ಪ್ರಧಾನ ಮಂತ್ರಿ ಅಭ್ಯರ್ಥಿ ಯಾರು? 26 ಪಕ್ಷಗಳ ಮೈತ್ರಿ ಒಕ್ಕೂಟದ ವಿರುದ್ದ ಸಿಎಂ ಇಬ್ರಾಹಿಂ ಕಿಡಿ
ಬೆಂಗಳೂರು, ಆಗಸ್ಟ್ 02: ಕಾಂಗ್ರೆಸ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ 26 ಪಕ್ಷಗಳು ಮೈತ್ರಿ ಕೂಟಕ್ಕೆ ಇಂಡಿಯಾ ಎಂಬ ಹೆಸರಿಟ್ಟಿದ್ದು, ವಿಪಕ್ಷಗಳ ಕುರಿತು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಆಕ್ರೋಶ ವ್ಯಕ್ತಪಡಿಸಿದ್ದು, ಯಾರು ಪ್ರಧಾನ ಮಂತ್ರಿ ಅಭ್ಯರ್ಥಿ ಅಂತಾನೇ ಗೊತ್ತಿಲ್ಲ. ಯಾರಿಗೆ ಪ್ರಧಾನಿ ಸ್ಥಾನ ನೀಡುತ್ತಿರಾ ಎಂದು ಪ್ರಶ್ನಿಸಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಮೋದಿ ಒಳ್ಳೆಯವರಾ ಕೆಟ್ಟವರೋ ನಾಯಕನಾಗಿ ಬಿಂಬಿತರಾಗಿದ್ದಾರೆ. ಆದರೆ, ಜನ ಬದಲಾವಣೆ ಬಯಸಿದ್ದಾರೆ. ನಿರುದ್ಯೋಗ ಜಾಸ್ತಿ ಆಗಿದೆ. 26 ಪಕ್ಷ ಸೇರಿ ಸಭೆ ನಡೆಸಿದ್ದಾರೆ, ಏನು ಚರ್ಚೆ ಮಾಡಿದ್ರಿ ಹಾಗಾದ್ರೆ ಎಂದು ಪ್ರಶ್ನಿಸಿದ ಅವರು ನಿಮ್ಮ ಪ್ರಧಾನಿ ಅಭ್ಯರ್ಥಿ ಯಾರು ಎಂದು ಕೇಳಿದ್ದಾರೆ.

ಯಾರೋ ಚಿಲ್ಲರೆಗಳ ಕೈಲಿ ದೇಶ ಕೊಡಲು ಆಗುತ್ತಾ? ಹೇಳಿ, ನಿತೀಶ್ ಕುಮಾರ್ ಗೆ ಕೊಡ್ತಿರಾ, ಮಮತಾ ಬ್ಯಾನರ್ಜಿಗೆ ಕೊಡ್ತೀರಾ ಅಂತ ಎಂದು ಹೇಳಿ. ಬಿಜೆಪಿ ಪಕ್ಷದ ಜೊತೆ ಹೋಗಿ ಬಂದವರ ಜೊತೆ ಸಂಬಂಧ ಇಟ್ಟುಕೊಂಡಿದ್ದೀರಾ ಎಂದು ಹೇಳಿದರು.
ದೆಹಲಿಯಲ್ಲಿ ಕಾಂಗ್ರೆಸ್ ಸಭೆ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಯಾವ ಹೆಸರಿನಲ್ಲಿ ಹೋಗ್ತಾರೋ ಅದರ ಬಗ್ಗೆ ಚಿಂತೆ ಇಲ್ಲ. ನಾವು ಒಂದು ಸಿದ್ದಾಂತದಿಂದ ಹೋಗುವವರು ಅನ್ಯರ ಡೊಂಕು ನಾವ್ಯಾಕೆ ತಿದ್ದೋಣ ಎಂದು ಹೇಳಿದ ಅವರು, ಯಾದಗಿರಿ, ಗುಲ್ಬರ್ಗಾ ಸೇರಿ ಐದು ಜಿಲ್ಲೆಗಳ ಮೀಟಿಂಗ್ ಮಾಡಿದ್ದೇವೆ. ಕುಮಾರಸ್ವಾಮಿ ಅವರು ವಿದೇಶಿ ಪ್ರವಾಸದಿಂದ ವಾಪಸ್ ಬಂದ ಮೇಲೆ ದೇವೇಗೌಡರ ಅನುಮತಿ ತೆಗೆದುಕೊಂಡು ಕಾರ್ಯಾಧ್ಯಕ್ಷರನ್ನ ನೇಮಲ ಮಾಡಲಾಗುತ್ತದೆ
ಕೆಲವು ಪಂಚಾಯ್ತಿ ಚುನಾವಣೆ ಯಲ್ಲಿ ಒಳ್ಳೆ ರಿಸಲ್ಟ್ ಬಂದಿದೆ. ಜನರು ಒಳ್ಳೆಯ ಭಾವನೆ ಇಟ್ಟುಕೊಂಡು ಮತ ಹಾಕಿದ್ದಾರೆ. ಜೆಡಿಎಸ್ ಏಕಾಂಗಿಯಾಗಿ, ಸ್ವತಂತ್ರವಾಗಿ ಚುನಾವಣೆ ಗೆ ಹೋಗುತ್ತದೆ.
ರಾಜ್ಯಾದ್ಯಂತ ಪ್ರವಾಸವನ್ನ ನಡೆಸುತ್ತಿದ್ದೇವೆ ಎಂದು ಹೇಳಿದರು.
ಎಸ್ ಸಿ ಎಸ್ ಪಿ ಟಿಎಸ್ ಪಿ ಹಣವನ್ನ ಗ್ಯಾರಂಟಿ ಗೆ ಬಳಕೆ ಕುರಿತು ಮಾತನಾಡಿದ ಅವರು, ಇದನ್ನ ಎಸ್ ಸಿ ಎಸ್ ಟಿ ಸಮಾಜದ ಜನ ನೋಡಬೇಕು. ಅವರ ಬಳಿ ಅಧಿಕಾರ ಕೊಟ್ಟು ಆಗಿದೆ, ಈಗ ನಾವು ಮಾಡಿದ್ದೇ ಸರಿ ಅಂತಾರೆ. ನಾವು ಮಾತಾಡಿದ್ರೆ ಹೊಟ್ಟೆ ಕಿಚ್ಚು ನಿಂದ ಮಾತಾಡ್ತೀವಿ ಅಂತಾರೆ. ಆದರೂ ನಾವು ನಮ್ಮ ಕರ್ತವ್ಯ ಮಾಡ್ತೀವಿ. ಈ ಹಣ ಯಾವುದಕ್ಕೂ ಉಪಯೋಗಿಸಬಾರದು
ಯಾವುದಕ್ಕೆ ಮೀಸಲಿಟ್ಟಿದ್ದಾರೋ ಅದಕ್ಕೆ ಬಳಸಿ ಎಂದು ಹೇಳಿದರು.
200 ಯುನಿಟ್ ಕರೆಂಟ್ ಉಚಿತ ಎಂದು ಹೇಳಿದ್ರು, ಆದರೆ ಈಗ ಕಂಡೀಷನ್ ಹಾಕ್ತೀರಾ. ನಿಮ್ಮ ನಿಲುವು ಸ್ಪಷ್ಟವಾಗಿ ಇಲ್ಲ, ತಾಲೂಕು ಮಟ್ಟದಲ್ಲಿ ಒಂದು ಕಮಿಟಿ ಮಾಡಿ, ಈ ಸ್ಕೀಂ ತಲುಪುತ್ತಾ, ಇಲ್ಲವೋ ಎಂದು ನೋಡಿ. ಆಲ್ ಪಾರ್ಟಿ ಮೀಟಿಂಗ್ ಕರೆಯಿರಿ, ಮುಜುಗರ ಯಾಕೆ? ಅಭಿವೃದ್ಧಿ ಗೆ ಅನುದಾನ ಇಲ್ಲ ಅಂತಿದ್ದೀರಾ, ಅದನ್ನು ಹೇಗೆ ನಿಭಾಯಿಸ್ತಿದ್ದೀರಾ ಎಂದು ಪ್ರಶ್ನಿಸಿದರು.
ಗೃಹ ಲಕ್ಷ್ಮಿ ಯೋಜನೆಯಲ್ಲಿ ಹೊಡೆದಾಟ ಶುರು ಮಾಡಿದ್ದೀರಾ. ಕೊಡುವ ಎರಡು ಸಾವಿರ ಹಣಕ್ಕೆ ಮನೆ ಮನೆ ಹೊಡೆದಾಟ ಮಾಡಿದ್ದಿರಾ, ಮೊದಲು ಈ ಫ್ರೀ ಸ್ಕೀಂ ತೆಗೆಯಿರಿ, ಅದಕ್ಕ ಬದಲಾಗಿ ಹಾಸ್ಪಿಟಲ್, ಶಿಕ್ಷಣ ನೀಡಿ. ಆಟೋ ಚಾಲಕರು ನಿರುದ್ಯೋಗಿಗಳಾಗಿದ್ದಾರೆ, ಈಗ ಹೆಂಗಸರು ಗಂಡನ್ನ ಬಿಟ್ಟು ಹೊರಟು ಬಿಟ್ಟಿದ್ದಾರೆ ಎಂದು ಹೇಳಿದರು.
ಕೆಜೆ.ಹಳ್ಳಿ ಡಿಜೆ. ಹಳ್ಳಿ ಕೇಸ್ ನ್ಯಾಯಾಂಗ ತನಿಖೆ ಮಾಡಿಸಿ, ಕೆಜೆ ಹಳ್ಳಿ ಕೇಸ್ ಕಮ್ಯುನಲ್ ಅಲ್ಲ, ಡ್ರಗ್ ವಿಚಾರಕ್ಕೆ ಅಂತ ಹೇಳಿದ್ದೀರಾ ನೀವೇ. ಸಿಟ್ಟಿಂಗ್ ಜಡ್ಜ್ ಅವರ ಬಳಿ ತನಿಖೆ ಮಾಡಿಸಿ, ಯಾಕೆ ಆಯ್ತು ಗಲಭೆ ಅಲ್ಲಿ ಅಂತ ಪತ್ತೆ ಮಾಡಿ. ಯಾರು ಇದರಲ್ಲಿ ಇದ್ದಾರೆ ಅಂತ ಬಯಲಿಗೆ ತನ್ನಿ. ತನಿಖೆ ಮಾಡಿಸಿ ಎಂದು ಹೇಳಿದರು.












Click it and Unblock the Notifications