ಹುಬ್ಬಳ್ಳಿ: ವಿದ್ಯಾರ್ಥಿನಿ ಸಾವು, ಸಿಐಡಿಗೆ ಒಪ್ಪಿಸಲು ಒತ್ತಾಯ

ಹುಬ್ಬಳ್ಳಿ, ನವೆಂಬರ್,05 : ಇತ್ತೀಚೆಗೆ ಅಪಾರ್ಟ್ ಮೆಂಟ್ ಮೇಲಿಂದ ಬಿದ್ದು ಸಾವನ್ನಪ್ಪಿದ್ದ ವಿದ್ಯಾರ್ಥಿನಿ ಗೀತಾಲಕ್ಷ್ಮೀ ಸಾವಿನ ತನಿಖೆಯನ್ನು ಸಿಐಡಿ ತನಿಖೆಗೆ ವಹಿಸಬೇಕೆಂದು ಒತ್ತಾಯಿಸಿ ಜೈ ಭೀಮ ಸಂಘರ್ಷ ಸಮಿತಿಯು ನವೆಂಬರ್ 04ರ ಬುಧವಾರದಂದು ನಗರದಲ್ಲಿ ಪ್ರತಿಭಟನೆ ನಡೆಸಿತು.

ವಿದ್ಯಾರ್ಥಿನಿ ಗೀತಾಲಕ್ಷ್ಮೀ ಸಾವಿನ ಪ್ರಕರಣವನ್ನು ಆತ್ಮಹತ್ಯೆ ಎಂದು ದಾಖಲಿಸಿಕೊಂಡಿರುವ ಕೇಶ್ವಾಪುರ ಠಾಣಾ ಪೊಲೀಸರು, ಅದನ್ನು ಕೊಲೆ ಪ್ರಕರಣ ಎಂದು ದಾಖಲಿಸಿ ತನಿಖೆ ಚುರುಕುಗೊಳಿಸಬೇಕು. ಮಗಳನ್ನು ಕಳೆದುಕೊಂಡ ನೋವಿನಲ್ಲಿರುವ ಪೋಷಕರಿಗೆ ನ್ಯಾಯ ಒದಗಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.[ದಾವಣಗೆರೆಯಲ್ಲಿ 64 ವರ್ಷದ ವೃದ್ಧೆ ಮೇಲೆ ಗ್ಯಾಂಗ್ ರೇಪ್]

Hubballi: Jai Bheem Sangharsh Samiti forced handover to Geetalakshmi case by CBI

ಸಾವಿಗೀಡಾದ ಗೀತಾಲಕ್ಷ್ಮೀ ಕರಾಟೆ ಕಲಿತಿದ್ದಳು. ಅಲ್ಲದೇ ಅವಳು 5ನೇ ಮಹಡಿಯಿಂದ ಬಿದ್ದರೂ ದೇಹದ ಮೇಲೆ ಯಾವುದೇ ಗಂಭೀರ ಗಾಯಗಳಾಗಿರಲಿಲ್ಲ. ಅವಳ ಕಾಲಿನ ಮೇಲೆ ತರಚಿದ ಗಾಯಗಳಾಗಿದ್ದು, ಆಕೆಯ ಸಾವಿನ ಮೇಲೆ ಸಂಶಯ ಮೂಡಿದೆ. ಆದ್ದರಿಂದ ಪ್ರಕರಣವನ್ನು ಸಿಐಡಿಗೆ ವಹಿಸಬೇಕೆಂದು ಒತ್ತಾಯಿಸಿ ತಹಶೀಲ್ದಾರರಿಗೆ ಸಮಿತಿಯ ಸದಸ್ಯರು ಮನವಿ ಸಲ್ಲಿಸಿದರು.[ಅತ್ಯಾಚಾರ ತಡೆಗೆ ನಾನು ಸಹಿ ಹಾಕಾಯ್ತು, ನಿಮ್ಮದೊಂದು ಸಹಿ ಸೇರಿಸಿ]

ಏನಾಗಿತ್ತು?

ಗೀತಾಲಕ್ಷ್ಮೀ ಸಂಸ್ಕಾರ ಇಂಗ್ಲೀಷ್ ಮಿಡಿಯಮ್ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ. ಈಕೆ ನಗರದ ಕುಸುಗಲ್ ರಸ್ತೆಯ ಎಂ.ಕೆ ಅಪಾರ್ಟ್ ಮೆಂಟ್ ಮೇಲಿಂದ ಬಿದ್ದು ಸಾವನ್ನಪ್ಪಿದ್ದಾಳೆ. ಎಂದಿನಂತೆ ಟ್ಯೂಷನ್ ಮುಗಿಸಿ ಮನೆಗೆ ಬಂದ ಆಕೆ ಅಪಾರ್ಟ್ ಮೆಂಟ್ ನಿಂದ ಬಿದ್ದಿದ್ದಾಳೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ.[ವರ್ಷದಲ್ಲಿ ದಲಿತರ ಮೇಲೆ 47,064 ಸಾರಿ ದೌರ್ಜನ್ಯ!]

ಒಮ್ಮೆ ಈಕೆ ಟ್ಯೂಷನ್ ನಿಂದ ಮರಳುವಾಗ ಇಬ್ಬರು ಯುವಕರು ಚುಡಾಯಿಸಿದ್ದರು. ಅವಳನ್ನು ಪ್ರೀತಿಸುವಂತೆ ಯಾವಾಗಲೂ ಫೋನ್ ಮಾಡುತ್ತಿದ್ದರು. ದಾರಿಯಲ್ಲಿ ಅಡ್ಡಗಟ್ಟಿದ್ದರು ಎಂದು ಪೋಷಕರು ತಿಳಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರೂ ಯುವಕರನ್ನು ಪೊಲೀಸರು ಬಂಧಿಸಿದ್ದು, ಪೋಕ್ಸೋ(POCSO) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+