ಐಎಎಸ್ ವರ್ಗಾವಣೆ; ದಾವಣಗೆರೆ, ಉತ್ತರ ಕನ್ನಡಕ್ಕೆ ಹೊಸ ಡಿಸಿ
ಬೆಂಗಳೂರು, ಜುಲೈ 26; ಕರ್ನಾಟಕ ಸರ್ಕಾರ ಮಹತ್ವದ ಬೆಳವಣಿಗೆಯಲ್ಲಿ ಹಲವು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ದಾವಣಗೆರೆ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಉತ್ತರ ಕನ್ನಡ ಜಿಲ್ಲೆಗೆ 2ನೇ ಮಹಿಳಾ ಜಿಲ್ಲಾಧಿಕಾರಿಗಳ ನೇಮಕವಾಗಿದೆ.
ಮಂಗಳವಾರ ಕರ್ನಾಟಕ ಸರ್ಕಾರ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಉತ್ತರ ಕನ್ನಡ ಜಿಲ್ಲಾಧಿಕಾರಿಯಾಗಿ ಗಂಗೂಬಾಯಿ ರಮೇಶ ಮಾನಕರ್ ನೇಮಕಗೊಂಡಿದ್ದಾರೆ. ಹಾಲಿ ಡಿಸಿಯಾಗಿದ್ದ ಪ್ರಭುಲಿಂಗ ಕವಳಿಕಟ್ಟಿ ವರ್ಗಾವಣೆಗೊಂಡಿದ್ದಾರೆ.

ದಾವಣಗೆರೆ ಜಿಲ್ಲಾಧಿಕಾರಿಯಾಗಿ ಡಾ. ವೆಂಕಟೇಶ ಎಂ. ವಿ. ನೇಮಕಗೊಂಡಿದ್ದಾರೆ. ಹಾಲಿ ಜಿಲ್ಲಾಧಿಕಾರಿ ಶಿವಾನಂದ ಕಾಪಾಶಿ ವರ್ಗಾವಣೆಗೊಂಡಿದ್ದಾರೆ. ಆದರೆ ಶಿವಾನಂದ ಕಾಪಾಶಿಗೆ ಯಾವುದೇ ಹುದ್ದೆಯನ್ನು ಸರ್ಕಾರ ತೋರಿಸಿಲ್ಲ.
ತುಮಕೂರು ಮಹಾನಗರ ಪಾಲಿಕೆಗೆ ನೂತನ ಆಯುಕ್ತರ ನೇಮಕವಾಗಿದೆ. ಕೃಷಿ ಮಾರುಕಟ್ಟೆ ವಿಭಾಗ ಬೆಂಗಳೂರು ಇಲ್ಲಿಗೆ ಸಹ ಹೊಸ ನಿರ್ದೇಶಕರ ನೇಮಕವಾಗಿದೆ.
ವರ್ಗಾವಣೆಗೊಂಡ ಅಧಿಕಾರಿಗಳು
* ಗಂಗೂಬಾಯಿ ರಮೇಶ ಮಾನಕರ್, ಐಎಎಸ್ (ಕೆಎನ್ 2012) ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ಕಾರ್ಯದರ್ಶಿಯಾಗಿದ್ದರು. ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಉತ್ತರ ಕನ್ನಡ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಲಾಗಿದೆ.
* ಉತ್ತರ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಐಎಎಸ್ ಅಧಿಕಾರಿ ಶಿವಾನಂದ ಕಾಪಾಶಿ ವರ್ಗಾವಣೆಗೊಳಿಸಲಾಗಿದೆ. ಆದರೆ ಅವರಿಗೆ ಯಾವುದೇ ಹುದ್ದೆಯನ್ನು ಸರ್ಕಾರ ತೋರಿಸಿಲ್ಲ.
* ಡಾ. ವೆಂಕಟೇಶ್ ಎಂ. ವಿ. ಆಯುಕ್ತರು, ಐಎಎಸ್ (ಕೆಎನ್ 2009) ಪಶುವೈದ್ಯಕೀಯ ಮತ್ತು ಪಶುಸಂಗೋಪನಾ ವಿಜ್ಞಾನ ಸೇವೆಗಳು ಬೆಂಗಳೂರು ದಾವಣಗೆರೆ ಜಿಲ್ಲಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದಾರೆ.
* ದಾವಣಗೆರೆ ಜಿಲ್ಲಾಧಿಕಾರಿಯಾಗಿದ್ದ ಶಿವಾನಂದ ಕಾಪಾಶಿ ವರ್ಗಾವಣೆಗೊಂಡಿದ್ದು, ಯಾವುದೇ ಹುದ್ದೆಯನ್ನು ತೋರಿಸಿಲ್ಲ.
* ಗಜೇಂದ್ರ ಸ್ವಾಮಿ ಜಿ. ಎಂ. ಐಎಎಸ್ (ಕೆಎನ್ 2014) ಗ್ರಾಮೀಣ ಕುಡಿಯುವ ನೀರು & ನೈರ್ಮಲ್ಯ ಇಲಾಖೆ ನಿರ್ದೇಶಕರು ವರ್ಗಾವಣೆ. ನಿರ್ದೇಶಕರು ಕೃಷಿ ಮಾರುಕಟ್ಟೆ ಅಧಿಕಾರಿ, ಬೆಂಗಳೂರು ಹುದ್ದೆಗೆ ನೇಮಕ.
* ನಾಗೇಂದ್ರ ಪ್ರಸಾದ್ ಕೆ. ಐಎಎಸ್ (ಕೆಎನ್ 2015) ಹುದ್ದೆಯ ನಿರೀಕ್ಷೆಯಲ್ಲಿದ್ದರು. ನಿರ್ದೇಶಕರು ಗ್ರಾಮೀಣ ಕುಡಿಯುವ ನೀರು & ನೈರ್ಮಲ್ಯ ಇಲಾಖೆ ಹುದ್ದೆಗೆ ನೇಮಕ.
* ಅಶ್ವಿಜ ಬಿ. ವಿ. ಐಎಎಸ್ (ಕೆಎನ್ 2019), ನಿರ್ದೇಶಕರು, ಸಾಮಾಜಿಕ ನ್ಯಾಯ ಮತ್ತು ಪಿಂಚಣಿ, ಕಂದಾಯ ಇಲಾಖೆ, ಬೆಂಗಳೂರು. ಮುಂದಿನ ಆದೇಶದ ತನಕ ತುಮಕೂರು ಮಹಾನಗರ ಪಾಲಿಕೆ ಆಯುಕ್ತರಾಗಿ ನೇಮಕ.
ಎರಡನೇ ಮಹಿಳಾ ಜಿಲ್ಲಾಧಿಕಾರಿ; ಗಂಗೂಬಾಯಿ ರಮೇಶ ಮಾನಕರ್ ಉತ್ತರ ಕನ್ನಡ ಜಿಲ್ಲಾಧಿಕಾರಿಯಾಗಿ ನೇಮಕಗೊಂಡ ಎರಡನೇ ಮಹಿಳಾ ಜಿಲ್ಲಾಧಿಕಾರಿ. 1998ನೇ ಬ್ಯಾಚ್ ಕೆಎಎಸ್ ಅಧಿಕಾರಿಯಾದ ಇವರು, ಬಳಿಕ ಐಎಎಸ್ ಆಗಿ ಬಡ್ತಿ ಪಡೆದರು. ಈ ಹಿಂದೆ ಅವರು ಕುಮಟಾದ ಉಪವಿಭಾಗಾಧಿಕಾರಿಯಾಗಿಯೂ ಕೆಲಸ ಮಾಡಿದ್ದರು.
ಹಾಲಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ವರ್ಗಾವಣೆಗೊಂಡಿದ್ದಾರೆ. 2022ರ ನವೆಂಬರ್‌ನಲ್ಲಿ ಅವರು ಜಿಲ್ಲಾಧಿಕಾರಿಯಾಗಿ ಅಧಿಕಾರವಹಿಸಿಕೊಂಡಿದ್ದರು. 9 ತಿಂಗಳಿನಲ್ಲಿ ಅವರ ವರ್ಗಾವಣೆಗೊಂಡಿದ್ದು, ಯಾವುದೇ ಹುದ್ದೆಯನ್ನು ತೋರಿಸಿಲ್ಲ.
ಇನ್ನು ದಾವಣಗೆರೆ ಜಿಲ್ಲಾಧಿಕಾರಿ ಶಿವಾನಂದ ಕಾಪಾಶಿ ವರ್ಗಾವಣೆಗೊಂಡಿದ್ದಾರೆ. 2022ರ ಜುಲೈನಲ್ಲಿ ಮಹಾಂತೇಶ್ ಬೀಳಗಿ ವರ್ಗಾವಣೆಗೊಂಡ ಬಳಿಕ ಶಿವಾನಂದ ಕಾಪಾಶಿ ಜಿಲ್ಲಾಧಿಕಾರಿಯಾಗಿ ನೇಮಕಗೊಂಡಿದ್ದರು.
ಕರ್ನಾಟಕದ ವಿಧಾನಸಭೆ ಚುನಾವಣೆ 2023ರ ಫಲಿತಾಂಶ ಪ್ರಕಟಗೊಂಡು ಮೇ 20ರಂದು ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾರೆ, ಡಿ. ಕೆ. ಶಿವಕುಮಾರ್ ಉಪ ಮುಖ್ಯಮಂತ್ರಿಯಾಗಿದ್ದಾರೆ. ರಾಜ್ಯದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಆಡಳಿತ ಯಂತ್ರದಲ್ಲಿ ಹಲವು ಬದಲಾವಣೆ ಆಗುತ್ತಿದೆ. ಹಲವು ಜಿಲ್ಲಾಧಿಕಾರಿಗಳು ಬದಲಾವಣೆಯಾಗಿದ್ದಾರೆ.












Click it and Unblock the Notifications