ಬೇರುಮಟ್ಟದಿಂದಲೇ ಮರಳು ದಂಧೆಗೆ ಕಡಿವಾಣ

ಬೆಂಗಳೂರು, ನ.22: ರಾಜ್ಯದಲ್ಲಿ ಸತತ ಪ್ರವಾಸ ಕೈಗೊಂಡು ಜ್ವರದಿಂದ ಬಳಲುತ್ತಿದ್ದರೂ ಸಂಪುಟ ಸಭೆ ನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಡಳಿತಕ್ಕೆ ಚುರುಕುಮುಟ್ಟಿಸಲು ತಮ್ಮ ಸಂಪುಟ ಸಹೋದ್ಯೋಗಿಗಳೊಡಗೂಡಿ ಒಂದಷ್ಟು ಪರಿಣಾಮಕಾರಿ ನಿರ್ಣಯಗಳನ್ನು ತೆಗೆದುಕೊಂಡಿದ್ದಾರೆ.

ಮುಖ್ಯವಾಗಿ ಮರಳು ದಂಧೆ ತಡೆಯಲು ಪರಿಷ್ಕೃತ ನೀತಿ ಜಾರಿಗೆ ಮುಂದಾಗಿದ್ದು, ಅಕ್ರಮ ಮರಳುಗಾರಿಕೆಯನ್ನು ಕಗ್ನೆಸಿಬಲ್ ಅಪರಾಧ ಅಂದರೆ ಶಿಕ್ಷಾರ್ಹ ಗಂಭೀರ ಅಪರಾಧವನ್ನಾಗಿ ಪರಿಗಣಿಸಲಾಗಿದೆ.

ಇನ್ನು ಸಿಐಡಿ ಸಬ್ ಇನ್ಸ್ ಪೆಕ್ಟರ್ ಹುದ್ದೆಗಳಿಗೆ ಟೆಕ್ಕಿಗಳನ್ನು ನೇಮಕ ಮಾಡಿಕೊಳ್ಳುವುದಕ್ಕೂ ಸಂಪುಟ ಅಸ್ತು ಅಂದಿದೆ. ಸಿಐಡಿಯಲ್ಲಿ ಖಾಲಿ ಇರುವ 34 ಹುದ್ದೆಗಳನ್ನು ಭರ್ತಿ ಮಾಡುವ ಸಂಬಂಧ ಕರ್ನಾಟಕ ರಾಜ್ಯ ಪೊಲೀಸ್ ಸೇವೆಗಳು (ಸಿಐಡಿ) (ನೇಮಕಾತಿ) ನಿಯಮಗಳು 1994ಕ್ಕೆ ತಿದ್ದುಪಡಿ ತಂದು ಈ ನೇಮಕಾತಿ ಮಾಡಿಕೊಳ್ಳಲಾಗುವುದು. ಸಿಐಡಿ ಅಧಿಕಾರಿ ಹುದ್ದೆಗೆ ಕಾನೂನು ಪದವೀಧರರು ಹಾಗೂ ಸೈಬರ್ ಅಪರಾಧ ಪತ್ತೆಗೆ ಅನುಕೂಲ ಆಗುವಂತೆ ಮಾಹಿತಿ ತಂತ್ರಜ್ಞಾನ ವಿಷಯದಲ್ಲಿ ಪದವಿ ಪಡೆದವರನ್ನು ಪರಿಗಣಿಸಲಾಗುವುದು.

ಅಕ್ರಮ ಮರಳು ಗಣಿಗಾರಿಕೆ ನಿಯಂತ್ರಣಕ್ಕೆ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸಮಿತಿಗಳನ್ನು ರಚಿಸಿ ಬೇರುಮಟ್ಟದಿಂದ ಮರಳು ದಂಧೆಗೆ ಕಡಿವಾಣ ಹಾಗುವ ದಿಟ್ಟ ಕ್ರಮವನ್ನು ರಾಜ್ಯ ಸಂಪುಟ ಕೈಗೊಂಡಿದೆ. ಪರಿಸರಕ್ಕೆ ಧಕ್ಕೆಯಾಗದಂತೆ ವೈಜ್ಞಾನಿಕವಾಗಿ ಮರಳು ತೆಗೆಯುವ ಸಂಬಂಧ ಜಿಲ್ಲಾ ಮಟ್ಟದಲ್ಲಿ ಡಿಸಿ ಮತ್ತು ತಾಲೂಕು ಮಟ್ಟದಲ್ಲಿ ಎಸಿ ಅಧ್ಯಕ್ಷತೆಯಲ್ಲಿ ಮರಳು ನಿರ್ವಹಣಾ ಸಮಿತಿಗಳು ಅಸ್ತಿತ್ವಕ್ಕೆ ಬರಲಿವೆ. ಸದ್ಯದಲ್ಲೇ ಈ ಸಂಬಂಧ ಪರಿಷ್ಕೃತ ನೂತನ ಮರಳು ನೀತಿಗೆ ಅಧಿಸೂಚನೆ ಹೊರಬೀಳಲಿದೆ.

ಆದರೆ ಜಲ್ಲಿ ಕಲ್ಲು ಗಣಿಗಾರಿಕೆಗೆ ವಿಧಿಸಲಾಗಿದ್ದ ಬಿಗಿ ನಿಯಮಗಳನ್ನು ಸಡಿಲಿಸಿರುವ ಸರಕಾರ ಕ್ರಷರ್ ಮಾಲೀಕರನ್ನು ಸಂತೃಪ್ತಗೊಳಿಸಿದೆ. ಸಂಪುಟ ಸಭೆ ಮುಗಿಯುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಅವರು ತಮ್ಮೆಲ್ಲ ಅಧಿಕೃತ ಕಾರ್ಯಕ್ರಮಗಳನ್ನು ರದ್ದುಗೊಳಿಸಿ, ವಿಶ್ರಾಂತಿ ಪಡೆಯಲು ಮನೆಗೆ ತೆರಳಿದರು. ಇನ್ನೆರೆಡು ದಿನಗಳಲ್ಲಿ ಬೆಳಗಾವಿ ವಿಧಾನಮಂಡಲ ಅಧಿವೇಶನದಲ್ಲಿ ಪಾಲ್ಗೊಳ್ಳುವ ಜರೂರತ್ತು ಇರುವುದರಿಂದ ಸಿಎಂ ಸಿದ್ದು ಅಗತ್ಯ ವಿಶ್ರಾಂತಿ ಬಯಸಿದ್ದಾರೆ.

ಸಭೆಯ ಬಳಿಕ ರಾಜ್ಯ ಸಚಿವ ಸಂಪುಟದ ನಿರ್ಣಯಗಳನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿಬಿ ಜಯಚಂದ್ರ ಅವರು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು. ಮುಖ್ಯಾಂಶಗಳು ಹೀಗಿವೆ:

ಅಹಿಂದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಹಾಸ್ಟೆಲ್‌

ಅಹಿಂದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಹಾಸ್ಟೆಲ್‌

ಅಹಿಂದ ವರ್ಗಕ್ಕೆ ಸೇರಿದ ಇಂಜಿನಿಯರಿಂಗ್‌, ವೈದ್ಯ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಹಾಸ್ಟೆಲ್‌. ಇಂಜಿನಿಯರಿಂಗ್ ಹಾಗೂ ವೈದ್ಯ ವಿದ್ಯಾರ್ಥಿಗಳಿಗೆ ಜಿಲ್ಲೆಗೊಂದು ಪ್ರತ್ಯೇಕ ಹಾಸ್ಟೆಲ್ ನಿರ್ಮಾಣ. ವಿದ್ಯಾರ್ಥಿನಿಯರಿಗಾಗಿ ಪ್ರತ್ಯೇಕ ಹಾಸ್ಟೆಲ್. ಪ್ರತಿ ಹಾಸ್ಟೆಲಿನಲ್ಲಿ ನೂರು ಮಂದಿ ಬಡ ವಿದ್ಯಾರ್ಥಿಗಳಿಗೆ ಪ್ರವೇಶ ಅವಕಾಶ ನೀಡಲಾಗುವುದು. ಇದಕ್ಕಾಗಿ ಒಟ್ಟು 13.57 ಕೋಟಿ ರೂ. ವೆಚ್ಚ ಮಾಡಲಾಗುವುದು.

ಬೋಧಕ ವರ್ಗಕ್ಕೆ ಹೆಚ್ಚುವರಿ ಅನುದಾನ

ಬೋಧಕ ವರ್ಗಕ್ಕೆ ಹೆಚ್ಚುವರಿ ಅನುದಾನ

* ಈಗಾಗಲೇ ಅತಿಥಿ ಉಪನ್ಯಾಸಕರ ಆಯ್ಕೆಗೆ ಅನುಮೋದನೆ ನೀಡಲಾಗಿದ್ದು, ಅವರಿಗೆ ಗೌರವಧನ ನೀಡಲು 61.16 ಕೋಟಿ ರೂ. ಹೆಚ್ಚುವರಿ ಅನುದಾನ ಮಂಜೂರು ಮಾಡಲು ಒಪ್ಪಿಗೆ.
* ಪಿಂಚಣಿ ಸೌಲಭ್ಯ : ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿರುವ ಬೋಧಕೇತರ ನೌಕರರಿಗೆ ಪಿಂಚಣಿ ಸೌಲಭ್ಯ ನೀಡುವ ಸಂಬಂಧ ಪರಿಶೀಲಿಸಲು ಸಂಪುಟ ಉಪ ಸಮಿತಿ ರಚಿಸಲಾಗಿದೆ. ಪಿಂಚಣಿ ಸೌಲಭ್ಯ ನೀಡಲು 2,000 ಕೋಟಿ ರೂ. ಬೇಕಾಗುತ್ತದೆ. ಈ ವಿಷಯ ಹೈಕೋರ್ಟಿನಲ್ಲಿದೆ. ಸಂಪುಟ ಉಪ ಸಮಿತಿ ವರದಿ ನೀಡಿದ ಬಳಿಕ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು. ಅದೇ ರೀತಿ ಪ್ರಾಥಮಿಕ ಶಾಲೆಗಳಲ್ಲಿ 25 ವರ್ಷಗಳಿಂದ ಗೌರವ ಶಿಕ್ಷಕರಾಗಿ ಕೆಲಸ ಮಾಡುತ್ತಿರುವ 161 ಶಿಕ್ಷಕರ ಸೇವೆ ಕಾಯಂಗೊಳಿಸುವ ಕುರಿತು ಸಂಪುಟ ಉಪ ಸಮಿತಿ ಪರಿಶೀಲಿಸಿ ವರದಿ ನೀಡಲಿದೆ.

ಉಪನ್ಯಾಸಕರಿಗೆ 61 ಕೋಟಿ ರೂ

ಉಪನ್ಯಾಸಕರಿಗೆ 61 ಕೋಟಿ ರೂ

* ಉಪನ್ಯಾಸಕರ ಗೌರವಧನಕ್ಕೆ 61 ಕೋಟಿ ರೂ: 2013-14ನೇ ಸಾಲಿನಲ್ಲಿ ಪದವಿ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಇವರಿಗೆ ಗೌರವಧನ ಪಾವತಿಸಲು 61.16 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದೆ. ಸ್ನಾತಕೋತ್ತರ ಪದವಿ ಪಡೆದ ಉಪನ್ಯಾಸಕರಿಗೆ ಮಾಸಿಕ 8,000 ರೂ. ಎಂ.ಫಿಲ್, ಪಿಎಚ್‌.ಡಿ ಹಾಗೂ ನೆಟ್ ಪಾಸು ಮಾಡಿದವರಿಗೆ ಮಾಸಿಕ 10,000 ರೂ. ವೇತನ ನೀಡಲಾಗುತ್ತಿದೆ.

 ಬಸವ ವಸತಿ ಯೋಜನೆ ಚುರುಕು

ಬಸವ ವಸತಿ ಯೋಜನೆ ಚುರುಕು

* ವಸತಿ ಯೋಜನೆ: ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಬಸವ ವಸತಿ ಯೋಜನೆಯಡಿ 12 ಲಕ್ಷ ಮನೆಗಳನ್ನು ಮಂಜೂರು ಮಾಡಲಾಗಿತ್ತು. ಇದರಲ್ಲಿ ಆರು ಲಕ್ಷ ಫಲಾನುಭವಿಗಳಿಗೆ ಮನೆಗಳಿಗೆ ಕಾಮಗಾರಿ ಆರಂಭಗೊಂಡರೂ ಹಣ ಬಿಡುಗಡೆ ಮಾಡಿಲ್ಲ. ಕೆಲಸ ತಳಪಾಯ ಮಟ್ಟದಲ್ಲೇ ಸ್ಥಗಿತಗೊಂಡಿದೆ. ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡಲು 1241.80 ಕೋಟಿ ರೂ. ಬೇಕಿದೆ. ಇದಕ್ಕಾಗಿ ಹುಡ್ಕೋದಿಂದ ಸಾಲ ಪಡೆಯಲು ಸಂಪುಟ ಸಭೆ ನಿರ್ಣಯ ಕೈಗೊಂಡಿದೆ.
* ಬಸವ ವಸತಿ ಯೋಜನೆಯಡಿ 6 ಲಕ್ಷ ಮನೆಗಳ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲು 1241.80 ರೂ. ಬಿಡುಗಡೆಗೆ ನಿರ್ಣಯ ಕೈಗೊಳ್ಳಲಾಗಿದೆ.

ಚೀಲನಹಳ್ಳಿಯಲ್ಲಿ ಅತ್ಯಾಧುನಿಕ ಕಸಾಯಿಖಾನೆ

ಚೀಲನಹಳ್ಳಿಯಲ್ಲಿ ಅತ್ಯಾಧುನಿಕ ಕಸಾಯಿಖಾನೆ

* ಕಸಾಯಿ ಖಾನೆ : ತುಮಕೂರು ಜಿಲ್ಲೆ ಶಿರಾ ತಾಲೂಕಿನ ಕಸಬಾ ಹೋಬಳಿ ಚೀಲನಹಳ್ಳಿಯಲ್ಲಿ ಅತ್ಯಾಧುನಿಕ ಕಸಾಯಿಖಾನೆ ನಿರ್ಮಾಣ ಮಾಡಲು ಒಪ್ಪಿಗೆ ನೀಡಲಾಗಿದೆ. ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ಈ ಕಸಾಯಿಖಾನೆ ಸ್ಥಾಪಿಸಲಿದೆ. ಇದಕ್ಕಾಗಿ 20 ಎಕರೆ ಜಮೀನು ನೀಡಲಾಗುವುದು.

ಪಡುಬಿದ್ರೆ-ಚಿಕ್ಕಲಗೋಡು ರಸ್ತೆಯಿನ್ನು ನಾಲ್ಕು ಪಥ

ಪಡುಬಿದ್ರೆ-ಚಿಕ್ಕಲಗೋಡು ರಸ್ತೆಯಿನ್ನು ನಾಲ್ಕು ಪಥ

* ತೀರ್ಥಹಳ್ಳಿ ಪಟ್ಟಣದಲ್ಲಿ ಪಡುಬಿದ್ರೆ-ಚಿಕ್ಕಲಗೋಡು ರಸ್ತೆಯನ್ನು ನಾಲ್ಕು ಪಥ ರಸ್ತೆಯಾಗಿ ಅಭಿವೃದ್ಧಿಪಡಿಸಲು 10 ಲಕ್ಷ ರೂ. ವೆಚ್ಚ ಮಾಡಲು ಒಪ್ಪಿಗೆ ನೀಡಲಾಗಿದೆ. ಬೆಂಗಳೂರು ನಗರ ಸಂಚಾರ ಅಭಿವೃದ್ಧಿ ಯೋಜನೆಯನ್ನು 2013-14ನೇ ಸಾಲಿನಲ್ಲಿ ಮುಂದುವರಿಸಲು ಹಾಗೂ 11 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಮುಂದುವರಿಸಲು ಅನುಮತಿ ನೀಡಲಾಗಿದೆ.

ಕೋಳಿಹಳ್ಳಿ - ಸಂಗಾಪುರದಲ್ಲಿ ತೋಟಗಾರಿಕೆ ಸಂಶೋಧನೆ

ಕೋಳಿಹಳ್ಳಿ - ಸಂಗಾಪುರದಲ್ಲಿ ತೋಟಗಾರಿಕೆ ಸಂಶೋಧನೆ

* ತುಮಕೂರು ಜಿಲ್ಲೆ ಕೋಳಿಹಳ್ಳಿ ಮತ್ತು ಸಂಗಾಪುರ ಗ್ರಾಮದಲ್ಲಿ 25 ಎಕರೆ ಜಮೀನನ್ನು ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಗೆ ನೀಡಲಾಗುವುದು. ಕೃಷಿ ವಿವಿಗಳಲ್ಲಿ ವ್ಯವಸ್ಥಾಪನಾ ಮಂಡಳಿ ಸದಸ್ಯರ ಸಂಖ್ಯೆಯನ್ನು 22ರಿಂದ 13ಕ್ಕೆ ಇಳಿಸಲು ಕೃಷಿ ವಿವಿ ಕಾಯಿದೆ 2009ರ ಕಲಂ 12ಕ್ಕೆ ತಿದ್ದುಪಡಿ ತರಲು ತೀರ್ಮಾನಿಸಲಾಗಿದೆ.

ನೆಲಮಾಕನಹಳ್ಳಿಯಲ್ಲಿ ಬೀಜೋತ್ಪಾದನೆ ಕೇಂದ್ರ

ನೆಲಮಾಕನಹಳ್ಳಿಯಲ್ಲಿ ಬೀಜೋತ್ಪಾದನೆ ಕೇಂದ್ರ

* ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿ ನಂದಿ ಹೋಬಳಿಯ ನೆಲಮಾಕನಹಳ್ಳಿಯಲ್ಲಿ ಬೀಜೋತ್ಪಾದನೆ ಕೇಂದ್ರದ ಸರಕಾರಿ ಗೋಮಾಳದಲ್ಲಿ 84.1 ಎಕರೆಯನ್ನು ಬೆಂಗಳೂರು ಕೃಷಿ ವಿವಿಗೆ ಬೇಸಾಯ ಹಾಗೂ ಬೀಜೋತ್ಪಾದನೆ ಸಂಶೋಧನೆ ನಡೆಸಲು ಹಸ್ತಾಂತರಿಸಲಾಗುವುದು.

ಗದಗ-ಬೆಟಗೇರಿ ಅವಳಿ ನಗರಗಳಿಗೆ ನೀರು ಸರಬರಾಜು

ಗದಗ-ಬೆಟಗೇರಿ ಅವಳಿ ನಗರಗಳಿಗೆ ನೀರು ಸರಬರಾಜು

* ಗದಗ-ಬೆಟಗೇರಿ ಅವಳಿ ನಗರಗಳಿಗೆ ನೀರು ಸರಬರಾಜು ಕಾಮಗಾರಿಗಳ 30.25 ಕೋಟಿ ರೂ. ಹೆಚ್ಚುವರಿ ಹಣಕಾಸು ಹಂಚಿಕೆಗೆ ಅನುಮೋದನೆ ನೀಡಲು ಒಪ್ಪಿಗೆ. ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನೆ ಕಾಯಿದೆ 1961ರ ಕಲಂ 68-ಸಿ ಮತ್ತು 68-ಡಿಗೆ ಸೂಕ್ತ ತಿದ್ದುಪಡಿ ತರಲು ಒಪ್ಪಿಗೆ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+