ರೈಲ್ವೆ ಷೇರುಗಳ ಮೌಲ್ಯ ಭಾರಿ ಕುಸಿತ, ಷೇರು ಮಾರುಕಟ್ಟೆಯಲ್ಲಿ ತಲ್ಲಣ!
ನರೇಂದ್ರ ಮೋದಿ ನೇತೃತ್ವದಲ್ಲಿ ಹ್ಯಾಟ್ರಿಕ್ ಬಾರಿಸಿ ಸರ್ಕಾರ ರಚನೆ ಮಾಡಿರುವ ಬಿಜೆಪಿ ಈ ಬಾರಿ ಆಘಾತದ ಮೇಲೆ ಆಘಾತ ಎದುರಿಸುವ ಸ್ಥಿತಿ ಬಂದಿದೆ. ಅದ್ರಲ್ಲೂ 3ನೇ ಬಾರಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದಿಂದ ಇಂದು ಮೊದಲ ಬಜೆಟ್ ಮಂಡನೆ ಆಗಿದೆ. ಬಜೆಟ್ ಮಂಡನೆ ಪರಿಣಾಮವಾಗಿ ಭಾರತದ ಷೇರು ಮಾರುಕಟ್ಟೆ ಭೀಕರ ಕುಸಿತ ಕಂಡು ಮತ್ತೆ ಚೇತರಿಸಿಕೊಂಡಿದೆ. ಆದರೆ ರೈಲ್ವೆ ಷೇರುಗಳ ಪರಿಸ್ಥಿತಿ ಏನಾಗಿದೆ ಗೊತ್ತಾ?
ಕೇಂದ್ರ ಸರ್ಕಾರದ ಬಜೆಟ್ ಮಂಡನೆ ಸಮಯದಲ್ಲಿ, ಷೇರು ಮಾರುಕಟ್ಟೆಯಲ್ಲಿ ಏರಿಳಿತಗಳು ಉಂಟಾಗುವುದು ಮಾಮೂಲು. ಇಂದು ಷೇರು ಮಾರುಕಟ್ಟೆ ಆರಂಭದಲ್ಲೇ ಭರ್ಜರಿ ಏರಿಕೆ ಕಂಡಿತ್ತು. ಆರಂಭದಲ್ಲಿ ಷೇರು ಮಾರುಕಟ್ಟೆ ಭಾರಿ ಏರಿಕೆ ಕಂಡು ಸಾರ್ವಕಾಲಿಕ ಎತ್ತರಕ್ಕೂ ಷೇರು ಮಾರುಕಟ್ಟೆ ತಲುಪಿತ್ತು. ಇಂದು ಷೇರುಪೇಟೆ ಆರಂಭ ಆದಾಗ, ಸೆನ್ಸೆಕ್ಸ್ ಸುಮಾರು 222 ಅಂಕ ಏರಿಕೆ ಕಂಡು ಬರೋಬ್ಬರಿ 80,724 ಅಂಕಗಳಿಗೆ ತಲುಪಿತ್ತು. ಹಾಗೇ ನಿಫ್ಟಿ-50 ಕೂಡ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿ ಸಾರ್ವಕಾಲಿಕ ಎತ್ತರಕ್ಕೆ ಅಂದರೆ 24,568 ಅಂಕ ಗಳಿಕೆ ಮಾಡಿತ್ತು. ಆದರೆ ಆ ನಂತರ ಆಗಿದ್ದೆಲ್ಲವೂ ಉಲ್ಟಾ!

ಬಜೆಟ್ ಮಂಡನೆ ವೇಳೆ ಕುಸಿತ!
ನರೇಂದ್ರ ಮೋದಿ ಅವರ ಸರ್ಕಾರದಲ್ಲಿ ಮತ್ತೊಮ್ಮೆ ಹಣಕಾಸು ಖಾತೆ ಪಡೆದಿರುವ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಇಂದು, ಬಜೆಟ್ ಮಂಡಿಸಿದರು. ಹೀಗೆ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಶುರು ಮಾಡಿದ ಕೆಲವೇ ನಿಮಿಷಗಳಲ್ಲಿ ಷೇರು ಮಾರುಕಟ್ಟೆ ಸಾವಿರಾರು ಅಂಕ ಕುಸಿತ ಕಂಡಿತ್ತು.
ಸೆನ್ಸೆಕ್ಸ್ 1000ಕ್ಕೂ ಹೆಚ್ಚು ಅಂಕ ಕುಸಿತ ಕಂಡು, ಸಾಕಷ್ಟು ಭಯ ಹುಟ್ಟಿಸಿತ್ತು. ಆದರೆ ಆ ನಂತರ ಸೆನ್ಸೆಕ್ಸ್ & ನಿಫ್ಟಿ-50 ಚೇತರಿಕೆ ಕಂಡರೂ ರೈಲ್ವೆ ಷೇರುಗಳ ಮೇಲೆ ಭಾರಿ ಹೊಡೆತ ಬಿದ್ದಿದೆ. ಇಂದು ಇಂಡಿಯನ್ ರೈಲ್ವೆ ಷೇರು (IRCTC) & ರೈಲ್ ವಿಕಾಸ್ ನಿಗಮ್ (RVNL) ಹಾಗೂ ಇಂಡಿಯನ್ ರೈಲ್ವೆ ಫೈನಾನ್ಸ್ (IRFC) ಷೇರುಗಳು ಎಷ್ಟು ಕುಸಿತ ಕಂಡವು ಗೊತ್ತೆ? ಮುಂದೆ ಓದಿ.
ರೈಲ್ವೆ ಷೇರುಗಳಲ್ಲಿ ಭಾರಿ ಕುಸಿತ
2024ರ ಫೆಬ್ರವರಿ ತಿಂಗಳಲ್ಲಿ ಚುನಾವಣೆಗೆ ಮೊದಲು ಬಜೆಟ್ ಮಂಡನೆ ಮಾಡಿದ್ದ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇದೀಗ ಪೂರ್ಣ ಪ್ರಮಾಣದ ಬಜೆಟ್ ಮಂಡನೆ ಮಾಡಿದರು. ಸತತ ಬಜೆಟ್ ಮಂಡನೆ ಮಾಡುತ್ತಿರುವ ಕಾರಣಕ್ಕೆ ಇಂದು ಕೇಂದ್ರ ಸಚಿವರ ಮೇಲೆ ನಿರೀಕ್ಷೆಗಳ ಭಾರ ಇತ್ತು. ಹೀಗಿದ್ದಾಲೇ IRCTC ಷೇರುಗಳು ಸುಮಾರು 31.60 ಅಂಕ ಕುಸಿತ ಕಂಡು, ಶೇಕಡಾ 3 ರಷ್ಟು ಇಳಿಕೆ ಕಂಡಿವೆ. ಹಾಗೇ ರೈಲ್ ವಿಕಾಸ್ ನಿಗಮ್ ಷೇರುಗಳು ಶೇಕಡಾ 5 ರಷ್ಟು ಕುಸಿತ ಕಂಡು, 32.10 ಅಂಕ ಇಳಿಕೆ ಕಂಡಿವೆ. ಈ ನಡುವೆ IRFC ಷೇರುಗಳು ಕೂಡ ಶೇಕಡಾ 4.83 ರಷ್ಟು ಕುಸಿತ ಕಂಡು 9.88 ಅಂಕ ಇಳಿದಿವೆ.












Click it and Unblock the Notifications