Hd Deve Gowda: ಲೋಕಸಭಾ ಚುನಾವಣೆಗೆ ಸ್ಪರ್ಧೆ ಕುರಿತು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಹೇಳಿದ್ದೇನು?
ಬೆಂಗಳೂರು, ಜುಲೈ 25: ರಾಜ್ಯ ಸರ್ಕಾರದ ವಿರುದ್ದ ಬಿಜೆಪಿ ಹಾಗೂ ಜೆಡಿಎಸ್ ಒಟ್ಟಾಗಿ ಹೋರಾಟ ನಡೆಸುತ್ತಿದ್ದು, ಲೋಕಸಭಾ ಚುನಾವಣೆಯಲ್ಲಿಯೂ ಬಿಜೆಪಿ-ಜೆಡಿಎಸ್ ಮೈತ್ರಿ ಕುರಿತು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದ್ದು, ಈ ಬಗ್ಗೆ ಪತ್ರಿಕಾಗೋಷ್ಟಿಯಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಸ್ಪಷ್ಟಪಡಿಸಿದ್ದಾರೆ.
ಹೌದು, ಮಂಗಳವಾರ ಜೆಪಿ ಭವನದಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಗೆ ಸ್ಪರ್ಧೆ ಕುರಿತು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ, ನಾನು ಪಕ್ಷ ಸಂಘಟನೆ ಮಾತ್ರ ಮಾಡುತ್ತೇನೆ ಎಂದು ದೇವೇಗೌಡರು ಹೇಳಿದ್ದಾರೆ.

ನಾವು ಲೋಕಸಭೆಯಲ್ಲಿ ಸ್ವತಂತ್ರವಾಗಿ ಹೋರಾಟ ಮಾಡುತ್ತೇವೆ. ಕುಮಾರಸ್ವಾಮಿ ಬಿಜೆಪಿ ಜೊತೆಗೆ ಹೋಗಿದ್ದನ್ನು ಮಾತ್ರ ಮಾತನಾಡುತ್ತಾರೆ. ನಾವು ಲೋಕಸಭೆಯಲ್ಲಿ ಸ್ವತಂತ್ರವಾಗಿ ಹೋರಾಟ ಮಾಡುತ್ತೇವೆ. ಯಾವುದೇ ಪಕ್ಷದ ಜೊತೆ ಮೈತ್ತಿ ಪಕ್ಷದ ಕಾರ್ಯಕರ್ತರು ದೃತಿಗೆಡಬೇಕಿಲ್ಲ. 28 ಕ್ಷೇತ್ರದಲ್ಲಿ ಎಲ್ಲಿ ಶಕ್ತಿ ಇದೆಯೋ ಅಲ್ಲಿ ಸ್ಪರ್ಧೆ ಮಾಡಿತ್ತೇವೆ. ಎಲ್ಲಾ ಕಡೆಯಲ್ಲಿ ಸ್ಪರ್ಧೆ ಮಾಡಲ್ಲ ಎಂದು ತಿಳಿಸಿದ್ದಾರೆ.
ಹೆಗಡೆಯವರು ಬಿಜೆಪಿ ಜೊತೆ ಹೋಗಿ ಮಂತ್ರಿ ಆಗಲಿಲ್ಲವೇ? ಕುಮಾರಸ್ವಾಮಿ ಮಾತ್ರ ಬಿಜೆಪಿ ಜೊತೆ ಹೋಗಿ ಮುಖ್ಯಮಂತ್ರಿ ಆದರು ಅಂತ ಮಾತಾಡೋದು ಯಾಕೆ.? ಪಾರ್ಲಿಮೆಂಟ್ ಚುನಾವಣೆಯಲ್ಲಿ ನಾವು ಮೂರು, ಐದು , ಹತ್ತು ಎಷ್ಟು ಗೆಲ್ತೀವೋ, ಆದರೆ ಸ್ವಾತಂತ್ರ್ಯ ವಾಗಿ ಹೋರಾಟ ಮಾಡ್ತೀವಿ. ಅವತ್ತಿನ ದಿನ ತೀರ್ಮಾನ ಮಾಡುತ್ತೇವೆ. ದೇಶದಲ್ಲಿ ದೃಡ ಸರ್ಕಾರ ಬರಲು ಏನು ಬೇಕೋ ಅದನ್ನು ಅವತ್ತಿನ ದಿನ ತೀರ್ಮಾನ ಮಾಡುತ್ತೇವೆ.
ಈ ಪಕ್ಷವನ್ನು ನಾಳೆ ಬೆಳಿಗ್ಗೆ ಯಾರಾದ್ರೂ ಅಳಿಸಿ ಹಾಕ್ತೀವಿ ಅಂದುಕೊಂಡಿದ್ರೆ ಅದು ಅವರ ಭ್ರಮೆ. ಕುಮಾರಸ್ವಾಮಿ ವಿದೇಶ ಕ್ಕೆ ಹೋಗುವ ಮುಂಚೆ ಎಲ್ಲಾ ಶಾಸಕರ ಜೊತೆ ಮಾತಾಡಿದ್ದಾರೆ, ಜಿ ಟಿ ದೇವೇಗೌಡರ ನೇತೃತ್ವದಲ್ಲಿ ಕಮಿಟಿ ಮಾಡಿ ಸಂಘಟನೆ ಮಾಡಲು ತೀರ್ಮಾನ ಮಾಡಲಾಗಿದೆ. ಕುಮಾರಸ್ವಾಮಿ ವಾಪಸ್ ಬಂದ ಬಳಿಕ ಎಲ್ಲೆಲ್ಲಿ ಯಾವ ಕಾರ್ಯಕ್ರಮ ಮಾಡಬೇಕು ಅಂತಾ ತೀರ್ಮಾನ ಮಾಡುತ್ತೇವೆ,ಲಕ್ಷಾಂತರ ಕಾರ್ಯಕರ್ತರು ಇದ್ದಾರೆ ಎಲ್ಲರನ್ನೂ ಒಗ್ಗೂಡಿಸಿ ಮುಂದೆ ಹೋಗುತ್ತೇವೆ.
ನಮ್ಮ ಮುಖಂಡರಾದ ಜಿಟಿ ದೇವೇಗೌಡರು ಸುಧಿರ್ಘವಾಗಿ ಹೇಳಿದ್ದಾರೆ. ಯಾವ ಗೊಂದಲಕ್ಕೂ ಅವಕಾಶ ಇಲ್ಲದೇ ನಾವು ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ, ಕಾರ್ಯಕರ್ತರ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟಿಸುತ್ತೇವೆ. ಕುಮಾರಸ್ವಾಮಿ ಒಂದು ವಾರ ವಿಶ್ರಾಂತಿ ಗಾಗಿ ಹೋಗಿದ್ದಾರೆ ಜಿ ಟಿ ದೇವೇಗೌಡರ ನೇತೃತ್ವದಲ್ಲಿ ಒಂದು ಕಮಿಟಿ ಮಾಡಿದ್ದೇವೆ ಎಂದರು.
ಯತ್ನಾಳ್ ವಿಪಕ್ಷ ನಾಯಕ, ಸಿ ಟಿ ರವಿ ಬಿಜೆಪಿ ರಾಜ್ಯಾಧ್ಯಕ್ಷ ಎನ್ನುವ ಕುರಿತು ಚರ್ಚೆ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಈ ರೀತಿಯಾದ ಚರ್ಚೆ ಬಿಜೆಪಿ ಯಲ್ಲಿ ಚರ್ಚೆ ನಡೆಯುತ್ತಿದೆ. ಅದು ಅವರ ಪಕ್ಷದ ಆಂತರಿಕ ವಿಚಾರ, ನಮಗೆ ಎಲ್ಲಿ ಶಕ್ತಿ ಇದೆಯೋ ಅಲ್ಲಿ ಸ್ಪರ್ಧೆ ಮಾಡುತ್ತೇವೆ. ಮೂರು, ಆರು, ಸ್ಥಾನ ಬರ್ತೀವೋ ಅಥವಾ ಒಂದೂ ಬರುವುದಿಲ್ಲವೂ ಆಮೇಲೆ ನೋಡೋಣ
ಅಧಿಕೃತ ವಿರೋಧ ಪಕ್ಷ ಬಿಜೆಪಿ,ಕುಮಾರಸ್ವಾಮಿ, ಬಿಜೆಪಿಯವರು ನಿಲುವಳಿ ಕೊಟ್ಟಿರ್ತಾರೆ, ಸ್ಪೀಕರ್ ಹೇಗೆ ತೀರ್ಮಾನ ಮಾಡಬೇಕು. ಈ ಸನ್ನಿವೇಶ ವನ್ನು ಒಂದುಗೂಡಿಸಿ ಮಾತಾಡೋದು ಬೇಡ.. ಒಂದು ವೇಳೆ ಬಿಜೆಪಿ ಅಧಿಕಾರದಲ್ಲಿ ಇದ್ದಿದ್ರೂ ಈ ಘಟನೆಗಳು ನಡೀತಾ ಇರಲಿಲ್ಲವೆ..? ಕುಮಾರಸ್ವಾಮಿಯವರನ್ನೇ ನಾಯಕ ಮಾಡ್ತಾರೆ ಅಂತಾ ನೀವು ಕೂಡಾ ಕಥೆ ಕಟ್ಟಿದ್ರಿ.ಈಗ ಅವರೇ ಮಾಡಿಕೊಳ್ತಾ ಇಲ್ಲವೇ..? ಎಂದು ಪ್ರಶ್ನಿಸಿದರು.
ಮಹಾಘಟಬಂಧನ್ ಗೆ ಯಾಕೆ ಹೋಗಲಿಲ್ಲ ನಿಮಗೆ ಆಹ್ವಾನ ಇರಲಿಲ್ಲವೇ? ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಬೆಂಗಳೂರಿನಲ್ಲಿ ನಡೆದ ವಿಪಕ್ಷದ ಒಕ್ಕೂಟದ ಸಭೆಗೆ ನನ್ನನ್ನು ಆಹ್ವಾನಿಸದಂತೆ ಸ್ಥಳೀಯ ಕಾಂಗ್ರೆಸ್ ಒಂದು ಗುಂಪು ನಿತೀಶ್ ಕುಮಾರ್ ಗೆ ಧಮ್ಕಿ ಹಾಕಿತ್ತು. ಆ ಕಾರಣಕ್ಕಾಗಿ ನನ್ನನ್ನು ಆಹ್ವಾನ ಮಾಡಿರಲಿಲ್ಲ. ಕಾಂಗ್ರೆಸ್ ಒಂದು ಗುಂಪು ಧಮ್ಕಿ ಹಾಕಿದ ಕಾರಣ ಕರೆದಿಲ್ಲ. ಆದರೆ ಸ್ಥಳೀಯ ಕಾಂಗ್ರೆಸ್ ನಾಯಕರ ಗುಂಪು ವಿರೋಧ ವ್ಯಕ್ತಪಡಿಸಿದ್ದರು.












Click it and Unblock the Notifications