JDS ‌President: ಜೆಡಿಎಸ್‌ ರಾಜ್ಯಾಧ್ಯಕ್ಷ ಸ್ಥಾನದ ರೇಸ್‌ನಲ್ಲಿ ಯಾರಿದ್ದಾರೆ: ನಿಖಿಲ್‌ ಕುಮಾರಸ್ವಾಮಿ ಏನಂದ್ರು?‌

ಮೈಸೂರು, ಫೆಬ್ರವರಿ 26: ಜೆಡಿಎಸ್‌ ರಾಜ್ಯಾಧ್ಯಕ್ಷ ಸ್ಥಾನದ ಕುರಿತು ನನ್ನ ಸೇರಿ ಅನೇಕ ಪಕ್ಷದ ಹಿರಿಯ ಮುಖಂಡರು ಕುಮಾರಣ್ಣ ಅವರೇ ಮುಂದುವರೆಯ ಬೇಕು ಎಂಬ ಅಭಿಪ್ರಾಯವಿದೆ. ಕುಮಾರಸ್ವಾಮಿ ಅವರು ಪಕ್ಷದ ರಾಜ್ಯಾಧ್ಯಕ್ಷರಾಗಿ ಮುಂದುವರೆಯಲಿ ಅಂತ ಹೇಳಿದ್ದಾರೆ. ನಮ್ಮ ಕಾರ್ಯಕರ್ತರಿಗೆ ನ್ಯಾಯ ಒದಗಿಸಬೇಕು ಆ ನಿಟ್ಟಿನಲ್ಲಿ ನಾನು ಕೆಲಸ ಮಾಡ್ತಿದ್ದೇನೆ. ನಾನು ರಾಜ್ಯಾಧ್ಯಕ್ಷ ಹುದ್ದೆಯ ಆಕಾಂಕ್ಷಿ ಅಲ್ಲ ಎಂದು ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್‌ ಕುಮಾರಸ್ವಾಮಿ ಹೇಳಿದರು.

ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಪೋಸ್ಟ್ ಹಾಕಿದ್ದ ವ್ಯಕ್ತಿ ಗಡಿಪಾರಿಗೆ ಕಾಂಗ್ರೆಸ್ ನವರು ಮುಂದಾಗಿದ್ರು, ಈ ಸರ್ಕಾರದಲ್ಲಿ ಪೊಲೀಸರಿಗೆ ರಕ್ಷಣೆ ಇಲ್ಲ, ಜನರಿಗೆ ರಕ್ಷಣೆ ಇಲ್ಲ. ಈ ಸರ್ಕಾರ ನಮ್ಮನ್ನು ಎಲ್ಲಿಗೆ ತಂದು ನಿಲ್ಲಿಸಿದೆ ನೀವೇ ಯೋಚಿಸಿ ಎಂದು ನಿಖಿಲ್ ಕುಮಾರಸ್ವಾಮಿ ಅವರು ಕಳವಳ ವ್ಯಕ್ತಪಡಿಸಿದರು. ಉದಯಗಿರಿ ಗಲಭೆ ಪ್ರಕರಣ ಗೃಹ ಸಚಿವರು ಒಂದು ಹೇಳಿಕೆ ಕೊಟ್ಟಿದ್ದಾರೆ. ರಾಜ್ಯದಲ್ಲಿ ಲಾ ಅಂಡ್ ಆರ್ಡರ್ ಕುಸಿದಿದೆ. ಮಡಿಕೇರಿಯಲ್ಲಿ ಕಾಂಗ್ರೆಸ್ ಮುಖಂಡ ಪೊಲೀಸರಿಗೆ ಅವ್ಯಾಚ ಶಬ್ದಗಳಿಂದ ನಿಂದಿಸಿದ್ದಾರೆ. ಆದರೂ ಕೂಡ ಪೊಲೀಸರಿಂದ ಏನು ಮಾಡೋದಕ್ಕೆ ಆಗ್ತಿಲ್ಲ. ಯಾಕೆಂದ್ರೆ ಆತ ಕಾಂಗ್ರೆಸ್ ಮುಖಂಡ. ಇದೆಲ್ಲವನ್ನೂ ನೋಡಿದ್ರೆ ಪೊಲೀಸರು ಕೈಕಟ್ಟಿ ಕುರುವಂತೆ ಮಾಡಿದ್ದಾರೆ.

I am not an aspirant for the post of state president Nikhil Kumaraswamy

ಉದಯಗಿರಿಯಲ್ಲೂ ಅದೇ ಆಗಿದೆ. ಕಲ್ಲುಗಳನ್ನು ತೂರಿದ್ರು ಸುಮ್ಮನಿದ್ರು. ಪೋಸ್ಟ್ ಹಾಕಿದ್ದ ವ್ಯಕ್ತಿ ಗಡಿಪಾರಿಗೆ ಮುಂದಾಗಿದ್ರು. ಪೊಲೀಸರಿಗೆ ರಕ್ಷಣೆ ಇಲ್ಲ ಜನರಿಗೆ ರಕ್ಷಣೆ ಇಲ್ಲ. ಈ ಸರ್ಕಾರ ನಮ್ಮನ್ನು ಎಲ್ಲಿಗೆ ತಂದು ನಿಲ್ಲಿಸಿದೆ ನೀವೇ ಯೋಚಿಸಿ ಎಂದು ನಿಖಿಲ್ ಕುಮಾರಸ್ವಾಮಿ ಅವರು ತಿಳಿಸಿದರು. ಗ್ಯಾರಂಟಿ ಪರಿಷ್ಕರಣೆ ಮಾಡುತ್ತಿದ್ದೇವೆ ಎಂಬ ಪರಮೇಶ್ವರ್ ಹೇಳಿಕೆಗೆ ನಿಖಿಲ್ ಕುಮಾರಸ್ವಾಮಿ ಅವರು ಟಾಂಗ್ ನೀಡಿದ್ದು, ಗ್ಯಾರಂಟಿಗಳಿಗೆ ಬೇರೆ ಬೇರೆ ಇಲಾಖೆಯ ಹಣ ಬಳಸಿಕೊಂಡಿದೆ. ಆದ್ರೂ ಗ್ಯಾರೆಂಟಿ ಕೊಡಲು ಆಗುತ್ತಿಲ್ಲ. ಸರ್ಕಾರಿ ನೌಕರರಿಗೆ ಸಂಬಳ ಕೊಡುತ್ತಿಲ್ಲ. ಹಾಗಾಗಿ ಗ್ಯಾರೆಂಟಿ ಯೋಜನೆಗಳ ಪರಿಷ್ಕರಣೆ ಅಂತ ಹೊರಟಿದ್ದಾರೆ ಎಂದರು.

ಲೋಕಾಯುಕ್ತದಲ್ಲಿ ಸಿಎಂ ಗೆ ಕ್ಲೀನ್ ಚಿಟ್ ವಿಚಾರ. ಎಲ್ಲವೂ ಅಧಿಕಾರಿಗಳ ತಪ್ಪು ಅಂತ ಹೇಳಿದ್ದಾರೆ. ಅಧಿಕಾರಿಗಳ ತಪ್ಪಿನಿಂದೆ ಯಾರು ಇದ್ರು ? ಬೆನ್ನ ಹಿಂದೆಯಿದ್ದ ಬಲಿಷ್ಠರು ಯಾರು? ಲೋಕಾಯುಕ್ತ ಈ ಹಿಂದೆ ಹೇಗಿತ್ತು ಸಂತೋಷ್ ಹೆಗ್ಡೆ ಕಾಲದಲ್ಲಿ ಹೇಗಿತ್ತು ಈಗ ಹೇಗಿದೆ. ಇದೇ ಸಿದ್ದರಾಮಯ್ಯ ಈ ಹಿಂದೆ ಲೋಕಾಯುಕ್ತ ಹಲ್ಲು ಕಿತ್ತು ಹಾಕಿದ್ರು. ತಮ್ಮ ಹುಳುಕು ಮುಚ್ಚಿಕೊಳ್ಳಲು ಇದೆಲ್ಲಾ ಮಾಡಿದ್ರು ಎಂದು ಕಿಡಿಕಾರಿದರು.

ಮುಂಬರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಅಭಿಪ್ರಾಯ ಸಂಗ್ರಹಿಸಲು ಇವತ್ತು ಸಭೆ ಮಾಡಿದ್ದೇನೆ. ಎಲ್ಲರೂ ಕೂಡ ಅವರ ಅಭಿಪ್ರಾಯ ಹೇಳಿದ್ದಾರೆ. ಜಿ.ಪ, ತಾ.ಪ ಚುನಾವಣೆಗೆ ಮೆಂಬರ್ ಶಿಪ್ ಮಾಡಬೇಕಿದೆ. ಅದು ಕೂಡ ನಡೆಯುತ್ತಿದೆ. ಮಿಸ್ಡ್ ಕಾಲ್ ಸದಸ್ಯತ್ವ ಅಭಿಯಾನ ಶುರು ಆಗ್ಬೇಕು ಅಂತ ತೀರ್ಮಾನ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಇದಕ್ಕೆ ಚಾಲನೆ ಸಿಗಲಿದೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ತಿಳಿಸಿದರು.

ಸ್ಥಳೀಯ ಸಂಸ್ಥೆ ಚುನಾವಣೆಗೂ ಮೈತ್ರಿ ಮುಂದುವರಿಯುತ್ತಾ ಎಂಬ ಮಾಧ್ಯಮದವರು ಪ್ರಶ್ನೆಗೆ ಉತ್ತರಿಸಿದ ಅವರು, ನಿನ್ನೆ ಕುಮಾರಣ್ಣ ಅವರು ಬಜೆಟ್ ವಿಚಾರವಾಗಿ ಮಾತನಾಡಿದ್ದಾರೆ. ಪಕ್ಷದಲ್ಲಿ ಸ್ಥಳೀಯ ಚುನಾವಣೆಗಳ ತಯಾರಿ ನಡೆಯುತ್ತಿದೆ. ಇದು ಕಾರ್ಯಕರ್ತರ ಚುನಾವಣೆ. ಪಕ್ಷದ ಅಡಿಯಲ್ಲಿ ಸ್ಪರ್ಧೆ ಮಾಡಲು ಅನೇಕ ಅಭ್ಯರ್ಥಿಗಳು ರೆಡಿ ಇದ್ದಾರೆ.ಯಾರನ್ನೂ ಆಯ್ಕೆ ಮಾಡ್ಬೇಕು ಏನು ಎಂಬುದನ್ನು ಹೈಕಮಾಂಡ್ ತೀರ್ಮಾನ ಮಾಡ್ತಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ 19 ಸೀಟು ಸಿಕ್ತು, ಕಾರ್ಯಕರ್ತರು ಒಂದಾಗಿದ್ದು ಇದಕ್ಕೆ ಕಾರಣ. ಈ ವಿಚಾರದಲ್ಲೂ ಎರಡು ಪಕ್ಷಗಳ ನಾಯಕರು ಕೂತು ಚರ್ಚೆ ಮಾಡ್ತೀವಿ ಎಂದು ತಿಳಿಸಿದರು.

ಚುನಾವಣೆ ಅಂತ ಬಂದಾಗ ಒಂದೊಂದು ಜಿಲ್ಲೆಯಲ್ಲಿ ರಾಜಕೀಯ ಬೇರೆ ಬೇರೆ ಇರತ್ತದೆ. ಸ್ಥಳಿಯ ನಾಯಕರ ಅಭಿಪ್ರಾಯ ಪಡೆಯುತ್ತೇವೆ. ವರಿಷ್ಠರು ಎಲ್ಲವನ್ನೂ ತೀರ್ಮಾನ ಮಾಡ್ತಾರೆ. ರಾಜ್ಯದ ಏಳಿಗೆಗೆ ದೇಶದ ಏಳಿಗೆಗೆ ಮೋದಿ ಅವ್ರು ಕುಮಾರಣ್ಣನಿಗೆ ಜವಾಬ್ದಾರಿ ಕೊಟ್ಟಿದ್ದಾರೆ. ಅದಕ್ಕೆ ಪೂರಕವಾಗಿ ಕೆಲಸ ಮಾಡ್ತಿದ್ದಾರೆ ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+