ಬಿವೈ ವಿಜಯೇಂದ್ರರನ್ನು ನಾನು ರಾಜ್ಯಾಧ್ಯಕ್ಷ ಎಂದು ಒಪ್ಪಿಲ್ಲ: ಅಚ್ಚರಿ ಹೇಳಿಕೆ ನೀಡಿದ ರಮೇಶ್ ಜಾರಕಿಹೊಳಿ
ಬೆಳಗಾವಿ, ಜುಲೈ 30: ನಮ್ಮ ಹೈಕಮಾಂಡ್‌ಗೆ ನಾವು ಮುಡಾ ಜೊತೆಗೆ ಬಳ್ಳಾರಿ ಪಾದಯಾತ್ರೆ ಮಾಡಲು ಅನುಮತಿ ಗೆ ಕೇಳುತ್ತೇವೆ. ನಾನು ಪಾದಯಾತ್ರೆ ಕುರಿತು ರಾಜ್ಯಾಧ್ಯರ ಬಳಿ ಕೇಳಲ್ಲ, ನಮ್ಮದು ರಾಷ್ಟ್ರೀಯ ಪಕ್ಷ, ನಾನು ಪಕ್ಷದ ಶಿಸ್ತಿನ ಸಿಪಾಯಿ.ನಾನು ರಾಜ್ಯಾಧ್ಯಕ್ಷರ ಒಪ್ಪಿಗೆ ಕೇಳಲ್ಲ. ನಾನು ಅವರ ಜೊತೆಗೆ ಮಾತನಾಡುವುದಿಲ್ಲ. ನಾನು ಬಿಜೆಪಿ ರಾಜ್ಯಾಧ್ಯಕ್ಷರನ್ನು ಒಪ್ಪಿಲ್ಲಾ, ಒಪ್ಪುವುದಿಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಚ್ಚರಿ ಹೇಳಿಕೆ ನೀಡಿದ್ದಾರೆ.
ಈ ಕುರಿತು ಗೋಕಾಕ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಚಿವ ಹಾಗೂ ಶಾಸಕ ರಮೇಶ್ ಜಾರಕಿಹೊಳಿ ಅವರು ಮಾತನಾಡಿ, ನಮ್ಮ ಬಿಜೆಪಿ ರಾಜ್ಯಾಧ್ಯಕ್ಷರು ಪಾದಯಾತ್ರೆ ಮಾಡುತ್ತಿರುವುದನ್ನು ಸ್ವಾಗತ ಮಾಡ್ತಿನಿ, ಅದಕ್ಕಿಂತ ಮುಂಚಿತವಾಗಿ ದೆಹಲಿ ಹೈಕಮಾಂಡ್‌ಗೆ ಮನವಿ ಮಾಡ್ತೀನಿ ಮುಡಾಗಿಂತಲೂ ವಾಲ್ಮಿಕಿ ಹಗರಣ ದೊಡ್ಡದಿದೆ ಅದನ್ನು ಖಂಡಿಸಿ ಬಳ್ಳಾರಿ ಪಾದಯಾತ್ರೆಗೆ ಅವಕಾಶ ನೀಡುವಂತೆ ಮನವಿ ಮಾಡುವುದಾಗಿ ತಿಳಿಸಿದ್ದಾರೆ.

ಮೈಸೂರು ನಗರಾಭಿವೃದ್ದಿ ಪ್ರಾಧಿಕಾರಕ್ಕಿಂತಲೂ ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಹಗರಣ ದೊಡ್ಡದು, ನಾವು ಮುಡಾ ಜೊತೆಗೆ ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಹಗರಣ ಖಂಡಿಸಿ ಕೂಡಲ ಸಂಗಮದಿಂದ ಬಳ್ಳಾರಿವರೆಗೆ ಪಾದಯಾತ್ರೆ ನಡೆಸಲು ಸಿದ್ದರಿದ್ದೇವೆ. ಈ ಕುರಿತು ಪಾದಯಾತ್ರೆ ನಡೆಸಲು ಅನುಮತಿ ನೀಡುವಂತೆ ಹೈಕಮಾಂಡ್ ಬಳಿ ಕೇಳ್ತೀನಿ ಎಂದು ಮಾಜಿ ಸಚಿವ ರಮೇಶ್ ಕುಮಾರ್ ಹೇಳಿದ್ದಾರೆ.
ಇನ್ನೂ ಮುಡಾ ಹಗರಣದ ಕುರಿತು ನ್ಯಾಯಾಂಗ ತನಿಖೆ ನಡೆಯುತ್ತಿದೆ. ಪಾದಯಾತ್ರೆ ಮೈಸೂರಿಗೆ ಸೀಮಿತ ಮಾಡಬಾರದು, ರಾಜ್ಯದಲ್ಲಿ ವಾಲ್ಮೀಕಿ ಜನಾಂಗ ದೊಡ್ಡದಿದೆ. ಮುಸ್ಲಿಂ, ಲಿಂಗಾಯತ, ಎಸ್‌ಸಿ ಜನಾಂಗದ ಬಳಿಕ ವಾಲ್ಮೀಕಿ ಜನಾಂಗ ಬರುತ್ತದೆ. ಕುರುಬರು ಮತ್ತು ವಾಲ್ಮೀಕಿ ಜನಾಂಗದವರು ಸಮಾನವಾಗಿದ್ದೇವೆ ಎಂದು ಹೇಳಿದರು.
ನಮ್ಮ ಜನಾಂಗಕ್ಕೆ ಮೋಸ ಮಾಡಿರುವ ಸರ್ಕಾರದ ವಿರುದ್ಧ ಬಳ್ಳಾರಿ ಪಾದಯಾತ್ರೆ ಮಾಡಬೇಕಿದೆ. ನಾನೇ ಹೈಕಮಾಂಡ್ ಅನುಮತಿ ಕೇಳ್ತಿನಿ. ನಾನು ಯತ್ನಾಳ್ ಸೇರಿ ಇನ್ನಷ್ಟು ಶಾಸಕರನ್ನು ಸೇರಿಸಿಕೊಂಡು ಕೂಡಲ ಸಂಗಮದಿಂದ ಬಳ್ಳಾರಿ ವರೆಗೂ ವಾಲ್ಮೀಕಿ ನಿಗಮದಲ್ಲಿನ ಹಗರಣ ಹಾಗೂ ಎಸ್‌ಸಿ, ಎಸ್‌ಟಿ ಹಣವನ್ನು ಗ್ಯಾರಂಟಿಗೆ ಬಳಕೆ ಮಾಡಿರುವುದನ್ನು ಖಂಡಿಸಿ ಪಾದಯಾತ್ರೆ ನಡೆಸಲು ಅನುಮತಿ ಕೇಳಲಾಗಿದೆ. ಹೈಕಮಾಂಡ್ ನಾಯಕರು ಸ್ವಲ್ಪ ತಡೀರಿ ಎಂದು ಹೇಳಿದ್ದಾರೆ. ನಾನು ಯತ್ನಾಳ ಸೇರಿ ಹಲವು ಶಾಸಕರು ಸೇರಿಕೊಂಡು ಬೆಳಗಾವಿಯಲ್ಲಿ ಸಭೆ ನಡೆಸುತ್ತೇವೆ ಎಂದು ಹೇಳಿದರು.
ಮುಡಾಕ್ಕಿಂತಲೂ ವಾಲ್ಮಿಕಿ ನಿಗಮದಲ್ಲಿ ನಡೆದಿರುವುದು ದೊಡ್ಡ ಹಗರಣ ಹಾಗಾಗಿ ನಾನು ಹಾಗೂ ಬಸನಗೌಡ ಪಾಟೀಲ ಯತ್ನಾಳ್ ಮತ್ತು ಇನ್ನು ಕೆಲವು ಶಾಸಕರು ಸೇರಿ ಕೂಡಲ ಸಂಗಮದಿಂದ ಪಾದಯಾತ್ರೆ ನಡೆಸಬೇಕೆಂದುಕೊಂಡಿದ್ದೇವೆ. ಈಗಾಗಲೆ ಹೈಕಮಾಂಡ್ ಬಳಿ ಒಮ್ಮೆ ಕೇಳಿದ್ದೇನೆ, ಅವರು ಸ್ವಲ್ಪ ತಡೆಯಿರಿ ಎಂದಿದ್ದಾರೆ. ಇಡೀ ಪಕ್ಷ ಒಟ್ಟಾಗಿ ಪಾದಯಾತ್ರೆ ಮಾಡಿದ್ರೆ ಉತ್ತಮ ಇಲ್ಲವಾದರೆ ನಾನು ಯತ್ನಾಳ್ ಹಾಗು ಕೆಲವು ಶಾಸಕರು ಸೇರಿ ಪಾದಯಾತ್ರೆ ಮಾಡಬೇಕೆಂದುಕೊಂಡಿದ್ದೇವೆ ಇನ್ನೂ ದಿನಾಂಕ ನಿಗದಿಯಾಗಿಲ್ಲ ಕುಳಿತು ಚರ್ಚಿಸಿ ತೀರ್ಮಾನ ಕೈಗೊಳ್ತೇವೆ ಎಂದರು.












Click it and Unblock the Notifications