ಮೈತ್ರಿ ಅಭ್ಯರ್ಥಿಯಾಗಿ ಮೈಸೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ: ಸಾ ರಾ ಮಹೇಶ್‌ ಸ್ಪಷ್ಟನೆ

ಮೈಸೂರು, ಫೆಬ್ರವರಿ 29: ಆಡಳಿತರೂಢ ಕಾಂಗ್ರೆಸ್‌ ಗೆ ಠಕ್ಕರ್‌ ಕೊಡಲು ಲೋಕಸಭಾ ಚುನಾವಣೆ ಹಿನ್ನಲೆ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿ ಮಾಡಿಕೊಂಡಿದೆ. ಇತ್ತ ಹಳೇ ಮೈಸೂರು ಭಾಗದ ಮೇಲೆ ಕಣ್ಣೀಟ್ಟಿರುವ ದಳಪತಿಗಳು ಮಂಡ್ಯ ಮಾತ್ರವಲ್ಲದೇ ಮೈಸೂರು ಲೋಕಸಭಾ ಕ್ಷೇತ್ರದಿಂ ಸಾ ರಾ ಮಹೇಶ್‌ ಕಣಕ್ಕಿಳಿಸುವ ಲೆಕ್ಕಾಚಾರವನ್ನ ದಳಪತಿಗಳು ಹಾಕಿಕೊಂಡಿದ್ದಾರೆ.

ಇನ್ನೂ ಮೈಸೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಕುರಿತು ಜೆಡಿಎಸ್‌ ನಾಯಕ ಸಾ ರಾ ಮಹೇಶ್‌ ಮಾತನಾಡಿ, ನಾನು ಲೋಕಸಭಾ ಚುನಾವಣೆಯ ಆಕಾಂಕ್ಷಿಯಲ್ಲ. ನಾನು ಆರ್ಥಿಕವಾಗಿ, ದೈಹಿಕವಾಗಿ, ಮಾನಸಿಕವಾಗಿ ಕುಸಿದಿದ್ದೇನೆ ಎಂದು ಚುನಾವಣಾ ರಾಜಕೀಯವೇ ಸಾಕಾಗಿದೆ ಎಂಬ ರೀತಿ ವೈರಾಗ್ಯದ ಮಾತನ್ನು ಹೇಳಿ ಅಚ್ಚರಿ ಮೂಡಿಸಿದ್ದಾರೆ.

I Am Not An Aspirant In Lok Sabha Election 2024 Said Sa Ra Mahesh

ನಾನು ಲೋಕಸಭಾ ಚುನಾವಣೆಯ ಆಕಾಂಕ್ಷಿಯಲ್ಲ. ನನಗೆ ರೆಸ್ಟ್ ಬೇಕಿದೆ. ಹೀಗಾಗಿ ನಾನು ಟಿಕೆಟ್ ಆಕಾಂಕ್ಷಿಯಲ್ಲ ಎಂದು ಹೇಳುವ ಮೂಲಕ ವಿಧಾನಸಭಾ ಚುನಾವಣೆಯ ಸೋಲು ತಮ್ಮನ್ನು ಮಾನಸಿಕವಾಗಿ ಕುಗ್ಗಿಸಿದೆ ಎಂಬುದನ್ನು ಬಹಿರಂಗವಾಗಿಯೆ ಒಪ್ಪಿಕೊಂಡಿದ್ದಾರೆ. ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಪಿಎಂ ಆಗಬೇಕು. ಸಂಸದ ಪ್ರತಾಪ್ ಸಿಂಹ ಹತ್ತು ವರ್ಷ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಬಿಜೆಪಿ ಮುಖಂಡರು ನನ್ನ ಅಭ್ಯರ್ಥಿಯಾಗುವ ವಿಚಾರದಲ್ಲಿ ಸಂಪರ್ಕಿಸಿದ್ದಾರೆ ಎಂಬುದೆಲ್ಲಾ ಊಹಾಪೋಹ ಎನ್ನುವ ಮೂಲಕ ಪ್ರತಾಪ್ ಸಿಂಹ ಪರ ಮಾತನಾಡಿದ್ದಾರೆ.

ರಾಜ್ಯದ ಸಮಸ್ಯೆಗಳನ್ನು ಬಗೆ ಹರಿಸುವಲ್ಲಿ ದೇವೇಗೌಡರ ಪಾತ್ರ ದೊಡ್ಡದು

ರಾಜ್ಯದ ಸಮಸ್ಯೆಗಳನ್ನು ಬಗೆ ಹರಿಸುವಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಪಾತ್ರ ದೊಡ್ಡದು. ಕನ್ನಡದ ಬಾವುಟವನ್ನು ದೆಹಲಿಯ ಕೆಂಪು ಕೋಟೆಯ ಮೇಲೆ ಹಾರಿಸಿದ ಏಕೈಕ ಕನ್ನಡಿಗ ದೇವೇಗೌಡರು, ಅವರ ಬಗ್ಗೆ ನಮಗೆ ಹೆಮ್ಮೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಏರ್ಪಡಿಸಿದ್ದ ಮಾಜಿ ಪ್ರಧಾನಿ ದೇವೇಗೌಡರ ಕುರಿತು ನೇ ಭ ರಾಮಲಿಂಗ ಶೆಟ್ಟಿ ಅವರು ಬರೆದ ಮಣ್ಣಿನ ಮಗ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್ತು ಮತ್ತು ರಾಮಲಿಂಗ ಶೆಟ್ಟಿ ಬರೆದಿರುವ ಮಣ್ಣಿನ ಮಗ, ನಾನು ಕಂಡಂತೆ ಮತ್ತು ನಾಡು ಕಂಡಂತೆ ಇದು ಒಂದು ರೀತಿಯಲ್ಲಿ ಕರ್ನಾಟಕದ ಇತಿಹಾಸ ಕೃಷಿ ‌ನೀರಾವರಿ, ಸಾಮಾಜಿಕ ಬದುಕನ್ನು ಬಿಂಬಿಸುವ ಪುಸ್ತಕ ಇದಾಗಿದೆ ಎಂದು ಹೇಳಿದರು.

ದೇವೇಗೌಡರ ಬಗ್ಗೆ ಎಷ್ಟೇ ಪುಸ್ತಕ ಬಂದರೂ ಅವರ ಬದುಕಿನ ಬಗ್ಗೆ ಇನ್ನೊಂದು ಪುಸ್ತಕ ಬರೆಯಬೇಕು ಎನ್ನುವಷ್ಟು ವಿಸ್ತಾರವಾದ ಬದುಕು ಅವರದಾಗಿದೆ. ಎಲ್ಲರನ್ನು ಸ್ಪರ್ಷಿಸಿದಂತ ಬದುಕು ಅವರದು. ಅತ್ಯಂತ ವಿಶಿಷ್ಟ ಮತ್ತು ವಿಚಿತ್ರ ಬದುಕು ಅವರದು. ಅವರು ಸ್ಥಾನ ಮಾನ ಯಾವುದಕ್ಕೂ ತಲೆ‌ಕೆಡಿಸಿಕೊಳ್ಳದೇ ಹೋರಾಟ ಮಾಡಿದವರು. ವಿಚಿತ್ರ ಏನೆಂದರೆ ಅವರ ಕೀರ್ತಿಗಿಂತ ಸ್ಪೂರ್ತಿ ದೊಡ್ಡದಿದೆ.

ನಾನು ಅವರ ಜೊತೆಗೆ ಬಹಳ ಹತ್ತಿರದಿಂದ ಕೆಲಸ ಮಾಡುವ ಅವಕಾಶ ಸಿಕ್ಕಿತು. ಅವರ ಹೋರಾಟ, ಅಧಿಕಾರದ ದಿನಗಳು, ಅಧಿಕಾರ ಇಲ್ಲದಿರುವ ದಿನಗಳು ಎಲ್ಲವನ್ನು ಹತ್ತಿರದಿಂದ ನೋಡಿದ್ದೇನೆ. ನಾನು ಅದೃಷ್ಟವಂತ. ನಾನು ಅವರಿಗೆ ಕುಮಾರಸ್ವಾಮಿಗಿಂತಲೂ ಹತ್ತಿರ ಇದ್ದೆ ಎಂದು ಹೇಳಿದರು.

ದೇವೇಗೌಡರದು ಕರ್ಣನ ವ್ಯಕ್ತಿತ್ವ. ಅವರು ಆರವತ್ತು ವರ್ಷದ ರಾಜಕಾರಣದಲ್ಲಿ ಐದಾರು ವರ್ಷ ಮಾತ್ರ ಅಧಿಕಾರ ಮಾಡಿದ್ದಾರೆ. ಉಳಿದ ಅವಧಿಯಲ್ಲಿ ದೇಶ, ರಾಜ್ಯದ ಹಿತಕ್ಕಾಗಿ ಹೋರಾಟ ಮಾಡುತ್ತ ಬಂದಿದ್ದಾರೆ. ಹಠ, ಛಲ, ಸವಾಲು ಸ್ವೀಕರಿಸುವ ಛಾತಿ ಒಂದು ಕಡೆ ಇದ್ದರೆ, ಅಧಿಕಾರ ಇದ್ದಾಗ, ಹೊಲದಲ್ಲಿ ಕೆಲಸ ಮಾಡುವ ರೈತ, ದುಡಿಯುವವರ ಬದುಕಿಗೆ ಧ್ವನಿಯಾಗಿ ನಿಂತಿದ್ದರು ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+