KS Eshwarappa: ಸತ್ತರೂ ಕೂಡ ಬಿಜೆಪಿ ಧ್ವಜ ಹಾಕೊಂಡೆ ಸಾಯ್ತಿನಿ: ಈಶ್ವರಪ್ಪ ಬಿಜೆಪಿಗೆ...
ಬಾಗಲಕೋಟೆ, ಸೆಪ್ಟೆಂಬರ್ 21: ಸತ್ತರೂ ಕೂಡ ಬಿಜೆಪಿ ಧ್ವಜ ಹಾಕೊಂಡೆ ಸಾಯ್ತಿನಿ ವಿನಃ ಬಿಜೆಪಿಯಿಂದ ಹೊರಗಿರೋನಲ್ಲ. ಸಾಯೋ ತನಕ ರಾಜಕಾರಣ ಮಾಡಿಕೊಂಡೆ ಇರುತ್ತೇನೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಅವರು ಹೇಳಿದರು.
ಈ ಕುರಿತು ಬಾಗಲಕೋಟೆಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನಾನು ರಾಜಕಾರಣ ಮಾಡಿಕೊಂಡೆ ಸಮಾಜ ಸೇವೆ ಮಾಡುತ್ತೇನೆ. ಸಾಯೋ ತನಕ ರಾಜಕಾರಣ ಮಾಡಿಕೊಂಡೆ ಇರ್ತೇನೆ. ರಾಜಕಾರಣ ಸಮಾಜದ ಒಂದು ಅಂಗ ಮಾಡುತ್ತಿರುತ್ತೇನೆ. ಸತ್ತರೂ ಕೂಡ ಬಿಜೆಪಿ ಧ್ವಜ ಹಾಕೊಂಡೆ ಸಾಯ್ತಿನಿ ವಿನಃ ಬಿಜೆಪಿಯಿಂದ ಹೊರಗಿರೋನಲ್ಲ ಎಂದು ಹೇಳಿದರು.

ಬಿಜೆಪಿಯಲ್ಲಿ ಶುದ್ಧೀಕರಣ ಅಗಬೇಕು ಅನ್ನೋದು ನನ್ನೊಬ್ಬನ ಆಸೆ ಅಲ್ಲ. ನಾನು ಆರಂಭದಿಂದಲೂ ಶುರು ಮಾಡಿದ್ದೇನೆ. ನಂತರ ಬಸವನಗೌಡ ಪಾಟೀಲ್ ಯತ್ನಾಳ್, ರಮೇಶ ಜಾರಕಿಹೊಳಿ, ಅರವಿಂದ್ ಲಿಂಬಾವಳಿ ಶುರು ಮಾಡಿದ್ದಾರೆ. ಇವರೆಲ್ಲರು ಸೇರಿ ದೊಡ್ಡ ಸಭೆ ಕರಿಬೇಕು ಅಂತಿದ್ರು. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಕೂಡ ಅಸಮಾಧಾನ ಅತೃಪ್ತಿ ಇದೆ. ಅದು ಶುದ್ಧಿಕರಣ ಆಗಬೇಕು ಎಂದು ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ಹೇಳಿದರು.
ಸಭೆಯಲ್ಲಿ 40 ಜನ ಸೇರಿದ್ರೂ ಅದ್ರಲ್ಲಿ 37 ಜನ ನಮ್ಮ ರಾಜ್ಯಾಧ್ಯಕ್ಷ ಸರಿ ಇಲ್ಲ ಅಂತಾ ಹೇಳಿದ್ರಂತೆ. ಹಿಂಗಿದ್ದಾಗ ಹೇಳಿ,ಶುದ್ದಿಕರಣ ಆಗಬೇಕೋ ಬೇಡ್ವೊ ? ನಾನು ಚುನಾವಣೆಯಲ್ಲಿ ಸೋತೆ. ಅದು ಯಡಿಯೂರಪ್ಪ ಅವರ ಮಗನ ವಿರುದ್ಧ ಅಲ್ಲ,ಮೋದಿಗೆ ಸೋತೆ. ಶಿವಮೊಗ್ಗದ ಜನ ಮೋದಿಗೆ ವೋಟ್ ಕೊಟ್ಟಿದ್ದಾರೆ, ರಾಘವೇಂದ್ರನಿಗಲ್ಲ, ಯಡಿಯೂರಪ್ಪ ಕುಟುಂಬ ಮೋದಿನಾ ಬಿಟ್ಟು ಹೊರಬಂದು ಗೆಲ್ಲಲಿ ನೋಡೋಣ ಎಂದು ಕೆ ಎಸ್ ಈಶ್ವರಪ್ಪ ಅವರು ಸವಾಲ್ ಹಾಕಿದರು.
ನಾನು ರಾಜಕಾರಣ ಮಾಡವ್ನೆ, ರಾಜಕಾರಣ ಬಿಡಲ್ಲ. ನಂಗೆ ಅಖಿಲೇಶ್ ಯಾದವ್ ಕಾಲ್ ಮಾಡಿದ್ರು,ಕಾಲ್ ಮಾಡಬೇಡಿ ಅಂತಾ ಹೇಳಿದೆ. ಕಾಂಗ್ರೆಸ್ ನಾಯಕರು ನಂಗೆ ಪೋನ್ ಮಾಡಿದ್ರು. ನನ್ನ ಕುತ್ತಿಗೆ ಕೊಯ್ದ್ರು ಕೂಡಾ ಬಿಜೆಪಿ ಬಿಟ್ಟು ಹೊರಗಡೆ ಹೋಗಲ್ಲ. ಇದೀಗ ನಾನು ಮೊದಲನೆ ಹೆಜ್ಜೆ ಇಟ್ಟಿರುವೆ,ಇದು ಯಶಸ್ವಿ ಆಗುತ್ತೆ ಅಂದುಕೊಂಡಿದ್ದೇನೆ. ನನ್ನಂಗೆ ಇದು ಬಹಳ ಜನರ ಆಸೆ ಇದೆ, ಬಿಜೆಪಿ ಶುದ್ದಿಕರಣ ಆಗಬೇಕು ಅಂತಾ. ಮೋದಿ ಹೇಳಿದ್ದೇನು, ಕುಟುಂಬದಿಂದ ಪಕ್ಷ ಮುಕ್ತವಾಗಬೇಕು ಅಂತಾ ಮೋದಿ ಅಪೇಕ್ಷೆ ಪಟ್ಟಂತೆ ಆಗಬೇಕು ಎಂದು ಹೇಳಿದರು.
ಯಡಿಯೂರಪ್ಪ, ಮಗ ಬಿವೈ ವಿಜಯೇಂದ್ರ, ಬಿವೈ ರಾಘವೇಂದ್ರ ಅರ್ಥ ಮಾಡಿಕೊಳ್ಳಬೇಕು ತಾನೆ. ಇವರೇ ಕೇಂದ್ರ ಚುನಾವಣೆ ಸದಸ್ಯರು,ಇವ್ರೆ ಎಂ.ಪಿ,ಇವ್ರೇ ರಾಜ್ಯಾಧ್ಯಕ್ಷರು. ಇದನ್ನ ಮೋದಿ ಒಪ್ಪುತ್ತಾರಾ?ಮೋದಿಗೆ ಸಮದಾನ ಇದಿಯಾ?. ಬಿಜೆಪಿ ಪಕ್ಷದ ಋಣ ತೀರಿಸಬೇಕು ಅನ್ನೋದಿದೆ. ಆದರೆ, ಅದಕ್ಕೆ ಪಕ್ಷ ಶುದ್ಧೀಕರಣ ಆಗಬೇಕು ಅಂತಾ ನಾನು ಹೊರಟಿರುವೆ ಎಂದು ಬಾಗಲಕೋಟೆಯಲ್ಲಿ ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.












Click it and Unblock the Notifications