ವಿಜ್ಞಾನಿಗಳಿಂದ ಗೌರಿಬಿದನೂರಿನಲ್ಲಿ ಡ್ರೋನ್ ಮೂಲಕ ಬೀಜ ಬಿತ್ತನೆ

ಬಂಜರು ಭೂಮಿಗಳನ್ನು ಹಸಿರಾಗಿಸಲು ಐಐಎಸ್ ಸಿ ವಿಜ್ಞಾನಿಗಳಿಂದ ಹೊಸ ತಂತ್ರಗಾರಿಕೆ. ಡ್ರೋನ್ ಮೂಲಕ ಬೀಜ ಬಿತ್ತನೆಯ ಹೊಸ ಪ್ರಯೋಗ. ಆರಂಭಿಕ ಹಂತದಲ್ಲಿ ಗೌರಿಬಿದನೂರಿನಲ್ಲಿ ಈ ಪ್ರಯೋಗ ಜಾರಿ.

ಬೆಂಗಳೂರು, ಜೂನ್ 24: ಬರಡು ನೆಲಗಳಲ್ಲಿ ಏಕ ಕಾಲಕ್ಕೆ ಅತಿ ಹೆಚ್ಚು ಬೀಜಗಳನ್ನು ಬಿತ್ತುವ ಮೂಲಕ, ಅರಣ್ಯ ಬೆಳೆಸುವ ಹೊಸ ಪ್ರಯೋಗಾತ್ಮಕ ಕೈಂಕರ್ಯಕ್ಕೆ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ ಸಿ) ವಿಜ್ಞಾನಿಗಳು ಕೈ ಹಾಕಿದ್ದಾರೆ. ಈ ಯೋಜನೆಗೆ 'ಸೀಡ್ ಬಾಂಬಿಂಗ್' ಎಂದು ಹೆಸರಿಡಲಾಗಿದೆ.

ಐಐಎಸ್ ಸಿ, ರಾಜ್ಯ ಸರ್ಕಾರ ಹಾಗೂ ಎಚ್ ಎನ್ ಸೆಂಟರ್ (ವೈಜ್ಞಾನಿಕ ಕೇಂದ್ರ) ಗಳ ಪರಸ್ಪರ ಸಹಕಾರದಿಂದ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.

IISc Scientists started Seed Bombing in Gauribidanur

ಇದರ ಪ್ರಾಥಮಿಕ ಹೆಜ್ಜೆಯಾಗಿ, ಗೌರಿಬಿದನೂರಿನಲ್ಲಿ ಡ್ರೋನ್ ಗಳ ಮೂಲಕ ನಿರ್ದಿಷ್ಟ ಪ್ರದೇಶದಲ್ಲಿ ಏಕಕಾಲದಲ್ಲಿ ಬೀಜ ನೆಡುವ ಕಾರ್ಯಕ್ರಮವನ್ನು ವಿಶ್ವ ಪರಿಸರ ದಿನವಾದ ಜೂನ್ 2ರಂದು ಹಮ್ಮಿಕೊಳ್ಳಲಾಗಿತ್ತು. ಆನಂತರ ಕೊಂಚ ಮಳೆ ಬಂದಿದ್ದರಿಂದ ಈ ಪ್ರಯೋಗಕ್ಕೆ ಹೊಸ ಯಶಸ್ಸು ತರುವ ನಿರೀಕ್ಷೆ ಹುಟ್ಟಿಸಿದೆ.

ಇನ್ನು, ಈ ಪ್ರದೇಶಕ್ಕೆ ಬೋರ್ ವೆಲ್ ಗಳ ಮೂಲಕ ನೀರು ಹಾಯಿಸಿದರೆ, ಆ ಬರಡು ನೆಲಗಳು ಕೆಲವೇ ತಿಂಗಳುಗಳಲ್ಲಿ ಹಸಿರಾಗಿ ಕೆಲವೇ ವರ್ಷಗಳಲ್ಲಿ ಪುಟ್ಟ ಅರಣ್ಯಗಳಾಗಿ ಮಾರ್ಪಾಟು ಹೊಂದುತ್ತವೆ. ಇದರಿಂದ ಆ ಪ್ರದೇಶಗಳಲ್ಲಿನ ಹವಾಮಾನ, ನೀರಿನ ವ್ಯವಸ್ಥೆಗೆ ಹೊಸ ಆಯಾಮ ಕೊಟ್ಟಂತಾಗುತ್ತದೆ ಎಂಬುದು ವಿಜ್ಞಾನಿಗಳ ತರ್ಕ.

ಈ ನ್ಯೂಸ್ ಮಿನಟ್ ಗೆ ನೀಡಿರುವ ಹೇಳಿಕೆಯಲ್ಲಿ, ವಿಜ್ಞಾನಿಗಳ ತಂಡದಲ್ಲೊಬ್ಬರಾದ ಪ್ರೊಫೆಸರ್ ರೆಡ್ಡಿಯವರು, ಗೌರಿ ಬಿದನೂರು ಬಳಿಯ ಬಂಜರು ನೆಲವು ನಿಜ ಅರ್ಥದಲ್ಲಿ ಫಲವತ್ತಾಗಿದೆ. ಆದರೆ, ನೀರಿನ ಕೊರತೆ ಇರುವ ಕಾರಣದಿಂದಾಗಿ ಅದು ಬರಡಾಗಿದೆ. ಈ ಪ್ರದೇಶದಲ್ಲಿ ನೀರು ಬೇಕೆಂದರೆ ಸುಮಾರು 1000 ಅಡಿಗಳಷ್ಟು ಭೂಮಿಯನ್ನು ಕೊರೆಯಬೇಕಿದೆ ಎಂದಿದ್ದಾರೆ.

ಹಾಗಾಗಿ, ಸೀಡ್ ಬಾಂಬಿಂಗ್ ಆದ ನಂತರ, ಬೋರ್ ವೆಲ್ ಗಳನ್ನು ಕೊರೆಯಿಸಿ ಈ ಪ್ರದೇಶಗಳಲ್ಲಿ ನೀರನ್ನು ಹರಿಯಿಸಿ, ಇಲ್ಲಿ ಅರಣ್ಯ ಬೆಳವಣಿಗೆಗೆ ಪ್ರಾಶಸ್ತ್ರ್ಯವಾದ ವಾತಾವರಣ ಕಲ್ಪಿಸಲಾಗುವುದು ಎಂದು ರೆಡ್ಡಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+