ಹುಲಿ ದೊಡ್ಡ ಜಿಂಕೆಯನ್ನೆ ಹೊಡೆಯುತ್ತೆ; ಹುಲಿ ರೀತಿ ನನ್ನ ಬೇಟೆ ಹೇಗಿರುತ್ತೆ ನೋಡಿ: ಜನಾರ್ದನ ರೆಡ್ಡಿ

ಹುಲಿ ಬೋನಿನಲ್ಲಿದ್ದರೂ ಹುಲಿನೇ, ನಾನು ಹುಲಿ ರೀತಿ ಬೇಟೆಯಾಡುತ್ತೇನೆ. ಹುಲಿ ಬೇಟೆಗೆ ಅದೆಷ್ಟು ಜಿಂಕೆಗಳು ಮನೆಗೆ ಹೋಗುತ್ತವೆ ಎಂಬುವದನ್ನು ಕಾದು ನೋಡಿ

ಕೊಪ್ಪಳ, ಮಾರ್ಚ್ 8: ಚುನಾವಣೆಗೆ ದಿನಗಣನೆ ಶುರುವಾಗಿದ್ದು, ಬಿಜೆಪಿ ವಿರುದ್ದ ಮಾಜಿ ಸಚಿವ ಜನಾರ್ದನ ರೆಡ್ಡಿ ಚುನಾವಣಾ ಅಖಾಡಕ್ಕಿಳಿದಿದ್ದಾರೆ. ಸ್ವಂತ ಪಕ್ಷವನ್ನ ಕಟ್ಟಿರುವ ಜನಾರ್ದನ ರೆಡ್ಡಿ ಕೆಲ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನ ಘೋಷಿಸಿದ್ದು, ಚುನಾವಣಾ ಪ್ರಚಾರವನ್ನ ಆರಂಭಿಸಿದ್ದು, ಪರೋಕ್ಷವಾಗಿ ಎದುರಾಳಿಗಳ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಕೊಪ್ಪಳದಲ್ಲಿ ಮಾತನಾಡಿದ ಅವರು ಹುಲಿ ಬೋನಿನಲ್ಲಿದ್ದರೂ ಹುಲಿನೇ, ಹೊರಗಡೆ ಇದ್ದರೂ ಹುಲಿನೇ. ನಾನು ಹುಲಿ ರೀತಿ ಬೇಟೆಯಾಡುತ್ತೇನೆ. ಹುಲಿ ಬೇಟೆಗೆ ಅದೆಷ್ಟು ಜಿಂಕೆಗಳು ಮನೆಗೆ ಹೋಗುತ್ತವೆ ಎಂಬುವದನ್ನು ಕಾದು ನೋಡಿ ಎಂದು ಮಾಜಿ ಸಚಿವ ಜನಾರ್ಧನರಡ್ಡಿ ಹೇಳಿದರು.

i Am The One Who Made BS Yeddyurappa Cm Says Janardhana Reddy

ನಾನು ಎಂಎಲ್ಎ ಆಗಬೇಕು ಅಂತಾ ಪಕ್ಷ ಕಟ್ಟಿಲ್ಲ.ನಾನು ಎಲ್ಲೆ ನಿಂತ್ರೂ ಎಂಎಲ್ಎ ಆಗಬಹುದಿತ್ತು. ಆದರೆ ಇಲ್ಲಿನ ಜನರ ಅಭಿಮಾನ, ಪ್ರೀತಿ ಸಿಳ್ಳೆ, ಚಪ್ಪಾಳೆ ಬೆಂಗಳೂರಲ್ಲಿ ಸಿಗಲ್ಲ. ಅದಕ್ಕಾಗಿ ಜನರ ಶ್ರೇಯೋಭಿವೃದ್ದಿಗೆ ಪಕ್ಷ ಕಟ್ಟಿದ್ದೇನೆ ಎಂದು ಹೇಳಿದರು.

ನನ್ನ ಈ ಸಮಾವೇಶ ನೋಡಿ 20 ಮಾತ್ರೆ ತೆಗೆದುಕೊಳ್ಳುವವರು ಈಗ 40 ಮಾತ್ರೆ ತೆಗೆದುಕೊಳ್ತಾರೆ ಎಂದು ಅನ್ಯ ಪಕ್ಷದ ನಾಯಕರ ವಿರುದ್ದ ಕಿಡಿಕಾರಿರು. ನನ್ನ ಜೀವನದಲ್ಲಿ ನನ್ನ ತಾಯಿ- ನನ್ನ ಪತ್ನಿಯ ಋಣ ಮರೆಯೋಲ್ಲ. ಎಲ್ರೂ ಸೇರಿ ನನ್ನ ರಾಜಕೀಯವಾಗಿ ಮುಗಿಸುವ ಕೆಲಸ ಮಾಡಿದ್ರು. ಬಿಎಸ್ ಯಡಿಯೂರಪ್ಪ ನವರನ್ನು ಮುಖ್ಯಮಂತ್ರಿ ಮಾಡಿದ್ದೆ ಈ ಜನಾರ್ಧನರೆಡ್ಡಿ. ನಾನು ಇನ್ನು ಎತ್ತರಕ್ಕೆ ಬೆಳೆಯುತ್ತಾನೆ ಎಂದು ಮುಗಿಸುವ ಕೆಲಸ ಮಾಡಿದ್ರೂ ಆದರೂ ಅವರಿಂದ ಏನು ಮಾಡೋಕೆ ಆಗಿಲ್ಲ.ನಾನು ಇನ್ನು ರಾಜಕೀಯ ಉಳಿದಿದ್ದೇನೆ ಎಂದರೆ ಅದು ಭಗವಂತನ ಹಾಗೂ ಜನರ ಆಶೀರ್ವಾದ ಎಂದರು.

i Am The One Who Made BS Yeddyurappa Cm Says Janardhana Reddy

ಬರುವ ದಿನಗಳಲ್ಲಿ ಪ್ರತಿಯೊಂದು ಗ್ರಾಮದಲ್ಲಿ ಬಸವವೇಶ್ವರ ರೈತ ಕೇಂದ್ರ ಸ್ಥಾಪನೆ ಮಾಡಲಾಗುವುದು ಎಂದು ಪಕ್ಷದ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಲಾಗಿದೆ. ನಾನು ಈಗ ಧೈರ್ಯವಾಗಿ ಬದುಕುತ್ತಿದ್ದೇನೆ ಎಂದರೆ ರಾಣಿ ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣನ ಆದರ್ಶದಿಂದ. ರಾಣಿ ಚೆನ್ನಮ್ಮ ಅಭಯ ಹಸ್ತ ಎನ್ನುವ ಯೋಜನೆ ಘೋಷಣೆ ಮಾಡಿದ್ದೇನೆ ಎಂಬಪ್ರಣಾಳಿಕೆಯ ಬ್ಯಾನರ್ ಅನಾವರಣಗೊಳಿಸಿದರು.

ಅಧಿಕಾರ ನಾನು ಮಾಡುತ್ತಿನೋ ಅಥವಾ ಅಧಿಕಾರ ಮಾಡುವವರ ಕೈ ಹಿಡಿದು ಅಭಿವೃದ್ಧಿ ಮಾಡುತ್ತೇನೋ. ಅದಕ್ಕೆ ನಿಮ್ಮ ಆಶೀರ್ವಾದ ಬೇಕು. ನಾನು ಬರಿ ರಾಜ್ಯದಲ್ಲಿ ಅಲ್ಲ, ದೇಶದಲ್ಲಿ ಇತಿಹಾಸ ನಿರ್ಮಿಸುತ್ತೇನೆ. ಕನಕಗಿರಿಯಲ್ಲಿ ಈ ಹಿಂದೆ ಗೆದ್ದವರ ಬಾಡಿ ಲಾಂಗ್ವೇಜ್ ಚೇಂಜ್ ಆಗಿದೆ. ಇನ್ನೊಬ್ಬ ಅಮಾಯಕ, ರೈತರ ಜೊತೆ ಇರುತ್ತಾನೆ ಎಂದು ಗೆಲ್ಲಿಸಿದರೆ ಏನೇನೋ ಮಾಡಿಕೊಂಡಿದ್ದಾನೆ. ಮಾಜಿ ಸಚಿವ ಶಿವರಾಜ ತಂಗಡಗಿ ಹಾಗೂ ಹಾಲಿ ಶಾಸಕ ಬಸವರಾಜ ದಡೇಸೂಗೂರು ಹೆಸರು ಹೇಳದೆ ವಾಗ್ಧಾಳಿ ನಡೆಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+