ಐಎಂಎ ಹಗರಣ : 300 ಕೆಜಿ ಚಿನ್ನದ ಬಿಸ್ಕತ್ ಬಗ್ಗೆ ವರದಿ ಕೇಳಿದ ಕೋರ್ಟ್
ಬೆಂಗಳೂರು, ಆಗಸ್ಟ್ 29 : ಐಎಂಎ ಹಗರಣದ ತನಿಖೆ ವೇಳೆ ವಶಕ್ಕೆ ಪಡೆದಿರುವ ಚಿನ್ನದ ಬಿಸ್ಕತ್‌ಗಳ ಕುರಿತು ವರದಿ ನೀಡುವಂತೆ ಎಸ್‌ಐಟಿಗೆ ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ. ಒಟ್ಟು 303 ಕೆಜಿ ತೂಕದ ಬಿಸ್ಕೆಟ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
ಐಎಂಎ ಹಗರಣದ ಕುರಿತು ಕರ್ನಾಟಕ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ. ಎಸ್. ಓಕಾ ಹಾಗೂ ನ್ಯಾಯಮೂರ್ತಿ ಪಿ. ಎಂ. ನವಾಜ್ ಅವರಿಗೆ ವಿಭಾಗೀಯ ಪೀಠ ಆದೇಶ ನೀಡಿದೆ.

ತನಿಖೆಯ ವೇಳೆ ವಶಕ್ಕೆ ಪಡೆದಿರುವ 303 ಕೆಜಿ ತೂಕದ 5008 ಬಂಗಾರದ ಬಿಸ್ಕತ್‌ಗಳ ಬಗ್ಗೆ ಸಮಗ್ರವಾದ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿ ಎಂದು ಎಸ್‌ಐಟಿಗೆ ಹೈಕೋರ್ಟ್ ಸೂಚನೆ ಕೊಟ್ಟಿದೆ.
ಅರ್ಜಿಯ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, "ಎಸ್‌ಐಟಿ ತನಿಖೆ ನಡೆಸುವಾಗ ಮನ್ಸೂರ್ ಖಾನ್ ಬಳಿಯಿಂದ ಚಿನ್ನದ ಬಿಸ್ಕತ್ ವಶಪಡಿಸಿಕೊಂಡಿದೆ ಎಂದು ಮಾಧ್ಯಮದಲ್ಲಿ ವರದಿಯಾಗಿದೆ. ಈ ಕುರಿತು ಎಸ್‌ಐಟಿ ನ್ಯಾಯಾಲಯಕ್ಕೆ ವಿವರಣೆ ನೀಡಬೇಕು" ಎಂದು ವಾದ ಮಂಡಿಸಿದರು.
ಆದ್ದರಿಂದ, ಎಸ್‌ಐಟಿಗೆ ಚಿನ್ನದ ಬಿಸ್ಕತ್ ಕುರಿತು ವರದಿ ನೀಡುವಂತೆ ಮುಖ್ಯ ನ್ಯಾಯಮೂರ್ತಿಗಳು ಸೂಚನೆ ನೀಡಿದರು. ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ 16ಕ್ಕೆ ಮುಂದೂಡಲಾಗಿದೆ.
ಮತ್ತೊಂದು ಕರ್ನಾಟಕ ಸರ್ಕಾರ ಐಎಂಎ ಹಗರಣದ ತನಿಖೆಯನ್ನು ಸಿಬಿಐಗೆ ನೀಡುವುದಾಗಿ ಘೋಷಣೆ ಮಾಡಿದೆ. ಮುಖ್ಯ ನ್ಯಾಯಮೂರ್ತಿಗಳು ಸಿಬಿಐ ತನಿಖೆ ಆರಂಭವಾಗಿದೆಯೇ? ಎಂದು ಪ್ರಶ್ನಿಸಿದರು. ಸಿಬಿಐ ತನಿಖೆ ಆರಂಭವಾಗಿಲ್ಲ ಎಂದು ವಕೀಲ ಪಿ.ಪ್ರಸನ್ನ ಕುಮಾರ್ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.












Click it and Unblock the Notifications