ಸಿದ್ದರಾಮಯ್ಯ ಅಭಿನಂದನೆ ಸಲ್ಲಿಸಿದ ದೇವೇಗೌಡರ ಮೊಮ್ಮಗ

ಬೆಂಗಳೂರು, ಜೂನ್‌ 14: ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದನೆಗಳು ಸಲ್ಲಿಸುತ್ತೇನೆ. ಈಗಲಾದರೂ ಕೇಂದ್ರದ ಸಭೆಗೆ ಹೋಗ್ತಿದ್ದಾರೆ. ಇಷ್ಟು ದಿನ ಕೇಂದ್ರದ ಸಭೆಗೆ ಹೋಗಿರಲಿಲ್ಲ. 16ನೇ ಹಣಕಾಸು ಸಭೆಗೆ ಹೋಗಿದ್ದಾರೆ. ಈ ಬಗ್ಗೆ ಪ್ರಧಾನಿಗಳ ಬಗ್ಗೆ ಕೂತು ಚರ್ಚೆ ಮಾಡಲಿ. ನನಗೆ ವಿಶ್ವಾಸ ಇದೆ ಪ್ರಧಾನಿಗಳು ಸ್ಪಂದನೆ ಮಾಡುತ್ತಾರೆ ಎಂದು. ನಾವು ಜೊತೆಯಲಿದ್ದೇವೆ ಕುಮಾರಸ್ವಾಮಿಯವರು ಜೊತೆಯಲ್ಲಿ ಇರ್ತಾರೆ. ಖಂಡಿತವಾಗಿ ನ್ಯಾಯ ಸಿಗುತ್ತೆ ಎಂದು ದೇವೇಗೌಡರ ಮೊಮ್ಮಗ ಹಾಗೂ ಜೆಡಿಎಸ್‌ ಯುವ ಘಟಕದ ಅಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು ಹೇಳಿದರು.

ಈ ಕುರಿತು ಶನಿವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ರಾಜ್ಯಕ್ಕೆ ಅನುದಾನ ಕೊರತೆಯಾಗಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಕೂತು ಚರ್ಚೆ ಮಾಡಲಿ ಎಂದು ನಿಖಿಲ್ ಕುಮಾರಸ್ವಾಮಿಯವರು ಸಲಹೆ ನೀಡಿದರು. ಕೇಂದ್ರ ಸರ್ಕಾರ ಜಾತಿಗಣತಿ ಸಮೀಕ್ಷೆ ಮಾಡುವುದಾಗಿ ಘೋಷಣೆ ಮಾಡಿದೆ.

I congratulate Chief Minister Siddaramaiah Said Nikhil Kumaraswamy

ಕೇಂದ್ರ ಸರ್ಕಾರ ಮಾಡಬೇಕಾದರೆ ರಾಜ್ಯ ಸರ್ಕಾರ ಯಾಕೆ ಜಾತಿಗಣತಿ ಮಾಡಬೇಕು. ತಮ್ಮ ಲಾಭಕ್ಕಾಗಿ ಸರ್ಕಾರ ಜಾತಿಗಣತಿ ಮಾಡಲು ಮುಂದಾಗಿದೆ ಮತ್ತೊಂದು ಜಾತಿಗಣತಿ ಮಾಡುವ ಅವಶ್ಯಕತೆ ಇಲ್ಲ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ವಿರೋಧ ವ್ಯಕ್ತಪಡಿಸಿದ್ದಾರೆ. ಜಾತಿ ಗಣತಿಗೆ 180 ಕೋಟಿ ರೂ. ಖರ್ಚು ಮಾಡಿದ್ದೀರಾ. ಮತ್ತೆ ಜಾತಿಗಣತಿ ಮಾಡಿದರೆ ಮತ್ತೆ ಜನರ ತೆರಿಗೆ ಹಣ ಖರ್ಚು ಆಗುತ್ತದೆ. ಎಷ್ಟೇ ಹಣ ಖರ್ಚು ಮಾಡಿದರೂ ಜಾತಿಗಣತಿಯನ್ನು ಸರಿಯಾದ ರೀತಿಯಲ್ಲಿ ಮಾಡುವುದಿಲ್ಲ ಎಂದು ಕಿಡಿಕಾರಿದರು.

ನಿಮ್ಮ ರಾಜಕೀಯ ಲಾಭಕ್ಕಾಗಿ ಜಾತಿಗಣತಿ ಘೋಷಣೆ ಇದು. ಕೆಲ ಸಮುದಾಯಗಳನ್ನ ಮೇಲೆ ಎತ್ತಿ, ಕೆಲವು ಜಾತಿಗಳನ್ನು ಕೆಳಗೆ ತುಳಿಯೋ ಕೆಲಸ ರಾಜ್ಯ ಸರ್ಕಾರ ಮಾಡುತ್ತಿದೆ. ಜಾತಿಗಣತಿ ಮಾಡೋದು ಬೇಡ ಎಂದು ಅವರು ಆಗ್ರಹಿಸಿದರು. ಸಾಮಾಜಿಕ, ಆರ್ಥಿಕ ನ್ಯಾಯಕ್ಕಾಗಿ ಜಾತಿಗಣತಿ ಆಗಬೇಕು. ಅಂತಿಮವಾಗಿ ಇಲ್ಲಿ ಯಾರದ್ದು ಸಾಮಾಜಿಕ, ಆರ್ಥಿಕ ಅಭಿವೃದ್ಧಿ ಆಗ್ತಿಲ್ಲ, ಇಲ್ಲಿ ಆಗ್ತಾ ಇರೋದು ರಾಜಕೀಯ. ನಿಮ್ಮ ರಾಜಕೀಯ ಅಜೆಂಡಾ ಭವಿಷ್ಯದ ದೃಷ್ಟಿಯಿಂದ ಜಾತಿಗಣತಿ ಮಾಡ್ತಾ ಇದ್ದೀರಾ? ಇದು ನಿಜಕ್ಕೂ ಕೂಡಾ ಅನುಮಾನ ಉದ್ಭವ ಆಗಿದೆ .ಇದರ ಹಿಂದಿನ ಉದ್ದೇಶ ದುರುದ್ದೇಶ ಬೇರೆ ಅನ್ನೊಂದು ಸ್ಪಷ್ಟವಾಗಿದೆ ಎಂದು ವಾಗ್ದಾಳಿ ನಡೆಸಿದರು.

1971 ರಲ್ಲಿ ಜಾತಿಗಣತಿ ಆಯ್ತು, ಅಲ್ಲಿಂದ ಇಲ್ಲಿಯವರೆಗೆ ಮಾಡಿಲ್ಲ. ಕೇಂದ್ರ ಸರ್ಕಾರ ಈಗ ಮಾಡ್ತಾ ಇದೆ. 10 ವರ್ಷಗಳ ಹಿಂದೆ ಮಾಡಿರುವ ಕಾಂತರಾಜು ವರದಿ ಮೇಲೆ ಜನರಿಗೆ ವಿಶ್ವಾಸ ಇದೆ. ಕೇಂದ್ರ ನಾಯಕರಿಗೆ ಮತ್ತು ರಾಹುಲ್ ಗಾಂಧಿಗೆ ಕಾಂತರಾಜು ವರದಿ ಮೇಲೆ ನಂಬಿಕೆ ಇಲ್ಲ. ಈ ಬಗ್ಗೆ ಚರ್ಚೆ ಮಾಡಿದಾಗ ರಾಹುಲ್ ಗಾಂಧಿ ಹೇಳಿದ ಮೇಲೆ ರಾಜ್ಯ ಸರ್ಕಾರ ಉಲ್ಟಾ ಹೊಡೆದಿದೆ ಎಂದು ಸರ್ಕಾರದ ವಿರುದ್ದ ಕಿಡಿಕಾರಿದರು. ಜಾತಿ ಗಣತಿ ಯಿಂದ ಸಾಮಾಜಿಕ ಆರ್ಥಿಕ, ಶೈಕ್ಷಣಿಕವಾಗಿ ಅವರನ್ನ ಮೇಲೆ ಎತ್ತುವ ಕೆಲಸ ಆಗಬೇಕು. ಒಳ್ಳೆಯದು ಉದ್ದೇಶದಿಂದ ಮಾಡಬೇಕು. ವೈಜ್ಞಾನಿಕ ಸರ್ವೇ ಮಾಡುವ ಅವಕಾಶ ಇದೆ ಎಂದು ಜೆಡಿಎಸ್‌ ಯುವ ಘಟಕದ ಅಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+