ಭಾಯಿ - ಭಾಯಿ ನಡುವೆ ಚೀನಾಗೆ ಶಾಕ್ ಕೊಟ್ಟ ಭಾರತ!
ಭಾರತ ಹಾಗೂ ಚೀನಾದ ನಡುವೆ ಪರಿಸ್ಥಿತಿ ಸುಧಾರಿಸುತ್ತಿದೆ. ಈ ರೀತಿ ಇರುವಾಗಲೇ ಚೀನಾ ದೇಶಕ್ಕೆ ಭಾರತ ಶಾಕ್ ನೀಡಿದೆ. ಹೌದು ಅಮೆರಿಕಾದ ತೆರಿಗೆ ನೀತಿಯಿಂದಾಗಿ ಭಾರತವು ಕೆಲವೊಂದು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಇದರೊಂದಿಗೆ ಭಾರತ - ರಷ್ಯಾ - ಚೀನಾ ದೇಶಗಳು ಒಂದಾಗುತ್ತಿವೆ. ಇದರ ನಡುವೆಯೇ ಭಾರತವು ಚೀನಾ ದೇಶಕ್ಕೂ ಶಾಕ್ ಕೊಟ್ಟಿದೆ.
2025ರ ಎರಡನೇ ತ್ರೈಮಾಸಿಕದಲ್ಲಿ ಭಾರತವು ಅಮೆರಿಕದ ಸ್ಮಾರ್ಟ್‌ಫೋನ್ ರಫ್ತುದಾರ ರಾಷ್ಟ್ರಗಳಲ್ಲಿ ಚೀನಾವನ್ನು ಹಿಂದಿಕ್ಕಿ ಪ್ರಮುಖ ರಾಷ್ಟ್ರವಾಗಿ ಹೊರಹೊಮ್ಮಿದೆ. ಇದು ಒಂದು ವರ್ಷದ ಹಿಂದಿನ ರಫ್ತಿಗೆ ಹೋಲಿಕೆ ಮಾಡಿದರೆ, ಶೇ 13% ಪ್ರತಿಶತ ಹೆಚ್ಚಾಗಿದೆ. ಇದೇ ಅವಧಿಯಲ್ಲಿ ಚೀನಾದ ಪಾಲು 61% ರಿಂದ 25% ಕ್ಕೆ ಕುಸಿದಿದೆ, ಇದು ಯುಎಸ್-ಚೀನಾ ವ್ಯಾಪಾರ ಘರ್ಷಣೆಯ ನಡುವೆ ಜಾಗತಿಕ ಪೂರೈಕೆ ಸರಪಳಿಗಳಲ್ಲಿ ಐತಿಹಾಸಿಕ ಹೊಸ ಬದಲಾವಣೆಯನ್ನು ಸೂಚಿಸುತ್ತದೆ ಎಂದು ಹೇಳಲಾಗಿದೆ. ಈ ವಿಷಯದ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಅವರು ಟ್ವೀಟ್ ಮಾಡಿದ್ದಾರೆ.

ಆಪಲ್ ಈ ಬದಲಾವಣೆಗೆ ಮುಂದಾಳತ್ವ ವಹಿಸಿದೆ. 2025 ರ ಮೊದಲಾರ್ಧದಲ್ಲಿ ಭಾರತದಿಂದ ರಫ್ತು 53% ರಷ್ಟು ಏರಿಕೆಯಾಗಿ 20 ಮಿಲಿಯನ್ ಯುನಿಟ್‌ಗಳನ್ನು ದಾಟಿದೆ. ಐಫೋನ್ 16 ಮಾತ್ರ ಭಾರತದ ಒಟ್ಟು ಸ್ಮಾರ್ಟ್‌ಫೋನ್ ರಫ್ತಿನಲ್ಲಿ 18% ರಷ್ಟಿದೆ. ಇನ್ನು ಇದು ಮಾತ್ರವಲ್ಲದೆ ಇತ್ತೀಚಿಗೆ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸೂಚನೆಯ ಹೊರತಾಗಿಯೂ ಭಾರತದಲ್ಲಿ ಆಪಲ್ ಐಪೋನ್ 17 ಉತ್ಪಾದನೆ ಸಹ ಶುರುವಾಗಿದೆ.
ಇತರ ತಯಾರಕರಿಂದಲೂ ಇದೇ ಮಾದರಿ: ಭಾರತದಿಂದ ಯುಎಸ್‌ಗೆ ಸ್ಯಾಮ್‌ಸಂಗ್‌ನ ವಹಿವಾಟು ವರ್ಷದಿಂದ ವರ್ಷಕ್ಕೆ 268% ರಷ್ಟು ಏರಿಕೆಯಾಗಿವೆ. ಆದರೆ ಮೊಟೊರೊಲಾ ಏಳು ಪಟ್ಟು ಬೆಳವಣಿಗೆಯನ್ನು ದಾಖಲಿಸಿದ್ದು, ಬಹುತೇಕ ಎಲ್ಲಾ ಯುನಿಟ್‌ಗಳು ಯುಎಸ್‌ಗೆ ಸೀಮಿತವಾಗಿವೆ.
ಈ ರೂಪಾಂತರವು ಒಂದು ದಶಕದ ಅವಧಿಯ ನಿರ್ಮಾಣದ ಫಲಿತಾಂಶವಾಗಿದೆ. ಭಾರತದ ಮೊಬೈಲ್ ಫೋನ್ ಉತ್ಪಾದನೆಯು 2014 ರಲ್ಲಿ ₹18,000 ಕೋಟಿಯಿಂದ 2025 ರಲ್ಲಿ ₹5.45 ಲಕ್ಷ ಕೋಟಿಗೆ ಏರಿದೆ. ಇದಕ್ಕೆ ಮೇಕ್ ಇನ್ ಇಂಡಿಯಾ ಮತ್ತು ಉತ್ಪಾದನಾ-ಸಂಬಂಧಿತ ಪ್ರೋತ್ಸಾಹಕ (PLI) ಯೋಜನೆಗಳು ಕಾರಣ, ಇದು ಜಾಗತಿಕ ದೈತ್ಯ ಹೂಡಿಕೆದಾರರನ್ನು ಭಾರತದ ಉತ್ಪಾದನೆಯತ್ತ ಆಕರ್ಷಿಸಿದೆ.
ಇದು ದಶಕಗಳಲ್ಲಿ ಜಾಗತಿಕ ಸ್ಮಾರ್ಟ್‌ಫೋನ್ ಪೂರೈಕೆ ಹೆಚ್ಚಳದ ಮಹತ್ವದ ಬದಲಾವಣೆ ಆಗಿದೆ. ಇದು ಶತಕೋಟಿ ಡಾಲರ್‌ಗಳ ವ್ಯಾಪಾರ ಮರು ಪ್ರಾರಂಭಕ್ಕೆ ಕಾರಣವಾಗಿದೆ. ಚೀನಾದ ಉತ್ಪಾದನೆಯ ಮೇಲಿನ US ಅವಲಂಬನೆಯನ್ನು ಕಡಿಮೆ ಮಾಡುತ್ತಿದ್ದು ಮತ್ತು ಭಾರತದತ್ತ ಹೂಡಿಕೆ ಹೆಚ್ಚಳವಾಗಿದೆ. ಈ ಬದಲಾವಣೆಯು ಭವಿಷ್ಯದ ವ್ಯಾಪಾರ ನೀತಿ, ತಂತ್ರಜ್ಞಾನ ಭದ್ರತಾ ಚರ್ಚೆಗಳು ಮತ್ತು ವಿಶ್ವದ ಮೂರು ದೊಡ್ಡ ಆರ್ಥಿಕತೆಗಳ ನಡುವಿನ ವಿಕಸನಕ್ಕೆ ನಾಂದಿ ಆಗಲಿದೆ ಎಂದು ಸಂಸದ ತೇಜಸ್ವಿ ಸೂರ್ಯ ಅವರು ಹೇಳಿದ್ದಾರೆ.












Click it and Unblock the Notifications