Karnataka rain: ರಾಜ್ಯದ ಒಳನಾಡು ಜಿಲ್ಲೆಗಳಿಗೆ ಮುಂದಿನ 48 ಗಂಟೆ ವ್ಯಾಪಕ ಮಳೆ ಮುನ್ಸೂಚನೆ

ಬೆಂಗಳೂರು, ನವೆಂಬರ್ 28; ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಂಗಳವಾರ ಜೋರು ಮಳೆ ಆಗಿದೆ. ಹಲವು ಕಡೆಗಳಲ್ಲಿ ಹಿಂಗಾರು ಮಳೆ ಚುರುಕಾಗುವ ಲಕ್ಷಣಗಳು ಇವೆ. ಈ ಮಧ್ಯೆ ಹವಾಮಾನ ಇಲಾಖೆ ಮುಂದಿನ 48 ಗಂಟೆ ಒಳನಾಡು ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಮುಂದುವರಿಯುವ ಲಕ್ಷಣಗಳು ಇವೆ ಎಂದು ಮುನ್ಸೂಚನೆ ನೀಡಿದೆ.

ಮುಂದಿನ ಎರಡರಿಂದ ಮೂರು ದಿನ ಕರ್ನಾಟಕದ ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಮಳೆ ಸಾಮಾನ್ಯ ಪ್ರಮಾಣದಲ್ಲಿ ಆಗಲಿದೆ. ಆದರೆ ದಕ್ಷಿಣ ಒಳನಾಡಿನ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಹಿಂಗಾರು ಮಳೆ ಅಬ್ಬರಿಸುವ ಸಾಧ್ಯತೆಗಳು ಇವೆ.

 IMD Predicts Thunderstorm Rain Next 48 hours in Interior Districts of State, see full Forecast

ಒಳನಾಡು ಜಿಲ್ಲೆಗಳ ಕೆಲವು ಜಿಲ್ಲೆಗಳಲ್ಲಿ ಆಗಾಗ ಮಳೆಯ ದರ್ಶನವಾಗುತ್ತಿದೆ. ಈ ಪೈಕಿ ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ, ತುಮಕೂರು, ಚಿತ್ರದುರ್ಗ, ಬಳ್ಳಾರಿ, ವಿಜಯನಗರ, ದಾವಣಗೆರೆ,ಚಿಕ್ಕಮಗಳೂರು, ಕೊಡಗು ಮತ್ತು ಶಿವಮೊಗ್ಗ, ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಸಂಭವವಿದೆ.

ಈ ಜಿಲ್ಲೆಗಳ ವ್ಯಾಪ್ತಿಯಲ್ಲಿ ಒಂದೆರಡು ಕಡೆ ಗುಡುಗು ಮಿಂಚು ಸಹಿತ ಮಳೆ ಅಬ್ಬರಿಲಿಸೆ. ಉಳಿದ ಹಲವೆಡೆ ಆಗಾಗ ಜೋರು ಮಳೆ ಬಂದು ಹೋಗಲಿದೆ. ಡಿಸೆಂಬರ್ 2ರ ನಂತರ ಮಳೆ ಮತ್ತೆ ಕ್ಷೀಣಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

 IMD Predicts Thunderstorm Rain Next 48 hours in Interior Districts of State, see full Forecast

ಕೈಕೊಟ್ಟ ಹಿಂಗಾರು: ರೈತರು ಕಂಗಾಲು
ನಿಗದಿಯಂತೆ ಅಕ್ಟೋಬರ್ ನಿಂದಲೇ ಹಿಂಗಾರು ಮಳೆ ಆರಂಭವಾಗಬೇಕಿತ್ತು.ಆದರೆ ಬದಲಾದ ಹವಾಮಾನ ವೈಪರಿತ್ಯಗಳ ಪ್ರಭಾವದಿಂದಾಗಿ ನಿರೀಕ್ಷೆಯಂತೆ ಮಳೆ ಆಗಲೇ ಇಲ್ಲ. ಹಿಂಗಾರು ಅವಧಿ ಶುರುವಾಗಿ ಎರಡು ತಿಂಗಳು ಕಳೆಯುವ ಹೊತ್ತಿನಲ್ಲಿ ಕೆಲವು ಜಿಲ್ಲೆಗಳಲ್ಲಿ ಮಳೆ ಚುರುಕಗೊಂಡಿದೆ. ಹೀಗಾಗಿ ಹಿಂಗಾರು ಹಂಗಾಮಿನ ಬಿತ್ತನೆಗೆ ರೈತರಿಗೆ ಈ ಬಾರಿ ನಿರಾಸೆಯಾಗಿದೆ. ಮುಂಗಾರು ಕೈಕೊಟ್ಟು ಬರಗಾಲ ಎದುರಿಸಿದ್ದ ರೈತ ಮತ್ತೆ ಕಂಗಾಲಾಗಿದ್ದಾನೆ. ಆರ್ಥಿಕ ಸಂಕಷ್ಟು ಎದುರಿಸುತ್ತಿದ್ದಾನೆ.

ಕಳೆದ 24 ಗಂಟೆಗಳಲ್ಲಿ ಹುಬ್ಬಳ್ಳಿ, ಧಾರವಾಡ, ಗದಗ ಜಿಲ್ಲೆಗಳಲ್ಲಿ ಕೆಲ ಕಾಲ ಜೋರು ಮಳೆ ಆಗಿದೆ. ಉಳಿದಂತೆ ಹಾವೇರಿ, ಹಾನಗಲ್, ಬೆಳಗಾವಿ, ಚಿಕ್ಕಮಗಳೂರು ಸೇರಿದಂತೆ ಒಂದೆರಡು ಕಡೆ ತುಂತುರು ಮಳೆ ಆಗಿದೆ.

ರಾಜ್ಯದ ತಾಪಮಾನ: ಬೆಂಗಳೂರು ಮಳೆ ವರದಿ
ರಾಜ್ಯದ ಒಟ್ಟು ಗರಿಷ್ಠ ತಾಪಮಾನ ಕಾರವಾರದಲ್ಲಿ 36 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಉಳಿದಂತೆ ಹೊನ್ನಾವರದಲ್ಲಿ 35 ಡಿಸೆ, ಮಂಗಳೂರು ವಿಮಾನ ನಿಲ್ದಾಣದಲ್ಲಿ 34 ಡಿಸೆ ತಾಪಮಾನ ದಾಖಲಾಗಿದೆ. ಇನ್ನೂ ರಾಜ್ಯದ ಕನಿಷ್ಠ ತಾಪಮಾನ ಚಿಕ್ಕಮಗಳೂರಿನ 15.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

ರಾಜ್ಯ ರಾಜಧಾನಿ ಬೆಂಗಳರಿನಲ್ಲಿ ಡಿಸೆಂಬರ್ 2ವರೆಗೆ ಅಲ್ಲಲ್ಲಿ ತಂಪು ವಾತಾವರಣ ಜೊತೆಗೆ ತುಂತುರು ಮಳೆ ನಿರೀಕ್ಷೆ ಇದೆ. ಇದರ ಹೊರತು ಯಾವುದೇ ಗಂಭೀರ ಸ್ವರೂಪದ ಮಳೆ ಮುನ್ಸೂಚನೆ ಇಲ್ಲ. ಡಿಸೆಂಬರ್ 2 ನಂತರ ವಾತಾವರಣದಲ್ಲಿ ಬಿಸಲಿನ ಪ್ರಯಾಣ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+