ಎರಡು ಬಾರಿ ಪೆಟ್ಟು ತಿಂದಿದ್ದೇನೆ; ಒಂದು ಅವಕಾಶ ಕೊಡಿ: ನಿಖಿಲ್‌ ಕುಮಾರಸ್ವಾಮಿ

ಈ ಕ್ಷೇತ್ರದಲ್ಲಿ ದೇವೇಗೌಡರು ಮತ್ತು ಕುಮಾರಸ್ವಾಮಿಗೆ ನೀವು ಶಕ್ತಿ ತುಂಬಿದ್ದೀರಿ.ಎಲ್ಲರಿಗೂ ಕೈ ಮುಗಿದು ಕೇಳಿಕೊಳ್ತೇನೆ.ಇದು ನಮ್ಮ NDA ಕುಟುಂಬಕ್ಕೆ ಅಗ್ನಿ ಪರೀಕ್ಷೆ. ಈ ಪರೀಕ್ಷೆಯಲ್ಲಿ ನಮಗೆ ಜಯ ನೀಡಿ. ಎರಡು ಬಾರಿ ಜೀವನದಲ್ಲಿ ಪೆಟ್ಟು ತಿಂದಿದ್ದೇನೆ.ನಿಮ್ಮನ್ನ ನಂಬಿಕೊಂಡು ಬಂದಿದ್ದೇನೆ. ನಿಮ್ಮ ಪರವಾಗಿ ಕೆಲಸ ಮಾಡುತ್ತೇನೆ, ದಯಮಾಡಿ ಗೆಲ್ಲಿಸಿಕೊಡಿ ಎಂದು ನಿಖಿಲ್‌ ಕುಮಾರಸ್ವಾಮಿ ಹೇಳಿದರು.

ರಾಜ್ಯ ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿದೆ.ಸರ್ಕಾರದಲ್ಲಿ ದುಡ್ಡಿಲ್ಲ, ಸಾಕಷ್ಟು ಭ್ರಷ್ಟಾಚಾರ ಹೆಚ್ಚಾಗ್ತಿದೆ. ವಾಲ್ಮೀಕಿ ಹಗರಣ, ಮೂಡಾ ಹಗರಣ ರಾಜ್ಯದಲ್ಲಿ ಚರ್ಚೆ ಆಗ್ತಿದೆ.ವಾಲ್ಮೀಕಿ ನಿಗಮದ ಹಣ ಬೇರೆ ರಾಜ್ಯದ ಚುನಾವಣೆಗೆ ಬಳಕೆ ಆಗಿದೆ.ಇಂತಹ ಸರ್ಕಾರವನ್ನ ನಾವು ಕಿತ್ತೊಗೆಯಬೇಕು ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದರು.

I will work for you give me a chance too Says Nikhil Kumaraswamy

ಈ ಚುನಾವಣೆ ನನ್ನ ಪಾಲಿಗೆ ಅನಿರೀಕ್ಷಿತವಾದ ಚುನಾವಣೆ.ಈ ಚುನಾವಣೆ ಬಯಸದೇ ಬಂದ ಚುನಾವಣೆ. ಕುಮಾರಸ್ವಾಮಿ ಎರಡು ಬಾರಿ ಈ ಕ್ಷೇತ್ರ ಜನರು ಶಾಸಕರಾಗಿ ಆಯ್ಕೆಮಾಡಿದ್ದಾರೆ.ಬಳಿಕ ಕಳೆದ ಲೋಕಸಭಾ ಚುನಾವಣೆ ವೇಳೆ ಒತ್ತಡಕ್ಕೆ ಮಣಿದು ಮಂಡ್ಯದಲ್ಲಿ ಸ್ಪರ್ಧೆ ಮಾಡಿದ್ರು.ಬಳಿಕ ಮಂಡ್ಯದಿಂದ ಗೆದ್ದು ಕೇಂದ್ರ ಸಚಿವರಾಗಿದ್ದಾರೆ ಎಂದು ತಿಳಿಸಿದರು.

ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ.ಇದನ್ನ ಜನ ಚರ್ಚೆ ಮಾಡ್ತಿದ್ದಾರೆ. ಎಲ್ಲಾ ಮಹಿಳೆಯರಲ್ಲಿ ಮನವಿ ಮಾಡ್ತೇನೆ. ಅತೀ ಚಿಕ್ಕ ವಯಸ್ಸಿನಲ್ಲೇ ಎರಡು ಚುನಾವಣೆ ಎದುರಿಸಿದ್ದೇನೆ. ಜನರ ಅಭಿಪ್ರಾಯವನ್ನ ಗೌರವಿಸುತ್ತೇನೆ.ಮಂಡ್ಯದ ಜನ 5 ವರೆ ಲಕ್ಷ ಮತಗಳನ್ನ ನೀಡಿದ್ದರು. ಬಳಿಕ ರಾಮನಗರದಲ್ಲಿ ಕಾರ್ಯಕರ್ತರ ಒತ್ತಾಯದ ಮೇಲೆ ಸ್ಪರ್ಧೆ ಮಾಡಿದೆ ಅಲ್ಲೂ 76 ಸಾವಿರ ಮತಗಳನ್ನ ನೀಡಿದ್ರು.

ಕೂಪನ್ ಕಾರ್ಡ್ ಕೊಟ್ಟು ಮೋಸ ಮಾಡಿ ಕುತಂತ್ರದಿಂದ ಅಲ್ಲಿ ಕಾಂಗ್ರೆಸ್ ಗೆದ್ದಿತು.ಕುತಂತ್ರದ ರಾಜಕಾರಣವನ್ನ ಮಾಡಿದ್ರು.ಹಾಗಾಗಿ ನಾವು‌ ಮತ್ತು ಬಿಜೆಪಿ ಇಂದು ಒಂದಾಗಿ ಕೆಲಸ ಮಾಡ್ತಿದ್ದೇವೆ. ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರು NDA ಅಭ್ಯರ್ಥಿಯಾಗಿ ನನ್ನ ಹೆಸರು ಘೋಷಣೆ ಮಾಡಿದ್ದಾರೆ. ನಿಮ್ಮ ಸೇವೆ ನನಗೆ ಒಂದು ಅವಕಾಶ ಮಾಡಿ ಕೊಡಿ ಎಂದು ಮನವಿ ಮಾಡಿದರು.

ಚನ್ನಪಟ್ಟಣ ಕ್ಷೇತ್ರದ NDA ಅಭ್ಯರ್ಥಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಕ್ಷೇತ್ರದ ದೂಡ್ಡಮಳೂರು, ಕೋಟೆ ಮಾರನಹಳ್ಳಿ, ಬೈರಾಪಟ್ಟಣ, ದೇವರಹಳ್ಳಿ ಯಲ್ಲಿ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಚನ್ನಪಟ್ಟಣ ತಾಲ್ಲೂಕಿನ ದೊಡ್ಡಮಳೂರು ಗ್ರಾಮದಿಂದ ಆರಂಭವಾದ ಪ್ರಚಾರ ಸಭೆ ನಿಖಿಲ್ ಅವರಿಗೆ ಅದ್ದೂರಿ ಸ್ವಾಗತ ಕೋರಿದರು.

ಪ್ರತಿ ಗ್ರಾಮದಲ್ಲೂ ಪಟಾಕಿ ಸಿಡಿಸಿ, ಬೃಹತ್ ಹೂವಿನ ಹಾರ ಹಾಕಿ ಗ್ರಾಮಸ್ಥರು ಸ್ವಾಗತಕೋರಿದರು ದೊಡ್ಡಮಳೂರು ಗ್ರಾಮದ ಶ್ರೀ ಅಪ್ರಮೇಯ ಸ್ವಾಮಿಯ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಗ್ರಾಮದಲ್ಲಿ ಮತಾಯಾಚನೆ ನಡೆಸಿದರು, ನಂತರ ಕೋಟೆ ಮಾರನಹಳ್ಳಿ ಶ್ರೀ ಆಂಜನೇಯ ಸ್ವಾಮಿಯ ದರ್ಶನ ಪಡೆದು ಕೋಟೆ ಮಾರನಹಳ್ಳಿಯ್ಲಲಿ ಪ್ರಚಾರ ಸಭೆಯಲ್ಲಿ ಭಾಗಿಯಾದರು. ಒಬ್ಬ ಯುವಕನ್ನು ಗೆಲ್ಲಿಸಿ ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಿ ಎಂದು ಗ್ರಾಮಸ್ಥರಲ್ಲಿ ಮನವಿ ಮಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+