Karnataka rain: ಕರಾವಳಿ-ದಕ್ಷಿಣ ಒಳನಾಡಿಗೆ ಮಳೆ ಚುರುಕು, ಅ.10ರ ಬಳಿಕ ವರುಣಾರ್ಭಟ
ಬೆಂಗಳೂರು, ಅಕ್ಟೋಬರ್ 06: ಕರ್ನಾಟಕದಲ್ಲಿ ಎರಡು ಮೂರು ವಾರ ಅಬ್ಬರಿಸಿದ್ದ ಮಳೆ ರಾಜ್ಯಾದ್ಯಂತ ತಣ್ಣಗಾಗಿದ್ದು, ಇದೀಗ ಮತ್ತು ಚುರುಕಾಗುವ ಮುನ್ಸೂಚನೆ ನೀಡಿದೆ. ಉತ್ತರ ಒಳನಾಡು ಹೊರತುಪಡಿಸಿದೆ ಉಳಿದ ಭಾಗಗಳಲ್ಲಿ ಅಕ್ಟೋಬರ್ 10ರಿಂದ ಮೂರು ದಿನಗಳ ಕಾಳ ವ್ಯಾಪಕ ಮಳೆ ಸುರಿಯಲಿದೆ.
ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆ ಪ್ರಕಾರ, ಅಕ್ಟೋಬರ್ 10ರಿಂದ 13ರವರೆಗೆ ಮೂರು ದಿನ ರಾಜ್ಯದ ಕರಾವಳಿಯ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ಮತ್ತು ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ರಾಮನಗರ, ಮಂಡ್ಯ, ಮೈಸೂರು, ಹಾಸನ, ಚಾಮರಾಜನಗರ, ತುಮಕೂರು, ಶಿವಮೊಗ್ಗ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಗುಡುಗು ಸಹಿತ ಧಾರಾಕಾರವಾಗಿ ಮಳೆ ಆಗಲಿದೆ.

ಉತ್ತರ ಒಳನಾಡಿನ ಕಲಬುರಗಿ ಮತ್ತು ಧಾರವಾಡದ ಒಂದೆರಡು ಕಡೆಗಳಲ್ಲಿ ಹಗುರ ಮಳೆ ಆಗಲಿದೆ. ಉಳಿದಂತೆ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಧಾರವಾಡ, ಹುಬ್ಬಳ್ಳಿ, ಹಾವೇರಿ, ರಾಯಚೂರು, ಬೀದರ್, ಯಾದಗಿರಿ, ಗದಗ ಜಿಲ್ಲೆಗಳ ವ್ಯಾಪ್ತಿಯಲ್ಲಿ ಮಳೆ ದುರ್ಬಲವಾಗಿದೆ. ಅಲ್ಲ ಮುಂದಿನ ವಾರ ಪೂರ್ತಿ ಶುಷ್ಕ ವಾತಾವರಣ ಮುಂದುವರಿಯಲಿದೆ.
ಕಲಬುರಗಿಯಲ್ಲಿ ಅತೀ ಗರಿಷ್ಠ ತಾಪಮಾನ
ರಾಜ್ಯದಲ್ಲಿ ಅತೀ ಗರಿಷ್ಠ ತಾಪಮಾನ ಕಲಬುರಗಿಯಲ್ಲಿ 34 ಡಿಗ್ರಿ ಸೆಲ್ಸಿಯಸ್ ಮತ್ತು ಅತೀ ಕನಿಷ್ಟ ತಾಪಮಾನ ಬಾಗಲಕೋಟೆಯಲ್ಲಿ 15.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮುಂದಿನ ಅಕ್ಟೋಬರ್ 10ರ ನಂತರ ಕರಾವಳಿಯ ಮೂರು ಜಿಲ್ಲೆಗಳ, ದಕ್ಷಿಣ ಒಳನಾಡು ವಿಶೇಷವಾಗಿ ಉತ್ತರ ಒಳನಾಡು ಜಿಲ್ಲೆಗಳ ಭಾಗದಲ್ಲಿ ಗರಿಷ್ಠ ತಾಪಮಾನದಲ್ಲಿ ಮತ್ತಷ್ಟು ಏರಿಕೆ ಸಂಭವವಿದೆ.
ಬೆಂಗಳೂರಿನಲ್ಲಿ ಗುರುವಾರ ಒಂದೆರಡು ಕಡೆ ಮಳೆ ಆಗಿದೆ. ಮುಂದನ ಎರಡು ಮೂರು ದಿನ ತುಂತುರು ಮಳೆ ನಿರೀಕ್ಷೆ ಇದೆ. ಕೆಐಎಎಲ್‌ನಲ್ಲಿ ಗರಿಷ್ಠ 30.7 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.












Click it and Unblock the Notifications