ಪ್ರತಿಭಟನಾ ಸ್ಥಳದಲ್ಲೇ ಕುಸಿದು ಬಿದ್ದ ಡಿಕೆ ರವಿ ತಾಯಿ ಗೌರಮ್ಮ

Subscribe to Oneindia Kannada

ಬೆಂಗಳೂರು, ಮಾರ್ಚ್, 17: ಮಗನ ಸಾವಿನ ನ್ಯಾಯಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ಡಿಕೆ ರವಿ ತಾಯಿ ಗೌರಮ್ಮ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಅವರಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದ್ದು ಚೇತರಿಸಿಕೊಂಡಿದ್ದಾರೆ.

ಪೊಲೀಸರು ಮತ್ತು ಸರ್ಕಾರ ನಮ್ಮ ಹೋರಾಟಕ್ಕೆ ಅಡ್ಡಿ ಮಾಡುತ್ತಿದ್ದು ಪ್ರತಿಭಟನೆಯನ್ನು ಕೈ ಬಿಡುತ್ತಿದ್ದೇವೆ ಎಂದು ಗೌರಮ್ಮ ತಿಳಿಸಿದ್ದಾರೆ. ತುಮಕೂರು ಜಿಲ್ಲೆ ದೊಡ್ಡಕೊಪ್ಪಲು ಗ್ರಾಮಕ್ಕೆ ತೆರಳಿ ಮಗನ ಅಸ್ಥಿಪಂಜರದೊಂದಿಗೆ ಬೆಂಗಳೂರಿಗೆ ಹಿಂದಕ್ಕೆ ಬರುತ್ತೇನೆ. ಅಸ್ಥಿಪಂಜರವನ್ನು ವಿಧಾನಸೌಧದ ಎದುರಿಗೆ ಇಟ್ಟು ಹೋರಾಟ ಮಾಡುತ್ತೇವೆ ಎಂದು ಗೌರಮ್ಮ ಎಚ್ಚರಿಸಿದ್ದಾರೆ. [ಸೊಸೆ ಕುಸುಮಾ ಬಗ್ಗೆ ರವಿ ತಾಯಿ ಗೌರಮ್ಮ ಹೇಳಿದ್ದೇನು?]


dk ravi

ಬೆಂಗಳೂರಿಗೆ ಆಗಮಿಸಿದ್ದ ಗೌರಮ್ಮ ಆನಂದರಾವ್ ವೃತ್ತದಲ್ಲಿ ಧರಣಿ ಕೈಗೊಂಡಿದ್ದರು. ಬುಧವಾರದ ಮಳೆಯನ್ನು ಲೆಕ್ಕಿಸಿದೇ ಗೌರಮ್ಮ, ಡಿಕೆ ರವಿ ತಂದೆ ಮತ್ತು ಸಹೋದರರು ಧರಣಿ ನಿರತರಾಗಿದ್ದರು. ಬೆಳಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಗೌರಮ್ಮ ನ್ಯಾಯ ಸಿಗುವವರೆಗೂ ಹಿಂದಕ್ಕೆ ಹೋಗಲ್ಲ ಎಂದು ಹೇಳಿದ್ದರು.[ಡಿಕೆ ರವಿ ಊರು ದೊಡ್ಡಕೊಪ್ಪಲು ಗ್ರಾಮಕ್ಕೆ ದಾರಿ]

ಸರ್ಕಾರ ಮತ್ತು ಹತ್ತಿರದ ಸಂಬಂಧಿಕರು ಮಗನ ಸಾವಿನ ನಂತರ ದೂರವಾಗಿದ್ದಾರೆ. ಕಳೆದ ವರ್ಷ ಡಿಕೆ ರವಿ ಸಾವಿನ ವೇಳೆ ಬೆಂಬಲಕ್ಕೆ ನಿಂತಿದ್ದ ಜನರು, ಮಾಧ್ಯಮಗಳು ಮತ್ತೆ ಸರ್ಕಾರವನ್ನು ಬಡಿದೆಬ್ಬಿಸಬೇಕಿದೆ ಎಂದು ಗೌರಮ್ಮ ಹೇಳಿದರು.

ಡಿಕೆ ರವಿ ಪ್ರಕರಣದ ಸಂಪೂರ್ಣ ವಿವರ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
BENGALURU: Deceased IAS officer D K Ravi's mother Gowramma collapses after the continues protest. Ravi's father Kariyappa, sister Bharati, brother Ramesh and others staged a dharna in front of the Mahatma Gandhi statue near Anand Rao circle Bengaluru on March 17.
Please Wait while comments are loading...