆ- ಕಂಡುಬಂದರೆ ಈ ನಂಬರ್‌ಗೆ ಕರೆ ಮಾಡಬೇಕಂತೆ

ಟೆಂಡರ್‌ಗಾಗಿ ಲಂಚ ಪ್ರಕರಣದಲ್ಲಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ತಲೆಮರಿಸಿಕೊಂಡಿದ್ದು ಅವರ ಕಂಡುಬಂದರೆ ಕರೆ ಮಾಡಿ ಎನ್ನುವ ಪೋಸ್ಟರ್‌ ವೈರಲ್ ಆಗಿದೆ.

ಬೆಂಗಳೂರು ಮತ್ತು ರಾಜ್ಯದ ಇತರ ಭಾಗಗಳಲ್ಲಿ ಮಾಡಾಳ್ ವಿರೂಪಾಕ್ಷ ಅವರ ಕಾಣೆಯಾದ ಪೋಸ್ಟರ್‌ಗಳನ್ನು ಭಾರತೀಯ ಯುವ ಕಾಂಗ್ರೆಸ್ ಸದಸ್ಯರು ಹಾಕಿರುವುದು ಕಂಡುಬಂದಿದೆ. ಈ ಪೋಸ್ಟರ್‌ಗಳಲ್ಲಿ ಹೆಸರು, ವಯಸ್ಸು ಇನ್ನಿತರ ವಿವರಗಳನ್ನು ನೀಡಿ, ಅವರು ಕಂಡುಬಂದಲ್ಲಿ 100ಕ್ಕೆ ಕರೆ ಮಾಡಿ ಎಂದು ಬರೆದಿರುವ ಪೋಸ್ಟರ್ ಹಾಕಲಾಗಿದೆ. ಸದ್ಯ ಈ ಪೋಸ್ಟರ್‌ಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಕರ್ನಾಟಕ ಸಾಬೂನು ಮತ್ತು ಮಾರ್ಜಕ ಲಿಮಿಟೆಡ್‌ ವ್ಯವಸ್ಥಾಪಕರು ಟೆಂಡರ್‌ ಕರೆದಿದ್ದಾರೆ. ದೂರುದಾರರಿಗೆ ಟೆಂಡರ್‌ ಹಂಚಿಕೆ ಹಾಗೂ ಅವರಿಂದ ಕೆಮಿಕಲ್‌ ಆಯಿಲ್‌ ಖರೀದಿಗೆ ಲಿಮಿಟೆಡ್‌ನ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕರು ಆದೇಶ ಹೊರಡಿಸಿದ್ದಾರೆ. ಇಡೀ ಪ್ರಕರಣದಲ್ಲಿ ತಮ್ಮ ಯಾವುದೇ ಪಾತ್ರವಿಲ್ಲ. ದೂರುದಾರರು ಕೇವಲ ವೈಯಕ್ತಿಕ ಹಿತಾಸಕ್ತಿ ಮತ್ತು ದುರುದ್ದೇಶದಿಂದ ದೂರು ದಾಖಲಿಸಿದ್ದಾರೆ. ಆದ್ದರಿಂದ ಮಾ.2ರಂದು ತಮ್ಮ ವಿರುದ್ಧ ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ ರದ್ದುಪಡಿಸಬೇಕು ಎಂದು ವಿರೂಪಾಕ್ಷಪ್ಪ ಕೋರಿದ್ದರು.

Bribery case: BJP MLA Madal Virupakshappa is missing - if found, call this number!

ಇಂದು ಹೈಕೋರ್ಟ್‌ನಲ್ಲಿ ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ಮಧ್ಯಂತರ ಜಾಮೀನು ಸಿಕ್ಕಿದೆ. ಪ್ರಕರಣದ A-1 ಆರೋಪಿ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಆಗಿದ್ದಾರೆ. ಇಂದು ಹೈಕೋರ್ಟ್‌ನಲ್ಲಿ ಮಧ್ಯಂತರ ಜಾಮೀನು ಅರ್ಜಿ ವಿಚಾರಣೆಯಲ್ಲಿ ವಿರೂಪಾಕ್ಷಪ್ಪ ಪರ ಸುಪ್ರೀಂಕೋರ್ಟ್ ವಕೀಲ ಸಂದೀಪ್ ಪಾಟೀಲ್ ವಾದ ಮಂಡಿಸಿದರು. ಲೋಕಾಯುಕ್ತ ಪರ SPP ಬಿ.ಬಿ‌ ಪಾಟೀಲ್ ಪ್ರತಿವಾದ ನಡೆಸಿದರು.

ಪ್ರಕರಣ ತನಿಖಾಧಿಕಾರಿಗಳ ಬದಲಾವಣೆ

ಮಾಡಾಳ್​​​ ಪುತ್ರ ಪ್ರಶಾಂತ್​ ಟ್ರ್ಯಾಪ್​​ ಪ್ರಕರಣದಲ್ಲಿ ತನಿಖಾಧಿಕಾರಿಗಳ ಬದಲಾವಣೆಯಾಗಿದೆ. ಟ್ರ್ಯಾಪ್​​ ತನಿಖಾಧಿಕಾರಿಗಳಿಬ್ಬರ ಬದಲಾವಣೆ ಮಾಡಲಾಗಿದೆ. ಡಿವೈಎಸ್ಪಿ ಪ್ರಮೋದ್​ ಕುಮಾರ್​​, ಇನ್ಸ್​ಪೆಕ್ಟರ್​​​​​​​​ ಕುಮಾರಸ್ವಾಮಿ ಚೇಂಜ್​​ ಆಗಿದ್ದು, ನೂತನ ತನಿಖಾಧಿಕಾರಿಯಾಗಿ ಡಿವೈಎಸ್ಪಿ ಆಂಥೋಣಿ ಜಾನ್​​​​, ಇನ್ಸ್​ಪೆಕ್ಟರ್​​​​ ಬಾಲಾಜಿಬಾಬು ತನಿಖಾಧಿಕಾರಿಗಳಾಗಿ ನೇಮಕವಾಗಿದ್ದಾರೆ. ತನಿಖಾಧಿಕಾರಿಗಳ ಬದಲಾವಣೆ ಭಾರೀ ಕುತೂಹಲ ಕೆರಳಿಸಿದೆ.

ವಿರೂಪಾಕ್ಷಪ್ಪನವರ ಬೆಂಬಲಿಗರ ಪ್ರತಿಭಟನೆ

ಈ ಮಧ್ಯೆ ದಾವಣಗೆರೆಯ ಚನ್ನಗಿರಿಯಲ್ಲಿ ವಿರೂಪಾಕ್ಷಪ್ಪನವರ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ತಮ್ಮ ನಾಯಕನನ್ನು ರಕ್ಷಿಸುವ ಪ್ರಯತ್ನ ಮುಂದುವರಿಯಲಿದೆ. ಲಂಚ, ಭ್ರಷ್ಟಾಚಾರ ಪ್ರಕರಣದಲ್ಲಿ ಮಾಡಾಳ್ ಸಿಲುಕಿರುವುದರಿಂದ ಚನ್ನಗಿರಿಯಲ್ಲಿ ಈ ಬಾರಿ ಬಿಜೆಪಿಯ ಟಿಕೆಟ್ ಕೈತಪ್ಪಿ ಬೇರೆಯವರಿಗೆ ಬಿಜೆಪಿ ಹೈಕಮಾಂಡ್ ಮಣೆ ಹಾಕಲಿದೆ ಎಂಬ ಮಾತುಗಳು ದಟ್ಟವಾಗಿ ಕೇಳಿಬರುತ್ತಿವೆ.

Bribery case: BJP MLA Madal Virupakshappa is missing - if found, call this number!

ಮಾಡಾಳ್​​ಗೆ ಟಿಕೆಟ್​ ತಪ್ಪುತ್ತೆ ಎನ್ನುವ ಹಿನ್ನೆಲೆಯಲ್ಲಿ ನಿನ್ನೆಯಿಂದ ಕ್ಷೇತ್ರದಲ್ಲಿ ಬೆಂಬಲಿಗರು ಮಹತ್ವದ ಸಭೆ ನಡೆಸುತ್ತಿದ್ದು, ಬಿಜೆಪಿ ಕಾರ್ಯಕರ್ತರು ಹಾಗೂ ಮಾಡಾಳ್​​ ಅಭಿಮಾನಿಗಳೂ ನಿನ್ನೆ ಭಾಗಿಯಾಗಿದ್ದರು. ಚನ್ನಗಿರಿ ಬಿಜೆಪಿ ಕಚೇರಿಯಲ್ಲಿ ನಿನ್ನೆ ನಡೆದಿರುವ ಸಭೆಯಾಗಿದೆ. ಮಾಡಾಳ್​ ಪರ ನಿಲ್ಲಬೇಕು ಎಂದು ಕೆಲವು ಬೆಂಬಲಿಗರು ವಾದ ನಡೆಸಿದ್ದಾರೆ. ಹೀಗಾಗಿ ಚನ್ನಗಿರಿ ಬಿಜೆಪಿ ಟಿಕೆಟ್​ ಭಾರೀ ಕುತೂಹಲಕ್ಕೆ ಕಾರಣವಾಗುತ್ತಿದೆ.

ವಿರೂಪಾಕ್ಷಪ್ಪ ಪರ ಸುಪ್ರೀಂಕೋರ್ಟ್ ವಕೀಲ ಸಂದೀಪ್ ಪಾಟೀಲ್ ವಾದ ಮಾಡಸಲಿದ್ದಾರೆ. ಲೋಕಾಯುಕ್ತ ಪರ SPP ಬಿ.ಬಿ‌ ಪಾಟೀಲ್ ಪ್ರತಿವಾದ ನಡೆಸಲಿದ್ದಾರೆ. ರೂಪಾಕ್ಷಪ್ಪಗೆ ಬೇಲ್​​ ನೀಡದಂತೆ ಪ್ರಬಲ ವಾದಕ್ಕೆ ಲೋಕಾ ತಯಾರಿ ನಡೆಸಿದೆ. ಮಾಡಾಳ್ ಪರ ವಕೀಲರು ತುರ್ತು ವಿಚಾರಣೆ ನಡೆಸಲು ಅರ್ಜಿ ಸಲ್ಲಿಸಿದ್ದರು.

ಲಂಚ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರಿಂದ ಬಂಧನ ಭೀತಿ ಎದುರಿಸುತ್ತಿರುವ ಆಡಳಿತಾರೂಢ ಬಿಜೆಪಿ ಶಾಸಕ ಕೆ. ಮಾಡಾಳು ವಿರೂಪಾಕ್ಷಪ್ಪ ಅವರು ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್‌ ಮೊರೆ ಹೋಗಿದ್ದರು. ಇಂದು ವಿಚಾರಣೆ ವೇಳೆ ಅವರಿಗೆ ಜಾಮೀನು ಮಂಜೂರಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+