ಬೀರೂರು ಜಾನುವಾರು ಜಾತ್ರೆಯಲ್ಲಿ 1,34,400ಕ್ಕೆ ಜೋಡಿ ಕರು ಸೇಲ್!

Subscribe to Oneindia Kannada

ಬೀರೂರು, ಜನವರಿ 19: ಕರ್ನಾಟಕದ ಪ್ರಖ್ಯಾತ ಬೀರೂರು ಜಾನುವಾರು ಜಾತ್ರೆಯಲ್ಲಿ ಕರುವಿನ ಜೋಡಿಯೊಂದು ಬರೋಬ್ಬರಿ 1,34,400 ರೂಪಾಯಿಗೆ ಮಾರಾಟವಾಗಿದೆ. ಜೋಡಿ ಕರುಗಳು ದೇಸೀ ಅಮೃತ ಮಹಲ್ ತಳಿಗಳೆಂಬುದು ಮತ್ತೊಂದು ವಿಶೇಷ.

ಚಿಕ್ಕಮಗಳೂರಿನ ಕಡೂರು ತಾಲೂಕಿನ ಬೀರೂರಿನಲ್ಲಿ ಪ್ರತಿ ವರ್ಷ ಜಾನುವಾರು ಜಾತ್ರೆ ನಡೆಯುತ್ತದೆ. ನೂರಕ್ಕೂ ಹೆಚ್ಚು ವರ್ಷಗಳ ಐತಿಹ್ಯವಿರುವ ಈ ಜಾನುವಾರು ಜಾತ್ರೆಯಲ್ಲಿ ಕರ್ನಾಟಕದ ಅಮೃತ ಮಹಲ್ ತಳಿಯ ದನಗಳನ್ನು ಮಾತ್ರ ಮಾರಾಟ ಮಾಡಲಾಗುತ್ತದೆ. ಇಲ್ಲಿ ಬುಧವಾರ ನಡೆದ ಜಾತ್ರೆಯಲ್ಲಿ ಜೋಡಿ ಕರುವೊಂದು 1,34,400 ರೂಪಾಯಿಗೆ ಮಾರಾಟಗೊಂಡು ಎಲ್ಲರ ಹುಬ್ಬೇರಿಸಿದೆ.

 In Karnataka, all roads lead to famous cattle fair in Birur

ಬೀರೂರು ತಳಿ ಅಭಿವೃದ್ಧಿ ಕೇಂದ್ರದ ಸಹಯೋಗದಲ್ಲಿ ನಡೆಯುವ ಜಾತ್ರೆಯಲ್ಲಿ, 130 ಕರುಗಳು ಮತ್ತು ಅಮೃತ ಮಹಲ್ ತಳಿಯ ಹಲವು ಜೋಡಿ ಎತ್ತುಗಳನ್ನು ಮಾರಾಟಕ್ಕೆ ಇಡಲಾಗಿತ್ತು. ಜಾನುವಾರು ಖರೀದಿಗೆಂದು ಜಾತ್ರೆಗೆ ಬಂದಿದ್ದ ಸುತ್ತ ಮುತ್ತಲಿನ ಊರುಗಳ ರೈತರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಜಾನುವಾರುಗಳನ್ನು ಖರೀದಿಸಿ ಕೊಂಡೊಯ್ದರು.

ಆದರೆ ಜಾತ್ರೆಯಲ್ಲಿ ಭಾಗವಹಿಸಿದ್ದ ಕರ್ನಾಟಕ ಪಶು ಸಂಗೋಪನಾ ಇಲಾಖೆಗೆ ಸೇರಿದ ಎತ್ತಿನ ಜೋಡಿಯೊಂದಕ್ಕೆ ಭಾರೀ ಬೇಡಿಕೆ ಕಂಡು ಬಂತು. ಅದರಲ್ಲೂ ಎತ್ತುಗಳ ಒಂದು ಜೋಡಿಗೆ ವಿಪರೀತ ಬೇಡಿಕೆ ಕಂಡು ಬಂದ ಹಿನ್ನಲೆಯಲ್ಲಿ ಹರಾಜು ಇಡಲಾಯಿತು.

 In Karnataka, all roads lead to famous cattle fair in Birur

ಬಿಡ್ಡಿಂಗಿನಲ್ಲಿ ಭಾಗವಹಿಸಿದ ಮೂರು ಜನ ರೈತರು ನಾ ಮುಂದು ತಾ ಮುಂದು ಎಂದು ಖರೀದಿಸಲು ಮುಂದಾಗಿದ್ದರಿಂದ ನೋಡ ನೋಡುತ್ತಲೇ ಬೆಲೆ ಒಂದು ಲಕ್ಷ ದಾಟಿತು. ಕೊನೆಗೆ ಮೈಸೂರಿನ ಮಲ್ಲನಗೌಡ 1,34,400 ರೂಪಾಯಿಗೆ ಜೋಡಿ ಕರುವನ್ನು ತನ್ನದಾಗಿಸಿಕೊಂಡರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A Pair of Amrit Mahal breed Bull calves sold for a whopping Rupees 1,34,400 in Annual Cattle fair at Birur, Chikamagaluru district, Karnataka.
Please Wait while comments are loading...