Karnataka Rains: ಬೆಂಗಳೂರು ಸೇರಿ ಒಳನಾಡಿನ 08 ಜಿಲ್ಲೆಗಳಿಗೆ ಭಾರೀ ಮಳೆ! ಕರಾವಳಿ-ಮಲೆನಾಡಿಗೆ ಗುಡ್‌ನ್ಯೂಸ್‌

Karnataka Rain Forecast: ಕರ್ನಾಟಕದಾದ್ಯಂತ ಬಿಟ್ಟು ಬಿಡದೇ ಅಬ್ಬರಿಸಿದ್ದ ಮುಂಗಾರು ಮಳೆಯು ಒಳನಾಡಿನಲ್ಲಿ ಜೋರಾಗಿ ಸುರಿಯುವ ಎಲ್ಲ ಲಕ್ಷಣ ಇದೆ. ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಆಗುವ ಮುನ್ಸೂಚನೆ ಇದೆ. ಇತ್ತ ಮಲೆನಾಡು ಹಾಗೂ ಕರಾವಳಿ ಭಾಗದ ಜನರಿಗೆ ಎಂದು ಭಾರತೀಯ ಹವಾಮಾನ ಇಲಾಖೆ ಗುಡ್ ನ್ಯೂಸ್ ನೀಡಿದೆ.

ಮುಂಗಾರು ಪೂರ್ವದಿಂದಲೂ ಕರ್ನಾಟಕದ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಮತ್ತು ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕಮಗಳೂರು ವ್ಯಾಪ್ತಿಯಲ್ಲಿ ದಿನವಿಡೀ ಧಾರಾಕಾರ ಮಳೆ ಆಗುತ್ತಿತ್ತು. ಇದೀಗ ಅಂತಹ ಯಾವುದೇ ಮುನ್ಸೂಚನೆ ಇಲ್ಲ. ಬದಲಾಗಿ ಮಳೆ ಈ ಭಾಗದಲ್ಲಿ ಸಂಪೂರ್ಣವಾಗಿದೆ ತಗ್ಗಿದೆ. ಆಗಾಗ ಹಗುರದಿಂದ ಸಾಮಾನ್ಯ ಮಳೆ ಆಗಬಹುದೆಂದು ಎಚ್ಚರಿಸಿದೆ. ಸದ್ಯಕ್ಕೆ ಈ ಭಾಗದ ಜನರು ನಿಟ್ಟುಸಿರುವ ಬಿಡುವಂತಾಗಿದೆ.

IMD Predicts Heavy Rain Only on 8 Interior Districts Light Spell on Coast Weather Report Today

ಇದೇ ಅವಧಿಯಲ್ಲಿ ಮುಂದಿನ ಒಂದು ವಾರದ ಹವಾಮಾನ ಮುನ್ಸೂಚನೆಯಲ್ಲಿ ಒಳನಾಡು ಜಿಲ್ಲೆಗಳ ಹಲವೆಡೆ ಭಾರೀ ಮಳೆ ನಿರೀಕ್ಷೆ ಇದೆ. ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಗ್ರಾಮಾಂತರ, ಕಲಬುರಗಿ, ವಿಜಯಪುರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಹಾಗೂ ತುಮಕೂರು ಸೇರಿ 08 ಜಿಲ್ಲೆಗಳ ವ್ಯಾಪ್ತಿಯಲ್ಲಿ ಸೆಪ್ಟಂಬರ್ 11ರಂದು ಸಾಧಾರಣದಿಂದ ಭಾರೀ ಮಳೆ ಸುರಿಯಲಿದೆ ಎಂದು ಐಎಂಡಿ ತಿಳಿಸಿದೆ. ಹೀಗಾಗಿ ಅಂದು ಆ ಎಲ್ಲ ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ಘೋಷಿಸಲಾಗಿದೆ.

ಉಳಿದಂತೆ ಮುಂದಿನ ಒಂದು ವಾರ ಕರಾವಳಿಗೆ ಹಾಗೂ ಮಲೆನಾಡಿನ ಒಂದೆಡೆರು ಕಡೆಗಳಲ್ಲಿ ಹಗುರ ಇಲ್ಲವೇ ಸಾಮಾನ್ಯ ಮಳೆ ಆಗುವ ನಿರೀಕ್ಷೆ ಇದೆ. ಇದರ ಹೊರತು ರಾಜ್ಯದ ವಾತಾವರಣ, ಹವಾಮಾನದಲ್ಲಿ ಗಂಭೀರ ಸ್ವರೂಪದ ಬದಲಾವಣೆಗಳು ಇಲ್ಲ. ಒಳನಾಡಿನಲ್ಲಿ ಸದ್ಯ ಬಿಸಿಲಿನ ವಾತಾವರಣ ಕಂಡು ಬಂದಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ನೆನ್ನೆ ಭಾನುವಾರ ರಾಜ್ಯದ ಕೊಡಗಿನ ಗೋಣಿಕೊಪ್ಪಲು 2 ಮಿ.ಮೀ, ಮೂಡಿಗೆರೆ 12, ಆಗುಂಬೆ 13, ಚಂದೂರಾಯನಹಳ್ಳಿ 20, ಹೆಸರಘಟ್ಟ 0.5, ದಕ್ಷಿಣ ಕನ್ನಡ 1, ಚಿಕ್ಕಬಳ್ಳಾಪುರ 2.5 ಮತ್ತು ಬೆಂಗಳೂರಿನ ಗೋಪಾಲ್ ನಗರದಲ್ಲಿ 0.5 ಮಿಲಿ ಮೀಟರ್ ಮಳೆ ದಾಖಲಾಗಿದೆ ಎಂದು ವರದಿ ತಿಳಿಸಿದೆ.

ಬೆಂಗಳೂರು ಹವಾಮಾನ ವರದಿ

ನಗರದಲ್ಲಿ ಮುಂದಿನ ಒಂದು ವಾರದ ಪೈಕಿ ಅಲ್ಲಲ್ಲಿ ಹಗರು ಮಳೆ ಆಗಲಿದೆ. ಸೆಪ್ಟಂಬರ್ 11ರಂದು ಮಾತ್ರ ಬೆಂಗಳೂರು ನಗರಕ್ಕೆ ಭಾರೀ ಮಳೆ ಪ್ರಯುಕ್ತ 'ಯೆಲ್ಲೋ ಅಲರ್ಟ್' ನೀಡಲಾಗಿದೆ. ಗರಿಷ್ಠ 30 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಂಡು ಬರಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+