Government Employees: ರಜೆ ನಿರ್ವಹಣೆ ಕುರಿತು ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ
ಬೆಂಗಳೂರು, ನವೆಂಬರ್ 06: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತಾಲಯದಲ್ಲಿ Leave Management System ಅನುಷ್ಠಾನ ಕುರಿತು ಕರ್ನಾಟಕ ಸರ್ಕಾರ ನವೆಂಬರ್ 04 ರಂದು ಮಹತ್ವದ ಆದೇಶ ಹೊರಡಿಸಿದೆ.
eLeave ಒಂದು ಸರಳ ಹಾಗೂ ಅನುಕೂಲಕರ workflow ಆಧಾರಿತ ವ್ಯವಸ್ಥೆಯಾಗಿದ್ದು, ಇದರ ಮೂಲಕ ಆನ್‌ಲೈನ್‌ನಲ್ಲಿ ರಜೆಗೆ ಅರ್ಜಿ ಸಲ್ಲಿಸಬಹುದು, ಅರ್ಜಿಯ ಸ್ಥಿತಿಗತಿಯನ್ನು ಪರಿಶೀಲಿಸಬಹುದು, ತೆಗೆದುಕೊಂಡ ರಜೆಗಳ ವಿವರ ಹಾಗೂ ಬಾಕಿ ರಜೆಗಳ ಮಾಹಿತಿಯನ್ನು ಪಡೆಯಬಹುದು. ಪೂರ್ವ ನಿರ್ಧಾರಿತ workflow ನಲ್ಲಿರುವ ಶ್ರೇಣಿಯ ಮೂಲಕ ಸ್ವಯಂಚಾಲಿತವಾಗಿ ರಜೆ ಮಂಜೂರಾತಿ ಪ್ರಕ್ರಿಯೆ ನಡೆಯುತ್ತದೆ.

ಸರ್ಕಾರದ ಪ್ರಸ್ತುತ ನಿಯಮಾವಳಿಗಳ ಪ್ರಕಾರ ರಜೆ ನಿಯಮಗಳನ್ನು ಹೊಂದಿಸಲಾಗಿದ್ದು, ಪಾತ್ರಾಧಾರಿತ ರಜೆ ಪ್ರಕ್ರಿಯೆಯನ್ನು ಅಳವಡಿಸಲಾಗಿದೆ. ಈ ವ್ಯವಸ್ಥೆಯು ಕಾಗದ ಅಧಾರಿತ ಅರ್ಜಿಗಳನ್ನು ತೊಡೆದುಹಾಕಿ. ವೇಗವಾದ ಮತ್ತು ಸಮಯಬದ್ಧ ಪ್ರಕ್ರಿಯೆಗೆ ನೆರವಾಗುತ್ತದೆ. ಮಂಜೂರಾತಿ ಪ್ರಾಧಿಕಾರವು ರಜೆ ಮಂಜೂರು ಮಾಡುವ ಮೊದಲು ನೌಕರರ ಬಾಕಿ ರಜೆ ಮತ್ತು ರಜೆ ವಿವರಗಳನ್ನು ವೀಕ್ಷಿಸಬಹುದಾಗಿದೆ.
ಇನ್ನೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತಾಲಯದಲ್ಲಿ Leave Management System ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ. ಈ ಸಂಬಂಧ, ಈ ಕೆಳಕಂಡ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.
1. ನೋಡಲ್ ಅಧಿಕಾರಿ: ಮುಖ್ಯ ಆಡಳಿತ ಅಧಿಕಾರಿಗಳು, HFWS
2. ಸಹಾಯಕ ನೋಡಲ್ ಅಧಿಕಾರಿಗಳು:
* ಗ್ರೂಪ್ ಎ ಅಧಿಕಾರಿಗಳಿಗೆ: ಸಹಾಯಕ ಆಡಳಿತ ಅಧಿಕಾರಿಗಳು (JRO/HRO)
* ಗ್ರೂಪ್ ಬಿ ಅಧಿಕಾರಿಗಳಿಗೆ: ಆಡಳಿತ ಅಧಿಕಾರಿಗಳು ಸಾಮಾನ್ಯ (AOG)
* ಗ್ರೂಪ್ ಸಿ ನೌಕರರುಗಳಿಗೆ: ಆಡಳಿತ ಅಧಿಕಾರಿಗಳು ಸಾರಿಗೆ (AOT)
* ಗ್ರೂಪ್ ಡಿ ನೌಕರರುಗಳಿಗೆ: ಆಡಳಿತ ಅಧಿಕಾರಿಗಳು ಕುಟುಂಬ ಕಲ್ಯಾಣ (AOFW)
ಪ್ರಮುಖ ಸೂಚನೆಗಳೇನು?
1. ಸಹಾಯಕ ನೋಡಲ್ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಅಧಿಕಾರಿ/ನೌಕರರ ಖಾತೆಯಲ್ಲಿರುವ ರಜೆಗಳನ್ನು Leave Management System ನಲ್ಲಿ ದಿನಾಂಕ 08.11.2024 ರೊಳಗೆ ನಮೂದಿಸತಕ್ಕದ್ದು.
2. ನೋಡಲ್ ಅಧಿಕಾರಿಗಳು ಈ ಎಲ್ಲ ಚಟುವಟಿಕೆಗಳ ಮೇಲ್ವಿಚಾರಣೆ ನಡೆಸತಕ್ಕದ್ದು.
3. 3. ದಿನಾಂಕ 11.11.2024 ರಿಂದ ಎಲ್ಲಾ ಅಧಿಕಾರಿ/ನೌಕರರ ರಜೆ ನಿರ್ವಹಣೆಯನ್ನು ಕಡ್ಡಾಯವಾಗಿ Leave Management System ಮೂಲಕವೇ ನಿರ್ವಹಿಸತಕ್ಕದ್ದು.
-
"5 ತಿಂಗಳಾದ್ರೂ ಸಿಗದ ದಸರಾ ಲೆಕ್ಕ: ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ'' -
"5 ತಿಂಗಳಾದ್ರೂ ಸಿಗದ ದಸರಾ ಲೆಕ್ಕ: ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ'' -
"ಕಾಂಗ್ರೆಸ್ನಿಂದ ದಲಿತ ದ್ರೋಹ: 14,200 ಕೋಟಿ ರೂ ಎಸ್ಸಿಎಸ್ಪಿ/ಟಿಎಸ್ಪಿ ಹಣ ಗ್ಯಾರಂಟಿ ಪಾಲು'' -
ಇಡೀ ಸರ್ಕಾರವೇ ಉಮೇಶ್ ಮೇಟಿ ಜೊತೆಗಿದೆ: ಬಾಗಲಕೋಟೆಯಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಡಿ.ಕೆ.ಶಿವಕುಮಾರ್ ಅಭಯ -
ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್ ಅಬ್ಬರ: ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಸಮರ್ಥ್ ಶಾಮನೂರು ನಾಮಪತ್ರ ಸಲ್ಲಿಕೆ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು












Click it and Unblock the Notifications