ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಿಂದ ವಿಶೇಷ ಪ್ರವಾಸಿ ರೈಲು

|
Google Oneindia Kannada News

ಬೆಂಗಳೂರು, ಸೆ. 18 : ಭಾರತೀಯ ರೈಲ್ವೆ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಲು ಹೊಸ ಪ್ರವಾಸಿ ಯೋಜನೆಯನ್ನು ತಯಾರಿಸಿದೆ. ಭಾರತೀಯ ರೈಲ್ವೆ ಆಹಾರ ಪೂರೈಕೆ ಮತ್ತು ಪ್ರವಾಸೋದ್ಯಮ ನಿಗಮದ ವತಿಯಿಂದ ಬೆಂಗಳೂರಿನಿಂದ ವಿಶೇಷ ರೈಲು ಹೊರಡಲಿದ್ದು, ಪ್ರವಾಸಿ ಸ್ಥಳಗಳನ್ನು ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.

ಕೇಂದ್ರ ರೈಲ್ವೆ ಬಜೆಟ್‌ನಲ್ಲಿ ಘೋಷಿಸಿದಂತೆ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಲು ಈ ವಿಶೇಷ ರೈಲು ವ್ಯವಸ್ಥೆಯನ್ನು ಮಾಡಲಾಗಿದೆ. ಈ ಹೊಸ ಪ್ರವಾಸ ಪ್ಯಾಕೇಜ್ ಮೊಟ್ಟ ಮೊದಲ ಬಾರಿಗೆ ಎಲ್ಲಾ ವರ್ಗದ ಪ್ರಯಾಣಿಕರಗೂ ಲಭ್ಯವಾಗುವಂತೆ ಕಡಿಮೆ ವೆಚ್ಚದಲ್ಲಿ ರೂಪಿಸಲಾಗಿದೆ. ಈ ಯೋಜನೆಯನ್ನು ಭಾರತೀಯ ರೈಲ್ವೆ ಆಹಾರ ಪೂರೈಕೆ ಮತ್ತು ಪ್ರವಾಸೋದ್ಯಮ ನಿಗಮ ರೂಪಿಸಿದೆ.

Indian Railways

ಸುಖ ಮಂಗಳಂ ಎಕ್ಸ್‌ಪ್ರೆಸ್ ಬೆಂಗಳೂರು ಎಂಬ ವಿಶೇಷ ರೈಲು ಇದಾಗಿದ್ದು, ಈ ಯೋಜನೆಗಾಗಿ ವಿಶೇಷವಾಗಿ ನವೀಕರಣಗೊಂಡಿರುವ ಬೋಗಿಗಳನ್ನು ಸಿದ್ಧಪಡಿಸಲಾಗುತ್ತಿದೆ. ಒಟ್ಟು 8 ರಾತ್ರಿ ಮತ್ತು 9 ದಿನಗಳ ಪ್ರವಾಸವನ್ನು ಈ ಪ್ಯಾಕೇಜ್ ಒಳಗೊಂಡಿದೆ. ಈ ಪ್ರವಾಸಿ ರೈಲು ಬೆಂಗಳೂರಿನಿಂದ ಅಕ್ಟೋಬರ್ 25ಕ್ಕೆ ಹೊರಡಲಿದ್ದು, ನವೆಂಬರ್ 2ರಂದು ಬೆಂಗಳೂರಿಗೆ ವಾಪಸ್ ಆಗಲಿದೆ. [ಉತ್ತರಪ್ರದೇಶದಲ್ಲಿ ನಾಪತ್ತೆಯಾದ ರೈಲು ಬಿಹಾರದಲ್ಲಿ ಪತ್ತೆ]

ಯಾವ ಮಾರ್ಗದಲ್ಲಿ ಪ್ರಯಾಣ : ಬೆಂಗಳೂರಿನಿಂದ ಹೊರಡುವ ರೈಲು ಗದಗ ಆಂಧ್ರ ಪ್ರದೇಶದ ಗುಂತಕಲ್ ಮತ್ತು ಮಹಾರಾಷ್ಟ್ರ ಮಾರ್ಗವಾಗಿ ಅಲ್ಲಿನ ಪ್ರಮುಖ ಐತಿಹಾಸಿಕ ಮತ್ತು ಯಾತ್ರಿಕ ಸ್ಥಳಗಳಲ್ಲದೆ ಪ್ರೇಕ್ಷಣೀಯ ಸ್ಥಳಗಳನ್ನು ತಲುಪಲಿದೆ. ಹಾಗೆಯೇ ಪ್ರತ್ಯೇಕ ಪ್ರವಾಸಿ ರೈಲನ್ನು ಬೆಂಗಳೂರಿನಿಂದ ಬಿಜಾಪುರ, ಸೋಲ್ಲಾಪುರ, ಪಂಡರಾಪುರ, ಔರಂಗಾಬಾದ್, ಶಿರಡಿ, ಮತ್ತು ಬಾದಾಮಿ ಸ್ಥಳಗಳನ್ನ ನೋಡಲು ಪರಿಚಯಿಸಲಾಗುತ್ತಿದೆ.

ಪ್ರತ್ಯೇಕ ಪ್ರವಾಸಿ ರೈಲು, ಬಿಜಾಪುರದ ಐತಿಹಾಸಿಕ ಸ್ಥಳಗಳಾದ ಗಗನ್ ಮಹಲ್, ಆಕಾಲ್ ಕೋಟ್ ದೇವಸ್ಥಾನ ಸೋಲ್ಲಾಪುರದ ತುಲುಜಾ ಭವಾನಿ ದೇವಸ್ಥಾನ, ಪಂಡರಾಪುರ ದೇವಸ್ಥಾನ, ಅಜಂತಾ ಮತ್ತು ಎಲ್ಲೋರ ಗುಹೆಗಳನ್ನು ಒಳಗೊಂಡಂತೆ ಎರಡು ದಿನಗಳ ಹೊರಸಂಚಾರ ಮತ್ತು ಬಾದಾಮಿಯ ದೇವಸ್ಥಾನಗಳನ್ನು ವೀಕ್ಷಿಸುವ ಅವಕಾಶ ಕಲ್ಪಿಸಲಿದೆ. [ನಾಲ್ಕು ರೈಲುಗಳ ಪ್ರಯಾಣಿಕರಿಗೆ ವೈಫೈ ಭಾಗ್ಯ]

ಈ ಪ್ರವಾಸಿ ರೈಲಿನಲ್ಲಿ ಪ್ರವಾಸಿಗರಿಗೆ ವಸತಿ, ರಸ್ತೆ ಪ್ರಯಾಣ, ಸೈಟ್ ಸೀಯಿಂಗ್ ಮತ್ತು ಊಟದ ವ್ಯವಸ್ಥೆಯನ್ನು ನೀಡುವ ಜೊತೆಗೆ ಪ್ರವಾಸಿ ಮಾರ್ಗದರ್ಶಕರ ಮೂಲಕ ಪ್ರೇಕ್ಷಣೀಯ ಸ್ಥಳಗಳ ಪರಿಚಯವನ್ನು ನೀಡಲಾಗುತ್ತದೆ. ಪ್ರವಾಸದಲ್ಲಿ ಪ್ರಯಾಣಿಕರಿಗೆ ಆಹಾರ ಒದಗಿಸಲು ಪ್ರತ್ಯೇಕ ಆಹಾರ ತಯಾರಿಕೆ ಬೋಗಿಯನ್ನು ಈ ರೈಲು ಒಳಗೊಂಡಿದೆ.

ಈ ಪ್ರವಾಸಿ ಪ್ಯಾಕೇಜ್ ಕಾಯ್ದಿರಿಸಲು http://www.irctctourism.com/ ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ [email protected] ಗೆ ಸಂಪರ್ಕಿಸಬಹುದು ಅಥವ 080 -22960014, ಮೊ. 9686575202, 9686575203 ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

English summary
Indian Railway Catering and Tourism Corporation announced new special tourist train from Bangalore. Tourist train will travel across Karnataka, Andra Pradesh and Maharashtra state. A special package is available from October 25 to November 2.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X