ಸದನದಲ್ಲಿ ವಾಚ್ ವಾರ್ : ಯಾರು, ಏನು ಹೇಳಿದರು?

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 02 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಜ್ರ ಖಚಿತ ಊಬ್ಲೋ ವಾಚ್ ವಿವಾದ ವಿಧಾನಸಭೆ ಮತ್ತು ವಿಧಾನಪರಿಷತ್ತಿನ ಮಂಗಳವಾರದ ಕಲಾಪವನ್ನು ನುಂಗಿ ಹಾಕಿದೆ. ಐದು ದಿನಗಳ ಅಧಿವೇಶನದಲ್ಲಿ ಮೂರು ದಿನಗಳ ಕಲಾಪ ಬಾಕಿ ಇದ್ದು, ಇಂದೂ 'ವಾಚ್ ವಾರ್' ಮುಂದುವರೆಯುವ ಸಾಧ್ಯತೆ ಇದೆ.

ಮಂಗಳವಾರ ಉಭಯ ಸದನಗಳಲ್ಲಿ ಪ್ರತಿಪಕ್ಷ ಬಿಜೆಪಿ ವಾಚ್ ವಿವಾದದ ಬಗ್ಗೆ ನಿಲುವಳಿ ಸೂಚನೆ ಮಂಡನೆ ಮಾಡಲು ಪ್ರಯತ್ನ ನಡೆಸಿತು. ಕಾಂಗ್ರೆಸ್ ಸದಸ್ಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ಗದ್ದಲ ಉಂಟಾಯಿತು. ಇದರಿಂದಾಗಿ ಉಭಯ ಸದನಗಳ ಕಲಾಪವನ್ನು ಬುಧವಾರಕ್ಕೆ ಮುಂದೂಡಲಾಯಿತು. [ವಾಚ್ ವಿವಾದ : ಡಾ.ಸುಧಾಕರ ಶೆಟ್ಟಿ ಹೇಳಿದ್ದೇನು?]

ಸಿದ್ದರಾಮಯ್ಯ ಅವರು ವಾಚ್ ತೊಟ್ಟ ಚಿತ್ರಗಳನ್ನು ಪ್ರದರ್ಶಿಸಿ ಬಿಜೆಪಿ ಸದಸ್ಯರು ವಾಗ್ದಾಳಿ ನಡೆಸಿದರು. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದ ಗೌಡ ಅವರು ದುಬಾರಿ ವಾಚ್ ತೊಟ್ಟಿದ್ದ ಚಿತ್ರ ಪ್ರದರ್ಶಿಸಿ ಕಾಂಗ್ರೆಸ್ ಸದಸ್ಯರು ಪ್ರತಿದಾಳಿ ನಡೆಸಿದರು. [ಸಖತ್ ಮಿಂಚುತ್ತಿರುವ ದುಬಾರಿ ಉಬ್ಲೋ ವಾಚುಗಳ ಕಥೆ]

ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರು, 'ರಾಜ್ಯದಲ್ಲಿ ರೈತರ ಆತಹತ್ಯೆಯಂತಹ ಗಂಭೀರ ಪ್ರಕರಣಗಳು ನಡೆಯುತ್ತಿರುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದುಬಾರಿ ವಾಚ್ ಕಟ್ಟಿಕೊಂಡು ಸುತ್ತಾಡುತ್ತಿದ್ದಾರೆ' ಎಂದು ವಾಗ್ದಾಳಿ ನಡೆಸಿದರು. ವಾಚ್ ಬಗ್ಗೆ ಸದನದಲ್ಲಿ ಯಾರು ಏನು ಹೇಳಿದರು ಚಿತ್ರಗಳಲ್ಲಿ ನೋಡಿ..... [ಕೋರ್ಟ್‌ ಮೆಟ್ಟಿಲೇರಿದ ವಜ್ರ ಖಚಿತ ವಾಚ್ ವಿವಾದ]

'ಸಿದ್ದರಾಮಯ್ಯ ಅವರದ್ದು ಬಾಯಿ ಮಾತಿನ ಆದರ್ಶ'

'ಸಿದ್ದರಾಮಯ್ಯ ಅವರದ್ದು ಬಾಯಿ ಮಾತಿನ ಆದರ್ಶ'

ವಿಧಾನಸಭೆಯಲ್ಲಿ ಮಾತನಾಡಿದ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರು, ' ಸಮಾಜವಾದಿ, ಲೋಹಿಯಾವಾದಿ, ಆದರ್ಶವಾದಿ ಎನಿಸಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಜ್ಯದಲ್ಲಿ ರೈತರ ಆತ್ಮಹತ್ಯೆಯಂತಹ ಗಂಭೀರ ಪ್ರಕರಣಗಳು ನಡೆಯುತ್ತಿರುವಾಗ ದುಬಾರಿ ವಾಚ್ ಕಟ್ಟಿಕೊಂಡು ಸುತ್ತಾಡುತ್ತಿದ್ದಾರೆ' ಎಂದು ವಾಗ್ದಾಳಿ ನಡೆಸಿದರು.

'ಇದು ತೇಜೋವಧೆ ಯತ್ನ'

'ಇದು ತೇಜೋವಧೆ ಯತ್ನ'

ವಿಧಾನಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 'ವಾಚ್ ಬಗ್ಗೆ ಪೂರ್ಣ ವಿಚಾರವನ್ನು ನಾನು ಈಗಾಗಲೇ ಬಹಿರಂಗವಾಗಿ ಹೇಳಿದ್ದೇನೆ. ಆದರೂ ಈ ವಿಚಾರವನ್ನು ಜಗ್ಗಾಡುವುದರ ಹಿಂದೆ ನನ್ನ ತೇಜೋವಧೆ ಮಾಡುವ ಹುನ್ನಾರವಿದೆ' ಎಂದು ಆರೋಪಿಸಿದರು.

'ಆತ್ಮವಿಮರ್ಶೆ ಮಾಡಿಕೊಳ್ಳಿ'

'ಆತ್ಮವಿಮರ್ಶೆ ಮಾಡಿಕೊಳ್ಳಿ'

ವಿಧಾನಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್ ಅವರು, 'ಈ ಸದನದಲ್ಲಿ ಇರುವವರೆಲ್ಲಾ ಇಲ್ಲಿಗೆ ಬರುವ ಮೊದಲು ಮತ್ತು ನಂತರದ ಜೀವನ ಶೈಲಿ ಹೇಗಿದೆ ಎಂಬುದನ್ನು ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ನಮ್ಮ ಆಸ್ತಿ ಎಷ್ಟು ಪಟ್ಟು ಹೆಚ್ಚಾಗಿದೆ, ಖಾಸಗಿ ಜೀವನ ಎಲ್ಲಿಗೆ ಹೋಗಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಮಾತನಾಡಬೇಕು' ಎಂದು ಸಲಹೆ ನೀಡಿದರು.

'ಸಿಎಂ ರಾಜೀನಾಮೆ ನೀಡಲಿ'

'ಸಿಎಂ ರಾಜೀನಾಮೆ ನೀಡಲಿ'

ವಿಧಾನಪರಿಷತ್ತಿನಲ್ಲಿ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರು ವಾಚ್ ವಿವಾದದ ಬಗ್ಗೆ ವಿಷಯ ಪ್ರಸ್ತಾಪಿಸಿದರು. 'ದುಬಾರಿ ವಾಚ್ ಉಡುಗೊರೆ ಪಡೆದು ಮುಖ್ಯಮಂತ್ರಿಗಳು ನೀತಿ ಸಂಹಿತೆ ಮತ್ತು ಘೆರಾ ಕಾಯ್ದೆ ಉಲ್ಲಂಘನೆ ಮಾಡಿದ್ದಾರೆ. ಕೂಡಲೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು' ಎಂದು ಒತ್ತಾಯಿಸಿದರು.

'ಸೆಕೆಂಡ್ ಹ್ಯಾಂಡ್ ವಾಚ್ ಕೊಡ್ತಾರಾ?'

'ಸೆಕೆಂಡ್ ಹ್ಯಾಂಡ್ ವಾಚ್ ಕೊಡ್ತಾರಾ?'

ವಿಧಾನಸಭೆಯಲ್ಲಿ ಮಾತನಾಡಿದ ಸಿ.ಟಿ.ರವಿ ಅವರು, 'ಮಖ್ಯಮಂತ್ರಿಗಳಿಗೆ ಯಾರಾದರೂ ಸೆಕೆಂಡ್ ಹ್ಯಾಂಡ್ ವಾಚ್ ಉಡುಗೊರೆ ಕೊಡ್ತಾರಾ?' ಎಂದು ಪ್ರಶ್ನಿಸಿದರು. 'ಲೇಖನವೊಂದರಲ್ಲಿ ಸಿದ್ದರಾಮಯ್ಯ ಅವರು ರೈತ ಸಂಘದ ಮುಖಂಡ ಪ್ರೊ.ನಂಜುಂಡಸ್ವಾಮಿ ಅವರಿಂದ ಪ್ರೇರಣೆ ಪಡೆದು ಸಾರ್ವಜನಿಕ ಬದುಕಿಗೆ ಪ್ರವೇಶಿಸಿದೆ ಎಂದು ಹೇಳಿಕೊಂಡಿದ್ದಾರೆ. ಇಂತಹ ವ್ಯಕ್ತಿ 70 ಲಕ್ಷ ಮೌಲ್ಯದ ಉಡುಗೊರೆ ಪಡೆಯುವುದು ನೈತಿಕವಾಗಿ ಸರಿಯೇ?' ಎಂದು ಪ್ರಶ್ನಿಸಿದರು.

'ನೋಟು ಎಣಿಸುವ ಯಂತ್ರ ಸಿಕ್ಕಿತ್ತು'

'ನೋಟು ಎಣಿಸುವ ಯಂತ್ರ ಸಿಕ್ಕಿತ್ತು'

ವಿಧಾನಪರಿಷತ್ತಿನಲ್ಲಿ ಮಾತನಾಡಿದ ಯುವಜನ ಸೇವೆ ಮತ್ತು ಕ್ರೀಡಾ ಸಚಿವ ಅಭಯ್ ಚಂದ್ರ ಜೈನ್ ಅವರು, 'ಕೆ.ಎಸ್.ಈಶ್ವರಪ್ಪ ಅವರ ಮನೆಯಲ್ಲಿ ನೋಟು ಎಣಿಸುವ ಯಂತ್ರ ಸಿಕ್ಕಿತ್ತು. ಅವರಿಗೆ ವಾಚಿನ ನೈತಿಕತೆ ಬಗ್ಗೆ ಮಾತನಾಡಲು ಹಕ್ಕಿಲ್ಲ' ಎಂದು ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Opposition party BJP disrupted the proceedings of the assembly session on Tuesday, demanding that Chief Minister Siddaramaiah to explain why he accepted a Rs 70 lakh worth of Hublot watch from NRI doctor, Girish Chandra Varma.
Please Wait while comments are loading...