ನಮಗೂ ದೀಪಾವಳಿ ಬೋನಸ್ ಕೊಡಿ ಎಂದ್ರು ಗುತ್ತಿಗೆ ಪೌರ ಕಾರ್ಮಿಕರು
ಹುಬ್ಬಳ್ಳಿ, ನವೆಂಬರ್, 05: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಗುತ್ತಿಗೆ ಪೌರ ಕಾರ್ಮಿಕರು ಈ ಬಾರಿಯಿಂದ ದೀಪಾವಳಿ ಹಬ್ಬದ ಬೋನಸ್ ಕೊಡಬೇಕೆಂದು ಮಹಾನಗರ ಪಾಲಿಕೆಗೆ ಒತ್ತಾಯಿಸಿದ್ದು, ಅಕ್ಟೋಬರ್ 4ರ ಬುಧವಾರದಂದು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಗುತ್ತಿಗೆ ಕಾರ್ಮಿಕರು ಮತ್ತು ಪಾಲಿಕೆ ನೌಕರರ ಸಂಘದ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡು, ಮೇಯರ್ ಅಶ್ವಿನಿ ತಿಪ್ಪಣ್ಣ ಮಜ್ಜಗಿ ಅವರಿಗೆ ಬೇಡಿಕೆ ಈಡೇರಿಸುವಂತೆ ಮನವಿ ಸಲ್ಲಿಸಿದರು, ಪ್ರತಿಭಟನೆಯಲ್ಲಿ ನೂರಾರು ಗುತ್ತಿಗೆ ಕಾರ್ಮಿಕರು ಮತ್ತು ಪಾಲಿಕೆಯ ನೌಕರರು ಪಾಲ್ಗೊಂಡಿದ್ದರು.[ಪಟಾಕಿ ಸುಡದಿರಲು ಧಾರವಾಡ ಮಕ್ಕಳಿಗೆ ಕಿವಿಮಾತು]

ಸುಮಾರು 20 ವರ್ಷಗಳಿಂದ ಕಾರ್ಮಿಕ ಕಾಯ್ದೆ ಕಾನೂನುಗಳು ತಮಗೆ ಅನ್ವಯವಾಗಿಲ್ಲ. ಈ ಬಾರಿಯಾದರೂ ನಮಗೆ ಬೋನಸ್ ಕೊಡಿ. ಮುಂಬೈನಲ್ಲಿ ಗುತ್ತಿಗೆ ಪೌರ ಕಾರ್ಮಿಕರಿಗೆ ದೀಪಾವಳಿ ಹಬ್ಬಕ್ಕೆ ತಪ್ಪದೇ ಬೋನಸ್ ಕೊಡುತ್ತಾ ಬಂದಿದ್ದಾರೆ. ಆ ನೀತಿಯನ್ನು ಇಲ್ಲಿಯೂ ಅನ್ವಯಿಸಿ ಬೋನಸ್ ನೀಡಬೇಕೆಂದು ಮನವಿ ಮಾಡಿದರು.['ದೀಪಾವಳಿ ಸಮಯದಲ್ಲಿ ಪಟಾಕಿ ನಿಷೇಧ ಇಲ್ಲ"]
ಮುಂಬೈ ಮಹಾನಗರ ಪಾಲಿಕೆಯಲ್ಲಿ ಪ್ರತಿ ವರ್ಷ ಗುತ್ತಿಗೆ ಪೌರ ಕಾರ್ಮಿಕರಿಗೆ ದೀಪಾವಳಿ ಬೋನಸ್ ನೀಡಲಾಗುತ್ತಿದೆ. ಹಿಂದಿನ ವರ್ಷ 148 ಕೋಟಿ ರೂ.ಗಳನ್ನು ಬೋನಸ್ ರೂಪದಲ್ಲಿ ನೀಡಲಾಗಿತ್ತು. ಈ ವರ್ಷ 169 ಕೋಟಿ ರೂ.ಗಳನ್ನು ಕಾರ್ಮಿಕರಿಗೆ ನೀಡಲು ನಿರ್ಧರಿಸಲಾಗಿದೆ. ಆದ್ದರಿಂದ ಮುಂಬಯಿ ಪಾಲಿಕೆಯ ಮಾದರಿಯಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯು ದೀಪಾವಳಿ ಬೋನಸ್ ನೀಡಬೇಕೆಂದು ಒತ್ತಾಯಿಸಿದರು.












Click it and Unblock the Notifications