ವಾಹನ ಸವಾರರೇ ಈ ಸುದ್ದಿಯನ್ನು ನೀವು ತಪ್ಪದೆ ಓದಿ, ಇಲ್ಲ ಅಂದ್ರೆ ಕೆಲಸ ಕಳೆದುಕೊಳ್ಳಬಹುದು ಹುಷಾರ್!
ವಾಹನ ಸವಾರರೇ ನೀವು ಬೆಂಗಳೂರಿನ ರಸ್ತೆಗಳಲ್ಲಿ ಬೇಕಾಬಿಟ್ಟಿ ವಾಹನ ಚಲಾಯಿಸುತ್ತೀರಾ.? ಮನಸ್ಸಿಗೆ ಬಂದಂತೆ ಗಾಡಿ ಓಡಿಸಿ ಟ್ರಾಫಿಕ್ ನಿಯಮ ಮೀರುತ್ತಿದ್ದೀರಾ? ಹಾಗಾದರೆ ಇನ್ನು ಮುಂದೆ ನಿಮ್ಮ ಈ ಎಡವಟ್ಟು ನಿಮ್ಮ ಕೆಲಸವನ್ನೇ ಹಾಳು ಮಾಡುತ್ತದೆ. ಅನ್ಯಾಯವಾಗಿ ನೀವು ಕೆಲಸ ಕಳೆದುಕೊಳ್ಳುವ ಸಮಯ ಕೂಡ ಬರಬಹುದು. ಹಾಗಾದರೆ ಹೀಗೆ, ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡೋದಕ್ಕೂ ಹಾಗೂ ಕೆಲಸ ಕಳೆದುಕೊಳ್ಳುವುದಕ್ಕೆ ಏನು ಸಂಬಂಧ? ಮುಂದೆ ಓದಿ.
ಹೌದು ನೀವು ಟ್ರಾಫಿಕ್ ಸಿಗ್ನಲ್ ಜಂಪ್ ಮಾಡುವ ಮೊದಲು ಅಥವಾ ರಸ್ತೆಗಳಲ್ಲಿ ವೇಗದ ಮಿತಿ ಮೀರಿ, ತುಂಬಾ ಸ್ಪೀಡ್ ಆಗಿ ಗಾಡಿಯನ್ನ ಓಡಿಸುವ ಮೊದಲು ಇನ್ಮುಂದೆ 2 ಬಾರಿ ಯೋಚಿಸಿ. ಇಲ್ಲ ಅಂದ್ರೆ ನೀವು ಟ್ರಾಫಿಕ್ ರೂಲ್ಸ್ ಉಲ್ಲಂಘನೆ ಮಾಡಿದ್ದಕ್ಕೆ ಶಿಕ್ಷೆ ಪಕ್ಕಾ. ಹಾಗೆ ನಿಮ್ಮ ಕಂಪನಿ ಅಂದ್ರೆ ನೀವು ಕೆಲಸ ಮಾಡುವ ಆಫಿಸ್‌ಗೆ ಕೂಡ ಇನ್ನುಮುಂದೆ ನೋಟಿಸ್ ಕೂಡ ಬರಬಹುದು. ನೀವು ಯಾವುದೇ ರೀತಿಯ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿ ಸಿಕ್ಕಿಬಿದ್ದರೆ, ಬೆಂಗಳೂರು ಟ್ರಾಫಿಕ್ ಪೊಲೀಸರು ನೇರವಾಗಿ ನಿಮ್ಮ ಕಂಪನಿಗೆ ಸೂಚನೆ ನೀಡ್ತಾರೆ ಹುಷಾರ್.

ವಾಹನ ಸವಾರರೇ ಎಚ್ಚರ.. ಎಚ್ಚರ..!
ಬೆಂಗಳೂರು ಸಂಚಾರ ಪೊಲೀಸರು ತಿಳಿಸುವ ಪ್ರಕಾರ, ರಸ್ತೆ ಸುರಕ್ಷತೆ & ಸಂಚಾರ ನಿಯಮದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ರಾಜಧಾನಿ ಬೆಂಗಳೂರು ಟ್ರಾಫಿಕ್ ಪೊಲೀಸರ ಪೂರ್ವ ವಿಭಾಗ ಈ ವಾರ ಬೆಂಗಳೂರು ನಗರ ಹೊರವರ್ತುಲ ರಸ್ತೆಯೂ ಸೇರಿ ವೈಟ್‌ಫೀಲ್ಡ್ ಒಳಗೊಂಡ ಭಾಗದಲ್ಲಿ ಈ ಕ್ರಮವನ್ನೀಗ ಜಾರಿಗೆ ತಂದಿದೆ. ಇನ್ನ ಐಟಿ ಕಾರಿಡಾರ್‌ನಲ್ಲಿ ಪ್ರಾಯೋಗಿಕವಾಗಿ ಈ ನಿಯಮ ಜಾರಿಗೆ ತರಲಾಗಿದ್ದು, ಈ ಮಾರ್ಗಗಳಲ್ಲಿ ಸಂಚಾರ ನಿಯಮ ಉಲ್ಲಂಘನೆ ಇಳಿಕೆಯಾದರೆ ಬೆಂಗಳೂರಿನ ಇತರ ಭಾಗಕ್ಕೂ ಈ ರೂಲ್ಸ್ ವಿಸ್ತರಣೆ ಆಗುವ ನಿರೀಕ್ಷೆ ಇದೆ.
ಉಲ್ಲಂಘನೆ ಮಾಡಿದರೆ ಶಿಕ್ಷೆ ಗ್ಯಾರಂಟಿ
ಅಂದಹಾಗೆ ಬೆಂಗಳೂರು ಟ್ರಾಫಿಕ್ ಪೊಲೀಸರು ಭಾರಿ ಪ್ರಮಾಣದಲ್ಲಿ ಸಂಚಾರ ನಿಯಮಗಳ ಉಲ್ಲಂಘನೆ ಗಮನಿಸಿದ ನಂತರ ಈ ಕ್ರಮ ಜರುಗಿಸಲು ಮುಂದಾಗಿದ್ದಾರೆ. ನಿರ್ದಿಷ್ಟ ನ್ಯಾಯ ವ್ಯಾಪ್ತಿಯಲ್ಲಿ ಹೊಸ ನಿಯಮ ಜಾರಿಗೆ ತರಲು ಮುಂದಾಗಿದ್ದಾರೆ. ವಿಶೇಷವಾಗಿ ಟೆಕ್ಕಿಗಳು, ಈ ರೀತಿಯಾಗಿ ತಮ್ಮ ಕಚೇರಿ ಅಥವಾ ಮನೆಗೆ ತಲುಪುವ ಭರದಲ್ಲಿ ಅತಿ ವೇಗವಾಗಿ ಗಾಡಿ ಓಡಿಸುವುದು ಹಾಗೂ ಟ್ರಾಫಿಕ್ ಸಿಗ್ನಲ್ ಜಂಪ್ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಇನ್ನುಮುಂದೆ ಈ ರೀತಿ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡುವ ಟೆಕ್ಕಿಗಳ ಕಚೇರಿಗೆ ಅದರ ಬಗ್ಗೆ ಮಾಹಿತಿ ಹೋಗಲಿದೆಯಂತೆ. ಈ ಬಗ್ಗೆ ಎನ್‌ಡಿಟಿವಿ ವಿಶೇಷ ವರದಿ ಪ್ರಕಟಿಸಿದೆ.

ಪೊಲೀಸ್ ಆಯುಕ್ತರು ಹೇಳೋದು ಏನು?
ಹಾಗೇ ಮತ್ತೊಂದು ಕಡೆ ಈ ಬಗ್ಗೆ ಮಾಹಿತಿ ನೀಡಿರುವ ಸಂಚಾರ ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಅವರು 'ಯಾವುದೇ ಐಟಿ ಕಂಪನಿ ಉದ್ಯೋಗಿ ಸಂಚಾರ ನಿಯಮ ಉಲ್ಲಂಘಿಸಿ ಸಿಕ್ಕಿಬಿದ್ದರೆ, ಟ್ರಾಫಿಕ್ ನಿಯಮಗಳ ಉಲ್ಲಂಘನೆಯ ಕುರಿತಾಗಿ ಮಾಹಿತಿಯನ್ನು ಅವರ ಕಂಪನಿಗೆ ಇಮೇಲ್ ಅಥವಾ ವಾಟ್ಸಾಪ್ ಮೂಲಕ ಕಳುಹಿಸಲಾಗುತ್ತೆ.' ಎಂದು ತಿಳಿಸಿದ್ದಾರೆ. ಈ ಮೂಲಕ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುವ ಬೆಂಗಳೂರಿನ ಪ್ರತಿ ಟೆಕ್ಕಿಗಳಿಗೆ ಹೊಸ ತಲೆನೋವು ಶುರುವಾಗಲಿದೆ.












Click it and Unblock the Notifications