ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

National Horticulture Fair 2023 : ಫೆ.22-25ರ ತನಕ ಬೆಂಗಳೂರು 'ರಾಷ್ಟ್ರೀಯ ತೋಟಗಾರಿಕೆ ಮೇಳ 2023', ಏನೇನಿರಲಿದೆ?

ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (IIHR) ವತಿಯಿಂದ ಬೆಂಗಳೂರಿನ ಹೆಸರಘಟ್ಟದಲ್ಲಿ ಮುಂದಿನ ತಿಂಗಳ ಫೆಬ್ರುವರಿ 22ರಿಂದ 25ರವರೆಗೆ 'ರಾಷ್ಟ್ರೀಯ ತೋಟಗಾರಿಕೆ ಮೇಳ 2023' ಹಮ್ಮಿಕೊಳ್ಳಲಾಗಿದೆ. ಮೇಳದಲ್ಲಿ ಏನೇನಿರಲಿದೆ ಎಂಬುದರ ಪೂರ್ಣ ಮಾಹಿತಿ ಇಲ್ಲಿದೆ.

|
Google Oneindia Kannada News

ಬೆಂಗಳೂರು, ಜನವರಿ 27: ರೈತರಿಗೆ ಕೃಷಿ ಸಂಬಂಧಿತ ಮಾಹಿತಿ ಹಾಗೂ ತೋಟಗಾರಿಕೆ ಬೆಳೆಗಳ ಕುರಿತು ಸಮಸ್ಯೆಗಳ ಪರಿಹಾರ ಸೇರಿದಂತೆ ಅನೇಕ ಅಂಶಗಳನ್ನು ತಿಳಿಸುವ ಸಲುವಾಗಿ ಬೆಂಗಳೂರಿನ ಹೆಸರಘಟ್ಟದಲ್ಲಿ ಮುಂದಿನ ತಿಂಗಳ ಫೆಬ್ರುವರಿ 22ರಿಂದ 25ರವರೆಗೆ 'ರಾಷ್ಟ್ರೀಯ ತೋಟಗಾರಿಕೆ ಮೇಳ 2023' ಹಮ್ಮಿಕೊಳ್ಳಲಾಗಿದೆ.

ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (IIHR) ವತಿಯಿಂದ ನಾಲ್ಕು ದಿನಗಳ ಕಾಲ ಸಂಸ್ಥೆಯ ವಿಶಾಲ ಆವರಣದಲ್ಲಿ 'ಸ್ವಾವಲಂಬನೆಗಾಗಿ ನವೀನ ತೋಟಗಾರಿಕೆ' ಎಂಬ ವಿಷಯದಡಿ ಈ ರಾಷ್ಟ್ರಮಟ್ಟದ ಬೃಹತ್ ಮೇಳ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಭಾರಿ ವಿಶೇಷವಾಗಿ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (IIHR), ಐಸಿಎಆರ್‌ ಜೊತೆಗೆ ಇನ್ನಿತರ ಸಂಸ್ಥೆಗಳು ಹಾಗೂ ತೋಟಗಾರಿಕೆ ಉದ್ಯಮಿಗಳ ಸಹಯೋಗದಲ್ಲಿ ಮೇಳ ನಡೆಯಲಿದ್ದು, ಲಕ್ಷಾಂತರ ರೈತರು ಆಗಮಿಸಲಿದ್ದಾರೆ. ರೈತರು ಮತ್ತು ತೋಟಗಾರಿಕೆ ಉದ್ಯಮಿಗಳು ತಯಾರಿಸಿದ ಹೊಸ ತಂತ್ರಜ್ಞಾನಗಳು ಮೇಳದಲ್ಲಿ ಪ್ರದರ್ಶನಗೊಳ್ಳಲಿವೆ. ಸಂಸ್ಥೆ ಹೊಸದಾಗಿ ಸೃಷ್ಟಿಸಿದ ತಳಿಗಳು, ಅಭಿವೃದ್ಧಿ ಪಡಿಸಿದ ತೋಟಗಾರಿಕೆ ಬೀಜಗಳು ಮೇಳದಲ್ಲಿರಲಿವೆ.

ICAR-IIHR: Bengaluru National Horticulture Fair 2023 from Feb 22-25, Know speciality

ಮುಖ್ಯವಾಗಿ ಸಾವಯವ ಪದ್ಧತಿಗೆ ಸದಾ ಒತ್ತು ನೀಡುವ ಸಂಸ್ಥೆ ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಗಳಿಕೆ ಬಗ್ಗೆ ಮಾಹಿತಿ ನೀಡುತ್ತದೆ. ಇಂತಹ ಅನೇಕ ವಿಚಾರ ವಿನಿಮಯಗಳ ಕುರಿತು ಚರ್ಚಾಗೋಷ್ಠಿಗಳು ನಡೆಯಲಿವೆ. ಈ ಬೃಹತ್ ರಾಷ್ಟ್ರೀಯ ಮೇಳದಲ್ಲಿ ಏನಿರಲಿದೆ ಎಂಬ ಮಾಹಿತಿ ಇಲ್ಲಿ ತಿಳಿಯಬಹುದು.

ಪ್ರದರ್ಶನದಲ್ಲಿ ಏನಿರಲಿವೆ?

ಮೇಳದಲ್ಲಿ ಕಲ್ಪಿಸಲಾದ ಪ್ರದರ್ಶನಗಳಲ್ಲಿ ಹೂವಿನ ತ್ಯಾಜ್ಯ ಬಳಕೆ ಪ್ರಯೋಜನ, ಸಂರಕ್ಷಿತ ಕೃಷಿಯಲ್ಲಿ ಪರಾಗಸ್ಪರ್ಶ, ಆಮದು ಪರ್ಯಾಯಕ್ಕಾಗಿ ತರಕಾರಿ ಮತ್ತು ಔಷಧಿ ಬೆಳೆಗಳು ಪ್ರದರ್ಶನ ವ್ಯವಸ್ಥೆ ಮಾಡಿರಲಾಗುತ್ತದೆ. ರೈತರು, ಯುವ ಕೃಷಿಕರು ಈ ಬಗ್ಗೆ ಸ್ಥಳದಲ್ಲೇ ಅಧಿಕಾರಿಗಳು, ಸಂಸ್ಥೆಗಳ ಸಿಬ್ಬಂದಿಯಿಂದ ಮಾಹಿತಿ ತಿಳಿದುಕೊಳ್ಳಬಹುದು. ಇನ್ನು ಇವುಗಳ ಜೊತೆಗೆ....

- ಎಲೆ ಸುರಳಿ ನಿರೋಧಕ ಮೆಣಸಿನಕಾಯಿ ಪ್ರಭೇದಗಳು.

- ಕ್ಯಾರೊಟಿನಾಯ್ಕ್ ಅಂಶ ಸಮೃದ್ಧ ಚೆಂಡು ಹೂವು ಪ್ರಬೇದಗಳು.

- ನಗರದ ಪ್ರದೇಶಗಳ ಅನುಕೂಲಕ್ಕಾಗಿ ಟೆರೆಸ್ ತೋಟಗಾರಿಕೆ, ಪರಿಹಾರಗಳು

- ವಿದೇಶಿ ಹಣ್ಣುಗಳು ಉತ್ಪಾದನಾ ತಂತ್ರಜ್ಞಾನ ಪ್ರಾತ್ಯಕ್ಷಿಕೆ.

ICAR-IIHR: Bengaluru National Horticulture Fair 2023 from Feb 22-25, Know speciality

- ಆಕ್ರಮಣಕಾರಿ ಕೀಟಗಳು ನಿರ್ವಹಣೆ ವೆಚ್ಚ ಕಡಿಮೆ ಮಾಡಲು ಪರಿಣಾಮಕಾರಿ ಕೀಟ ನಿಯಂತ್ರಣ ಬಗ್ಗೆ ಪ್ರಾತ್ಯಕ್ಷಿಕೆ ನಡೆಯಲಿದೆ. ಇವೆಲ್ಲವುಗಳು ಪ್ರದರ್ಶನಗಳಲ್ಲಿ ಪ್ರಮುಖ ಆಕರ್ಷಣೆಯಾಗಿರಲಿವೆ. ಇವುಗಳ ಜೊತೆಗೆ ಅನೇಕ ಒಂದಷ್ಟು ಮಳಿಗೆಗಳು, ಮಾರಾಟಗಳಿಗೆ ಮೇಳದಲ್ಲಿ ಅವಕಾಶ ನೀಡಲಾಗಿದೆ.

ಮಳಿಗೆಗಳು-ಮಾರಾಟ ವ್ಯವಸ್ಥೆ

- ಸಸ್ಯ ಸಂರಕ್ಷಣಾ ರಸಾಯನಿಕ ಮತ್ತು ಹರಿಸು ಮನೆ ಹಾಗೂ ಪಾಲಿಹೌಸ್ ತೋಟಗಾರಿಕೆ ಪರಿಕರಗಳು.

- ಸಸ್ಯ ಪೋಷಕಾಂಶಗಳು.

- ಬೀಜಗಳು ಹಾಗೂ ನಾಟಿ ಸಸಿಗಳ ಮಾರಾಟ ವ್ಯವಸ್ಥೆ

- ಸರ್ಕಾರಿ ಹಾಗೂ ಸರ್ಕಾರೇತರ ಸಂಸ್ಥೆಗಳಿಗೆ ಮಳಿಗೆಗಳಿಗೆ ಅವಕಾಶ

- ರೈತ ಉತ್ಪಾದನಾ ಕಂಪನಿ (FPO) ಮತ್ತು ರೈತ ಗುಂಪುಗಳ ಉತ್ಪನ್ನಗಳ ಮಳಿಗೆಗಳು .

ಇವೆಲ್ಲವುಗಳು ಸೇರಿದಂತೆ ಇನ್ನು ಹಲವು ಮಳಿಗೆಗಳು ಇರಲಿದೆ. ರೈತರ ತಂತ್ರಜ್ಞಾನ, ಕೃಷಿ, ತೋಟಗಾರಿಕೆ ಬೆಳೆಗಳು, ಬೀಜಗಳು, ಸಸಿಗಳ ಬಗ್ಗೆ ಮಾಹಿತಿ ಪಡೆಯುವ ಜೊತೆಗೆ ಅಗತ್ಯ ಕೃಷಿ,ತೋಟಗಾರಿಕಾ ಪರಿಕರಗಳನ್ನು ಖರೀದಿಸಲು ಅವಕಾಶ ನೀಡಲಾಗಿದೆ.

ಮೇಳಕ್ಕೆ ಆಗಮಿಸುವವರು ಇಲ್ಲವೇ ಖರೀದಿ, ಮಳಿಗೆಗಳಿಗೆ ಅವಕಾಶ ಬೇಕು ಎನ್ನುವವರು ಸೇರಿದಂತೆ ಅಗತ್ಯ ಮಾಹಿತಿಗಾಗಿ ಮೊ. 7760835475 ಹಾಗೂ 9108364672ಗೆ ಸಂಪರ್ಕಿಸವುಂತೆ ಸಂಸ್ಥೆ ತಿಳಿಸಿದೆ.

English summary
Bengaluru National Horticulture Fair 2023 from February 22 to 25th in Hesaraghatta, says ICAR- Indian Institute of Horticultural Research
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X