Karnataka Weather Prediction: ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ IMD
ಬೆಂಗಳೂರು, ಫೆಬ್ರವರಿ 27: ಕರ್ನಾಟಕ ರಾಜ್ಯದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಬಿಸಿಲನ್ನು ನೀವು ನೋಡಿದ್ದೀರಿ. ಈ ಬಾರಿ ಬೇಸಿಗೆಯ ಒಂದು ಕಳೆದಿದ್ದೇವೆ. ಫೆಬ್ರವರಿ ಅಂತ್ಯದ ಹೊತ್ತಿಗೆ ಕರಾವಳಿ ಜಿಲ್ಲೆಗಳಲ್ಲಿ ಅತೀವ ಬಿಸಿಲಿನ ತಾಪ ಕಂಡು ಬರುತ್ತಿದೆ. ಇದೀಗ ರಾಜ್ಯದ ಹವಾಮಾನ ಮುನ್ಸೂಚನೆ ನೀಡಿರುವ ಭಾರತೀಯ ಹವಾಮಾನ ಇಲಾಖೆಯು (IMD) ಕರಾವಳಿ ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ನೀಡಿದೆ.
'ಯೆಲ್ಲೋ ಅಲರ್ಟ್' ಘೋಷಣೆ ಎಂದ ತಕ್ಷಣ ಕರ್ನಾಟಕ ಕರಾವಳಿಯ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುತ್ತದೆ ಎಂದರ್ಥವಲ್ಲ. ಅತೀವ ಬೀಸಿಲಿಗೂ, ಗರಿಷ್ಠ ತಾಪಮಾನ ದಾಖಲಾತಿ ನೋಡಿಕೊಂಡು ಸಹ ಈ ಭಾಗದಲ್ಲಿ ಎಷ್ಟು ಪ್ರಮಾಣದಲ್ಲಿ ತಾಪಮಾನ ಕಂಡು ಬರುತ್ತದೆ ಎಂದು ಹೇಳಲು ಸಹ ಯೆಲ್ಲೋ, ಆರೆಂಜ್ ಮತ್ತು ರೆಡ್ ಅಲರ್ಟ್ ನೀಡಲಾಗುತ್ತದೆ.

ಸದ್ಯದ ಮಾಹಿತಿ ಪ್ರಕಾರ, ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಮೂರು ಜಿಲ್ಲೆಗಳಿಗೆ ಮುಂದಿನ ಫೆಬ್ರವರಿ 28 ಮತ್ತು ಮಾರ್ಚ್ 01ರಂದು (48 ಗಂಟೆ) ಅತ್ಯಧಿಕ ಗರಿಷ್ಠ ತಾಪಮಾನ ಕಂಡು ಬರಲಿದೆ. ಹೀಗಾಗಿ ಎರಡು ದಿನ ಐಎಂಡಿ ಯೆಲ್ಲೋ ಅಲರ್ಟ್ ನೀಡಿದೆ.
ರಾಜ್ಯದ ಕರಾವಳಿಯಲ್ಲಿ ಗಾಳಿಯ ತೇವಾಂಶ (ಸಾಪೇಕ್ಷ ಆರ್ದ್ರತೆ) ಶೇಕಡೆಆ 40-50ರಷ್ಟಿದ. ಇನ್ನೂ ಗರಿಷ್ಠ ಉಷ್ಣತೆ 37 ರಿಂದ 38 ಡಿಗ್ರಿ ಸೆಲ್ಸಿಯಸ್ ಆಸುಪಾಸು ದಾಖಲಾಗಲಿದೆ. ಮಾನವ ದೇಹವು ಗರಿಷ್ಠ 40-50 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವನ್ನು ತಡೆದುಕೊಳ್ಳುತ್ತದೆ. ಈ ಪ್ರಮಾಣ ದಾಟಿದರೆ, ಆ ವ್ಯಕ್ತಿಯು ಅನಾರೋಗ್ಯಕ್ಕೆ ತುತ್ತಾಗಬಹುದು. ಜೀವಕ್ಕೆ ಅಪಾಯ ಎದುರಾಗಬಹುದು ಎಂದು ತಜ್ಞರು ಹೇಳುತ್ತಾರೆ.

ಫೆಬ್ರವರಿ 26ರಂದು ಬುಧವಾರ ಕಾರವಾರದಲ್ಲಿ 38 ಡಿಗ್ರಿ ಸೆಲ್ಸಿಯಸ್, ಪೆಣಂಬೂರು 38, ಹೊನ್ನಾವರ 38.2 ಮತ್ತು ಮಂಗಳೂರಿನಲ್ಲಿ 37 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, ಉಷ್ಣ ಅಲೆ ಕಂಡು ಬಂದಿದೆ. ಇದು ಜನರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಮುಂದಿನ ಕೆಲವು ದಿನಗಳ ಕಾಲ ಇದೇ ವಾತಾವರಣ ಕರಾವಳಿ ಭಾಗದಲ್ಲಿ ಮುಂದುವರಿಯಲಿದೆ.
ಇನ್ನೂ ಉತ್ತರ ಕರ್ನಾಟಕದಲ್ಲೂ ಬೀದರ್, ಕಲಬುರಗಿ, ಬಾಗಲಕೋಟೆ, ವಿಜಯಪುರದಲ್ಲೂ 35-38 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗುತ್ತಿದೆ. ದಕ್ಷಿಣ ಒಳನಾಡಿನ ಬೆಂಗಳೂರು, ಹಾಸನ, ತುಮಕೂರು, ಮಂಡ್ಯ, ಕೊಡಗು, ಕೋಲಾರ, ಚಿಕ್ಕಬಳ್ಳಾಪುರ ಭಾಗದಲ್ಲಿ 32-34 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.












Click it and Unblock the Notifications