ಸರ್ಕಾರ ಬೀಳಿಸಲು ಹೊರಟ ಕಿಂಗ್‌ಪಿನ್ ಯಾರೆಂದು ಗೊತ್ತಿದೆ: ಕುಮಾರಸ್ವಾಮಿ

Recommended Video

      ಮೈತ್ರಿ ಸರ್ಕಾರವನ್ನು ಪತನಗೊಳಿಸಲು ಹೋರಾಟ ಕಿಂಗ್ ಪಿನ್ ಬಗ್ಗೆ ಮಾತನಾಡಿದ ಎಚ್ ಡಿ ಕೆ | Oneindia Kannada

      ಬೆಂಗಳೂರು, ಸೆಪ್ಟೆಂಬರ್ 14: ಬಿಜೆಪಿಯವರು ಸರ್ಕಾರ ಬೀಳಿಸಲು ಹೊರಟಿದ್ದಾರೆ, ಅವರು ಮಾಡಿಕೊಳ್ಳಲಿ. ಅದಕ್ಕೆ ಪ್ರತಿತಂತ್ರ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

      ಬಿಬಿಎಂಪಿ ಕಡತಗಳಿಗೆ ಬೆಂಕಿ ಇಟ್ಟವರು ಯಾರು ಎನ್ನುವುದು ಗೊತ್ತಿದೆ. ಅವರೇ ಇದರ ಕಿಂಗ್‌ ಪಿನ್. ಲಾಟರಿ ದಂಧೆ ಮಾಡುತ್ತಿದ್ದವರಿಂದ ಹಣ ಸಂಗ್ರಹಿಸಲಾಗಿದೆ. ಸಕಲೇಶಪುರದಲ್ಲಿ ಕಾಫಿ ಪ್ಲಾಂಟರ್ ಒಬ್ಬರು ರೆಸಾರ್ಟ್ ಮಾಡಲು ಹೊರಟವರು, ಜನ್ಮಕೊಟ್ಟ ಮಗುವಿಗೆ ಗುಂಡಿಕ್ಕಿ ಕೊಂದವರು ಅವರು. ಈಗ ಜೈಲಿನಲ್ಲಿದ್ದಾರೆ. ಸರ್ಕಾರ ಬೀಳಿಸುವ ಪ್ರಯತ್ನ ಮಾಡುತ್ತಿರುವವರೂ ಅವರೇ.

      ಕಾಂಗ್ರೆಸ್‌ ಶಾಸಕರಿಗೆ ಹಣದ ಆಮಿಷವೊಡ್ಡುತ್ತಿದ್ದಾರೆ. ಆಮಿಷಕ್ಕೆ ಬಗ್ಗದಿದ್ದರೆ ಧಮಕಿ ಹಾಕುತ್ತಾರೆ. ಈ ಎಲ್ಲ ಬೆಳವಣಿಗೆಗಳು ನನಗೆ ತಿಳಿದಿವೆ. ಕಾನೂನು ಕ್ರಮ ತೆಗೆದುಕೊಳ್ಳಲು ಸಿದ್ಧತೆ ನಡೆಸಿದ್ದೇನೆ ಎಂದು ಕುಮಾರಸ್ವಾಮಿ ಸೂಚ್ಯವಾಗಿ ಹೇಳಿದರು.

      i know the kingpin who trying to disrupt coalition government HD Kumaraswamy

      ಬಿಜೆಪಿಯವರು ರೆಸಾರ್ಟ್ ಆದರೂ ಮಾಡಲಿ, ಗುಡಿಸಲನ್ನಾದರೂ ಮಾಡಲಿ. ಸದ್ಯ ಬಿಜೆಪಿಯವರು ಅಡ್ವಾನ್ಸ್ ಪೇಮೆಂಟ್ ಮಾಡಿದ್ದಾರೆ.

      ಬಿಜೆಪಿಯ ಕೆಲ ಶಾಸಕರ ಜತೆ ನನ್ನ ಹಳೆಯ ನಂಟು ಈಗಲೂ ಇದೆ. ಅನೇಕ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ಆದರೆ, ಅವರು ಮೈಸೂರು ಭಾಗದವರಲ್ಲ. ನಾನಾಗಿಯೇ ಬಿಜೆಪಿ ಶಾಸಕರನ್ನು ಸಂಪರ್ಕಿಸುವುದಿಲ್ಲ. ಸರ್ಕಾರ ಉಳಿಸಿಕೊಳ್ಳಲು ಏನು ಬೇಕೋ ಅದನ್ನು ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

      ಜಾರಕಿಹೊಳಿ ಸಹೋದರರು ನಮ್ಮ ಸಂಪರ್ಕದಲ್ಲಿದ್ದಾರೆ. ಎರಡು ದಿನಗಳಲ್ಲಿ ಸರ್ಕಾರದಲ್ಲಿ ಬದಲಾವಣೆ ಆಗುತ್ತದೆ. ಸಂಪುಟ ವಿಸ್ತರಣೆ ವಿಚಾರದಲ್ಲಿ ಕಾಂಗ್ರೆಸ್ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+