ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಗಳು : ಬೆಂಗಳೂರಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 13 : ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಶನಿವಾರ ಕರ್ನಾಟಕ ಪ್ರವಾಸದಲ್ಲಿದ್ದಾರೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಶನಿವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ರಾಹುಲ್ ಗಾಂಧಿ ಬೆಂಗಳೂರಿಗೆ ಆಗಮಿಸಿದರು. ಕುಮಾರಕೃಪಾ ಅತಿಥಿಗೃಹದಲ್ಲಿ ಪಕ್ಷದ ನಾಯಕರ ಜೊತೆ ಸಭೆ ನಡೆಸಿದರು. ಬಳಿಕ ರಫೇಲ್ ಹಗರಣ ಕುರಿತು ಎಚ್‌ಎಎಲ್‌‌ ಸಿಬ್ಬಂದಿ ಹಾಗೂ ಸಾರ್ವಜನಿಕರೊಂದಿಗೆ ನಡೆದ ಸಂವಾದದಲ್ಲಿ ಪಾಲ್ಗೊಂಡರು.

ಎಚ್‌ಎಎಲ್‌ ಸಾಮರ್ಥ್ಯಕ್ಕೆ ಅವಮಾನವಾಗಲು ಬಿಡೆವು: ರಾಹುಲ್ ಗಾಂಧಿಎಚ್‌ಎಎಲ್‌ ಸಾಮರ್ಥ್ಯಕ್ಕೆ ಅವಮಾನವಾಗಲು ಬಿಡೆವು: ರಾಹುಲ್ ಗಾಂಧಿ

ಕರ್ನಾಟಕ ಕಾಂಗ್ರೆಸ್‌ ಬಳ್ಳಾರಿ ಲೋಕಸಭೆ ಉಪ ಚುನಾವಣೆಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಸವಾಲು ಎದುರಿಸುತ್ತಿದೆ. ರಾಹುಲ್ ಗಾಂಧಿ ಅವರಿಗೆ ಉಪ ಚುನಾವಣೆಯ ಅಭ್ಯರ್ಥಿಯ ಪಟ್ಟಿಯನ್ನು ನೀಡಿ ಒಪ್ಪಿಗೆ ಪಡೆಯಲಾಯಿತು.

ಎಚ್ ಎಎಲ್ ನೌಕರರ ಸಂಘ ರಾಹುಲ್ ಭೇಟಿಗೆ ಸಿದ್ಧವಿಲ್ಲ: ಸಂಸದ ಮೋಹನ್ಎಚ್ ಎಎಲ್ ನೌಕರರ ಸಂಘ ರಾಹುಲ್ ಭೇಟಿಗೆ ಸಿದ್ಧವಿಲ್ಲ: ಸಂಸದ ಮೋಹನ್

ರಾಹುಲ್ ಗಾಂಧಿ ಆಗಮನಕ್ಕೂ ಮೊದಲು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ನೇತೃತ್ವದಲ್ಲಿ ವಿಧಾನಸಭೆ ಹಾಗೂ ಲೋಕಸಭೆ ಉಪ ಚುನಾವಣೆ ಹಾಗೂ ಇತರೆ ರಾಜಕೀಯ ಬೆಳವಣಿಗೆ ಕುರಿತು ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಸಚಿವರುಗಳ ಸಭೆ ನಡೆಯಿತು....

ಬ್ರೇಕಿಂಗ್ ನ್ಯೂಸ್ : ಶಿವಮೊಗ್ಗದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಪರ್ಧಿಸೋಲ್ಲ!ಬ್ರೇಕಿಂಗ್ ನ್ಯೂಸ್ : ಶಿವಮೊಗ್ಗದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಪರ್ಧಿಸೋಲ್ಲ!

ರಾಹುಲ್ ಗಾಂಧಿಗೆ ಸ್ವಾಗತ

ರಾಹುಲ್ ಗಾಂಧಿಗೆ ಸ್ವಾಗತ

ಶನಿವಾರ ಮಧ್ಯಾಹ್ನ ಬೆಂಗಳೂರಿಗೆ ಆಗಮಿಸಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಸ್ವಾಗತ ಕೋರಿದರು. ಹೂಗುಚ್ಛ ನೀಡಿ ಪಕ್ಷದ ಅಧ್ಯಕ್ಷರನ್ನು ಬರಮಾಡಿಕೊಂಡರು.

ಅತಿಥಿ ಗೃಹದಲ್ಲಿ ಸಭೆ

ಅತಿಥಿ ಗೃಹದಲ್ಲಿ ಸಭೆ

ವಿಮಾನ ನಿಲ್ದಾಣದಿಂದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕುಮಾರಕೃಪಾ ಅತಿಥಿ ಗೃಹಕ್ಕೆ ಆಗಮಿಸಿದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಸಚಿವರಾದ ಡಿ.ಕೆ.ಶಿವಕುಮಾರ್, ಕೆ.ಜೆ.ಜಾರ್ಜ್ ಮುಂತಾದವರು ಸ್ವಾಗತ ಕೋರಿದರು.

ಕುಮಾರಕೃಪ ಅತಿಥಿ ಗೃಹದಲ್ಲಿ ಕರ್ನಾಟಕದ ನಾಯಕರ ಜೊತೆ ರಾಹುಲ್ ಗಾಂಧಿ ಸಭೆ ನಡೆಸಿದರು. 5 ಉಪ ಚುನಾವಣೆಗಳ ಕುರಿತು ಮಾಹಿತಿ ಪಡೆದರು. ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚಿಸಿದರು.

ಎಚ್.ಡಿ.ಕುಮಾರಸ್ವಾಮಿ ಭೇಟಿ

ಎಚ್.ಡಿ.ಕುಮಾರಸ್ವಾಮಿ ಭೇಟಿ

ರಾಹುಲ್ ಗಾಂಧಿ ಆಗಮಿಸುತ್ತಿದ್ದಂತೆ ಗೃಹ ಕಚೇರಿ ಕೃಷ್ಣಾದಿಂದ ಕುಮಾರ ಕೃಪ ಅತಿಥಿ ಗೃಹಕ್ಕೆ ಆಗಮಿಸಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದರು. ಕೆಲವು ನಿಮಿಷಗಳ ಕಾಲ ಉಭಯ ನಾಯಕರು ಮಾತುಕತೆ ನಡೆಸಿದರು.

ಕಾಂಗ್ರೆಸ್ ನಾಯಕರ ಸಭೆ

ಕಾಂಗ್ರೆಸ್ ನಾಯಕರ ಸಭೆ

ರಾಹುಲ್ ಗಾಂಧಿ ಆಗಮನಕ್ಕೂ ಮೊದಲು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ನೇತೃತ್ವದಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಮಹತ್ವದ ಸಭೆ ನಡೆಯಿತು. ಕಾಂಗ್ರೆಸ್‌ ಸಚಿವರ ಸಭೆಯಲ್ಲಿ ವಿಧಾನಸಭೆ ಹಾಗೂ ಲೋಕಸಭೆ ಉಪ ಚುನಾವಣೆ ಹಾಗೂ ಇತರೆ ರಾಜಕೀಯ ಬೆಳವಣಿಗೆ ಕುರಿತು ಚರ್ಚೆ ನಡೆಯಿತು.

ಎಚ್‌ಎಎಲ್ ನಿವೃತ್ತ ಉದ್ಯೋಗಿಗಳು

ಕುಮಾರಕೃಪ ಅತಿಥಿ ಗೃಹದಿಂದ ರಾಹುಲ್ ಗಾಂಧಿ ಕಬ್ಬನ್ ರಸ್ತೆಗೆ ತೆರಳಿದರು. ಅಲ್ಲಿ ರಫೇಲ್ ಹಗರಣ ಕುರಿತು ಎಚ್‌ಎಎಲ್‌‌ ಸಿಬ್ಬಂದಿ ಹಾಗೂ ಸಾರ್ವಜನಿಕರೊಂದಿಗೆ ನಡೆದ ಸಂವಾದದಲ್ಲಿ ಪಾಲ್ಗೊಂಡರು.

English summary
AICC president Rahul Gandi in Karnataka tour on October 13, 2018. Karnataka Chief Minister H.D.Kumaraswamy met Rahul Gandhi in Kumara Krupa guest house, Bengaluru. Here is pics of Ragul Gandhi tour in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X