ನಾನು ಸಿಎಂ ಅಭ್ಯರ್ಥಿಯಾಗಬೇಕಿತ್ತು ಆದರೆ..: ಬಿಜೆಪಿಯಲ್ಲಿ ತಲ್ಲಣ ಸೃಷ್ಟಿಸಿದ ಮಾಜಿ ಸಚಿವ ಶ್ರೀರಾಮುಲು ಹೇಳಿಕೆ
ಹಾವೇರಿ, ನವೆಂಬರ್ 20: ವಿಜಯೇಂದ್ರ ಒಂದೇ ಬಾರಿಗೆ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಬಂದು ಕುಳಿತಿಲ್ಲಾ ಹಂತ ಹಂತವಾಗಿ ಬಂದಿದ್ದಾರೆ. ನಾನು ಸಿಎಂ ಅಭ್ಯರ್ಥಿಯಾಗಬೇಕಿತ್ತು ಆದರೆ ವಾತಾವರಣ ಕೂಡಿಬಂದಿಲ್ಲ ಆದರೆ ವಿಶ್ವಾಸವಿದೆ ಎಂದು ಶ್ರೀರಾಮುಲು ಅಚ್ಚರಿ ಹೇಳಿಕೆಯನ್ನ ನೀಡಿದ್ದಾರೆ.
ಬಿಜೆಪಿಯಲ್ಲಿ ಕುಟುಂಬ ರಾಜಕಾರಣಕ್ಕೆ ಮಣಿಹಾಕಲಾಯಿತು ಎಂಬ ಮಾಧ್ಯಮಗಳ ಪ್ರಶ್ನೆಗೆ ಶ್ರೀರಾಮುಲು ಉತ್ತರಿಸಿ, ವಿಜಯೇಂದ್ರ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮಗನಾಗಿ ಹುಟ್ಟಿದ್ದೆ ತಪ್ಪಾ ಎಂದು ರಾಮುಲು ಪ್ರಶ್ನಿಸಿದರು.

ಕಾಂಗ್ರೆಸ್‌ನವರು ದೊಡ್ಡ ಸಂಖ್ಯೆಯಲ್ಲಿದ್ದಾರೆ 132 ಸ್ಥಾನ ಬಂದಿದ್ದು ನಾವು ಕೆಡವಲು ಹುಚ್ಚರಾ ಅವರ ಸರ್ಕಾರ ನಾವು ಬೀಳಿಸುವದಿಲ್ಲ. ಐದು ವರ್ಷ ಅವರ ಅಧಿಕಾರ ಪೂರೈಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಸುಮ್ಮನೆ ಜನರ ಡೈವರ್ಟ ಮಾಡಲು ಆ ಶಾಸಕನ ಸಂಪರ್ಕಿಸಿದ್ದಾರೆ ಈ ಶಾಸಕನ ಸಂಪರ್ಕಿಸಿದ್ದಾರೆ ಎಂದು ಸುದ್ದಿ ಹಬ್ಬಿಸುತ್ತಾರೆ. ಅವರು ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಈ ರೀತಿ ಡೈವರ್ಟ ಮಾಡಲು ಈ ರೀತಿ ಮಾಡುತ್ತಾರೆ ಎಂದು ರಾಮುಲು ಆರೋಪಿಸಿದರು.
ಸರ್ಕಾರದಲ್ಲಿ ಅಭಿವೃದ್ದಿಗೆ ಹಣ ನೀಡಲಾಗುತ್ತಿಲ್ಲಾ ಅವರಲ್ಲಿ ಮೂರು ಗುಂಪುಗಳಿವೆ ನಾವೇನು ಮಾಡುವದಿಲ್ಲಾ ಅವರೇ ಒಡೆದು ಹೋಗುತ್ತಾರೆ. ಜನ ನಮನ್ನ ತಿರಸ್ಕಾರ ಮಾಡಿದ್ದಾರೆ ಅವರನ್ನ ಅಧಿಕಾರಕ್ಕೆ ತಂದಿದ್ದಾರೆ ಅವರು ಅದನ್ನ ಪೂರೈಸಲಿ. ಸರ್ಕಾರದಲ್ಲಿರುವ ಒಬ್ಬ ಶಾಸಕನನ್ನು ನಾವು ಸಂಪರ್ಕಿಸಿಲ್ಲಾ. ಅಷ್ಟು ದೊಡ್ಡ ಸಂಖ್ಯೆಯಲ್ಲಿದ್ದರು ಅವರಿಂದ ಏನು ಮಾಡಲಿಕ್ಕೆ ಆಗುತ್ತಿಲ್ಲಾ. ಸರ್ಕಾರದಲ್ಲಿ ನೌಕರಿ ಮಾಡಿದವರಿಗೆ ವೇತನ ನೀಡಲು ಹಣವಿಲ್ಲಾ ಬಹಳ ಹೀನಾಯವಾಗಿ ಸರ್ಕಾರ ನಡೆಯುತ್ತಿದೆ.
ನಾನು ಸದ್ಯಕ್ಕೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಯಾವುದೇ ಸಾಧ್ಯತೆ ಇಲ್ಲ. ಲೋಕಸಭೆ ಚುನಾವಣೆಯಲ್ಲಿ 25 ಸ್ಥಾನ ಗೆದ್ದಿದ್ದೇವು ಮತ್ತೆ ಪಕ್ಷ ಸಂಘಟಿಸುವ ಕಳೆದ ಬಾರಿ 25 ಸ್ಥಾನ ಹೆಚ್ಚು ಸ್ಥಾನ ಗಳಿಸುತ್ತೇವೆ ವಿಶ್ವಾಸವನ್ನ ರಾಮುಲು ವ್ಯಕ್ತಪಡಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ಪ್ರತಿಪಕ್ಷನಾಯಕ ಆರ್.ಅಶೋಕ ಜೋಡೆತ್ತುಗಳು ಅವುಗಳ ಜೊತೆ ಕಳ್ಳೆತ್ತುಗಳಿವೆ ಎಂದು ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆಶಿವಕುಮಾರ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಕಳ್ಳೆತ್ತುಗಳು ಬಂಡವಾಳ ಏನು ಎಂಬುದು ಜನರಿಗೆ ದಿನದಿಂದ ದಿನಕ್ಕೆ ಗೊತ್ತಾಗಲಾರಂಭಿಸಿದೆ ಎಂದು ತಿಳಿಸಿದರು. ಕಳ್ಳೆತ್ತುಗಳ ನಿಜವಾದ ಬಣ್ಣ ರಾಜ್ಯದ ಜನರಿಗೆ ಗೊತ್ತಾಗಲಾರಂಭಿಸಿದೆ. ಕಳ್ಳೆತ್ತುಗಳ ಜೊತೆ ನಮ್ಮ ಜೋಡೆತ್ತುಗಳ ಒಳ್ಳೇಯದಾಗಿ ಕೆಲಸ ಮಾಡಲಿವೆ.
ಇನ್ನೂ ರಾಜ್ಯದಲ್ಲಿ ಅಭಿವೃದ್ಧಿ ವಿಚಾರ ನಿಂತ ನೀರಾಗಿದೆ. ಅವರ ಪಕ್ಷದ ಶಾಸಕರೇ ತಮ್ಮ ಕ್ಷೇತ್ರಗಳಲ್ಲಿ ಒಂದು ರೂಪಾಯಿ ಅನುಧಾನ ತರುವ ಶಕ್ತಿ ಹೊಂದಿಲ್ಲಾ. ರಾಜ್ಯದಲ್ಲಿ ಯಾವುದೇ ಅಭಿವೃದ್ದಿ ಕೆಲಸಗಳು ಆಗುತ್ತಿಲ್ಲ ಒಂದು ರೂಪಾಯಿ ಅನುಧಾನ ಕೊಡಲು ಸಹ ಆಗುತ್ತಿಲ್ಲಎಂದು ಮಾಜಿ ಸಚಿವ ಶ್ರೀರಾಮುಲು ಆರೋಪಿಸಿದರು.












Click it and Unblock the Notifications