ಹತ್ಯೆಗೀಡಾಗಿದ್ದ ಹುಣಸೂರು ವಿದ್ಯಾರ್ಥಿಯ ಅಪ್ಪ ಸೂಸೈಡ್

ಪುತ್ರಶೋಕದಿಂದ ನಿರಂತರ ಭಾದೆಗೊಳಗಾಗಿ, 2 ವರ್ಷಗಳ ಕಾಲ ಜೀವನವನ್ನು ಹೇಗೋ ಸಹಿಸಿಕೊಂಡು ಬಂದಿದ್ದ ಸುಧೀಂದ್ರನ ತಂದೆ ಉದ್ಯಮಿ ಮೋಹನ್ ಅವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೊಲೆಗಡುಗಕರು ತಮ್ಮ ಪುತ್ರನನ್ನು ಅಪಹರಿಸಿ, ಕೊಲೆ ಮಾಡಿದ್ದರಿಂದ ಖಿನ್ನತೆಗೊಳಗಾಗಿದ್ದ ನಗರದ ಅಶೋಕ ಟ್ರೇಡರ್ಸ್ ಮಾಲೀಕ ಮೋಹನ್ ಆತ್ಮಹತ್ಯೆ ಮಾಡಿಕೊಂಡಿರುವ ಉದ್ಯಮಿ. (ಚಿತ್ರದಲ್ಲಿ- ಮುಗ್ಧ ವಿದ್ಯಾರ್ಥಿಗಳ ಹಂತಕ ಪಡೆ)
ಕಳೆದ ಎರಡು ವರ್ಷಗಳ ಹಿಂದೆ (2011ರ ಜೂನ್) ಬಿಬಿಎಂ ವಿದ್ಯಾರ್ಥಿಗಳಾದ ಸುಧೀಂದ್ರ ಮತ್ತು ವಿಘ್ನೇಶ್ ಎಂಬುವರನ್ನು ಕಾಲೇಜಿಗೆ ಬಂದಿದ್ದ ವೇಳೆ ದುಷ್ಕರ್ಮಿಗಳು ಕಾರಿನಲ್ಲಿ ಅಪಹರಿಸಿ ನಂತರ ಹತ್ಯೆ ಮಾಡಿ ಚಿಕ್ಕಬಳ್ಳಾಪುರ ಸಮೀಪ ಬಿಸಾಡಿ ಹೋಗಿದ್ದರು.
ಸುಧೀಂದ್ರನ ತಂದೆ ಉದ್ಯಮಿ ಮೋಹನ್ ಪುತ್ರನನ್ನು ಕಳೆದುಕೊಂಡಾಗಿನಿಂದ ತೀವ್ರ ಖಿನ್ನತೆಗೆ ಒಳಗಾಗಿದ್ದರು. ವ್ಯಾಪಾರದ ಬಗ್ಗೆಯೂ ಗಮನಹರಿಸುತ್ತಿರಲಿಲ್ಲ. ಅಲ್ಲದೆ, ಕಳೆದ ಒಂದು ವರ್ಷದ ಹಿಂದೆ ಅವರ ತಂಗಿ ಮತ್ತು ಆಕೆಯ ಪತಿ ಅಪಘಾತದಲ್ಲಿ ಮೃತಪಟ್ಟಿದ್ದರಿಂದ ಮೋಹನ್ ಅವರ ಮನಸ್ಥಿತಿ ಮತ್ತೂ ಹದಗೆಟ್ಟಿತ್ತು ಎನ್ನಲಾಗಿದೆ.
ಕಳೆದ ವಾರ ಭದ್ರಾವತಿಗೆ ಹೋಗಿ ತಂಗಿ ಮತ್ತು ಆಕೆಯ ಪತಿಯ ವಾರ್ಷಿಕ ತಿಥಿಯಲ್ಲಿ ಭಾಗವಹಿಸಿ ಬಂದಾಗಿನಿಂದ ಯಾರೊಂದಿಗೂ ಸರಿಯಾಗಿ ಮಾತನಾಡುತ್ತಿರಲಿಲ್ಲ. ನಿನ್ನೆ ರಾತ್ರಿ ಊಟ ಮಾಡಿ ಮಲಗಿದ್ದವರು ಸುಮಾರು 11 ಗಂಟೆಯ ವೇಳೆಯಲ್ಲಿ ಮನೆಯಿಂದ ಹೊರಗೆ ಹೋಗಿದ್ದಾರೆ.
Lakshmana Tirtha ನದಿಗೆ ಹಾರವಾದ ಅಪ್ಪ:
ಮೋಹನ್ ಎಷ್ಟು ಹೊತ್ತಾದರೂ ಹಿಂತಿರುಗದ ಕಾರಣ ಅವರ ಪತ್ನಿ ಹಾಗೂ ಮನೆಯವರು ಅಕ್ಕಪಕ್ಕ ಹುಡುಕಿದ್ದಾರೆ. ಅಷ್ಟರಲ್ಲಿ ಸ್ಥಳೀಯರು ಮೋಹನ್ ಅವರು ಲಕ್ಷ್ಮಣತೀರ್ಥ ನದಿಗೆ ಹಾರಿದ್ದನ್ನು ನೋಡಿದ್ದಾಗಿ ತಿಳಿಸಿದ್ದಾರೆ. ಕೂಡಲೇ ಪೊಲೀಸರೊಂದಿಗೆ ಮನೆಯವರು ನದಿ ಬಳಿ ಬಂದಾಗ ಸೇತುವೆಯ ಕಬ್ಬಿಣದ ಸಲಾಕೆಗೆ ಚೀಟಿ ಸಿಕ್ಕಿಸಿರುವುದು ಪತ್ತೆಯಾಗಿದೆ. ಅದರಲ್ಲಿ ನಾನಾಗಿಯೇ ನದಿಗೆ ಹಾರಿದ್ದೇನೆ, ನನ್ನನ್ನು ಎಲ್ಲೂ ಹುಡುಕಬೇಡಿ ಎಂದು ಬರೆದಿರುವುದು ಗೊತ್ತಾಗಿದೆ. ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ:











Click it and Unblock the Notifications