ಷೇರು ಮಾರುಕಟ್ಟೆಯಲ್ಲಿ ದೀಪಾವಳಿ: ಬಜೆಟ್ ದಿನ ಆರಂಭದಲ್ಲೇ ಹೊಸ ಇತಿಹಾಸ!

ಮೋದಿ ಸರ್ಕಾರ 3ನೇ ಬಾರಿಗೆ ಅಧಿಕಾರಕ್ಕೆ ಬಂದ ನಂತರ ಹೊಸ ಬಜೆಟ್ ಮಂಡನೆ ಆಗ್ತಿದೆ. ಹೀಗೆ ಬಜೆಟ್ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆ ಕೂಡ ಸಾಕಷ್ಟು ಏರಿಳಿತಕ್ಕೆ ಇಂದು ಸಾಕ್ಷಿ ಆಗಲಿದ್ದು, ಆರಂಭದಲ್ಲೇ ಭಾರತೀಯ ಷೇರು ಮಾರುಕಟ್ಟೆ ಹೊಸ ಇತಿಹಾಸ ನಿರ್ಮಾಣ ಮಾಡಿದೆ. ಹಾಗಾದ್ರೆ ಇದೀಗ ಎಷ್ಟಿದೆ ಷೇರು ಮಾರುಕಟ್ಟೆಯ ಸೂಚ್ಯಂಕ? ಹೂಡಿಕೆದಾರರ ಜೇಬು ತುಂಬಿಸುತ್ತಾ ಷೇರುಪೇಟೆ? ಮುಂದೆ ಓದಿ.

ಹೌದು, ಷೇರು ಮಾರುಕಟ್ಟೆ ಇಂದು ಆರಂಭದಲ್ಲೇ ಭರ್ಜರಿ ಏರಿಕೆ ಕಂಡಿದೆ. ಆರಂಭದಲ್ಲಿ ಷೇರು ಮಾರುಕಟ್ಟೆ ಭಾರಿ ಏರಿಕೆಯನ್ನ ಕಂಡಿತ್ತು. ಈ ಮೂಲಕ ಸಾರ್ವಕಾಲಿಕ ಎತ್ತರಕ್ಕೂ ಷೇರು ಮಾರುಕಟ್ಟೆ ತಲುಪಿತ್ತು. ಇಂದು ಷೇರುಪೇಟೆ ಆರಂಭ ಆದಾಗ ಸೆನ್ಸೆಕ್ಸ್ ಸುಮಾರು 222 ಅಂಕ ಏರಿಕೆ ಕಂಡು ಬರೋಬ್ಬರಿ 80,724 ಅಂಕಕ್ಕೆ ತಲುಪಿತ್ತು. ಹಾಗೇ ನಿಫ್ಟಿ-50 ಕೂಡ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿ ಸಾರ್ವಕಾಲಿಕ ಎತ್ತರಕ್ಕೆ ಅಂದರೆ 24,568 ಅಂಕ ಗಳಿಕೆ ಮಾಡಿತ್ತು. ಹೀಗಾಗಿ ಇಂದು ಷೇರು ಮಾರುಕಟ್ಟೆಯಲ್ಲಿ ಮತ್ತಷ್ಟು ಏರಿಳಿತ ನಿರೀಕ್ಷೆ ಮಾಡಲಾಗಿದೆ.

Indian Stock Market Reached Another High On Day Of Union Budget 2024

ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ

2024ರ ಫೆಬ್ರವರಿ ತಿಂಗಳಲ್ಲಿ ಚುನಾವಣೆಗೆ ಮೊದಲು ಬಜೆಟ್ ಮಂಡನೆ ಮಾಡಿದ್ದ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇದೀಗ ಪೂರ್ಣ ಪ್ರಮಾಣದ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಸತತವಾಗಿ ಬಜೆಟ್ ಮಂಡನೆ ಮಾಡುತ್ತಿರುವ ಕಾರಣಕ್ಕೆ ಇದೀಗ ಕೇಂದ್ರ ಸಚಿವರ ಮೇಲೆ ನಿರೀಕ್ಷೆಗಳ ಭಾರ ಇದೆ. ಹಾಗೇ ಷೇರು ಮಾರುಕಟ್ಟೆ ಕೂಡ ಇಂದು ಬಜೆಟ್‌ನಲ್ಲಿ ಏನಾಗುತ್ತೆ? ಅನ್ನೋದನ್ನ ಕಾದು ನೋಡುತ್ತಿದೆ. ಹೀಗಾಗಿ ಆರಂಭದಲ್ಲಿ ಷೇರು ಮಾರುಕಟ್ಟೆ ಏರಿಕೆ ಕಂಡರೂ ನಂತರ ಕುಸಿತ ಕಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+