ಕರ್ನಾಟಕದಲ್ಲಿ ಸಂಚರಿಸುವ ಈ ಪ್ರಮುಖ ರೈಲುಗಳ ವೇಳಾಪಟ್ಟಿ ಬದಲಾವಣೆ- ಯಾವುವು ತಿಳಿಯಿರಿ
ಬೆಂಗಳೂರು, ಆಗಸ್ಟ್ 29: ಎಂಜಿನಿಯರಿಂಗ್ ಕೆಲಸಗಳ ಕಾರಣದಿಂದಾಗಿ ಕರ್ನಾಟಕದಲ್ಲಿ ಸಂಚರಿಸುವ ಪ್ರಮುಖ ರೈಲುಗಳ ವೇಳಾಪಟ್ಟಿಯನ್ನು ಬದಲಾವಣೆ ಮಾಡಲಾಗಿದೆ ಎಂದು ನೈಋತ್ಯ ರೈಲ್ವೆ ಮಾಹಿತಿ ನೀಡಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಇತರೆಡೆ ಸಂಚರಿಸುವ ರೈಲುಗಳ ವೇಳಾಪಟ್ಟಿಯಲ್ಲಿ ಹಲವಾರು ಬದಲಾವಣೆಗಳನ್ನು ರೈಲ್ವೆ ಇಲಾಖೆ ಪ್ರಕಟಿಸಿದೆ.
ನೈರುತ್ಯ ರೈಲ್ವೆಯ ಸೂಚನೆಯ ಪ್ರಕಾರ, ಹಲವಾರು ರೈಲುಗಳನ್ನು ಬೇರೆಡೆಗೆ ತಿರುಗಿಸಲಾಗಿದೆ. ಹಲವು ರೈಲುಗಳ ಸಮಯವನ್ನು ಮರುಹೊಂದಿಸಲಾಗಿದೆ.

ಬನಶಂಕರಿ ನಿಲ್ದಾಣದಲ್ಲಿ ನಾಲ್ಕು ರೈಲುಗಳ ವೇಳಾಪಟ್ಟಿಯನ್ನು ಮರುಹೊಂದಿಸಲಾಗಿದೆ ಎಂದು ನೈರುತ್ಯ ರೈಲ್ವೆ ಮಾಹಿತಿ ನೀಡಿದೆ.
1. ರೈಲು ಸಂಖ್ಯೆ 06514: ಶಿವಮೊಗ್ಗ ಟೌನ್-ತುಮಕೂರು ಡಿಇಎಂಯು ಎಕ್ಸ್‌ಪ್ರೆಸ್ ರೈಲಿನ ಸಮಯವನ್ನು ಮರುಹೊಂದಿಸಲಾಗಿದೆ. ಶಿವಮೊಗ್ಗ ಟೌನ್‌ನಿಂದ 30 ನಿಮಿಷ ತಡವಾಗಿ ಈ ರೈಲು ಹೊರಡುತ್ತದೆ.
2. ರೈಲು ಸಂಖ್ಯೆ 12629: ಇಂದು ಯಶವಂತಪುರದಿಂದ ಹೊರಡುವ ಯಶವಂತಪುರ-ಹಜರತ್ ನಿಜಾಮುದ್ದೀನ್ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ 45 ನಿಮಿಷ ತಡವಾಗಿ ಹೊರಡಲಿದೆ.

3. ರೈಲು ಸಂಖ್ಯೆ 17309: ಇಂದು ಯಶವಂತಪುರದಿಂದ ಹೊರಡುವ ಯಶವಂತಪುರ-ವಾಸ್ಕೋಡಗಾಮಾ ಡೈಲಿ ಎಕ್ಸ್‌ಪ್ರೆಸ್ ಅನ್ನು 40 ನಿಮಿಷಗಳವರೆಗೆ ಮರುಹೊಂದಿಸಲಾಗಿದೆ.
4. ರೈಲು ಸಂಖ್ಯೆ 20651: ಬೆಂಗಳೂರು-ತಾಳಗುಪ್ಪ ಡೈಲಿ ಎಕ್ಸ್‌ಪ್ರೆಸ್, ಇಂದು ಕೆಎಸ್‌ಆರ್ ಬೆಂಗಳೂರಿನಿಂದ ಹೊರಡುವ ಮಾರ್ಗದಲ್ಲಿ 30 ನಿಮಿಷಗಳ ಕಾಲ ತಡವಾಗಲಿದೆ.
ಗುಣದಾಳ-ವಿಜಯವಾಡ ಈಶಾನ್ಯ ವಿಭಾಗಗಳ ನಡುವೆ ಇಂಜಿನಿಯರಿಂಗ್ ಕೆಲಸ ನಡೆಯುತ್ತಿದೆ. ಇಂದು ಹೊರಡಬೇಕಿದ್ದ ರೈಲು ಸಂಖ್ಯೆ 18638, ಬೆಂಗಳೂರು-ಹತಿಯಾ ವೀಕ್ಲಿ ಎಕ್ಸ್‌ಪ್ರೆಸ್ ಅನ್ನು 180 ನಿಮಿಷಗಳ ಕಾಲ ಮರುಹೊಂದಿಸಲಾಗುವುದು ಎಂದು ನೈರುತ್ಯ ರೈಲ್ವೆ ತಿಳಿಸಿದೆ. ಇದು ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ಹೊರಡಲಿದೆ.

ವಿವಿಧ ಜಂಕ್ಷನ್‌ಗಳಿಗೆ ತಿರುಗಿಸಲಾಗಿರುವ ರೈಲುಗಳು
1. ರೈಲು ಸಂಖ್ಯೆ 12835: ಇಂದು ಹಟಿಯಾದಿಂದ ಹೊರಡುವ ಹಟಿಯಾ-ಬೆಂಗಳೂರು ( ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ) ವೀಕ್ಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಅನ್ನು ನಿಡದವೋಲು ಜಂಕ್ಷನ್, ಭೀಮಾವರಂ ಜಂಕ್ಷನ್, ಗುಡಿವಾಡ ಜಂಕ್ಷನ್ ಮತ್ತು ವಿಜಯವಾಡ ಜಂಕ್ಷನ್‌ಗಳ ಮೂಲಕ ಓಡಿಸಲು ತಿರುಗಿಸಲಾಗಿದೆ.
2. ರೈಲು ಸಂಖ್ಯೆ 18637: ಹಟಿಯಾ- ಬೆಂಗಳೂರು ( ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ) ವೀಕ್ಲಿ ಎಕ್ಸ್‌ಪ್ರೆಸ್ ಅನ್ನು ಸೆಪ್ಟೆಂಬರ್ 2 ರಂದು ನಿಡದವೋಲು ಜಂಕ್ಷನ್, ಭೀಮಾವರಂ ಜಂಕ್ಷನ್, ಗುಡಿವಾಡ ಜಂಕ್ಷನ್ ಮತ್ತು ವಿಜಯವಾಡ ಜಂಕ್ಷನ್‌ಗಳ ಮೂಲಕ ಓಡಿಸಲಾಗುವುದು.
ಹೌರಾ ವಿಭಾಗದ ರಾಮ್‌ಪುರಹತ್ ಮತ್ತು ಛತ್ರ ನಿಲ್ದಾಣಗಳ ನಡುವೆ ಮೂರನೇ ಮಾರ್ಗದ ಕಾರ್ಯಾರಂಭದ ಕಾರಣ ಈ ಕೆಳಗಿನ ರೈಲುಗಳನ್ನು ತಿರುಗಿಸಲಾಗುತ್ತದೆ.
1. ರೈಲು ಸಂಖ್ಯೆ 12510: ಗುವಾಹಟಿ- ಬೆಂಗಳೂರು ( ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ) ಟ್ರೈ-ವೀಕ್ಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, ಗುವಾಹಟಿಯಿಂದ ಸೆಪ್ಟೆಂಬರ್ 3, 4 ಮತ್ತು 5 ರಂದು ಹೊರಡಲಿದ್ದು, ನ್ಯೂ ಫರಕ್ಕಾ, ಅಜಿಮ್‌ಗಂಜ್, ಕಟ್ವಾ ಜಂಕ್ಷನ್, ಬಂದೇಲ್ ಜಂಕ್ಷನ್, ಹೌರಾ ಮೂಲಕ ಚಲಿಸುವಂತೆ ಮಾಡಲಾಗುವುದು.
2. ರೈಲು ಸಂಖ್ಯೆ 12509: ಆಗಸ್ಟ್ 30, 31 ಮತ್ತು ಸೆಪ್ಟೆಂಬರ್ 1 ರಂದು ಬೆಂಗಳೂರಿನಿಂದ ( ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ) ಹೊರಡುವ ಬೆಂಗಳೂರು-ಗುವಹಾಟಿ ಟ್ರೈ-ಸಾಪ್ತಾಹಿಕ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಅನ್ನು ಆಂಡುಲ್, ಹೌರಾ, ಬಾಂಡೆಲ್ ಜಂಕ್ಷನ್, ಕಟ್ವಾ ಜಂಕ್ಷನ್, ಅಜಿಮ್‌ಗಂಜ್ ಮಾರ್ಗಕ್ಕೆ ತಿರುಗಿಸಲಾಗುತ್ತದೆ.
3. ರೈಲು ಸಂಖ್ಯೆ 15227: ಆಗಸ್ಟ್ 31 ರಂದು ಬೆಂಗಳೂರಿನಿಂದ ( ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ) ಹೊರಡುವ ಬೆಂಗಳೂರು-ಮುಜಾಫರ್‌ಪುರ ವಿಕ್ಲಿ ಎಕ್ಸ್‌ಪ್ರೆಸ್ ಅನ್ನು ಆಂಡುಲ್, ಹೌರಾ, ಬಂದೇಲ್ ಜಂಕ್ಷನ್, ಕಟ್ವಾ ಜಂಕ್ಷನ್, ಅಜಿಮ್‌ಗಂಜ್ ಮತ್ತು ನ್ಯೂ ಫರಕ್ಕಾ ನಿಲ್ದಾಣಗಳ ಮೂಲಕ ಓಡಿಸಲು ತಿರುಗಿಸಲಾಗುತ್ತದೆ.
4. ರೈಲು ಸಂಖ್ಯೆ 15228: ಮುಜಾಫರ್‌ಪುರ-ಬೆಂಗಳೂರು ( ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ) ವೀಕ್ಲಿ ಎಕ್ಸ್‌ಪ್ರೆಸ್ ಅನ್ನು ಸೆಪ್ಟೆಂಬರ್ 4 ರಂದು ನ್ಯೂ ಫರಕ್ಕಾ, ಅಜಿಮ್‌ಗಂಜ್, ಕಟ್ವಾ ಜಂಕ್ಷನ್, ಬಂದೇಲ್ ಜಂಕ್ಷನ್, ಹೌರಾ ಮತ್ತು ಆಂಡೂಲ್ ನಿಲ್ದಾಣಗಳ ಮೂಲಕ ಓಡಿಸಲಾಗುವುದು.












Click it and Unblock the Notifications