ಕೊಪ್ಪಳದಲ್ಲಿ 200 ಗಂಟೆಗಳಲ್ಲಿ 21,129 ಶೌಚಾಲಯ ನಿರ್ಮಾಣ

Posted By: Gururaj
Subscribe to Oneindia Kannada

ಕೊಪ್ಪಳ, ಸೆಪ್ಟೆಂಬರ್ 17 : ಸ್ವಚ್ಛ ಭಾರತ ಯೋಜನೆಯಡಿ ಶೌಚಾಲಯ ಜಾಗೃತಿ ಹಾಗೂ ವಯಕ್ತಿಕ ಶೌಚಾಲಯ ನಿರ್ಮಾಣದಲ್ಲಿ ಕೊಪ್ಪಳ ಮುಂಚೂಣಿಯಲ್ಲಿದೆ. ಸದ್ಯ, ಜಿಲ್ಲೆಯಲ್ಲಿ 'ಮಿಷನ್ 200' ಅಭಿಯಾನದ ಮೂಲಕ ಸೆ.8 ರಿಂದ 16ರ ತನಕ 21,129 ಶೌಚಾಲಯಗಳನ್ನು ನಿರ್ಮಿಸುವ ಮೂಲಕ ದಾಖಲೆ ಮಾಡಿದೆ.

'ಮಿಷನ್ 200' ಅಭಿಯಾನದ ಯಶಸ್ಸಿನ ಕುರಿತು ಜಿಲ್ಲಾ ಪಂಚಾಯತಿ ಅಧ್ಯಕ್ಷ ಕೆ. ರಾಜಶೇಖರ ಹಿಟ್ನಾಳ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ. 'ಕೊಪ್ಪಳ ಜಿಲ್ಲೆ ವಯಕ್ತಿಕ ಶೌಚಾಲಯ ನಿರ್ಮಾಣದಲ್ಲಿ ಕೇವಲ 200 ಗಂಟೆಗಳ ಅವಧಿಯಲ್ಲಿ 21,129 ಶೌಚಾಲಯ ನಿರ್ಮಿಸುವ ಮೂಲಕ ಇಡೀ ದೇಶದ ಗಮನ ಸೆಳೆದಿದೆ' ಎಂದರು.

ಕೊಪ್ಪಳ : ಶೌಚಾಲಯಕ್ಕಾಗಿ ದೇವರ ಮೇಲೆ ಆಣೆ, ಉಪವಾಸ!

In 200 hours 21,129 toilet built in Koppal

ಕೊಪ್ಪಳ ಜಿಲ್ಲಾ ಪಂಚಾಯತಿ ವತಿಯಿಂದ 'ಮಿಷನ್ 200' ಎನ್ನುವ ಅಭಿಯಾನವನ್ನು ಸೆ.8 ರಿಂದ ಪ್ರಾರಂಭಿಸಿ ಸೆ. 16 ರ ತನಕ ನಡೆಸಲಾಯಿತು. 200 ಗಂಟೆಗಳ ಅವಧಿಯಲ್ಲಿ 20 ಸಾವಿರ ಶೌಚಾಲಯವನ್ನು ನಿರ್ಮಿಸುವ ಗುರಿ ಇತ್ತು. ಆದರೆ, ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಜನರ ಸಹಕಾರದಿಂದ 21,129 ಶೌಚಾಲಯಗಳ ನಿರ್ಮಾಣವಾಗಿದೆ.

ದೇಶದ ಗಮನ ಸೆಳೆದ ಕೊಪ್ಪಳದ ಕಡಿಮೆ ವೆಚ್ಚದ ಮೂತ್ರಾಲಯ ಮಾದರಿ

ಕೊಪ್ಪಳ ಜಿಲ್ಲೆಯನ್ನು ಅಕ್ಟೋಬರ್ 2ರೊಳಗೆ ಸಂಪೂರ್ಣ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿಸಲು ಇದೇ ಮಾದರಿಯಲ್ಲಿ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತದೆ. ಜಿಲ್ಲೆಯ ಎಲ್ಲ 153 ಗ್ರಾಮ ಪಂಚಾಯತಿಗಳಲ್ಲಿ ಮಿಷನ್ 200 ನಿರೀಕ್ಷೆಗೂ ಮೀರಿ ಯಶಸ್ಸು ಸಾಧಿಸಿದೆ.

In 200 hours 21,129 toilet built in Koppal

ಕೊಪ್ಪಳ ತಾಲೂಕಿನಲ್ಲಿ 5724 ಶೌಚಾಲಯಗಳು, ಗಂಗಾವತಿಯಲ್ಲಿ 3952, ಕುಷ್ಟಗಿಯಲ್ಲಿ 5093 ಹಾಗೂ ಯಲಬುರ್ಗಾ ತಾಲೂಕಿನಲ್ಲಿ 6360 ಶೌಚಾಲಯಗಳು ನಿರ್ಮಾಣವಾಗಿದೆ. ಕೇವಲ 200 ಗಂಟೆಗಳಲ್ಲಿ 20 ಸಾವಿರಕ್ಕೂ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಿರುವುದು ರಾಷ್ಟ್ರೀಯ ದಾಖಲೆ ಇದಾಗಿದೆ.

ಕ್ರಾಂತಿ ಮಾಡಿದ ಸಿಇಒ, ದಾವಣಗೆರೆ ಬಯಲು ಶೌಚ ಮುಕ್ತ ಜಿಲ್ಲೆ

ಈ ಮೊದಲು ಆಂಧ್ರದ ವಿಜಯನಗರ ಜಿಲ್ಲೆಯಲ್ಲಿ 100 ಗಂಟೆಗಳಲ್ಲಿ 10 ಸಾವಿರ ಶೌಚಾಲಯ ನಿರ್ಮಾಣವಾಗಿದ್ದೇ ರಾಷ್ಟ್ರೀಯ ದಾಖಲೆಯಾಗಿತ್ತು. ಇದೀಗ ಕೊಪ್ಪಳ ಜಿಲ್ಲೆಯಲ್ಲಿ 200 ಗಂಟೆಗಳಲ್ಲಿ 21129 ಶೌಚಾಲಯ ನಿರ್ಮಾಣವಾಗಿರುವುದು ಮತ್ತೊಂದು ರಾಷ್ಟ್ರೀಯ ದಾಖಲೆಯಾಗಿದೆ. ಲಿಮ್ಕಾ ದಾಖಲೆಯಲ್ಲಿ ಇದನ್ನು ದಾಖಲಿಸಲು ಅಗತ್ಯ ಕ್ರಮವನ್ನು ಕೈಗೊಳ್ಳಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
21,129 toilet built In Koppal district in 200 hour Under Mission 200. Koppal district to be announced as open defecation-free by October 2, 2017.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ