ಮುಂದಿನ ಬಾರಿಯೂ ನಾನೇ ಮುಖ್ಯಮಂತ್ರಿ ಎಂದ ಬೊಮ್ಮಾಯಿ: ಬಿಜೆಪಿ ಪಾಳಯದಲ್ಲಿ ಶುರುವಾಯ್ತು ಸಿಎಂ ಚರ್ಚೆ!

ಮತ್ತೆ ಮುಖ್ಯಮಂತ್ರಿ ಆಗುವ ಆಸೆಯನ್ನ ಸಿಎಂ ಬಸವರಾಜ ಬೊಮ್ಮಾಯಿ ವ್ಯಕ್ತಪಡಿಸಿದರು.

ಬಾಗಲಕೋಟೆ,ಮಾರ್ಚ್‌ 22: 2023 ರಲ್ಲಿ ಮತ್ತೆ ಬಿಜೆಪಿ ಪಕ್ಷವನ್ನ ರಾಜ್ಯದಲ್ಲಿ ಅಧಿಕಾರಕ್ಕೆ ತರಬೇಕು ಎಂದು ಬಿಜೆಪಿ ನಾಯಕರು ಈಗಾಗಲೇ ಭರ್ಜರಿ ಸಿದ್ದತೆಯನ್ನ ನಡೆಸಿದ್ದು, ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ತಯಾರಿ ನಡೆಸಿದ್ದಾರೆ.

ಇನ್ನೂ ಪ್ರಚಾರದ ವೇಳೆ ಮುಂದಿನ ಮುಖ್ಯಮಂತ್ರಿ ವಿಚಾರ ಚರ್ಚೆಗೆ ಬಂದಿದ್ದರೂ ಈ ಕುರಿತು ಮಾಜಿ ಮುಖ್ಯಮಂತ್ರಿ ಬಿ. ಎಸ್‌ ಯಡಿಯೂರಪ್ಪ ಅಅವರು, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಮುಖ್ಯಮಂತ್ರಿ ಯಾರಾಗಬೇಕೆಂದು ಪಕ್ಷ ತೀರ್ಮಾನಿಸುತ್ತದೆ, ಮೊದಲು ಪಕ್ಷವನ್ನ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಶ್ರಮವಹಿಸಬೇಕಿದೆ ಎಂದು ಹೇಳಿಕೆಯನ್ನ ನೀಡಿದ್ರು. ಆದರೆ, ಇದೀಗ ಮುಂದಿನ ಚುನಾವಣೆಯಲ್ಲಿ ಪಕ್ಷ ಗೆಲುವು ಸಾಧಿಸಿದ ಬಳಿಕ ಮತ್ತೆ ನಾನೇ ಮುಖ್ಯಮಂತ್ರಿಯಾಗುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆಯನ್ನ ನೀಡಿದ್ದಾರೆ.

I will Be The Chief Minister Next Time Too Says Chief Minister Basavaraj Bommai

ಹೌದು, ಪಕ್ಷವನ್ನ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಸಾಕಷ್ಟು ಕಮಲ ನಾಯಕರು ಹೈಕಮಾಂಡ್‌ ನಾಯಕರನ್ನ ರಾಜ್ಯಕ್ಕೆ ಕರೆಸುವ ಮೂಲಕ ಪ್ರಚಾರ ಕಾರ್ಯವನ್ನ ನಡೆಸುತ್ತಿದ್ದು, ಈ ವೇಳೆ ಸಿಎಂ ಬೊಮ್ಮಾಯಿ ನಾನೇ ಮುಖ್ಯಮಂತ್ರಿ ಎಂಬ ಹೇಳಿಕೆ ಸಾಕಷ್ಟು ಕುತೂಹಲವನ್ನ ಹುಟ್ಟು ಹಾಕುವಂತೆ ಮಾಡಿದ್ರೆ, ಇತ್ತ ಕಮಲ ಪಾಳಯದಲ್ಲಿ ಈ ಹೇಳಿಕೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಬಿಜೆಪಿ ವರಿಷ್ಠರು ಈಗಾಗಲೇ ಮುಂಬರುವ ವಿಧಾನಸಭಾ ಚುನಾವಣೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲೇ ಎದುರಿಸುತ್ತೇವೆ ಎಂದು ಘೋಷಿಸಿದ್ದಾರೆ. ಇತ್ತ ಸಾರಿಗೆ ಸಚಿವ ಶ್ರೀರಾಮುಲು ಅವರು ಮುಂದಿನ ಬಾರಿಯೂ ಬಸವರಾಜ ಬೊಮ್ಮಾಯಿ ಅವರೇ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಅನೇಕ ಬಾರಿ ಹೇಳಿದ್ದಾರೆ. ಆದರೆ, ಯಡಿಯೂರಪ್ಪ ಸೇರಿ ರಾಜ್ಯದ ಉಳಿದ ಪ್ರಮುಖ ಬಿಜೆಪಿ ನಾಯಕರಾರ‍ಯರೂ ಮುಂದಿನ ಬಾರಿ ಬೊಮ್ಮಾಯಿ ಅವರೇ ಮುಂದಿನ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಎಲ್ಲೂ ಹೇಳಿಲ್ಲ.

I will Be The Chief Minister Next Time Too Says Chief Minister Basavaraj Bommai

ಈ ಹಿಂದೆ ಬಿ ಎಸ್‌ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಸಿಎಂ ಸ್ಥಾನದ ರೇಸ್‌ ನಲ್ಲಿ ಸಾಕಷ್ಟು ಜನ ಹೆಸರುಗಳು ಕೇಳಿ ಬಂದಿದ್ದು, ಸಿಎಂ ಸ್ಥಾನಕ್ಕಾಗಿ ಹೈಕಮಾಂಡ್‌ ನಾಯಕರ ಮೂಲಕ ಲಾಭಿ ನಡೆಸಿದ್ರು, ಆದರೆ, ಈ ಬಾರಿಯೂ ಪಕ್ಷವನ್ನ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಹಿರಿಯ ನಾಯಕರಲ್ಲಿ ಸಾಕಷ್ಟು ಜನರು ಮುಖ್ಯಮಂತ್ರಿ ಸ್ಥಾನದ ಕುರಿತು ಸಾಕಷ್ಟು ಆಸೆಯನ್ನ ಇಟ್ಟುಕೊಂಡಿದ್ರು, ಆದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆಯಿಂದ ಸಾಕಷ್ಟು ಗೊಂದಲ ಹಾಗೂ ಚರ್ಚೆಗೆ ಕಾರಣವಾಗಿದೆ.

ಈಗಾಗಲೇ 2023 ರ ಚುನಾವಣೆಯಲ್ಲಿ ಪಕ್ಷವನ್ನ ಅಧಿಕಾರಕ್ಕೆ ತಂದ ಬಳಿಕ ಹಲವು ನಾಯಕರು ಮುಖ್ಯಮಂತ್ರಿ ಸ್ಥಾನದ ರೇಸ್‌ ನಲ್ಲಿದ್ದು, ಸಿ ಟಿ ರವಿ, ಮುರುಗೇಶ್‌ ನಿರಾಣಿ, ಜಗದೀಶ್‌ ಶೆಟ್ಟರ್‌, ಶೋಭಾ ಕರಂದ್ಲಾಜೆ, ಅರವಿಂದ್‌ ಬೆಲ್ಲದ್‌, ಬಸವನಗೌಡ ಪಾಟೀಲ್‌ ಯತ್ನಾಳ್‌ ಸೇರಿದಂತೆ ಹಲವು ನಾಯಕರು ಸಿಎಂ ಸ್ಥಾನದ ಆಸೆಯನ್ನ ಇಟ್ಟುಕೊಂಡಿದ್ದು, ಈ ವೇಳೆ ಬೊಮ್ಮಾಯಿ ಅವರ ಹೇಳಿಕೆ ಕಮಲ ನಾಯಕರಲ್ಲಿ ಸಾಕಷ್ಟು ಕುತೂಹಲವನ್ನ ಮೂಡಿಸಿದೆ.

I will Be The Chief Minister Next Time Too Says Chief Minister Basavaraj Bommai

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದೇನು?

ಮತ್ತೆ ನಾನು ಸಿಎಂ ಆಗಿ ಬರುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರು ಹೇಳುವ ಮೂಲಕ ಸಿಎಂ ಆಗುವ ಆಶೆ ವ್ಯಕ್ತ ಪಡಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಯೋಜನೆಗಳಿಗೆ ಚಾಲನೆ ನೀಡಿದ ಬಳಿಕ ವೇದಿಕೆಯ ಮೇಲೆ ಮತ್ತೆ ನಾನು ಸಿಎಂ ಆಗ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ತಮ್ಮ ಆಸೆ ಹೊರ ಹಾಕಿದ್ದಾರೆ.

ತಮ್ಮ ಸರ್ಕಾರದ ವಿವಿಧ ಕ್ಷೇತ್ರಗಳಲ್ಲಿ ನಡೆದ ಕಾಮಗಾರಿಗಳ ಬಗ್ಗೆ ಹೇಳುವಾಗ ,ಮತ್ತೆ ಸಿಎಂ ಆಗುವೆ ಎಂದು ಸಿಎಂ ಬೊಮ್ಮಯಿ ಹೇಳಿದ್ದಾರೆ. ಹುನಗುಂದ,ಮುಧೋಳ,ತೇರದಾಳದಲ್ಲಿ ಸಾವಿರಾರು ಕೋಟಿ ರೂಪಾಯಿ ಕಾಮಗಾರಿ ಕೆಲಸ ಆಗಿವೆ. ಬೀಳಗಿಯಲ್ಲಿ ಸಾವಿರಾರು ಕೋಟಿ ರುಪಾಯಿ ಕೆಲಸ ವಾಗಿದೆ ಎಂದು ವೇದಿಕೆ ಮೇಲಿದ್ದ ಬೀಳಗಿ ಶಾಸಕ ಹಾಗೂ ಸಚಿವ ಮುರಗೇಶ ನಿರಾಣಿ ನೋಡುತ್ತ, ಬೀಳಗಿಯಲ್ಲಿ ಸಾವಿರಾರು ಕೋಟಿ ಕೆಲಸ ಆಗಿದೆ. ಆದರೆ ಮುರಗೇಶ ನಿರಾಣಿ ನನ್ನ ತಮ್ಮ ಕ್ಷೇತ್ರಕ್ಕೆ ಕರ್ಕೊಂಡೆ ಹೋಗಿಲ್ಲ. ನಾನೇ ಮತ್ತ ಸಿಎಂ ಆಗಿ ಬೀಳಗಿ ಕ್ಷೇತ್ರಕ್ಕೆ ಬರ್ತೇನೆ ಎಂದ ಸಿಎಂ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+