Karnataka Rains: ಇಂದು ವಾಯುಭಾರ ಕುಸಿತ ದುರ್ಬಲ: ವಿವಿಧೆಡೆ ಮಳೆ, ಚಳಿ ಎಚ್ಚರಿಕೆ

ಬೆಂಗಳೂರು, ಡಿಸೆಂಬರ್ 26: ಕರ್ನಾಟಕದಾದ್ಯಂತ ಒಣ ಹವೆಯ ವಾತಾವರಣ ನಿರ್ಮಾಣವಾಗಿದೆ. ಹೀಗಿದ್ದರೂ ಮುಂದಿನ ಮೂರರಿಂದ ಐದು ದಿನಗಳ ಕಾಲ ರಾಜ್ಯದಲ್ಲಿ ಒಂದಷ್ಟು ಜಿಲ್ಲೆಗಳಲ್ಲಿ ಜೋರು ಮಳೆಯ ಸಾಧ್ಯತೆ ಇದೆ. ಅದಕ್ಕೆ ಕಾರಣ ತಮಿಳುನಾಡು ಹಾಗೂ ಆಂಧ್ರ ಕರಾವಳಿ ಭಾಗಕ್ಕೆ ಅಪ್ಪಳಿಸಿರುವ ಚಂಡಮಾರುತದ ಪರಿಚಲನೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಹೌದು, ಬಂಗಾಳಕೊಲ್ಲಿ ಭಾಗದಲ್ಲಿ ನಿರ್ಮಾಣವಾಗಿದ್ದ ಹವಾಮಾನ ವೈಪರಿತ್ಯವು ಕರಾವಳಿಯತ್ತ ಸಾಗಿ ಬಂದಿದೆ. ಆಗ್ನೇಯ ಬಂಗಾಳಕೊಲ್ಲಿಯಲ್ಲಿದ್ದ ವಾಯುಭಾರ ಕುಸಿತವು ಚಂಡಮಾರುತ ಪರಿಚಲನೆಯಾಗಿ ಬದಲಾಗಿದೆ. ಇದರ ತೀವ್ರ ಗಾಳಿಯು ಬುಧವಾರ ಡಿ.25ರಂದು ದಕ್ಷಿಣ ಆಂಧ್ರಪ್ರದೇಶ ಮತ್ತು ಉತ್ತರ ತಮಿಳುನಾಡು ಕರಾವಳಿಯ ನೈಋತ್ಯ ಭಾಗದತ್ತ ಸ್ಪಷ್ಟ ಬಿರುಗಾಳಿಯು ಸಾಗಿ ಬಂದಿದೆ.

IMD Predicted Light to Moderate Rain Expected in Karnataka Next 3 Days by Cyclone Circulation

ಈ ಚಂಡಮಾರುತ ಪರಿಚಲನೆಯು ಈಗಿರುವ ಸ್ಥಳದಿಂದ ವಾಯುವ್ಯಕ್ಕೆ ಚಲಿಸಿ ಮತ್ತು ದಕ್ಷಿಣ ಆಂಧ್ರಪ್ರದೇಶ ಹಾಗೂ ಪಕ್ಕದ ನೈಋತ್ಯ ಬಂಗಾಳಕೊಲ್ಲಿಯ ಮೇಲೆ ಸಾಗಿ ಇಂದು ಗುರುವಾರ ಡಿಸೆಂಬರ್ 26ರಂದು ದುರ್ಬಲಗೊಳ್ಳುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ಮುಖ್ಯಸ್ಥರು, ಹವಾಮಾನ ತಜ್ಞರು ಅಧಿಕೃತ ಮಾಹಿತಿ ನೀಡಿದ್ದಾರೆ.

ಯಾವ ಜಿಲ್ಲೆಗಳಿಗೆ ಮಳೆ ಎಚ್ಚರಿಕೆ ಇದೆ?

ಮುಂದಿನ ಮೂರು ದಿನಗಳಲ್ಲಿ ಕರ್ನಾಟಕದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಬೆಳಗಾವಿ, ಬೀದರ್, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ ಸೇರಿ ವಿವಿಧೆಡೆ ಹಗುರದಿಂದ ಸಾಧಾರಣ ಮಳೆ ಬರಲಿದೆ. ಉಳಿದಂತೆ ರಾಜ್ಯಾದ್ಯಂತ ಒಣಹವೆ ಕಂಡು ಬರಲಿದೆ.

ವೈಪರಿತ್ಯ ಅಂತ್ಯ, ಮತ್ತ ಹೆಚ್ಚಲಿದೆ ಚಳಿ

ಕಳೆದ ಕೆಲವು ವಾರಗಳಿಂದ ಚಳಿಗಾಲ ಆರಂಭವಾಗಿದೆ ಎಂಬ ಅನುಭವವೇ ಆಗದಂತಹ ವಾತಾವರಣ ನಿರ್ಮಾಣವಾಗಿತ್ತು. ಮಧ್ಯಾಹ್ನ ಬಿಸಿಲಿನ ಕಾವು ಹೆಚ್ಚಿದ್ದರು, ರಾತ್ರಿ ಮತ್ತು ಬೆಳಗ್ಗೆ ಚಳಿ ಕಡಿಮೆ ಇತ್ತು. ಇದೀಗ ಹವಮಾನ ವೈಪರಿತ್ಯ ಇಂದು ದುರ್ಬಲಗೊಳ್ಳಲಿದೆ. ಹೀಗಾಗಿ ಮುಂದಿನ ಕೆಲವೇ ದಿನಗಳಲ್ಲಿ ಮತ್ತೆ ತೀವ್ರ ಮಂಜು ಬೆಳಗ್ಗೆ ಮತ್ತು ರಾತ್ರಿ ಚಳಿ ನಿರ್ಮಾಣವಾಗಲಿದೆ.

ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡು, ಮಲೆನಾಡು ಜಿಲ್ಲೆಗಳು ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಮೈಕೊರೆವ ಚಳಿ ಹಾಗೂ ಗರಿಷ್ಠ ತಾಪಮಾನ ದಾಖಲಾಗುವ ಎಲ್ಲ ಲಕ್ಷಣಗಳು ಇವೆ ಎಂದು ವರದಿ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+