ನನ್ನನ್ನು ಜೋಕರ್ ಎನ್ನುವ ಸಿದ್ರಾಮಣ್ಣ ಒಬ್ಬ ಬ್ರೋಕರ್; ಕಪ್ಪಕಾಣಿಕೆ ಕೊಟ್ಟೇ ಅವರು ಸಿಎಂ ಆಗಿದ್ದಾರೆ: ಕಟೀಲ್
ಕೊಪ್ಪಳ,ಫೆಬ್ರವರಿ14: ನನ್ನನ್ನು ಜೋಕರ್ ಎನ್ನುವ ಸಿದ್ರಾಮಣ್ಣ ಒಬ್ಬ ಬ್ರೋಕರ್ ಎಂದು ಟೀಕಿಸಿದರು. ಕಪ್ಪಕಾಣಿಕೆ ಕೊಟ್ಟೇ ಅವರು ಸಿಎಂ ಆಗಿದ್ದಾರೆ. ಕರ್ನಾಟಕವನ್ನು ಎಟಿಎಂ ಮಾಡಲು ಕಾಂಗ್ರೆಸ್ ಬಯಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಿಸಿದರು.
ಈ ಕುರಿತು ಮಾತನಾಡಿದ ಅವರು, ಸಿದ್ರಾಮಣ್ಣನವರು ಸೋನಿಯಾ ಗಾಂಧಿ ಕಾಲು ಹಿಡಿದು ಸಿಎಂ ಹುದ್ದೆ ಪಡೆದವರು. ದೇವೇಗೌಡರ ಶಿಷ್ಯನಾಗಿ ಎತ್ತರಕ್ಕೆ ಏರಿದ ನೀವು ಅದೇ ದೇವೇಗೌಡರಿಗೆ ತುಳಿದಿರಲ್ಲವೇ ಎಂದು ಸಿದ್ದರಾಮಯ್ಯ ಅವರನ್ನ ಪ್ರಶ್ನಿಸದ್ದಾರೆ. ನೀವು ಸೋನಿಯಾ ಭಿಕ್ಷೆಯಿಂದ ಮುಖ್ಯಮಂತ್ರಿ ಆಗಿದ್ದರೆ, ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಜನರ ಬೆಂಬಲದಿಂದ ಮುಖ್ಯಮಂತ್ರಿ ಆದರು ಎಂದರು.
ನಾನು ಸಿದ್ರಾಮಣ್ಣ ಮತ್ತೆ ಸಿಎಂ ಆಗುವುದಿಲ್ಲ ಎಂದು ಆಣೆ ಹಾಕಿ ಹೇಳುತ್ತೇನೆ. ಅವರನ್ನು ಬಾದಾಮಿಯಲ್ಲಿ ಓಡಿಸಿದ್ದಾರೆ. ವರುಣಾದಲ್ಲಿ ಬಂದರೆ ಜಾಗ್ರತೆ ಎಂದಿದ್ದಾರೆ. ಕೋಲಾರದಲ್ಲಿ ಮುನಿಯಪ್ಪ ಮುನಿಸಿಕೊಂಡಿದ್ದಾರೆ. ಸಿದ್ರಾಮಣ್ಣನಿಗೆ ಜಾಗ ಇಲ್ಲವಾಗಿದೆ. ಮೋದಿಯವರನ್ನು ಜಗತ್ತು ಅಪ್ಪಿಕೊಂಡಿದೆ; ಒಪ್ಪಿಕೊಂಡಿದೆ. ಅವರು ಹೋದಲ್ಲೆಲ್ಲ ಬಿಜೆಪಿಗೆ ಗೆಲುವಾಗುತ್ತಿದೆ. ರಾಹುಲ್ ಗಾಂಧಿ, ಸಿದ್ರಾಮಣ್ಣ ಹೋದಲ್ಲೆಲ್ಲ ಕಾಂಗ್ರೆಸ್ ಮುಕ್ತ ಪ್ರದೇಶವಾಗುತ್ತದೆ ಎಂದು ನುಡಿದರು. ಸಿದ್ರಾಮಣ್ಣ ತಾಕತ್ತಿದ್ದರೆ ಬಾದಾಮಿಯಲ್ಲಿ ಸ್ಪರ್ಧಿಸಲಿ. ಜನ ಏನು ಮಾಡುತ್ತಾರೆಂದು ನೋಡಿ ಎಂದು ಸವಾಲೆಸೆದರು.

ಕಾಂಗ್ರೆಸ್ ಜೈಲಿನ ಸಂಸ್ಕಾರ ಉಳ್ಳ ಕಳ್ಳರ ಪಕ್ಷ. 9 ವರ್ಷಗಳ ಕಾಲ ಮೋದಿಜಿ ಸರಕಾರದಲ್ಲಿ ಒಂದೇ ಒಂದು ಭ್ರಷ್ಟಾಚಾರದ ಆರೋಪ ಇಲ್ಲ. ಕರ್ನಾಟಕದಲ್ಲಿ ಪರಿವರ್ತನೆಯ ಗಾಳಿ ಬೀಸುತ್ತಿದೆ. ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಗಾಗಿ ಬಿಜೆಪಿಯನ್ನು ಬೆಂಬಲಿಸಿ ಎಂದು ಮನವಿ ಮಾಡಿದರು. ಸಿದ್ರಾಮಣ್ಣ ಬಂದರೆ ಟಿಪ್ಪು ಜಯಂತಿ ಮಾತ್ರ ಆಗುತ್ತದೆ ಎಂದು ಎಚ್ಚರಿಕೆ ನೀಡಿದರು. ಬಿಜೆಪಿಗೆ ಮತ ಹಾಕಲು ಕೋರಿದ ಸಿದ್ರಾಮಣ್ಣನನ್ನು ಅಭಿನಂದನೆ ಎಂದು ಹೇಳಿದರು.

ಇನ್ನೂ ಕಾಂಗ್ರೆಸ್ ಭಯೋತ್ಪಾದಕರಿಗೆ ಬೆಂಬಲ ನೀಡುತ್ತದೆ ಡಿ ಕೆ ಶಿವಕುಮಾರ್ ಗೆ ಬೆಳಗಾವಿ ಕುಕ್ಕರ್ ಮತ್ತು ತೀರ್ಥಹಳ್ಳಿ ಕುಕ್ಕರ್ ಮೇಲೆ ಪ್ರೀತಿ. ಅವರು ಮಂಗಳೂರಿನ ಕುಕ್ಕರ್ ಬಾಂಬ್ ಸ್ಫೋಟದ ಆರೋಪಿಯನ್ನು ಅಮಾಯಕ ಎನ್ನುತ್ತಾರೆ ಎಂದು ವ್ಯಂಗ್ಯವಾಡಿದರು. ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ ಜೊತೆ ಉಡುಪಿಯ ಕಾಂಗ್ರೆಸ್ ಪದಾಧಿಕಾರಿಯನ್ನು ಕೇಂದ್ರ ತನಿಖಾ ಸಂಸ್ಥೆಯು ಬಂಧಿಸಿತ್ತು. ಆದರೆ, ಡಿ ಕೆ ಶಿವಕುಮಾರ್ ಆತನನ್ನು ಪಕ್ಷದಿಂದ ಅಮಾನತು ಮಾಡಿಲ್ಲ. ಯಾಕೆ ಮಾಡಿಲ್ಲ? ಎಂದು ಪ್ರಶ್ನಿಸಿದರು.












Click it and Unblock the Notifications