Siddaramaiah: ಸಿದ್ದರಾಮಯ್ಯ 5 ವರ್ಷ ಅಧಿಕಾರದಲ್ಲಿ ಇರ್ತಾರೋ ಇಲ್ವೋ ಗೊತ್ತಿಲ್ಲ: ಸ್ಪೋಟಕ ಹೇಳಿಕೆ ನೀಡಿದ ಪಾಟೀಲ್
ಹುಬ್ಬಳ್ಳಿ, ನವೆಂಬರ್ 29: ಮುಡಾ ಹಗರಣದ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಗೆ ವಿಪಕ್ಷಗಳು ಪಟ್ಟು ಹಿಡಿದಿದ್ದಾರೆ. ಈ ನಡುವೆ ಕಾಂಗ್ರೆಸ್ ಪಾಳಯದಲ್ಲೂ ಮುಖ್ಯಮಂತ್ರಿ ಸ್ಥಾನದ ಕುರಿತು ಗುಸು ಗುಸು ಚರ್ಚೆ ನಡೆಯುತ್ತಿದ್ದು, ಸಿದ್ದರಾಮಯ್ಯ ಐದು ವರ್ಷ ಅಧಿಕಾರದಲ್ಲಿ ಇರ್ತಾರೋ ಇಲ್ವೋ ಗೊತ್ತಿಲ್ಲ ಎಂದು ಸಿದ್ದರಾಮಯ್ಯ ಅವರ ಆಪ್ತ ಬಿ ಆರ್ ಪಾಟೀಲ್ ಸ್ಟೋಟಕ ಹೇಳಿಕೆಯನ್ನ ನೀಡಿದ್ದಾರೆ.
ಈ ಕುರಿತು ಶುಕ್ರವಾರ ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಐದು ವರ್ಷ ಇರ್ತಾರೋ ಇಲ್ವೋ ಗೊತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಐದು ವರ್ಷ ಇರಬೇಕು ಅಂತ ಬಯಸುತ್ತೆವೆ. ಆದರೆ, ಹೈಕಮಾಂಡ್ ಏನು ನಿರ್ಧಾರ ಮಾಡುತ್ತೆ ಗೊತ್ತಿಲ್ಲ ಎಂದು ಮುಖ್ಯಮಂತ್ರಿಗಳ ಆಪ್ತ ಸಲಹೆಗಾರ ಹಾಗೂ ಆಳಂದ್ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿರುವಂತಹ ಬಿ ಆರ್ ಪಾಟೀಲ್ ಅಚ್ಚರಿ ಹೇಳಿಕೆ ನೀಡಿದ್ದಾರೆ.

ಹೈಕಮಾಂಡ್ ಬೇರೆ ನಿರ್ಧಾರ ತೆಗೆದುಕೊಂಡರೇ ನಾವೇನು ಮಾಡದಕ್ಕೆ ಆಗುತ್ತದೆ. ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ಇನ್ನೂ ದೊಡ್ಡ ಜವಾಬ್ದಾರಿ ನೀಡಬಹುದು. ಆದರೆ, ಸಿದ್ದರಾಮಯ್ಯ ಅವರನ್ನು ಬದಲಾವಣೆ ಮಾಡಬೇಕು ಅಂತ ಯಾವ ಶಾಸಕರ ಮನಸ್ಸಿನಲ್ಲಿ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 5 ವರ್ಷಗಳ ಕಾಲ ಅಧಿಕಾರದಲ್ಲಿ ಇರುತ್ತಾರೋ ಇಲ್ಲವೋ ಗೊತ್ತಿಲ್ಲ ಎಂದು ಬಿ ಆರ್ ಪಾಟೀಲ್ ಹೇಳಿಕೆ ನೀಡಿದರು.
ಐದು ಗ್ಯಾರಂಟಿಗಳು ಬಹಳಷ್ಟು ಯಶಸ್ವಿಯಾಗಿ ಅನುಷ್ಠಾನ ಆಗುತ್ತಿವೆ. ಇದರಿಂದ ಬಹಳಷ್ಟು ರಾಜಕೀಯ ಲಾಭ ಆಗುತ್ತಿದೆ. ನಮ್ಮ ಕಾಪಿಯನ್ನೇ ಮೋದಿ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಗ್ಯಾರಂಟಿ ನಿಲ್ಲುವುದಿಲ್ಲ. ಇದರಲ್ಲಿ ಯಾವುದೇ ಅನುಮಾನ ಬೇಡ. ಬಿಪಿಎಲ್ ಕಾರ್ಡ್ ವಿವಾದ ಬಿಜೆಪಿ ಹುಟ್ಟಿಸಿದ ಭಯ. ಆದರೆ ಯಾವುದೇ ಗ್ಯಾರಂಟಿ ನಿಲ್ಲೋದಿಲ್ಲಾ. ಇದನ್ನು ಪರಿಹಾರ ಮಾಡುತ್ತೇವೆ ಎಂದು ಬಿ ಆರ್ ಪಾಟೀಲ್ ಹೇಳಿಕೆ ನೀಡಿದ್ದಾರೆ.
ಈ ಬಾರಿಯ ಬಜೆಟ್‌ನಲ್ಲಿ ಗ್ಯಾರಂಟಿಯಿಂದ ಆರ್ಥಿಕ ಹೊರೆ ಆಗದಂತೆ ಹೊಸ ಆರ್ಥಿಕ ನೀತಿ ಮುಖ್ಯಮಂತ್ರಿಗಳು ನೀಡ್ತಾರೆ. ನಮಗೆ ಮೊದಲೇ ಗೊತ್ತಿತ್ತು. ಇಷ್ಟು ಖರ್ಚು ಆಗುತ್ತೆ ಅಂತಾ. ಆರ್ಥಿಕ ಸಮಸ್ಯೆ ನಮಗೆ ಮಾತ್ರವಲ್ಲಾ ಎಲ್ಲಾ ರಾಜ್ಯಗಳಿಗಿದೆ. ಸಮಸ್ಯೆ ಆಗುತ್ತಿದೆ ಸ್ವಲ್ಪ ಹೊರೆ ಆಗುತ್ತೆ. ದೊಡ್ಡ ಸಮಸ್ಯೆಗೆ ಕೈ ಹಾಕಿದಾಗ ಸ್ವಲ್ಪ ಸಮಸ್ಯೆ ಉದ್ಭವ ಆಗುತ್ತೆ. ದೊಡ್ಡ ಕನಸನ್ನು ಕಂಡು ಬಡವರ ಪರವಾಗಿ ಕಾರ್ಯಕ್ರಮ ಹಮ್ಮಿಕೊಂಡಾಗ ಭೌತಿಕ ಅಭಿವೃದ್ಧಿಗೆ ಹೊಡೆತ ಬೀಳುತ್ತೆ ಎಂದು ಮುಖ್ಯಮಂತ್ರಿಗಳ ಆಪ್ತ ಸಲಹೆಗಾರ ಹಾಗೂ ಆಳಂದ್ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿರುವಂತಹ ಬಿ ಆರ್ ಪಾಟೀಲ್ ಹೇಳಿದರು.
ನಮ್ಮ ಕಾಪಿಯನ್ನೆ ಮೋದಿ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಗ್ಯಾರಂಟಿ ನಿಲ್ಲುವುದಿಲ್ಲ. ಇದರಲ್ಲಿ ಯಾವುದೇ ಅನುಮಾನ ಬೇಡ. ಬಿಪಿಎಲ್ ಕಾರ್ಡ್ ವಿವಾದ ಬಿಜೆಪಿ ಹುಟ್ಟಿಸಿದ ಭಯ ಹುಟ್ಟಿಸಿದ್ದು, ಆದರೆ ಯಾವುದೇ ಗ್ಯಾರಂಟಿ ನಿಲ್ಲುವುದಿಲ್ಲ. ನಮಗೆ ಕೇಂದ್ರ ಅನ್ಯಾಯ ಮಾಡುತ್ತಿದೆ. ನಮ್ಮ ಪಾಲು ನಮಗೆ ನೀಡುತ್ತಿಲ್ಲ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಧೈರ್ಯ ಇದ್ದರೇ ಮೋದಿಗೆ ಹೇಳಲಿ ಎಂದು ಹೇಳಿದರು.
ಮೂರು ಚುನಾವಣೆಯಲ್ಲಿ ಜನ ಉತ್ತರ ನೀಡಿದ್ದಾರೆ. ಮುಡಾ ಹಗರಣ ನೂರಕ್ಕೆ ನೂರರಷ್ಟು ಮುಕ್ತರಾಗಿ ಸಿಎಂ ಹೊರ ಬರ್ತಾರೆ ಎಂದ ಅವರು, ಹಗರಣಗಳು ಬರೀ ನಮ್ಮ ಕಾಲದಲ್ಲಿ ಮಾತ್ರವಲ್ಲ ಎಲ್ಲಾ ಸರ್ಕಾರದಲ್ಲಿ ಆಗಿವೆ. ವಕ್ಪ್ ಬೋರ್ಡ್ ವಿಚಾರವಾಗಿ ಬಿಜೆಪಿ ಸಹ ನೋಟಿಸ್ ನೀಡಿತ್ತು. ಇದು ದುರುದೇಶದಿಂದ ನಮ್ಮ ಸರ್ಕಾರಕ್ಕೆ ಗೂಭೆ ಕೂರಿಸುಬೇಕು, ಕೆಟ್ಟ ಹೆಸರು ತರಬೇಕು ಅಂತ ಮಾಡುತ್ತಿದ್ದಾರೆ.
ಬಿಜೆಪಿಯವರು ಒಂದಾಗಿ ವಕ್ಪ್ ಬೋರ್ಡ್ ಜನಜಾಗೃತಿ ಮಾಡಲಿ ಅವರಲ್ಲಯೆ ಒಡಕಿದ್ದು, ಇನ್ನೂ ಎಷ್ಟು ಬಣ ಇರುತ್ತೆ ಗೊತ್ತಿಲ್ಲ. ಯಾರ್ಯಾರು ದೆಹಲಿಯಲ್ಲಿ ಕುಳಿತು ಯಾರ್ಯಾರಿಕೆ ಆಪರೇಟಿಂಗ್ ಮಾಡತ್ತಿದ್ದಾರೋ ಯಾರ್ಯಾರು ಕೈ ಚಳಕ ಎಲ್ಲೆಲಿದೆಯೋ ಗೊತ್ತಿಲ್ಲ. ಮುರಳಿ ಮನೋಹರ ಜೋಶಿ ಅಂತಹವರನ್ನೇ ಮೂಲೆಗುಂಪು ಮಾಡಿದರು ಇವರೆಲ್ಲಾ ಯಾವ ಲೆಕ್ಕ ಎಂದು ಬಿ ಆರ್ ಪಾಟೀಲ್ ಹೇಳಿದರು.












Click it and Unblock the Notifications