Get Updates
Get notified of breaking news, exclusive insights, and must-see stories!

Karnataka Today Weather: ಚಂಡಮಾರುತ ಪ್ರಸರಣ: ಕೆಲವೆಡೆ ಮಳೆ, ಶೀತಗಾಳಿ ಎಚ್ಚರಿಕೆ: ಬಹುತೇಕ ಕಡೆ ಒಣಹವೆ..

Karnataka Weather Today: ಕರ್ನಾಟಕದಾದ್ಯಂತ ಮೈ ಕೊರೆವ ಚಳಿ ವಾತಾವರಣ ಸೃಷ್ಟಿಯಾಗುತ್ತಿದೆ. ಮಧ್ಯಾಹ್ನವಾದರೆ ಸಾಕು ಅಧಿಕ ಬಿಸಿಲು, ಕೆಲವೆಡೆ ಮಬ್ಬು ವಾತಾವರಣ ಕಂಡು ಬರುತ್ತಿದೆ. ಕಳೆದ ಐದಾರು ದಿನಗಳಲ್ಲಿ ವಾತಾವರಣ ಸಂಪೂರ್ಣ ಬದಲಾಗಿದೆ. ಮತ್ತೊಂದೆಡೆ ಬಂಗಾಳಕೊಲ್ಲಿ ಹಾಗೂ ಶ್ರೀಲಂಕಾ ಸಮೀಪ ಸಮುದ್ರದಲ್ಲಿ ಕಡಿಮೆ ಒತ್ತಡದ ಪ್ರದೇಶ ನಿರ್ಮಾಣವಾಗಿದೆ. ಮುಂದಿನ ಐದು (ನ.24) ದಿನದಲ್ಲಿ ಕೆಲವೆಡೆ ಮಳೆ, ಹಲವೆಡೆ ಒಣಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ (IMD) ನೀಡಿದೆ.

ಕರ್ನಾಟಕದ ಅನೇಕ ಕಡೆಗಳಲ್ಲಿ ಒಣಹವೆ, ತಾಪಮಾಣದಲ್ಲಿ ಏರಿಕೆ ಕಾಣುತ್ತಿದೆ. ಕೆಲವೆಡೆ ಮಳೆಯ ಆಗಮನ ಸಹ ಆಗಲಿದೆ ಎಂಬ ಮುನ್ಸೂಚನೆ ಇದೆ. ಸದ್ಯ ಬಂಗಾಳಕೊಲ್ಲಿಯ ನೈಋತ್ಯ ಮತ್ತು ಶ್ರೀಲಂಕಾಕ್ಕೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಕಡಿಮೆ ಒತ್ತಡದ ಪ್ರದೇಶವು ಮಂಗಳಾವಾರ ಉಂಟಾಗಿದೆ. ಅದರ ನೆರೆ ಹೊರೆಯ ಭಾಗದಲ್ಲಿ ಚಂಡಮಾರುತದ ಪರಿಚಲನೆಯು ಕಂಡು ಬಂದಿದ್ದು, ಅದು ಸರಾಸರಿ ಸಮುದ್ರ ಮಟ್ಟ ದಿಂದ 5.6 ಕಿ.ಮೀ ವರೆಗೆ ವಿಸ್ತರಿಸಿದೆ. ಇದು ಮುಂದಿನ 24 ಗಂಟೆಗಳಲ್ಲಿ ನಿಧಾನವಾಗಿ ಪಶ್ಚಿಮ-ವಾಯುವ್ಯ ಸ್ಥಳಗಳತ್ತ ಚಲಿಸುವ ಸಾಧ್ಯತೆ ಇದೆ.

IMD Forecast Dry Weather to Dominate Karnataka Light Rain Expected in South Districts

2025 ನವೆಂಬರ್ 22ರ ಹೊತ್ತಿಗೆ ಆಗ್ನೆಯ ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶವು ರೂಪುಗೊಳ್ಳಲಿದೆ. ನಂತರ ಅದು ಪಶ್ಚಿಮ-ವಾಯುವ್ಯ ಸ್ಥಳಗಳಲ್ಲಿಗೆ ಚಲಿಸುವ ನಿರೀಕ್ಷೆ ಇದೆ. ಬಳಿಕ ನಂತರದ 48 ಗಂಟೆಗಳಲ್ಲಿ ಹೆಚ್ಚು ಸ್ಪಷ್ಟವಾಗುತ್ತದೆ. ತೀವ್ರಗೊಳ್ಳಲುಬಹುದೆಂದು ಅಂದಾಜಿಸಲಾಗಿದೆ.

ಎಲ್ಲಿ ಒಣಹವೆ, ಎಲ್ಲಿ ಮಳೆ ನಿರೀಕ್ಷೆ

ಮುಂದಿನ ಏಳು ದಿನಗಳು ಕರ್ನಾಟಕಕ್ಕೆ ಒಣಹವೆ ಹೆಚ್ಚರಿಕೆ ನೀಡಲಾಗಿದೆ. ಕರಾವಳಿ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಸಹ ಅಧಿಕ ತಾಪಮಾನ ಕಂಡು ಬರಲಿದೆ. ಎಲ್ಲೆಲ್ಲೂ ಶುಷ್ಕ ವಾತಾವರಣವೇ ಕಂಡು ಬರಲಿದೆ. ದಕ್ಷಿಣ ಒಳನಾಡಿನ ಒಂದಷ್ಟು ಜಿಲ್ಲೆಗಳಲ್ಲಿ ಮಿಶ್ರ ವಾತಾವರಣ ಕಂಡು ಬರಲಿದೆ. ಮಳೆ ಜೊತೆಗೆ ವಿವಿಧ ಪ್ರದೇಶಗಳಲ್ಲಿ ಹೆಚ್ಚಿನ ಬಿಸಿಲು ಕಂಡು ಬರಲಿದೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ.

ಇಂದು ನವೆಂಬರ್ 19ರಂದು ದಕ್ಷಿಣ ಒಳನಾಡಿನ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಮೈಸೂರು ಸೇರಿ ಕೆಲ ಜಿಲ್ಲೆಗಳ ಒಂದೆರಡು ಭಾಗಗಳಲ್ಲಿ ಹಗುರ ಮಳೆ ನಿರೀಕ್ಷೆ ಇದೆ. ಬಳ್ಳಾರಿ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು, ಮಂಡ್ಯ, ರಾಮನಗರ, ಶಿವಮೊಗ್ಗ, ತುಮಕೂರು ಹಾಗೂ ವಿಜಯನಗರದಲ್ಲಿ ಒಣಹವೆ ಕಂಡು ಬರಲಿದೆ. ಉಳಿದಂತೆ ಚಳಿಯ ಪ್ರಮಾಣ ಇನ್ನಷ್ಟು ಹೆಚ್ಚಾಗಲಿದೆ. ಶೀತಗಾಳಿ ರಾಜ್ಯವ್ಯಾಪಿ ಬೀಸುವ ಸಾಧ್ಯತೆ ಇದೆ.

ನವೆಂಬರ್ 20 ಮತ್ತು 21ರಂದು ಎಲ್ಲ ಭಾಗಗಳಲ್ಲಿ ತೀವ್ರ ಬಿಸಿಲಿನ ಶಾಖ ಕಂಡು ಬರಲಿದೆ. ನಂತರ ನವೆಂಬರ್ 22ರಂದು ಉತ್ತರ ಕರ್ನಾಟಕದ ರಾಯಚೂರು, ಯಾದಗಿರಿ, ಕೊಪ್ಪಳ, ಕಲುಬುರಗಿ ಮತ್ತು ಗದಗ ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಹುಗರಿದಂದ ಸಾಮಾನ್ಯ ಮಳೆ ಆಗುವ ಸಂಭವವಿದೆ. ಇದರ ಹೊರತು ಎಲ್ಲಿಯೂ ಜೋರು, ಭಾರೀ ಮಳೆ ನಿರೀಕ್ಷೆ ಇಲ್ಲ ಎಂದು ಹವಾಮಾನ ತಜ್ಞರು ಮುನ್ಸೂಚನಾ ವರದಿಯಲ್ಲಿ ತಿಳಿಸಿದ್ದಾರೆ.

ರಾಜ್ಯ ಗರಿಷ್ಠ ತಾಪಮಾನದ ಜಿಲ್ಲೆಗಳು

ಕರಾವಳಿ ಭಾಗದಲ್ಲಿ ಅತ್ಯಧಿಕ ಬಿಸಿಲಿನ ಶಾಖ ಕಂಡು ಬಂದಿದೆ. ಕಾರವಾರ ಮತ್ತು ಹೊನ್ನಾವರದಲ್ಲಿ ತಲಾ 35 ಡಿಗ್ರಿ ಸೆಲ್ಸಿಯಸ್ ತಾಪಮಾನ ಉಂಟಾಗಿದೆ. ಮಂಗಳೂರು ಶಕ್ತಿನಗರದಲ್ಲಿ 33 ಡಿಗ್ರಿ ಸೆಲ್ಸಿಯಸ್, ಮಂಗಳೂರು ಏರ್‌ಪೋರ್ಟ್‌ನಲ್ಲಿ 32 ಡಿಗ್ರಿ ಸೆಲ್ಸಿಯಸ್, ಕಲಬುರಗಿಯಲ್ಲಿ 31 ಡಿಗ್ರಿ ಸೆಲ್ಸಿಯಸ್, ಶಿವಮೊಗ್ಗ 31 ಡಿಗ್ರಿ ಸೆಲ್ಸಿಯಸ್, ವಿಜಯಪುರ 30ಡಿಗ್ರಿ ಸೆಲ್ಸಿಯಸ್, ರಾಯಚೂರು 30, ಡಿಗ್ರಿ ಸೆಲ್ಸಿಯಸ್, ಗದಗ 30ಡಿಗ್ರಿ ಸೆಲ್ಸಿಯಸ್, ಹಾಸನ 30 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಉಳಿದಂತೆ ಬೇರೆ ಬೆರೆ ಕಡೆಗಳಲ್ಲಿ ಹೆಚ್ಚಿನ ಬಿಸಿಲು ದಾಖಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+