ಅಕ್ರಮ ಆಸ್ತಿಗಳಿಕೆ : ಚಿಂಚನಸೂರ್ ವಿರುದ್ಧ ತನಿಖೆಗೆ ಆದೇಶ

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 22 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದ ಸಚಿವರೊಬ್ಬರ ವಿರುದ್ಧ ಅಕ್ರಮ ಆಸ್ತಿಗಳಿಕೆ ಆರೋಪ ಕೇಳಿಬಂದಿದೆ. ಸಚಿವ ಬಾಬೂರಾವ್ ಚಿಂಚನಸೂರ್ ಅವರ ವಿರುದ್ಧ ತನಿಖೆ ನಡೆಸಲು ಲೋಕಾಯುಕ್ತ ವಿಶೇಷ ಕೋರ್ಟ್ ಆದೇಶ ನೀಡಿದೆ.

ಶುಕರವಾರ ಲೋಕಾಯುಕ್ತ ಕೋರ್ಟ್ ಜವಳಿ ಸಚಿವ ಬಾಬೂರಾವ್ ಚಿಂಚನಸೂರ್ ಅವರ ವಿರುದ್ಧ ತನಿಖೆ ನಡೆಸಲು ಆದೇಶ ನೀಡಿದೆ. ಶಾಂತಪ್ಪ ಎಂಬುವವರು ಸಚಿವರ ವಿರುದ್ಧ ಅಕ್ರಮ ಆಸ್ತಿಗಳಿಗೆ ದೂರು ನೀಡಿದ್ದರು. ದೂರಿನ ಅನ್ವಯ ತನಿಖೆ ನಡೆಸಲು ಕೋರ್ಟ್ ಸೂಚಿಸಿದೆ. [ಆಸೆ ತೋರಿಸಿ ಮೋಸ ಮಾಡಿದ ಚಿಂಚನಸೂರ್ : ಆರೋಪ]

baburao chinchansur

2012ರಲ್ಲಿಯೂ ಬಾಬೂರಾವ್ ಚಿಂಚನಸೂರ್ ಅವರ ವಿರುದ್ಧ ಅಕ್ರಮ ಆಸ್ತಿಗಳಿಕೆ ದೂರು ದಾಖಲಾಗಿತ್ತು. ಆಗ ಅವರು ಹೈಕೋರ್ಟ್ ಮೆಟ್ಟಿಲೇರಿ ತನಿಖೆಗೆ ತಡೆಯಾಜ್ಞೆ ತಂದಿದ್ದರು. ಈಗ ಲೋಕಾಯುಕ್ತ ಕೋರ್ಟ್ ಮತ್ತೊಮ್ಮೆ ಅವರ ವಿರುದ್ಧ ತನಿಖೆ ನಡೆಸಲು ಆದೇಶ ನೀಡಿದೆ. [ಸಿಎಂ ಸುಳ್ಳು ಮಾಹಿತಿ ಕೊಟ್ಟು ಆಸ್ತಿ ನೋಂದಣಿ ಮಾಡಿಸಿದ್ರಂತೆ]

ಹಿಂದೆ ವಂಚನೆ ಆರೋಪ ಕೇಳಿಬಂದಿತ್ತು : ಬಾಬೂರಾವ್ ಚಿಂಚನಸೂರ್ ಅವರು ಯಾದಗಿರಿ ಜಿಲ್ಲೆಯ ಗುರುಮಠಕಲ್ ಕ್ಷೇತ್ರದ ಕಾಂಗ್ರೆಸ್ ಶಾಸಕರು. ಚಿಂಚನಸೂರ್ ಅವರು ವಿವಾದಕ್ಕೆ ಸಿಲುಕುತ್ತಿರುವುದು ಇದೇ ಮೊದಲಲ್ಲ. ಆಂಧ್ರಪ್ರದೇಶದಲ್ಲಿ ಎಂ.ಎಲ್.ಸಿ ಮಾಡುವುದಾಗಿ ಹೇಳಿ ಲಕ್ಷಗಟ್ಟಲೆ ಹಣ ಪಡೆದು, ವಂಚಿಸಿದ್ದಾರೆ ಎಂದು ಹೈದರಾಬಾದ್ ಮೂಲದ ಡಿ.ವಿಜಯಪಾಲರೆಡ್ಡಿ ಎಂಬುವವರು ಹಿಂದೆ ಸಚಿವರ ವಿರುದ್ಧ ಗಂಭೀರ ಆರೋಪ ಮಾಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Lokayukta special court on Friday ordered for probe against Karnataka Textile Minister Baburao Chinchansur in illegal asset case. Shantappa field case against minister in court.
Please Wait while comments are loading...