ಭಾರತ ಪ್ರಭಾವಿ IAS, IPS ಅಧಿಕಾರಿಗಳನ್ನು ನೋಡಿದೆ; ಅಸಲಿ ಪವರ್ ಕೊಡಲು ಗಂಡಸರ ಕೈ ನಡುಗುತ್ತದೆ: ಸಿದ್ದು ಮಠಪತಿ

ಭಾರತ ಪ್ರಭಾವಿ IAS, IPS ಅಧಿಕಾರಿಗಳನ್ನು ನೋಡಿದೆ; ಅಸಲಿ ಪವರ್ ಕೊಡಲು ಗಂಡಸರ ಕೈ ನಡುಗುತ್ತದೆ: ಹವ್ಯಾಸಿ ಬರಹಗಾರ ಸಿದ್ದು ಮಠಪತಿ ಅವರ ಬರಹ ಇಲ್ಲಿದೆ.

ದಶಕಗಳಿಂದ ಈ ದೇಶ ಅತ್ಯದ್ಭುತ ಮಹಿಳಾ ನಾಯಕಿಯರನ್ನು, ಪ್ರಭಾವಿ IAS, IPS ಅಧಿಕಾರಿಗಳನ್ನು, ಕ್ರಾಂತಿಕಾರಿ ಹೋರಾಟಗಾರ್ತಿಯರನ್ನು ನೋಡಿದೆ. ಆದರೆ, ದೇಶದ ಭವಿಷ್ಯ ಬರೆಯುವ ಅತಿ ದೊಡ್ಡ ಪಂಚಾಯಿತಿಯಲ್ಲಿ ಅವರಿಗೆ ಸರಿಯಾದ ಜಾಗ ಸಿಕ್ಕಿಲ್ಲ. ವೇದಿಕೆ ಮೇಲೆ ನಿಂತು ಮಹಿಳಾ ಸಮಾನತೆ ಅಂತ ಮೈಕ್ ಹರಿಯುವಂತೆ ಭಾಷಣ ಬಿಗಿಯುವುದು ಸುಲಭ, ಆದರೆ ಅಸಲಿ ಪವರ್ ಕೊಡುವಾಗ ಗಂಡಸರ ಕೈ ನಡುಗುತ್ತದೆ! ಈ ಸಾಂಕೇತಿಕ ಗೌರವ ಮತ್ತು ಅಸಲಿ ಅಧಿಕಾರದ ನಡುವಿನ ಕಂದಕ ಇದೆಯಲ್ಲ, ಅದೇ ಈ ಮೀಸಲಾತಿ ಹೋರಾಟದ ಅಸಲಿ ಕಿಡಿ. ಭಾರತದ ಇವತ್ತಿನ ಅಸಲಿ ಪರಿಸ್ಥಿತಿ ಅರ್ಥವಾಗಬೇಕಾದರೆ, ನವದೆಹಲಿಯ ಭಜನಾ ಮಂಡಳಿಯಿಂದ ಹೊರಬಂದು, ಗ್ಲೋಬಲ್ ಲೆವೆಲ್‌ನಲ್ಲಿ ಮಹಿಳಾ ಮೀಸಲಾತಿ ಹೇಗೆ ವರ್ಕ್ ಆಗ್ತಿದೆ ಅಂತ ನೋಡಬೇಕು.

India Womens

ದಿ ನಾರ್ಡಿಕ್ ಮಾಡೆಲ್! ಅಪ್ಪಟ ಪ್ರಾಮಾಣಿಕತೆ. ಸ್ವೀಡನ್ ಅಥವಾ ನಾರ್ವೆ ದೇಶಗಳನ್ನ ಒಮ್ಮೆ ನೋಡಿ. ಅಲ್ಲಿ 45% ಗಿಂತ ಹೆಚ್ಚು ಮಹಿಳೆಯರು ಸಂಸತ್ತಿನಲ್ಲಿದ್ದಾರೆ. ಆಶ್ಚರ್ಯ ಅಂದ್ರೆ ಅಲ್ಲಿ ಸಂವಿಧಾನದಲ್ಲಿ ಯಾವುದೇ ಮೀಸಲಾತಿಯ ಕಟ್ಟುಪಾಡುಗಳಿಲ್ಲ! ಬದಲಾಗಿ ಅಲ್ಲಿನ ರಾಜಕೀಯ ಪಕ್ಷಗಳು ದಶಕಗಳ ಹಿಂದೆಯೇ ತಾವಾಗಿಯೇ Internal Quotas ಜಾರಿಗೆ ತಂದವು. ಇದು ಕಾನೂನಿನ ಬಲವಂತದಿಂದ ಬಂದಿದ್ದಲ್ಲ, ಬದಲಾಗಿ ವ್ಯವಸ್ಥೆಯ ಪ್ರಾಮಾಣಿಕತೆಯಿಂದ ಹುಟ್ಟಿದ್ದು. ಆದರೆ ಭಾರತದ ರಾಜಕಾರಣಿಗಳು ಈ ಟೆಸ್ಟ್‌ನಲ್ಲಿ ಅಟ್ಟರ್ ಫ್ಲಾಪ್! ದಶಕಗಳ ಕಾಲ ಭಾಷಣ ಬಿಗಿದರೇ ಹೊರತು, ಗೆಲ್ಲುವ ಸೀಟುಗಳನ್ನು ಹೆಣ್ಣುಮಕ್ಕಳಿಗೆ ಬಿಟ್ಟುಕೊಡಲೇ ಇಲ್ಲ. ಅದಕ್ಕೇ ನಮಗೆ ಸಂವಿಧಾನದ ಬಲವಂತ ಬೇಕಾಯಿತು.

India Womens: ದಿ ಮೆಕ್ಸಿಕನ್ ಮಾಡೆಲ್.. ಸಿಸ್ಟಮ್‌ಗೆ ಕೊಟ್ಟ ಡೈರೆಕ್ಟ್ ಶಾಕ್!

ರಾಜಕೀಯ ಪಕ್ಷಗಳು ತಾವಾಗಿಯೇ ಬದಲಾಗದಿದ್ದರೆ, ವ್ಯವಸ್ಥೆ ಅವರ ಕುತ್ತಿಗೆ ಹಿಡಿದು ಬದಲಾಯಿಸಬೇಕು. 2019 ರಲ್ಲಿ ಮೆಕ್ಸಿಕೋ ಒಂದು ಡೇಂಜರಸ್ ಬಿಲ್ ಪಾಸ್ ಮಾಡ್ತು "Paridad en Todo" (ಎಲ್ಲದರಲ್ಲೂ ಸಮಪಾಲು). ಕೇವಲ ಸಂಸತ್ತು ಮಾತ್ರವಲ್ಲ, ನ್ಯಾಯಾಂಗ ಮತ್ತು ಕಾರ್ಯಾಂಗದಲ್ಲೂ 50-50 ಪರ್ಸೆಂಟ್ ಫಿಕ್ಸ್ ಮಾಡ್ತು. ಇಲ್ಲಿನ ಅಸಲಿ ಕಿಕ್ ಅಂದರೆ ಮೆಕ್ಸಿಕೋ ಇದನ್ನ ತಕ್ಷಣವೇ ಜಾರಿಗೆ ತಂತು! ಯಾವುದೇ ಕಂಡೀಷನ್ ಇಲ್ಲ, ಡಿಲೇ ಇಲ್ಲ. ರಾತ್ರೋರಾತ್ರಿ ಅಲ್ಲಿನ ಗಂಡಸರ ಓಲ್ಡ್ ಬಾಯ್ಸ್ ಕ್ಲಬ್ ಅನ್ನು ಮುಲಾಜಿಲ್ಲದೆ ಒಡೆದುಹಾಕಿದರು. ಮೆಕ್ಸಿಕೋ ಥರ ನಾವು ಬಿಲ್ ಪಾಸ್ ಆದ ತಕ್ಷಣ ಜಾರಿಗೆ ತಂದಿಲ್ಲ. ಬದಲಾಗಿ ಇದನ್ನ ಭಾರತದ ಅತಿ ದೊಡ್ಡ ಬ್ಯೂರೋಕ್ರಾಟಿಕ್ ಟ್ರ್ಯಾಪ್‌ನಲ್ಲಿ ಸಿಕ್ಕಿಸಿಹಾಕಿದ್ದಾರೆ.

The Proxy Threat.. ಗಂಡಸರೇ ಮುಂದೆ ನಿಂತು ಆಟ ಆಡುವ ಈ ವ್ಯವಸ್ಥೆಯ ಮೇಲೆ ಬಲವಂತವಾಗಿ ಮೀಸಲಾತಿ ಹೇರಿದಾಗ, ಪವರ್ ಬ್ರೋಕರ್‌ಗಳು ಬಹಳ ಹುಷಾರಾಗಿ ಗೇಮ್ ಆಡ್ತಾರೆ. ಸಿಸ್ಟಮ್ ಬದಲಾದಾಗ ಅವರು ತಮ್ಮ ಹೆಂಡತಿ, ಮಗಳು, ಸೊಸೆಯನ್ನ ಡಮ್ಮಿ ಕ್ಯಾಂಡಿಡೇಟ್ ಆಗಿ ನಿಲ್ಲಿಸ್ತಾರೆ. ಭಾರತದ ಪಂಚಾಯತ್ ವ್ಯವಸ್ಥೆಯಲ್ಲಿ "ಅಧ್ಯಕ್ಷೆ ಹೆಂಡತಿ, ಆಡಳಿತ ಗಂಡನದ್ದು" ಅನ್ನೋದನ್ನ ನಾವು ಆಲ್ರೆಡಿ ನೋಡಿದ್ದೀವಿ. ಸರಿಯಾದ ಗ್ರೌಂಡ್-ಲೆವೆಲ್ ಟ್ರೈನಿಂಗ್ ಇಲ್ಲದೆ ಈ 33% ಕೋಟಾ ಜಾರಿಯಾದರೆ, ದೆಹಲಿಯ ಕುರ್ಚಿಗಳಲ್ಲಿ ಬರೀ ಗಂಡಸರ ರಿಮೋಟ್ ಕಂಟ್ರೋಲ್ ಬೊಂಬೆಗಳು ಮಾತ್ರ ಕೂರುವ ದೊಡ್ಡ ಅಪಾಯವಿದೆ.

ವಿರೋಧಿಸುವವರ ಪ್ರಶ್ನೆಗಳಲ್ಲೂ ಲಾಜಿಕ್ ಇದೆ, ಮೀಸಲಾತಿಯ ಟೈಮಿಂಗ್ ಮತ್ತು ಪ್ರಕ್ರಿಯೆ ಬಗ್ಗೆ ಪ್ರಶ್ನೆ ಮಾಡುತ್ತಿರುವವರನ್ನು ಕೇವಲ ಮಹಿಳಾ ವಿರೋಧಿಗಳು ಎಂದು ಲೇಬಲ್ ಮಾಡುವಂತಿಲ್ಲ. ಈ ಮೀಸಲಾತಿ ಜಾರಿಗೆ ಜನಗಣತಿ ಮತ್ತು Delimitation ಎಂಬ ದೊಡ್ಡ ಬ್ರೇಕ್ ಹಾಕಿದ್ದಾರಲ್ಲ, ಅಲ್ಲಿದೆ ಅಸಲಿ ಆತಂಕ! ಜೊತೆಗೆ ಒಬಿಸಿ ಮಹಿಳೆಯರ ಒಳಮೀಸಲಾತಿ ವಿಚಾರವನ್ನು ಸುಮ್ಮನೆ ಕಡೆಗಣಿಸುವಂತಿಲ್ಲ.

ನಮ್ಮ ಸಮಾಜದ ಪದರಗಳು ಅಷ್ಟು ಸಂಕೀರ್ಣವಾಗಿವೆ. ಪ್ರಜಾಪ್ರಭುತ್ವದಲ್ಲಿ ಎಲ್ಲರನ್ನೂ ಒಳಗೊಳ್ಳುವುದು ಸುಲಭದ ಮಾತಲ್ಲ. ರಾಜಕಾರಣ ತನ್ನಷ್ಟಕ್ಕೆ ತಾನು ಯಾವತ್ತೂ ಶುದ್ಧಿಯಾಗಲ್ಲ. ಮಹಿಳಾ ಮೀಸಲಾತಿ ಖಂಡಿತಾ ಬೇಕು, ಅದು ಭಿಕ್ಷೆಯಲ್ಲ, ಹಕ್ಕು. 18ನೇ ಲೋಕಸಭೆಯ ನಂಬರ್‌ಗಳನ್ನು ಗಮನಿಸಿದರೆ, 543 ಸಂಸದರ ಪೈಕಿ ಮಹಿಳೆಯರ ಸಂಖ್ಯೆ ಕೇವಲ 74. ಅಂದರೆ ಸುಮಾರು 14%. ನೂರಾರು ಕೋಟಿ ಜನಸಂಖ್ಯೆ ಇರುವ, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಮಹಿಳೆಯರ ಪ್ರಾತಿನಿಧ್ಯ ಈ ಮಟ್ಟದಲ್ಲಿರುವುದು ವ್ಯವಸ್ಥೆಯ ಬಹುದೊಡ್ಡ ಕೊರತೆ. ಎಷ್ಟೇ ಪ್ರಯತ್ನಪಟ್ಟರೂ ಸಹಜ ಪ್ರಕ್ರಿಯೆಯಲ್ಲಿ ರಾಜಕೀಯ ಪಕ್ಷಗಳು ಮಹಿಳೆಯರಿಗೆ ಗೆಲ್ಲುವ ಸೀಟುಗಳನ್ನು ಬಿಟ್ಟುಕೊಡುತ್ತಿಲ್ಲ. ಈ ಹಿನ್ನೆಲೆಯಲ್ಲಿ, 33% ಮೀಸಲಾತಿಯು ಕೇವಲ ಒಂದು ಕೊಡುಗೆಯಲ್ಲ, ಬದಲಾಗಿ ಇದೊಂದು ಅತ್ಯಗತ್ಯ Structural Correction.

ಬರಹ: ಸಿದ್ದು ಮಠಪತಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+