ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮಖಂಡಿಯಲ್ಲಿ ಶೀಘ್ರವೇ ಭಾರತದ ಮೊದಲ ಫ್ಲೆಕ್ಸ್ ಇಂಧನ ಕೇಂದ್ರ ಆರಂಭ

|
Google Oneindia Kannada News

ಬಾಗಲಕೋಟೆ, ಅಕ್ಟೋಬರ್‌ 26: ಬೆಂಗಳೂರಿನಿಂದ ಸುಮಾರು 500 ಕಿಲೋಮೀಟರ್ ದೂರದಲ್ಲಿರುವ ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಭಾರತದ ಮೊದಲನೆಯ 'ಫ್ಲೆಕ್ಸ್ ಇಂಧನ' ಕೇಂದ್ರ ಆರಂಭವಾಗಲಿದೆ.

ಫ್ಲೆಕ್ಸ್ ಇಂಧನ ಅಥವಾ ಹೊಂದಿಕೊಳ್ಳುವ ಇಂಧನವು ಪರ್ಯಾಯ ಇಂಧನವಾಗಿದ್ದು, ಇದರಲ್ಲಿ ಗ್ಯಾಸೋಲಿನ್ ಅನ್ನು ಮೆಥನಾಲ್ ಅಥವಾ ಎಥೆನಾಲ್‌ನೊಂದಿಗೆ ಸಂಯೋಜಿಸಲಾಗುತ್ತದೆ. ಬಾಗಲಕೋಟೆಯಲ್ಲಿ ಬರಲಿರುವ ಫ್ಲೆಕ್ಸ್ ಇಂಧನ ಕೇಂದ್ರವು ಜೈವಿಕ ಸಿಎನ್‌ಜಿ, ಎಥೆನಾಲ್ ಮಿಶ್ರಿತ ಗ್ಯಾಸೋಲಿನ್ ಮತ್ತು ಎಲೆಕ್ಟ್ರಿಕ್ ವಾಹನಗಳಿಗೆ ಚಾರ್ಜಿಂಗ್ ಸೌಲಭ್ಯವನ್ನು ಒದಗಿಸುತ್ತದೆ.

₹1747.37 ಕೋಟಿ ಬಂಡವಾಳ ಹೂಡಿಕೆಯ 35 ಯೋಜನೆಗಳಿಗೆ ಅನುಮೋದನೆ: ಮುರುಗೇಶ್ ನಿರಾಣಿ₹1747.37 ಕೋಟಿ ಬಂಡವಾಳ ಹೂಡಿಕೆಯ 35 ಯೋಜನೆಗಳಿಗೆ ಅನುಮೋದನೆ: ಮುರುಗೇಶ್ ನಿರಾಣಿ

ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಅವರ ಕುಟುಂಬಕ್ಕೆ ಸಂಬಂಧಿಸಿರುವ ಟ್ರೂಆಲ್ಟ್ ಎನರ್ಜಿ ಕಂಪನಿಯು ಈ ಕೇಂದ್ರವನ್ನು ಸ್ಥಾಪಿಸಲಿದೆ. ವಾಹನ ತಯಾರಕರು ಫ್ಲೆಕ್ಸ್ ಇಂಧನ ಎಂಜಿನ್‌ಗಳನ್ನು ಅಭಿವೃದ್ಧಿಪಡಿಸುವ ಕೇಂದ್ರ ಸರ್ಕಾರದ ನಿರ್ಧಾರದ ಹಿನ್ನೆಲೆಯಲ್ಲಿ ಮುಂದಿನ ಐದು ವರ್ಷಗಳಲ್ಲಿ ಭಾರತದಾದ್ಯಂತ 250 ಫ್ಲೆಕ್ಸ್ ಇಂಧನ ಕೇಂದ್ರಗಳನ್ನು ಸ್ಥಾಪಿಸಲು ಟ್ರೂಆಲ್ಟ್ ಎನರ್ಜಿ ಬಯಸಿದೆ.

ಟ್ರೂಆಲ್ಟ್ ಎನರ್ಜಿ ವ್ಯವಸ್ಥಾಪಕ ನಿರ್ದೇಶಕ ವಿಜಯ್ ನಿರಾಣಿ ಅವರು ಭವಿಷ್ಯಕ್ಕೆ ಸಜ್ಜುಗೊಳ್ಳಲು ಕಂಪನಿಯು ಇಂಧನ ಕೇಂದ್ರಗಳನ್ನು ಸ್ಥಾಪಿಸುತ್ತಿದೆ. ಜಮಖಂಡಿಯ ಫ್ಲೆಕ್ಸ್‌ ಇಂಧನ ಕೇಂದ್ರ ದೇಶದಲ್ಲೇ ಮೊದಲ ತಾಣವಾಗಿದ್ದು, ಶೀಘ್ರದಲ್ಲೇ ಬಾಗಲಕೋಟೆ ಜಿಲ್ಲೆಯಲ್ಲಿ ಏಳು ಮತ್ತು ಬೆಳಗಾವಿ ಜಿಲ್ಲೆಯಲ್ಲಿ 14 ನಿಲ್ದಾಣಗಳನ್ನು ಸ್ಥಾಪಿಸಲಾಗುವುದು ಎಂದು ಅವರು ಹೇಳಿದರು.

Global Investors' Meet: ರಾಜ್ಯಕ್ಕೆ 5 ಲಕ್ಷ ಕೋಟಿ ರೂ. ಬಂಡವಾಳ ನಿರೀಕ್ಷೆ: ಮುರುಗೇಶ್ ನಿರಾಣಿGlobal Investors' Meet: ರಾಜ್ಯಕ್ಕೆ 5 ಲಕ್ಷ ಕೋಟಿ ರೂ. ಬಂಡವಾಳ ನಿರೀಕ್ಷೆ: ಮುರುಗೇಶ್ ನಿರಾಣಿ

 ವರ್ಷಕ್ಕೆ 1.5 ಲಕ್ಷ ರೂ ಉಳಿತಾಯ

ವರ್ಷಕ್ಕೆ 1.5 ಲಕ್ಷ ರೂ ಉಳಿತಾಯ

ಆಟೋ ಮೊಬೈಲ್ ತಯಾರಕರು ಫ್ಲೆಕ್ಸ್ ಇಂಧನ ಎಂಜಿನ್ ಹೊಂದಿರುವ ವಾಹನಗಳನ್ನು ಬಿಡುಗಡೆ ಮಾಡಲು ಕಂಪನಿಯು ಕಾಯುತ್ತಿದ್ದಾರೆ. ಜಮಖಂಡಿಯಲ್ಲಿ ನಾವು ಎಥೆನಾಲ್ ಬಳಸುವ ಫ್ಲೆಕ್ಸ್ ಇಂಧನ ಎಂಜಿನ್ ಹೊಂದಿರುವ 18 ಟ್ರ್ಯಾಕ್ಟರ್‌ಗಳನ್ನು ಪಡೆದುಕೊಂಡಿದ್ದೇವೆ. ಇದರಿಂದಾಗಿ ರೈತರು ಇಂಧನ ವೆಚ್ಚಕ್ಕಾಗಿ ವರ್ಷಕ್ಕೆ 1.5 ಲಕ್ಷ ರೂಪಾಯಿಗಳನ್ನು ಉಳಿಸುತ್ತಿದ್ದಾರೆ ಎಂದು ವಿಜಯ್ ಹೇಳಿದರು.

 ಟ್ರೂಆಲ್ಟ್ ಫ್ಲೆಕ್ಸ್ ಇಂಧನ ಕೇಂದ್ರ ಆರಂಭ

ಟ್ರೂಆಲ್ಟ್ ಫ್ಲೆಕ್ಸ್ ಇಂಧನ ಕೇಂದ್ರ ಆರಂಭ

ವಾಹನ ತಯಾರಕರು ಫ್ಲೆಕ್ಸ್ ಇಂಧನ ಮೂಲಸೌಕರ್ಯಗಳ ಬಗ್ಗೆ ವಿಶ್ವಾಸ ಹೊಂದಬೇಕು. ಕೃಷಿ ಆಧಾರಿತ ಕೈಗಾರಿಕೆಗಳು ಸಾಕಷ್ಟು ಎಥೆನಾಲ್ ಅನ್ನು ತಲುಪಿಸಲು ಹೆಚ್ಚು ಸಮರ್ಥವಾಗಿವೆ ಮತ್ತು ನಾವು ಮೂಲಸೌಕರ್ಯವನ್ನು ಸಿದ್ಧಪಡಿಸುವ ಮೂಲಕ ಈ ಕ್ರಮವನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಅವರು ಹೇಳಿದರು. ಜಮಖಂಡಿಯಲ್ಲಿರುವ ಟ್ರೂಆಲ್ಟ್ ಫ್ಲೆಕ್ಸ್ ಇಂಧನ ಕೇಂದ್ರವು ಕಬ್ಬು ಆಧಾರಿತ ಜೈವಿಕ ಸಿಎನ್‌ಜಿ ಮತ್ತು ಎಥೆನಾಲ್ ಅನ್ನು ಹೊಂದಿರುತ್ತದೆ. ಇವಿ ಚಾರ್ಜಿಂಗ್‌ಗೆ ವಿದ್ಯುತ್ ಸರಬರಾಜು ಕೂಡ ಕಬ್ಬಿನಿಂದ ಬರಲಿದೆ.

 ಎಥೆನಾಲ್‌ ಮಿಶ್ರಣದ ಗುರಿ ಹೆಚ್ಚಳ

ಎಥೆನಾಲ್‌ ಮಿಶ್ರಣದ ಗುರಿ ಹೆಚ್ಚಳ

2018 ರಲ್ಲಿ ಕೇಂದ್ರ ಸರ್ಕಾರವು ಜೈವಿಕ ಇಂಧನ ನೀತಿಯನ್ನು ಪರಿಚಯಿಸಿತು. ಆರಂಭದಲ್ಲಿ ಎಥೆನಾಲ್‌ ಮಿಶ್ರಣದ ಗುರಿಯು 10% ಆಗಿತ್ತು. ಗುರಿಯು ಈಗ 20% ಆಗಿದ್ದು, ಇದಕ್ಕಾಗಿ ಗಡುವನ್ನು ಹಿಂದಿನ 2030 ರಿಂದ 2025 ಕ್ಕೆ ಹೆಚ್ಚಿಸಲಾಗಿದೆ. ಕಳೆದ ತಿಂಗಳು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 2025ರ ವೇಳೆಗೆ 20% ಎಥೆನಾಲ್ ಅನ್ನು ಪೆಟ್ರೋಲ್‌ನೊಂದಿಗೆ ಮಿಶ್ರಣ ಮಾಡುವ ಗುರಿಯನ್ನು ಸಾಧಿಸಿದರೆ ಭಾರತವು 1 ಲಕ್ಷ ಕೋಟಿ ರೂಪಾಯಿ ವಿದೇಶಿ ವಿನಿಮಯವನ್ನು ಉಳಿಸುತ್ತದೆ ಎಂದು ಹೇಳಿದರು.

 ಎಥೆನಾಲ್‌ಗೆ ಬದಲಾಯಿಸಿದರೆ

ಎಥೆನಾಲ್‌ಗೆ ಬದಲಾಯಿಸಿದರೆ

ಪ್ರಸ್ತುತ, ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವ ಮೂಲಕ ನಾವು ನಮ್ಮ ವಿದೇಶೀ ವಿನಿಮಯ ಮೌಲ್ಯವನ್ನು ಕಳೆದುಕೊಳ್ಳುತ್ತಿದ್ದೇವೆ. ನಾವು ಕಚ್ಚಾತೈಲವನ್ನು ನಿಲ್ಲಿಸಿ ಎಥೆನಾಲ್‌ಗೆ ಬದಲಾಯಿಸಿದರೆ ಅದು ರೈತರಿಗೆ ಅನುಕೂಲವಾಗುತ್ತದೆ. ಎಥೆನಾಲ್ ಲೀಟರ್ ಗೆ 63 ರೂ. ಒಂದು ಲೀಟರ್ ಪೆಟ್ರೋಲ್‌ಗೆ ಹೋಲಿಸಿದರೆ ಪೆಟ್ರೋಲ್ ಲೀಟರ್‌ಗೆ 120ರಿಂದ 125 ರೂ. ಇದೆ. ಎಥೆನಾಲ್ ಅರ್ಧ ಬೆಲೆಯಲ್ಲಿ 1.3 ಲೀಟರ್‌ಗಳೊಂದಿಗೆ ಅದೇ ಮೈಲೇಜ್ ನೀಡುತ್ತದೆ ಎಂದು ವಿಜಯ್ ಹೇಳಿದರು.

English summary
India's first 'flex fuel' center will start at Jamkhandi in Bagalkote district, about 500 kilometers from Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X