ನಾನು ಮತ್ತು ಈಶ್ವರಪ್ಪ ಅಣ್ಣತಮ್ಮ ಇದ್ದಂತೆ: ಯಡಿಯೂರಪ್ಪ

Posted By:
Subscribe to Oneindia Kannada

ಬಾಗಲಕೋಟೆ, ಫೆಬ್ರವರಿ 10: ನಾನು ಮತ್ತು ಈಶ್ವರಪ್ಪ ನಡುವೆ ಯಾವುದೇ ಗೊಂದಲವಿಲ್ಲ ನಾವಿಬ್ಬರೂ ಅಣ್ಣತಮ್ಮಂದಿರಿದ್ದಂತೆ ಎಂದು ಬಾಗಲಕೋಟೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.

ಬಾಗಲಕೋಟೆಯಲ್ಲಿ ಮಾತನಾಡಿದ ಅವರು ಮಾಧ್ಯಮದವರು ಅನಗತ್ಯ ಗೊಂದಲವನ್ನು ಸೃಷ್ಟಿಸುತ್ತಿದ್ದೀರಾ, ನಾನು ಮತ್ತು ಈಶ್ವರಪ್ಪ ಅಣ್ಣತಮ್ಮಂದಿರಂತೆ ಒಟ್ಟಾಗಿದ್ದೇವೆ, ಚೆನ್ನಾಗಿದ್ದೇವೆ. ಒಟ್ಟು ಗೂಡಿ ರಾಜ್ಯ ಪ್ರವಾಸ ಮಾಡಲೀದ್ದೇವೆ. ಪಕ್ಷ ಸಂಘಟನೆ ಮಾಡಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಶ್ರಮಿಸುವುದೇ ನಮ್ಮಿಬ್ಬರ ಗುರಿ ಎಂದು ತಿಳಿಸಿದರು.[ಅಮಿತ್ ಶಾ ಸಂಧಾನ ಸಫಲ, ಮತ್ತೆ ಒಂದಾದ ಯಡಿಯೂರಪ್ಪ -ಈಶ್ವರಪ್ಪ]

I and Eshwarappa is like a brother's says BS Yeddyurappa in Bagalkot

ಕಾಂಗ್ರೆಸ್ಸಿನ ಅಂಬರೀಶ್ ಮತ್ತು ಹಿರಿಯ ಮುಖಂಡ ಎಸ್ ಎಂ ಕೃಷ್ಣ ಅವರು ಬಿಜೆಪಿ ಸೇರ್ಪಡೆ ಬಗ್ಗೆ ಯಾವುದೇ ಖಚಿತ ಮಾಹಿತಿ ಇಲ್ಲ ಎಂದರು.

ಇನ್ನು ಅಧಿವೇಶನಕ್ಕೆ ಜನಪ್ರತಿನಿಧಿಗಳ ಗೈರು ಕುರಿತಂತೆ ಮಾತನಾಡಿ ಅಧಿವೇಶನಕ್ಕೆ ಶಾಸಕರು ಗೈರಾಗುವುದು ಉಚಿತವಲ್ಲ. ಯಾವುದೇ ಪಕ್ಷದ ಶಾಸಕರಾದರೂ ಅಷ್ಟೆ ಸದನಕ್ಕೆ ಬರಬೇಕು. ಅವರು ಕಲಾಪದಲ್ಲಿ ಪಾಲ್ಗೊಳ್ಳದಿದ್ದರೆ ಆಯಾ ಕ್ಷೇತ್ರದ ಜನತೆಗೆ ಅವರು ಮಾಡುವ ಅವಮಾನ ಎಂದು ತಿಳಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
I and leader of the opposition party in the Legislative Council Eshwarappa as like a brother's says BJP State president BS Yeddyurappa in Bagalkot.
Please Wait while comments are loading...