ಈಶ್ವರಪ್ಪ ವಿರುದ್ದ ತೊಡೆ ತಟ್ಟಿದೆ ಮಂಜುನಾಥ್:‌ ಶಾಂತಿ ಕದಡದೆ ಚುನಾವಣೆ ಎದುರಿಸಿ ಎಂದು ಆಯನೂರು ಸವಾಲ್‌

ಶಿವಮೊಗ್ಗ, ಏಪ್ರಿಲ್3:‌ ರಾಜ್ಯ ವಿಧಾನಸಭಾ ಚುನಾವಣೆಗೆ ವೇದಿಕೆ ಸಜ್ಜಾಗಿದ್ದು, ರಾಜಕೀಯ ಎದುರಾಳಿ ಪಕ್ಷಗಳಾಗಿರು ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ನಡುವೆ ಸಾಕಷ್ಟು ಪೈಪೋಟಿ ನಡೆಯುತ್ತಿದ್ರೆ, ಇತ್ತ ಶಿವಮೊಗ್ಗದಲ್ಲಿ ಬಿಜೆಪಿಯ ಇಬ್ಬರು ನಾಯಕರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.

ಹೌದು, ಶಿವಮೊಗ್ಗ ನಗರ ಕ್ಷೇತ್ರಕ್ಕಾಗಿ ಮಾಜಿ ಸಚಿವ ಕೆ.ಎಸ್‌ ಈಶ್ವರಪ್ಪ ಹಾಗೂ ವಿಧಾನ ಪರಿಷತ್‌ ಸದಸ್ಯ ಆಯನೂರು ಮಂಜುನಾಥ್‌ ನಡುವೆ ಜಟಾಪಟಿ ಏರ್ಪಟ್ಟಿದ್ದು, ಇಬ್ಬರ ನಡುವೆ ವೈಯಕ್ತಿಕ ಟೀಕೆ ಟಿಪ್ಪಣಿ ಜೋರಾಗಿದೆ.

I Will Contest This Election Says Ayanur Manjunath

ಇನ್ನೂ ಈ ಕುರಿತು ಶಿವಮೊಗ್ಗದಲ್ಲಿ ಆಯನೂರು ಮಂಜುನಾಥ್‌ ಮಾತನಾಡಿ, ಈಶ್ವರಪ್ಪ ಅವರಿಗೆ ಏನು ಕೊಡಬೇಕು ಎಂಬುದು ಗೊತ್ತಿಲ್ಲ. ಆದರೆ ಏನು ಪಡೆಯಬೇಕು ಎಂಬುದು ಚನ್ನಾಗಿ ಗೊತ್ತು. ದೇವಸ್ಥಾನ, ಪ್ರಾರ್ಥನಾ ಮಂದಿರ ಮಲಿನವಾಗಬಹುದು, ಚುನಾವಣೆಯಲ್ಲಿ ಗೆಲ್ಲಬೇಕು ಎಂದು ಹೊರಟವರೇ ಮಲಿನ ಮಾಡುತ್ತಾರೆ ಎಂದು ಪರೋಕ್ಷವಾಗಿ ಕೋಮಗಲಭೆ ಉಂಟಾಗಬಹುದು ಎಂಬ ಸೂಚನೆ ನೀಡುವ ಮೂಲಕ ಈಶ್ವರಪ್ಪ ವಿರುದ್ದ ಕಿಡಿಕಾರಿದ್ದಾರೆ.

ಹಿಂದು, ಮುಸ್ಲಿಮರು ಯಾರು ಸಂಯಮ ಕಳೆದುಕೊಳ್ಳಬಾರದು. ಪೊಲೀಸರು ಮೈಮರೆಯಬಾರದು. ಚುನಾವಣೆ ವೇಳೆ ಒಂದೆರಡು ಘಟನೆಗಳು ನಡೆಯುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿದ ಅವರು, ಈ ಬಾರಿಯ ಚುನಾವಣೆಗೆ ಸ್ಫರ್ಧಿಸುತ್ತಿರುವ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಅಖಾಡಕ್ಕೆ ಇಳಿಯುತ್ತಿದ್ದೇನೆ ಎಂದು ತಿಳಿಸಿದರು.

ಶಿವಮೊಗ್ಗ ವಿಧಾನ ಸಭಾ ಕ್ಷೇತ್ರದಿಂದ‌ ಕಣಕ್ಕಿಯಿಳಿಯಬೇಕೆಂಬ ಇಚ್ಚೆಯ ಹಿನ್ನಲೆಯಲ್ಲಿ ನನ್ನ ಭಾವನೆಗಳನ್ನು ಸಾರ್ವತ್ರಿಕವಾಗಿ ಪ್ರಕಟ ಮಾಡಿದ್ದೇ. ಪಕ್ಷದ ವೇದಿಕೆಯಲ್ಲಿಯೂ ನನ್ನ ವಿನಂತಿ ಮಾಡಿಕೊಂಡಿದ್ದೇನೆ.ಆದರೆ, ನನ್ನ ಪ್ರಯತ್ನಕ್ಕೆ ಪೂರಕವಾಗಿ ಬಿಜೆಪಿಯಲ್ಲಿ ಟಿಕೆಟ್ ಸಿಗಬಹುದು ಎಂಬ ಲಕ್ಷಣಗಳು ಕಂಡು ಬಂದಿಲ್ಲ. ಕೆಲವರ ಮಕ್ಕಳ ಹೆಸರುಗಳು ಓಡಾಡುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

I Will Contest This Election Says Ayanur Manjunath

ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಪತ್ರಿಕಾಗೋಷ್ಟಿಯಲ್ಲಿ ಹೇಳಿದ ಮಾತನ್ನ ಗಂಭೀರವಾಗಿ ಪರಿಗಣಿಸಿ ಒಂದು ನಿರ್ಧಾರಕ್ಕೆ ಬಂದಿದ್ದೇನೆ. ಅವರ ಏಕವಚನ ಪ್ರಯೋಗ ಅವರ ಶಿಕ್ಷಣ ಮಟ್ಟ ತೋರಿಸುತ್ತದೆ. ಅವರ ಮಾತಿಗೆ ಅನುಕಂಪವಿದೆ.ಅವರ ಮಾತನ್ನು ಸವಾಲಾಗಿ ಸ್ವೀಕರಿಸಿದ್ದೇ‌ನೆ. ಈ ಬಾರಿ ಸ್ಪರ್ಧೆ ಖಚಿತ ಎಂದು ಹೇಳಿದರು.

ಈಶ್ವರಪ್ಪ ನಾಲಿಗೆ ಮೇಲೆ‌ ಹಿಡಿತ ಇಲ್ಲ ಎಂಬುದು ರಾಜ್ಯದ ಜನರಿಗೆ ಗೊತ್ತಿದೆ. ನನಗೆ ಅವನ್ಯಾವ ಲೆಕ್ಕ ಎಂದು ಹೇಳಿದ್ದನ್ನು ಸವಾಲಾಗಿ ಸ್ವೀಕರಿಸುತ್ತೇನೆ. ನನ್ನ ಬಗ್ಗೆ ಯಕಶ್ಚಿತ್ ಆಗಿ ಮಾತನಾಡಿದ ಈಶ್ವರಪ್ಪ ಪ್ರಭಾವಿ ನಾಯಕ. ಅವರು ಶಿವಮೊಗ್ಗ ಬಿಟ್ಟರೆ ಬೇರೆಲ್ಲೂ ಗೆಲ್ಲಲು ಆಗದ ಪ್ರಭಾವಿ‌ ನಾಯಕ ಎಂದು ಲೇವಡಿ‌ ಮಾಡಿದರು.

ನೀವು ಮತ್ತೆ ನಿಮ್ಮ ಮಗ ಚುನಾವಣೆಗೆ ಬರಲೇಬೇಕು. ಈ ಬಾರಿ ತಮ್ಮ‌ ಮಗನಿಗೆ ಟಿಕೆಟ್ ಕೇಳಿದ್ದೀರಿ. ನಿಮ್ಮನ್ನು ಮೂರನೇ ಸ್ಥಾನಕ್ಕೆ ತಳ್ಳಿದ್ದ ರುದ್ರೇಗೌಡರು, ಗಿರೀಶ್ ಪಟೇಲ್, ಸಿದ್ದರಾಮಣ್ಣ ಅವರಿಗೆ ಟಿಕೆಟ್ ಕೇಳಿಲ್ಲ ನಿಮ್ಮ ಮಗನಿಗೆ ಟಿಕೆಟ್ ಕೇಳಿದ್ದೀರಿ, ಆತ ಒಳ್ಳೆಯ ತಳಿಯೇ ಎಂದು ಕಿಡಿಕಾರಿದ ಅವರು, ಈಶ್ವರಪ್ಪ ಅಥವಾ ಅವರ ಮಗ ಚುನಾವಣೆಗೆ ಬರಲಿ ರಾಜಕೀಯದ ಲೆಕ್ಕಗಳನ್ನು ಕೊಡುತ್ತೇನೆ. ಹಾಗೆಯೇ ಎಣಿಸಿಕೊಳ್ಳಲು‌ ಕೊಡುತ್ತೇನೆ ಎಂದರು.

ಈಶ್ವರಪ್ಪ ಅವರಿಗೆ ಅಧಿಕಾರದ ಹಪಾಹಪಿ‌ ಇದೆ. ಮಂತ್ರಿ ಸ್ಥಾನ ಕೊಡಲಿಲ್ಲ ಎಂದು ಅಧಿವೇಶನಕ್ಕೆ ಬರಲಿಲ್ಲ.ಈಶ್ವರಪ್ಪ ಅವರು ಮಂತ್ರಿಯಾಗಿದ್ದಾಗ ಸಂವಿಧಾನವನ್ನು ಅರ್ಥ ಮಾಡಿಕೊಳ್ಳಲಿಲ್ಲ. ಯಡಿಯೂರಪ್ಪ‌ ಸಿಎಂ ಆಗಿದ್ದಾಗ ಮಂತ್ರಿಯಾಗಿದ್ದ ಈಶ್ವರಪ್ಪ‌ ಒಂದು ದಿನವೂ ಹೆಲಿಪ್ಯಾಡ್ ಗೆ ಬಂದು ಸ್ವಾಗತಿಸಲಿಲ್ಲ. ಯಡಿಯೂರಪ್ಪ ಅವರೊಂದಿಗೆ ವೇದಿಕೆ ಹಂಚಿಕೊಳ್ಳಲಿಲ್ಲ. ಯಡಿಯೂರಪ್ಪ ಮೇಲೆ ಆರೋಪ ಬಂದು ಜೈಲಿಗೆ ಹೋದಾಗ ಇಂತ ಸ್ಥಿತಿ ಬಂದರೆ‌ ನೇಣು ಹಾಕಿಕೊಳ್ಳುತ್ತೇನೆ ಎಂದಿದ್ದಿರಿ. ನಿಮ್ಮ ಮೇಲೆ ಆರೋಪ‌ ಬಂದಾಗ ನೇಣು ಹಾಕಿಕೊಳ್ಳುವುದಿರಲಿ ನೇಣು ಹಗ್ಗವನ್ನು ತರಲಿಲ್ಲ. ಬದಲಿಗೆ ಬೇರೆಯ ಹುಡುಗ ಆತ್ಮಹತ್ಯೆ ಮಾಡಿಕೊಂಡ ಎಂದು ತೀವ್ರವಾಗಿ ವಾಗ್ದಾಳಿ ನಡೆಸಿದರು.

ಶಿವಮೊಗ್ಗದಲ್ಲಿ ಮೊನ್ನೆ ನಾಲ್ಕೂವರೆ ಕೋಟಿ ರೂಪಾಯಿ ಸೀರೆ ಸಿಕ್ಕಿಬಿದ್ದಿದೆ. ಒಬ್ಬ 1.50 ಕೋಟಿ ಕೊಂಡೊಯ್ಯುವಾಗ ಸಿಕ್ಕಿಬಿದ್ದಿದ್ದಾನೆ. ಈಶ್ವರಪ್ಪ‌ ಅವರ ಬಳಿ ಅಪಾರ ದುಡ್ಡಿದೆ, ಚುನಾವಣೆಗಾಗಿ ವಾರ್ಡ್ ಗಳಲ್ಲಿ ಹಣ ಡಿಪಾಸಿಟ್ ಇಟ್ಟಿದ್ದೀರಿ ಎಂಬುದು ಗೊತ್ತಿದೆ. ಈ ಬಾರಿ ನಿಮ್ಮ ಹಣ ಲೆಕ್ಕಕ್ಕೆ ಇಲ್ಲ ಎಂಬುದನ್ನು ತೋರಿಸುತ್ತೇನೆ ಎಂದು ಸವಾಲು ಹಾಕಿದರು.

ಶಿವಮೊಗ್ಗದಲ್ಲಿ ಆಗಿರುವ ಅಭಿವೃದ್ಧಿ ಯಡಿಯೂರಪ್ಪ, ರಾಘವೇಂದ್ರ ಮಾಡಿರುವುದು,ಈಶ್ವರಪ್ಪ ಮಾಡಿಲ್ಲ.‌ ಅಲ್ಲೊಂದು ಕಡೆ ಇಲ್ಲೊಂದು ಕಡೆ ಪ್ರಚೋದನಾತ್ಮಕ ಭಾಷಣ ಮಾಡಿ ಗಲಭೆ ಮಾಡಿಸಿ ಚುನಾವಣೆ ಮಾಡುತ್ತೀರಿ. ಈ ಬಾರಿ ಅದು ನಡೆಯಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಈಶ್ವರಪ್ಪ ನೀಡಿದ ಸವಾಲು ಸ್ವೀಕರಿಸಿದ್ದೇನೆ. ನೀವು ನನ್ನ ಸವಾಲು ಸ್ವೀಕರಿಸುತ್ತೀರೋ ಇಲ್ಲವೋ ಪುಕ್ಕಲನಂತೆ ಹಿಂದೆ ಸರಿಯುತ್ತೀರೋ ಯೋಚನೆ ಮಾಡಿ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+