ಶಿವಾಜಿನಗರದಲ್ಲಿ ಗೆದ್ದರೆ, ರಾಜ್ಯದಲ್ಲಿ ನೂರಕ್ಕೂ ನೂರು ಬಿಜೆಪಿ ಗೆಲ್ತೀವಿ‌: ಬಸವರಾಜ ಬೊಮ್ಮಾಯಿ

ಬೆಂಗಳೂರು,ಜನವರಿ 2 : ಶಿವಾಜಿನಗರದಲ್ಲಿ ಗೆದ್ದರೆ, ರಾಜ್ಯದಲ್ಲಿ ನೂರಕ್ಕೂ ನೂರು ಬಿಜೆಪಿ ಗೆಲ್ತೀವಿ‌ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಡಿಸಿದರು.

ಸೋಮವಾರ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ವಸಂತನಗರದಲ್ಲಿ ಬೂತ್ ವಿಜಯ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಬೂತ್ ಮಟ್ಟದ ವಿಜಯ ಸಾಧನೆ ಮಾಡಲು ಈ ಅಭಿಯಾನಕ್ಕೆ ಚಾಲನೆ ಕೊಡ್ತಿದ್ದೇವೆ, ಈ ಅಭಿಯಾನದ ಬಗ್ಗೆ ರಾಷ್ಟ್ರೀಯ ಅಧ್ಯಕ್ಷರರು ನಮಗೆ ಸೂಚನೆ ಕೊಟ್ಟಿದ್ದರು. ಬೂತ್ ವಿಜಯ ಅಭಿಯಾನ ಯಾವ ಕ್ಷೇತ್ರದಲ್ಲಿ ಮಾಡ್ತೀರಿ ಅಂತಾ ನನಗೆ ನಮ್ಮ ಅಧ್ಯಕ್ಷರು ಕೇಳಿದ್ರು. ಅವರಿಗೆ ನಾನು ಹೇಳಿದೆ ಅತ್ಯಂತ ಕಷ್ಟ ಇರುವ ಕ್ಷೇತ್ರ ನನಗೆ ಕೊಡಿ ಅತ. ನಾನು ಶಿವಾಜಿನಗರ ಯಾಕೆ ತಗೊಂಡೆ ಅಂದರೆ, ನನಗೂ ಇದರ ಬಗ್ಗೆ ಮಾಹಿತಿ ಇದೆ. ಶಿವಾಜಿನಗರ ಒಂದು ಕಾಲದಲ್ಲಿ ಬಿಜೆಪಿ ಗೆದ್ದ ಕ್ಷೇತ್ರ. ಶಿವಾಜಿನಗರ ನಿರ್ಮಲ ಕುಮಾರ್ ಸುರಾನಾ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಗೆದ್ದಿದ್ರು. ಇದರ ಅರ್ಥ ಅಂದರೆ ಮುಂದೆ ನೂರಕ್ಕೂ ನೂರು ನಾವು ಗೆಲ್ಲ್ತೀವಿ ಅಂತಾ ಆದರೆ, ನಾವು ಸ್ವಲ್ಪ ಕಷ್ಟ ಪಡಬೇಕು‌ ಎಂದರು.

ಶಿವಾಜಿನಗರ ಕ್ಷೇತ್ರದ ವಿಜಯ ಪತಾಕೆಗೆ ಬಂದಿದ್ದೇನೆ. ಶಿವಾಜಿನಗರ ಕ್ಷೇತ್ರದ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ಕೊಡುತ್ತೇವೆ. ಕ್ಷೇತ್ರದ ಅಭಿವೃದ್ಧಿಗೂ ಅತಿ ಹೆಚ್ಚು ಗಮನ ಕೊಡ್ತೀನಿ, ನಾವು ಗೆಲ್ಲಬೇಕು ಅಂದರೆ ಬೂತ್ ಸಶಕ್ತ ಮಾಡಬೇಕು, ಬೂತ್ ಗಟ್ಟಿ ಆದರೆ ಕ್ಷೇತ್ರ ಶಕ್ತಿಯಾಗಿ ರಾಜ್ಯ ಗೆಲ್ಲುತ್ತದೆ. ಶಿವಾಜಿನಗರದಲ್ಲಿ ಗೆದ್ದರೆ, ರಾಜ್ಯದಲ್ಲಿ ನೂರಕ್ಕೂ ನೂರು ಬಿಜೆಪಿ ಗೆಲ್ತೀವಿ‌ ಎಂದು ವಿಶ್ವಾಸ ವ್ಯಕ್ತಡಿಸಿದರು.

 If Shivajinagar Is Won, BJP Will Be Back In Power One Hundred Percent Says Basavaraj Bommai

ಎಸ್ಸಿ, ಎಸ್ಟಿ, ಒಬಿಸಿ, ಮಹಿಳೆ ಮತ್ತು ಯುವಕರು ಮೋರ್ಚಾ ಗಳನ್ನು ಸ್ಥಾಪನೆ ಮಾಡಿ ಕೆಲಸ ಮಾಡಬೇಕು. ಪೇಜ್ ಸಮಿತಿ ಗಳು ಇಲ್ಲ, ಪೇಜ್ ಪ್ರಮುಖರು ಇದ್ದಾರೆ. ಪ್ರತಿಯೊಬ್ಬರ ಮನೆಗೆ ಭೇಟಿ ಕೊಟ್ಟು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆ ಗಳು ಹಾಗೂ ಕಾಂಗ್ರೆಸ್ ನ ಜನ ವಿರೋಧಿ ಬಗ್ಗೆ ತಿಳಿಸಬೇಕು. ಈ ನಾಲ್ಕು ತಿಂಗಳಲ್ಲಿ ಕನಿಷ್ಠ ಐದು ಬಾರಿ ಮನೆ ಮನೆಗೆ ಹೋಗಿ ಮಾಡಬೇಕು. ಆ ನಂತರ ಕೊನೆಯಲ್ಲಿ ಹೋಗಿ ಮತ ಕೇಳಬೇಕು. ಸ್ಮಾರ್ಟ್ ಸಿಟಿ ಯೋಜನೆ ಗಳಲ್ಲಿ ನಗರ ಅಭಿವೃದ್ಧಿ ಆಗಿದ್ದು ಬಿಜೆಪಿ ಸರ್ಕಾರದಿಂದ ಆದರೆ ಇದನ್ನು ನಾವು ಮಾಡಿದ್ದು ಅಂತಾ ಇಲ್ಲಿನ ಶಾಸಕರು ಹೇಳ್ತಾರೆ ಎಂದು ಪರೋಕ್ಷವಾಗಿ ಸ್ಥಳೀಯ ಶಾಸಕ ರಿಜ್ವಾನ್ ಅರ್ಷದ್ ವಿರುದ್ದ ಸಿಎಂ ಬಸವರಾಜ ಬೊಮ್ಮಾಯಿ ಅವರು ಕಿಡಿಕಾರಿದರು.

ಕಾಂಗ್ರೆಸ್ ಕಾಲದಲ್ಲಿ ನೆನಗುದಿಗೆ ಬಿದ್ದ ಎಲ್ಲ ಕೆಲಸಗಳನ್ನು ನಾವು ಮಾಡ್ತಿದ್ದೇವೆ. ನಾವು ಮಾಡಿದ ಕಾರ್ಯಗಳನ್ನು ಪಟ್ಟಿ ಮಾಡಿಕೊಡ್ತೀವಿ, ಅದನ್ನು ಜನರಿಗೆ ತಿಳಿಸಬೇಕು. ಕಾಂಗ್ರೆಸ್‌ ನವರಿಗೆ ಬೇರೆ ಹೇಳೋಕೆ ಏನು ಇಲ್ಲ. ಮೊಸರಲ್ಲಿ ಕಲ್ಲು ಹುಡುಕೋದು ಬಿಟ್ರೆ, ಬೇರೆ ಏನು ಇಲ್ಲ. ಹಿಂದೆ ಅವ್ರು ಏನು ಮಾಡಿಲ್ಲ, ಅದಕ್ಕಾಗಿ ಜನರು ಅವರನ್ನು ತಿರಸ್ಕಾರ ಮಾಡಿದ್ದಾರೆ, ಮುಂದೆಯೂ ಅವರನ್ನು ಜನರು ತಿರಸ್ಕಾರ ಮಾಡ್ತಾರೆ. ಬಿಜೆಪಿ ಕೇವಲ ಅಧಿಕಾರಕ್ಕಾಗಿ ಮಾತ್ರ ರಾಜಕಾರಣ ಮಾಡ್ತಿಲ್ಲ, ರಾಜ್ಯದ ಸಂಪೂರ್ಣ ಅಭಿವೃದ್ಧಿಗೆ ರಾಜಕಾರಣ ಮಾಡುತ್ತಿದೆ. ಜನರ ಸುತ್ತಲೂ ಅಭಿವೃದ್ಧಿ ಆಗಬೇಕೇ ಹೊರತು, ಅಭಿವೃದ್ಧಿ ಸುತ್ತ ಜನರು ಓಡಾಡಬಾರದು. ಕಾಂಗ್ರೆಸ್ ಯಾವತ್ತಿಗೂ ಪವರ್ ಪಾಲಿಟಿಕ್ಸ್ ಮಾಡಿದೆ. ಜನರನ್ನು ಜಾತಿ, ಧರ್ಮದಿಂದ ಒಡೆಯುವ ಕೆಲಸದಿಂದ ಅಧಿಕಾರಕ್ಕೆ ಬರೋದು. ಇಬ್ಬರ ನಡುವೆ ಜಗಳದ ಬೆಂಕಿ ಹಚ್ಚಿ ಕೋತಿ ತಾನು ತಿಂತು ಅನ್ನೋ ಮಾತಿದೆಯಲ್ಲ ಹಾಗೇ ಕಾಂಗ್ರೆಸ್ ನವರ ಬುದ್ದಿಯಾಗಿದೆ ಎಂದು ಕಿಡಿಕಾರಿದರು.

 If Shivajinagar Is Won, BJP Will Be Back In Power One Hundred Percent Says Basavaraj Bommai

ಕಾಂಗ್ರೆಸ್ ಪಕ್ಷ ಅಸ್ತಿತ್ವಕ್ಕಾಗಿ ಹೋರಾಟ ಮಾಡುತ್ತಿದೆ.

ಕಾಂಗ್ರೆಸ್ ಪಕ್ಷ ಅಸ್ತಿತ್ವಕ್ಕಾಗಿ ಹೋರಾಟ ಮಾಡುತ್ತಿದೆ, ಅವರಿಗೆ ದೇಶ, ರಾಜ್ಯದ ಬಗ್ಗೆ ಏನು ಗೊತ್ತೇ ಇಲ್ಲ ಆದರೆ, ಬಿಜೆಪಿ ಭಾರತದ ಅಭಿವೃದ್ಧಿಗಾಗಿ ಹೋರಾಟ ಮಾಡುತ್ತಿದೆ. ಇವತ್ತು ಕಾಂಗ್ರೆಸ್ ಮುಳುಗುವ ಹಡಗು, ಅವರು ಜನರ ಬಗ್ಗೆ ಯಾವತ್ತಿಗೂ ಯೋಚನೆ ಮಾಡಿಲ್ಲ, ಬಿಜೆಪಿ ಯಾವತ್ತಿಗೂ ಅಸ್ತಿತ್ವದ ಬಗ್ಗೆ ಯೋಚನೆ ಮಾಡಿಲ್ಲ. ನಾವು ಜನರ ರಾಜಕಾರಣದಿಂದ ಒಪ್ಪಿ ಜನರ ರಾಜಕಾರಣ ಮಾಡ್ತಿದ್ದೇವೆ ಎಂದು ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು.

ಇನ್ನೂ ಈ ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ.ಮೋಹನ್ ಸೇರಿದಂತೆ ಸ್ಥಳೀಯ ನಾಯಕರು ಉಪಸ್ಥಿತರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+